ಮರಳಿ ಬಿಗ್‌ಬಾಸ್ ಮನೆಗೆ ಬಂದ ವರ್ತೂರ್ ಸಂತೋಷ್, ಮನೆಯಲ್ಲಿ ಮೂಡಿದ ಹೊಸ ಬೆಳಕು!
ಕೆಲದಿನಗಳ ಹಿಂದೆ ಅನಿರೀಕ್ಷಿತವಾಗಿ ಬಿಗ್‌ಬಾಸ್ ಮನೆಯೊಳಗಿನಿಂದ ಎಕ್ಸಿಟ್ ಆಗಿದ್ದ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಸರ್ಫೈಸ್ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ಗೇಮ್ ಆಡಲಿದ್ದಾರೆ. ಮನೆಯಲ್ಲಿ ಇದ್ದ ಮಿಕ್ಕ ಸ್ಪರ್ಧಿಗಳಿಗೆ ಅಚ್ಚರಿ ಮತ್ತು ಸಂತೋಷ ಒಟ್ಟಿಗೇ ಆಗಿದೆ.

ಕೆಲದಿನಗಳ ಹಿಂದೆ ಅನಿರೀಕ್ಷಿತವಾಗಿ ಬಿಗ್‌ಬಾಸ್ ಮನೆಯೊಳಗಿನಿಂದ ಎಕ್ಸಿಟ್ ಆಗಿದ್ದ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಸರ್ಫೈಸ್ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ಗೇಮ್ ಆಡಲಿದ್ದಾರೆ. ಮನೆಯಲ್ಲಿ ಇದ್ದ ಮಿಕ್ಕ ಸ್ಪರ್ಧಿಗಳಿಗೆ ಅಚ್ಚರಿ ಮತ್ತು ಸಂತೋಷ ಒಟ್ಟಿಗೇ ಆಗಿದೆ. ಕೆಲದಿಗಳ ಹಿಂದೆ ಕೇಸ್ ಒಂದರ ಸಲುವಾಗಿ ನೇರವಾಗಿ ಬಿಗ್ ಬಾಸ್ ಮನೆಯಿಂದ ಜೈಲಿಗೆ ಹೋಗಿ ಕಂಡಿಷನ್ ಬೇಲ್ ಮೇಲೆ ಹೊರಬಂದಿರುವ ಸಂತೋಷ್, ಈಗ ಮತ್ತೆ ಬಿಗ್ ಬಾಸ್ ಮನೆಗೆ ಮರಳಿ ಇತಹಾಸ ಸೃಷ್ಟಿಸಿದ್ದಾರೆ ಎನ್ನಬಹುದು.
ಸಂಗೀತಾ-ಕಾರ್ತಿಕ್ ಮಧ್ಯೆ ಯಾರೂ ಫಿಟ್ಟಿಂಗ್ ಇಡಲು ಸಾಧ್ಯವೇ ಇಲ್ಲ, ಇಲ್ಲಿವೆ ನೋಡಿ ಬೇಕಾದಷ್ಟು ಸಾಕ್ಷಿ!
ಹುಲಿ ಉಗುರು ಪೆಂಡೆಂಟ್ ಕೇಸ್‌ನಲ್ಲಿ ಜೈಲಿಗೆ ಹೋಗಿ, ಕಾನೂನು ಪ್ರಕಾರ ಬೇಲ್ ಮೇಲೆ ಹೊರಬಂದಿರುವ ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಸಂತೋಷ್, ಇದೀಗ ಮತ್ತೆ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಮನೆಯಲ್ಲಿರುವ ಮಿಕ್ಕ ಸ್ಪರ್ಧಿಗಳು ಸಂತೋಷ್ ನೋಡಿ ಅಚ್ಚರಿ ಹಾಗೂ ಸಂತೋಷಗಳನ್ನು ಒಟ್ಟಿಗೇ ಅನುಭವಿಸುವಂತಾಗಿದೆ. ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಸಂತೋಷ್ ಯಾಕೆ ಹೊರಹೋಗಿರುವುದು, ಈಗ ಮತ್ತೆ ಬಂದಿರುವುದು ಎಂಬ ಸಂಗತಿ ಬಹುಶಃ ಗೊತ್ತಿರಲಿಕ್ಕಿಲ್ಲ. ಇನ್ಮುಂದೆ ಅದನ್ನೆಲ್ಲ ಸಂತೋಷ್ ಅವರು ಮನೆಯ ಇತರ ಸದಸ್ಯ ಜತೆ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಹಂಚಿಕೊಳ್ಳಬಹುದು.
ಮೊದಲ ಸಿನಿಮಾದಲ್ಲೇ ಸ್ಟಾರ್ ನಟಿಯಾಗಿ ಬಳಿಕ 50 ಪ್ಲಾಪ್ ಕೊಟ್ಟು ತೆರೆಮರೆಗೆ ಸರಿದಿದ್ದ ನಟಿ; ಮತ್ತೆ ಕಮ್‌ಬ್ಯಾಕ್?
ವರ್ತೂರು ಸಂತೋಷ್ ಕೇಸ್‌ನಲ್ಲಿ ಹಲವು ತಿರುವುಗಳು ಸಂಭವಿಸಿದ್ದು, ಈಗ ಅವರು ಮತ್ತೆ ಬಿಗ್ ಬಾಸ್ ಮನೆ ಸೇರಿಕೊಂಡಿರುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಇತಿಶ್ರೀ ಹಾಡಿದಂತಾಗಿದೆ. ಏಕೆಂದರೆ, ವರ್ತೂರು ಸಂತೋಷ್ ಜೈಲಿಗೆ ಹೋದಾಗ, ಅಲ್ಲಿಂದ ಬೇಲ್ ಮೇಲೆ ಹೊರಬಂದಾಗ, ಎಲ್ಲರೂ ಕೇಳುತ್ತಿದ್ದ ಮೊದಲ ಪ್ರಶ್ನೆ ಎಂದರೆ, 'ಅವರು ಮತ್ತೆ ಬಿಗ್ ಬಾಸ್ ಮನೆಗೆ ಹೋಗುತ್ತಾರೆಯೇ?' ಎಂಬುದು. ಅದಕ್ಕೀಗ ಉತ್ತರ ಸಿಕ್ಕಿದೆ, ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಮನೆ ಮರಳಿ ಪ್ರವೇಶಿಸಿ ಎಂದಿನಂತೆ ಗೇಮ್ ಆಡತೊಡಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಿಗ್ ಬಾಸ್ ಶೋದಲ್ಲಿ ಹೊಸ ಅಧ್ಯಾಯವೊಂದು ಶುರುವಾದಂತಾಗಿದೆ. ಆಕಸ್ಮಿಕ ಎಂಬಂತೆ ಹೊರಹೋಗಿದ್ದ ಸಂತೋಷ್, ಮತ್ತೆ ಬಂದಿರುವುದರಿಂದ ಅಲ್ಲೇನು ಬದಲಾವಣೆ ಆಗಲಿದೆ ಎಂಬುದನ್ನು ಕಾದು ನೋಡಬೇಕು.
ಅಂದಹಾಗೆ, ಬಿಗ್ ಬಾಸ್ ಏನೆಲ್ಲ ನಡೆಯುತ್ತಿದೆ ಎಂಬುದನ್ನು ತಿಳಿಯಲು ನೀವು ಮಾಡಬೇಕಾಗಿದ್ದು ಇಷ್ಟೇ.. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ 9.00 ಕ್ಕೆ ವೀಕ್ಷಿಸಬಹುದು.