ಮಗು ಥರ ಇರ್ಬೆಡ್ವೋ... ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಅಂತ ಡ್ರೋನ್ಗೆ ಹೇಳ್ತಾನೇ ಇದ್ದೇನೆ...
ಉಳಿದ ಸ್ಪರ್ಧಿಗಳ ಭವಿಷ್ಯ ಹೇಳಿ ಎಂದು ತುಕಾಲಿ ಸಂತೋಷ್ ಅವರಿಗೆ ಕಿಚ್ಚ ಸುದೀಪ್ ಹೇಳಿದಾಗ, ಡ್ರೋನ್ ಪ್ರತಾಪ್ ಬಗ್ಗೆ ಅವರು ಹೇಳಿದ್ದೇನು?
ಬಿಗ್ ಬಾಸ್ ಕನ್ನಡ 10 ರಿಯಾಲಿಟಿ ಷೋ ಆರಂಭವಾಗಿ ಎಂಟು ವಾರ ಕಳೆದಿದ್ದು, ಮನೆಯಲ್ಲಿ ದಿನೇ ದಿನೇ ಸ್ಪರ್ಧೆ ಟಫ್ ಆಗುತ್ತಾ ಸಾಗಿದೆ. ಇದಾಗಲೇ ಹಲವಾರು ಟಾಸ್ಕ್ಗಳನ್ನು ಸ್ಪರ್ಧಿಗಳು ನಡೆಸಿಕೊಟ್ಟಿದ್ದಾರೆ. ವಿನಯ್, ತನಿಷಾ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ಕಾರ್ತಿಕ್ ಸೇರಿದಂತೆ ಇತರ ಸ್ಪರ್ಧಿಗಳ ನಡುವೆ ಸ್ಪರ್ಧೆ ಹೆಚ್ಚಾಗಿದ್ದು, ಬಿಗ್ಬಾಸ್ ಮನೆಯ ಹೊರಗೂ ಇವರ ಫ್ಯಾನ್ಸ್ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಸರ್ಕಸ್ ಮಾಡುತ್ತಿದ್ದಾರೆ. ಇದರ ನಡುವೆ ವಾರಾಂತ್ಯದಲ್ಲಿ ಕಾಣಿಸಿಕೊಳ್ಳುವ ಕಿಚ್ಚ ಸುದೀಪ್ ಅವರು ಹಾಸ್ಯದ ಮಾತಿನಿಂದ ಬಿಗ್ಬಾಸ್ ಸ್ಪರ್ಧಿಗಳಿಗೆ ನಗುವಿನ ಟಾನಿಕ್ ನೀಡುತ್ತಿದ್ದಾರೆ.
ಇದೀಗ ತುಕಾಲಿ ಸಂತೋಷ್ ಅವರನ್ನು ಉದ್ದೇಶಿಸಿ ಸುದೀಪ್ ಅವರು, ತುಕಾಲಿಯವರೇ ಒಬ್ಬೊಬ್ಬರ ಭವಿಷ್ಯ ಹೇಳಿ ಎಂದಿದ್ದಾರೆ. ಪ್ರತಾಪ್ ಹೆಸರನ್ನು ಸುದೀಪ್ ಅವರು ಹೇಳಿದಾಗ, ತುಕಾಲಿ ಸಂತೋಷ್ ಅವರು, ಪ್ರತಾಪ್ ಆರಕ್ಕೆ ಏರ್ತಿಲ್ಲ, ಮೂರಕ್ಕೆ ಇಳಿತೀಲ್ಲ. ಅವನಿಗೆ ನಾನು ಯಾವಾಗ್ಲೂ ಹೇಳ್ತಾನೇ ಇರ್ತೇನೆ. ಮಗು ಥರ ಇರ್ಬೆಡ್ವೋ... ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಎಂದು ಎಂದು ತಮಾಷೆ ಮಾಡಿದಾಗ ಎಲ್ಲರೂ ನಕ್ಕಿದ್ದಾರೆ. ಇದೇ ವೇಳೆ ತನಿಷಾ ಕಾಲಿಗೆ ಏಟು ಮಾಡಿಕೊಂಡು ಚಿಕಿತ್ಸೆಗೆಂದು ಬಿಗ್ಬಾಸ್ನಿಂದ ಎರಡು ದಿನ ಹೊರಕ್ಕೆ ಹೋಗಿದ್ದ ವೇಳೆ ಆಕೆಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದ ವರ್ತೂರ್ ಸಂತೋಷ್ ಅವರನ್ನು ಕಿಚ್ಚ ಸುದೀಪ್ ಹಾಗೂ ತುಕಾಲಿ ಸಂತೋಷ್ ತಮಾಷೆ ಮಾಡಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ಚಾನೆಲ್ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ.
