Asianet Suvarna News Asianet Suvarna News

ವಾಸುಕಿ ವೈಭವ್-ಚಂದನಾ ಮದುವೆ ಸುದ್ದಿ ವೈರಲ್; ಸದ್ಯದಲ್ಲೇ ದಾಂಪತ್ಯಕ್ಕೆ ಕಾಲಿಡ್ತಾರಾ ಈ ಕ್ಯೂಟ್ ಕಪಲ್?

ಗಾಯಕ ವಾಸುಕಿ ವೈಭವ್ ಮತ್ತು ನಟಿ ಚಂದನಾ ಮದುವೆ ಸುದ್ದಿ ವೈರಲ್ ಆಗಿದೆ.  

vasuki vaibhav and chandana Marriage story viral on social media sgk
Author
First Published Dec 10, 2022, 12:28 PM IST

ಸ್ಯಾಂಡಲ್‌ನಲ್ಲಿ ಸಾಲು ಸಾಲು ಮದುವೆ ಸಂಭ್ರಮ. ಇತ್ತೀಚಿಗಷ್ಟೆ ನಟಿ ಅದಿತಿ ಪ್ರಭುದೇವ ಅದ್ದೂರಿಯಾಗಿ ಮದುವೆಯಾದರು. ಬಹುಕಾಲದ ಗೆಳೆಯ ಯಶಸ್ವಿ ಜೊತೆ ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಿತಿ ಮದುವೆ ಬೆನ್ನಲ್ಲೇ ಮತ್ತೊಂದು ಸ್ಟಾರ್ ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇತ್ತೀಚಿಗಷ್ಟೆ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದು ಸದ್ಯ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ಮುಂದಿನ ವರ್ಷದ ಪ್ರಾರಂಭದಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುವ ಸಾದ್ಯತೆ ಇದೆ. ಈ ನಜುವೆ ಇದೀಗ ಮತ್ತೊಂದು ಸ್ಟಾರ್ ಕಪಲ್ ಮದುವೆ ವಿಚಾರ ವೈರಲ್ ಆಗಿದೆ. ಅದು ಮತ್ಯಾರು ಅಲ್ಲ ಗಾಯಕ, ನಟ ವಾಸುಕಿ ವೈಭವ್ ಹಾಗೂ ನಟಿ ಚಂದನಾ. ಅಂದಹಾಗೆ ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಗುಸು ಗುಸು ಆಗಾಗ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಇಬ್ಬರೂ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಇದೀಗ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ. 

ಅಂದಹಾಗೆ ಇಬ್ಬರ ಪ್ರೀತಿ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು ಇಬ್ಬರ ಅದ್ದೂರಿ ಫೋಟೋಶೂಟ್. ಹೌದು ಇತ್ತೀಚಿಗಷ್ಟೆ ವಾಸುಕಿ ಮತ್ತು ಚಂದನಾ ಇಬ್ಬರೂ ಗ್ರ್ಯಾಂಡ್ ಫೋಟೋಶೂಟ್‌ನಲ್ಲಿ ಮಿಂಚಿದ್ದರು. ಇಬ್ಬರ ಆಪ್ತತೆ ಫೋಟೋದಲ್ಲಿ ಎದ್ದು ಕಾಣುತ್ತಿತ್ತು. ಸಾಂಪ್ರದಾಯಿಕ ಉಡುಗೆಯಲ್ಲಿ ಇಬ್ಬರೂ ಮಿಂಚಿದ್ದರು. ಚಂದನಾ ಲೆಹಂಗಾದಲ್ಲಿ ಧರಿಸಿದ್ದರು ವಾಸುಕಿ ಶೇರ್ವಾರಿಯಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರೂ ಮದುವೆಗೆ ರೆಡಿಯಾಗುವ ಹಾಗೆ ಕಂಗೊಳಿಸಿದ್ದರು. ಇಬ್ಬರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದಹಾಗೆ ನಟಿ ರಮ್ಯಾ ಕೂಡ ಪ್ರತಿಕ್ರಿಯೆ ನೀಡಿ ನಿಶ್ಚಿತಾರ್ಥ ಫೋಟೋ ಎಂದುಕೊಂಡೆ ಎಂದಿದ್ದರು. ಬಳಿಕ ಚಂದನಾ ಫೋಟೋ ಶೇರ್ ಮಾಡಿ ವಾಸುಕಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು. 

ಚಂದನಾ- ವಾಸುಕಿ ದೀಪಾವಳಿ: ಅಯ್ಯೋ ಇದು ಎಂಗೇಜ್‌ಮೆಂಟ್‌ ಫೋಟೋ ಅಂದ್ಕೊಂಡೆ ಎಂದ ನಟಿ ರಮ್ಯಾ

'ನನ್ನ ಆತ್ಮೀಯ ಸ್ನೇಹಿತ, ಅತ್ಯುತ್ತಮ ಮಾರ್ಗದರ್ಶಕ, ಅತ್ಯಂತ ಅದ್ಭತ ವ್ಯಕ್ತಿ, ಯಾವಾಗಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು' ಎಂದು ಪ್ರೀತಿಯ ವಿಶ್ ಮಾಡಿದ್ದರು. ಚಂದನಾ ಫೋಟೋ ಶೇರ್ ಮಾಡಿ ಪ್ರೀತಿಯ ಸಾಲುಗಳನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಜೋಡಿ ಚೆನ್ನಾಗಿ, ಬೇಗ ಮದುವೆಯಾಗಿ ಎಂದು ಕಾಮೆಂಟ್ ಮಾಡಿದ್ದರು. ಈ ಫೋಟೋ ಶೇರ್ ಮಾಡುವ ಮೂಲಕ ಇಬ್ಬರೂ ಪಪ್ರೀತಿ ವಿಚಾರವನ್ನು ಪರೋಕ್ಷವಾಗಿ ಬಹಿರಂಗ ಪಡಿಸಿದರು ಎನ್ನಲಾಗಿತ್ತು. ಇದೀಗ ಮದುವೆಗ ತಯಾರಿ ನಡೆಸುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಸದ್ಯದಲ್ಲೇ ವಾಸುಕಿ ಮತ್ತು ಚಂದನಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. 

ಸ್ಯಾಂಡಲ್‌ವುಡ್‌ಗೆ ವಾಸುಕಿ ವೈಭವ್ ಗಿಫ್ಟ್; ರಿಷಬ್ ಶೆಟ್ಟಿ

ಬಿಗ್ ಬಾಸ್ ಮೂಲಕ ಪರಿಚಿತರಾದ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಬಳಿಕ ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದರು ಎನ್ನಲಾಗಿದೆ. ಇದೀಗ ಮದುವೆಗೆ ಸಜ್ಜಾಗಿದ್ದಾರೆ. ಈ ಆಗಾಗ  ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ನಟಿ ಚಂದನಾ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ರಾಜ ರಾಣಿ, ಹೂ ಮಳೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನೂ ವಾಸುಕಿ ವೈಭವ್ ಗಾಯಕರಾಗಿ ಮತ್ತು ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿಗಳಿಸಿದ್ದಾರೆ. ಇಬ್ಬರ ಮದುವೆ ಸುದ್ದಿ ನಿಜನಾ? ಗಾಸಿಪ್ ಅಷ್ಟೆನಾ ಎಂದು ವಾಸುಕಿ ಮತ್ತು ಚಂದನಾ ಅವರೇ ಪ್ರತಿಕ್ರಿಯೆ ನೀಡಬೇಕಿದೆ.  

  

Follow Us:
Download App:
  • android
  • ios