ಪ್ರೀತಿಯಾಗಿ ಬದಲಾದ 'ನಾನು ನಂದಿನಿ' ಖ್ಯಾತಿಯ ವಿಕ್ಕಿ ಅಪಹರಣ- ಕೊಲೆಗೆ ಸಂಚು: ವಿಡಿಯೋ ನೋಡಿ ಕಣ್​ಕಣ್​ ಬಿಟ್ಟ ಫ್ಯಾನ್ಸ್​!

ನಾನು ನಂದಿನಿ ಖ್ಯಾತಿಯ ವಿಕ್ಕಿ ಕಿಡ್ನಾಪ್​ ಆಗಿದ್ದಾರೆ. ಅಪಹರಣಕಾರರಿಂದ ಕೊಲೆಗೆ ಸಂಚು ನಡೆದಿದೆ. ಏನಿದು ವಿಷ್ಯ?
 

Vicky of Nanu Nandini fame Vicky has been kidnapped conspiracy to murder suc

‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ..’ ಹಾಡಂತೂ ಸೃಷ್ಟಿಸ್ತಿರೋ ಹವಾ ಅಷ್ಟಿಷ್ಟಲ್ಲ. ವಿಕಿಪೀಡಿಯಾ ಖ್ಯಾತಿಯ ವಿಕ್ರಮ್​ ಅಲಿಯಾಸ್​ ವಿಕ್ಕಿ ಅವರು ಮಾಡಿರುವ ಈ ಹಾಡಿನ ಮೋಡಿಯಂತೂ ಇನ್ನೂ ನಿಲ್ಲುತ್ತಲೇ ಇಲ್ಲ.  ಈ ಹಾಡು  ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಭವಿಷ್ಯ ರೂಪಿಸಿಕೊಳ್ಳಲು ಬೆಂಗಳೂರಿಗೆ ಬಂದು ಬಂದು ಪಿಜಿಯಲ್ಲಿ (Paying guest) ಉಳಿಯುವ ಹೆಣ್ಣು  ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡೊಂದು ತೆರೆದಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಅಂದ ಹಾಗೆ ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ (vicky)ಎಂಬುವವರು.  ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಸಾಕಷ್ಟು ವೈರಲ್ ಕೂಡ ಆಗಿವೆ. ಕರ್ನಾಟಕ ಅಷ್ಟೇ ಏಕೆ, ವಿದೇಶದಲ್ಲಿರುವ ಕನ್ನಡಿಗರೂ ಈ ಹಾಡಿಗೆ ರೀಲ್ಸ್​ ಮಾಡುತ್ತಿದ್ದಾರೆ.

ಇದೀಗ ನಂದಿನಿ ಪ್ರೀತಿಯಾಗಿ ಬದಲಾಗಿದ್ದಾಳೆ. ಕೆಲಸ ಮುಗಿಸಿ ಹೋಗುತ್ತಿದ್ದ ವೇಳೆ ಈಕೆಯನ್ನು ಅಪಹರಣಕಾರರು ಕಿಡ್ನಾಪ್​ ಮಾಡಿದ್ದಾರೆ. ಆಕೆಯನ್ನು ಮುಗಿಸಿರುವುದಾಗಿ ಹೇಳುತ್ತಿರುವಾಗಲೇ ಈ ಯುವತಿ ಕೆಮ್ಮಿದ್ದಾಳೆ. ಅಪಹರಣಕಾರರು ಸುಸ್ತಾದರು. ಅದರಲ್ಲಿ ಒಬ್ಬ ಯುವತಿಯನ್ನು ಜೋರಾಗಿ ಹೊಡೆದ, ಇನ್ನೇನು ಉಸಿರು ನಿಂತೇ ಹೋಯ್ತು ಎಂದು ಅಪಹರಣಕಾರರು ಸುಪಾರಿ ಕೊಟ್ಟವರಿಗೆ ಕಾಲ್​ ಮಾಡುವಷ್ಟರಲ್ಲಿ ಮತ್ತೆ ಯುವತಿ ಕೆಮ್ಮಿನ ಶಬ್ದ. ಭಯಗೊಂಡ ಅಪಹರಣಕಾರರು ಆಕೆಗೆ ಸೈನೈಡ್​ ತಿನ್ನಿಸುತ್ತಾರೆ. ಸೈನೈಡ್​ ಗೊತ್ತಲ್ಲ, ನಾಲಿಗೆ ಮೇಲೆ ಇಟ್ಟರೆ ಸಾಕು, ಒಂದೇ ಕ್ಷಣಕ್ಕೆ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಯುವತಿ ಸತ್ತೇ ಹೋದಳು ಎಂದುಕೊಳ್ಳುವಾಗಲೇ ಮತ್ತೆ ಬದುಕುತ್ತಾಳೆ.