ಬೆಂಕಿ ಇಲ್ಲದಿದ್ರೂ ಅದರ ನೆನಪಲ್ಲೇ ಬೆಂದಿದ್ದು ಯಾರು? ವರ್ತೂರು ಕಾಲೆಳೆದ ಕಿಚ್ಚ ಸುದೀಪ್!
ಇನ್ನು ಡ್ರೋನ್ ಪ್ರತಾಪ್ ಕುರಿತು ಹೇಳುವುದಾದರೆ, ಡ್ರೋನ್ ಮಾಡುವುದಾಗಿ ಹೇಳಿ ಹಲವರನ್ನು ನಂಬಿಸಿ ಮೋಸ ಮಾಡಿರೋ ಆರೋಪ ಹೊತ್ತು ಬಿಗ್ಬಾಸ್ ಹೊರಗಡೆ ಇದಾಗಲೇ ಸಾಕಷ್ಟು ಹೆಸರು ಕೆಡಿಸಿಕೊಂಡಿರೋ ಡ್ರೋನ್ ಪ್ರತಾಪ್, ಬಿಗ್ಬಾಸ್ ಮನೆಯಲ್ಲಿ ಸಕತ್ ಒಳ್ಳೆಯ ಮನುಷ್ಯನಾಗಿರಲು ಟ್ರೈ ಮಾಡುತ್ತಿರುವುದು ಮೊದಲಿನಿಂದಲೂ ಕಂಡುಬರುತ್ತಿದೆ. ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಯಾರ ತಂಟೆಗೂ ಹೆಚ್ಚು ಹೋಗದೇ, ಸನ್ನಡತೆಯನ್ನು ತೋರಲು ಟ್ರೈ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ಕಾರಣಕ್ಕೆ ಇವರಿಗೆ ಇದಾಗಲೇ ಅನೇಕ ಮಂದಿ ಡ್ರೋನ್ ಪ್ರತಾಪ್ ಫ್ಯಾನ್ಸ್ ಪೇಜ್ ಮೂಲಕ ಅಭಿಮಾನಿಗಳು ಸಪೋರ್ಟ್ ಮಾಡುತ್ತಿದ್ದಾರೆ. ಇವರೇ ಗೆಲ್ಲಬೇಕು ಎನ್ನುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಡ್ರೋನ್ ತಮ್ಮ ಮುಂದಿನ ಪ್ಲ್ಯಾನ್ ಕುರಿತು ತಿಳಿಸಿದ್ದರು. ಬಿಗ್ಬಾಸ್ ಮನೆಯಿಂದ ಹೊರಕ್ಕೆ ಹೋದ ಮೇಲೆ, ಮೊದಲಿಗೆ ಅಮ್ಮನಿಗೆ ಎರಡು ಚಿನ್ನದ ಬಳೆ ಕೊಡಿಸುವೆ. ತಂಗಿಯೂ ಮದುವೆ ವಯಸ್ಸಿಗೆ ಬಂದಿದ್ದಾಳೆ. ಆಕೆಗೂ ಒಳ್ಳೆಯ ಗಂಡು ನೋಡಿ ಮದುವೆ ಮಾಡುತ್ತೇನೆ ಎಂದು ಈ ಹಿಂದಿನ ಎಪಿಸೋಡ್ನಲ್ಲಿ ಡ್ರೋನ್ ಪ್ರತಾಪ್ ಹೇಳಿದ್ದರು. ನಂತರ ಅಪ್ಪನ ಕುರಿತು ಮಾತನಾಡಿದ ಅವರು, ನಾನು ಒಮ್ಮೆ ಅಪ್ಪನನ್ನು ಮುಟ್ಟಿ ಮಾತನಾಡಿಸಬೇಕು. ಜತೆಗೆ ಅಪ್ಪನ ತೋಟದಲ್ಲಿ ನಾನೇ ಮಾಡಿದ ಡ್ರೋನ್ ಇದೆ, ಅದನ್ನೇ ಬಳಕೆ ಮಾಡ್ತಿನಿ. ನನ್ನ ಕಡೆಯಿಂದ ಏನಾದರೂ ಮಷಿನ್ ಮಾಡಿ ಕೊಡುವ ಪ್ಲ್ಯಾನ್ ಇದೆ. ಅವರ ಕೈಗೆ ಡ್ರೋನ್ ಕೊಟ್ಟು ಹಾರಿಸ್ತಿನಿ. ಅದು ಹೇಗೆ ವರ್ಕ್ ಆಗುತ್ತೆ ಎಂದು ಅವರಿಂದಲೇ ತೋರಿಸ್ತಿನಿ ಎಂದಿದ್ದರು.
ಅಮೃತಧಾರೆ ಗೌತಮ್ ರಿಯಲ್ ಅತ್ತೆ ಭಾವಿ ಅಳಿಯನ ಬಗ್ಗೆ ಕಂಡಿದ್ದ ಕನಸೇನು? ಆಗಿದ್ದೇನು?