- Home
- Entertainment
- TV Talk
- 1 ಲಕ್ಷ 60 ಸಾವಿರ ರೂ. ಫ್ಯಾಟ್ ಬರ್ನಿಂಗ್ ಆಪರೇಷ್; ಚೇತನಾಗೆ ಹಾರ್ಟ್ ಅಟ್ಯಾಕ್ ಆಗಿದ್ಯಾ?
1 ಲಕ್ಷ 60 ಸಾವಿರ ರೂ. ಫ್ಯಾಟ್ ಬರ್ನಿಂಗ್ ಆಪರೇಷ್; ಚೇತನಾಗೆ ಹಾರ್ಟ್ ಅಟ್ಯಾಕ್ ಆಗಿದ್ಯಾ?
ಕಿರುತೆರೆ ನಟಿ ಚೇತನಾ ರಾಜ್ ಮರಣೋತ್ತರ ಪರೀಕ್ಷೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಡೆಯುತ್ತಿದೆ.

ಗೀತಾ , ದೊರೆಸಾನಿ ಧಾರಾವಾಹಿಯಲ್ಲಿ ನಟಿಸಿರುವ ಚೇತನಾ ರಾಜ್ (Chetana Raj) ಫ್ಯಾಟ್ ಬರ್ನಿಂಗ್ ಆಪರೇಷನ್ ಮಾಡಿಸಿಕೊಳ್ಳುವ ವೇಳೆ ನಿಧನರಾಗಿದ್ದಾರೆ.
ಚೇತನಾ ರಾಜ್ ದೊಡ್ಡಪ್ಪ ರಾಜಣ್ಣ ಆಪರೇಟ್ ಮತ್ತು ನಡೆದ ಘಟನೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಕೊಟ್ಟಿದ್ದಾರೆ. ಅಲ್ಲದೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳಿದ್ದಾರೆ.
ಚೇತನ್ ಫ್ಯಾಟ್ ಬರ್ನಿಂಗ್ (Fat Burning) ಆಪರೇಷನ್ ಮಾಡಿಸಲು 1 ಲಕ್ಷ 60 ಸಾವಿರ ರೂಪಾಯಿ ಬಿಲ್‌ನ ಡಾ. ಶೆಟ್ಟಿಸ್ ಹಾಸ್ಪಿಟಲ್‌ನಲ್ಲಿ ಹೇಳಿದ್ದಾರೆ. ಹೀಗಾಗಿ 92 ಸಾವಿರ ಹಣವನ್ನು ಮೊದಲೇ ಕಟ್ಟಿಸಿಕೊಂಡಿದ್ದಾರೆ.
ಆಪರೇಷನ್ ಮಾಡುವಾಗ ಚೇತನಾ ಅವರಿಗೆ ಕಾರ್ಡಿಯಾಕ್ ಅರೆಸ್ಟ್ (Heart Attack) ಆಗಿದೆ ಎನ್ನಲಾಗಿದೆ. ಐಸಿಯು ಸೌಲಭ್ಯವಿಲ್ಲದ ಕಾರಣ ಹತ್ತಿರವಿದ್ದ ಕಾರ್ಡೆ ಹಾಸ್ಪಿಟಲ್‌ಗೆ ಶಿಫ್ಟ್ ಮಾಡಿದ್ದಾರೆ.
ಚೇತನಾ ಕಾರ್ಡೆ ಆಸ್ಪತ್ರೆ ಹೀಗುವ ಮಾರ್ಗದ ನಡುವೆನೇ ಪಲ್ಸ್ ರೇಟ್ ಕಡಿಮೆಯಾಗಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಆದರೂ ಕಾರ್ಡೆ ಆಸ್ಪತ್ರೆಯರುವ 19 ಸಾವಿರ ಬಿಲ್ ಮಾಡಿದ್ದಾರೆ.
19 ಸಾವಿರ ಬಿಲ್ ಯಾಕೆ ಕಟ್ಟ ಬೇಕು ಎಂದು ಚೇತನಾ ಪೋಷಕರು ಪ್ರಶ್ನೆ ಮಾಡಿದಕ್ಕೆ ಸಿಬ್ಬಂದಿಗಳು ಜಗಳ ಮಾಡಿದ್ದಾರೆ. ಕೊನೆಗೆ 9 ಬಿಲ್ ಕಟ್ಟಿ ಎಂದಿದ್ದಾರೆ.
9 ಸಾವಿರ ಹಣ ಕಟ್ಟಿಸಿಕೊಂಡು ಚೇತನಾ ಮೃತ ದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಅಂತ್ಯ ಸಂಸ್ಕಾರದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.