ದೇವಸ್ಥಾನದಲ್ಲಿ ಮಹಿಳೆಯರು ನನ್​ ನೋಡಿ ಥೂ ಅವ್ಳೇ.. ಇವ್ಳಿಗೇನ್​ ಮಾತಾಡ್ಸೋದು ಅಂದ್ರು: ದೀಪಾ ಕಟ್ಟೆ

ಭಯಗೊಳ್ಳುವ ಅಪಹರಣಕಾರರು ಈಕೆ ಯಾಕೆ ಸಾಯುತ್ತಿಲ್ಲ ಎಂದು ನೋಡಿದಾಗ ಯುವತಿ ತನ್ನ ಕೈಯನ್ನು ಕೊರಳಲ್ಲಿ ಧರಿಸಿದ್ದ ಆಫೀಸ್​ ಐಕಾರ್ಡ್​ ಮೇಲೆ ಇಟ್ಟಿರುತ್ತಾಳೆ. ಆ ಐಡೆಂಟಿಟಿ ಕಾರ್ಡ್​ ನೋಡಿ ಇಬ್ಬರಿಗೂ ಈಕೆ ಯಾಕೆ ಸಾಯುವುದಿಲ್ಲ ಎಂದು ತಿಳಿಯುತ್ತದೆ. ಅದಕ್ಕೆ ಕಾರಣ ಅವಳ ಹೆಸರು ಪ್ರೀತಿ! ಕೊನೆಯಲ್ಲಿ ಪ್ರೀತಿ ಸಾಯದು ಹಾಡು ಹಿನ್ನೆಲೆಯಲ್ಲಿ ಬರುತ್ತದೆ. ಈ ದೃಶ್ಯವನ್ನು ನೋಡಿ ವಿಕ್ಕಿ ಹಾಗೂ ಅವರ ಗ್ಯಾಂಗ್​ ಪರ್ಫಾಮೆನ್ಸ್​ಗೆ ಫ್ಯಾನ್ಸ್​ ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ಇದೇ ವೇಳೆ, ವಿಕ್ಕಿ ಅವರು ಬೀಗ್​ ಭಾಸ್​ ಮನೆ ಸ್ಥಾಪಿಸಿಕೊಂಡು ಹಾಸ್ಯದ ಚಟಾಕಿ ಹಾರಿಸುತ್ತಿದ್ದಾರೆ.  ಬಿಗ್​ಬಾಸ್​ ಮನೆಯಲ್ಲಿ ನಡೆಯುವ ಕಾರ್ಯಾಚರಣೆಗಳನ್ನು ಹಾಸ್ಯದ ರೂಪದಲ್ಲಿ ಬೀಗ್​ ಭಾಸ್​ ಹೆಸರಿನಲ್ಲಿ ವಿಕ್ಕಿ ಮತ್ತು ಅವರ ತಂಡ ರೂಪಿಸುತ್ತಿದೆ.  ಕೂಲ್​ ಕಲರ್ಸ್​ ಕನ್ನಡ ಎನ್ನುವ ಚಾನೆಲ್​ ಇಟ್ಟುಕೊಂಡು ಬೀಗ್​ ಭಾಸ್​ ಸೃಷ್ಟಿ ಮಾಡಲಾಗಿದೆ. 

ಡಂಕಿಯಲ್ಲಿ ಸೆಕ್ಸ್​-ಗಿಕ್ಸ್​ ಇಲ್ಲಾ ತಾನೆ- ಅಪ್ಪನೊಟ್ಟಿಗೆ ನೋಡ್ಬೋದಾ? ನೆಟ್ಟಿಗನ ಪ್ರಶ್ನೆಗೆ ಶಾರುಖ್​ ಹೇಳಿದ್ದೇನು?


Latest Videos
Follow Us:
Download App:
  • android
  • ios