ಹುಲಿಯುಗುರು ಕೇಸ್ನಲ್ಲಿ ಜೈಲಲ್ಲಿದ್ದಾಗ ಪೊಲೀಸರು ನಡೆಸಿಕೊಂಡದ್ಹೇಗೆ? ಆ ದಿನಗಳ ನೆನೆದ ವರ್ತೂರು ಸಂತೋಷ್
ಬಿಗ್ಬಾಸ್ನಲ್ಲಿದ್ದಾಗ ಹುಲಿಯುಗುರು ಕೇಸ್ನಲ್ಲಿ ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಲಾಗಿತ್ತು. ಜೈಲಿನಲ್ಲಿ ಇವರನ್ನು ನೋಡಿಕೊಂಡದ್ದು ಹೇಗೆ? ಅವರ ಅನುಭವ ಹೇಗಿತ್ತು?
ಕೆಲ ತಿಂಗಳ ಹಿಂದೆ ಹುಲಿ ಉಗುರು ಕೇಸ್ ಯಾವ ರೀತಿಯಲ್ಲಿ ಸದ್ದು ಮಾಡಿತ್ತು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇದಕ್ಕೆ ಮೂಲವಾದದ್ದು, ಹುಲಿ ಉಗುರು ಪ್ರಕರಣದಲ್ಲಿ, ಬಿಗ್ಬಾಸ್ (Bigg Boss) ಮನೆಯಿಂದಲೇ ನೇರವಾಗಿ ಬಂಧಿಸಲ್ಪಟ್ಟಿದ್ದ ವರ್ತೂರು ಸಂತೋಷ್. ಹುಲಿ ಉಗುರನ್ನು ಧರಿಸುವುದು ನಿಷೇಧ ಎನ್ನುವ ಕಾರಣಕ್ಕೆ ಇವರನ್ನು ಅರೆಸ್ಟ್ ಮಾಡಲಾಗಿತ್ತು. ಬಳಿಕ ಕೆಲವು ಚಿತ್ರ ನಟರ ವಿರುದ್ಧವೂ ಕೇಸ್ ದಾಖಲಾಯಿತು. ಕೋಟ್ಯಧಿಪತಿಗಳಾಗಿ ರಾಜಕಾರಣಿಗಳು, ಚಿತ್ರ ತಾರೆಯರು ತಾವು ಧರಿಸಿರುವುದು ನಕಲಿ ಹುಲಿ ಉಗುರು ಎಂದು ಹೇಳುವ ಮೂಲಕ ಕೇಸ್ನಿಂದ ತಪ್ಪಿಸಿಕೊಂಡಿರುವ ವಿಷಯವೇನೂ ಯಾರಿಂದಲೂ ಮುಚ್ಚಿಟ್ಟಿದ್ದಲ್ಲ. ಕೆಲವು ಪ್ರಕರಣಗಳಲ್ಲಿ ಆ ಹುಲು ಉಗುರು ನಕಲಿ ಎಂದೇ ಸಾಬೀತಾಗಿ ಕೇಸು ಕೂಡ ದಾಖಲಾಗಿಲ್ಲ ಎನ್ನುವ ಚರ್ಚೆ ಕೂಡ ಸಾಕಷ್ಟು ನಡೆದಿತು ಎನ್ನಿ.
ಇದೀಗ ಆ ಹುಲಿ ಉಗುರು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಖುದ್ದು ವರ್ತೂರು ಸಂತೋಷ್ ಅವರು ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಈ ವಿಷಯದ ಕುರಿತು ಮಾತನಾಡಿದ್ದಾರೆ. ಬಿಗ್ಬಾಸ್ಗೆ ಹೋಗುವ ಮೂರು ವರ್ಷಗಳ ಮುಂಚಿನಿಂದಲೂ ನನ್ನ ಕತ್ತಿನಲ್ಲಿ ಈ ಹುಲಿಯುಗುರು ಇತ್ತು. ಇದನ್ನು ನನ್ನ ಅಪ್ಪ ಅಯ್ಯಪ್ಪಸ್ವಾಮಿಗೆ ಹೋದಾಗ ಯಾರೋ ಕೊಟ್ಟಿದ್ದು. ಆದರೆ ಬಿಗ್ಬಾಸ್ಗೆ ಹೋಗುತ್ತಿದ್ದಂತೆಯೇ ನನ್ನ ಮೇಲೆ ಷಡ್ಯಂತ್ರ ಮಾಡಿದರು. ಅದು ಯಾರು ಎನ್ನುವುದು ನನಗೆ ಗೊತ್ತು ಬಿಡಿ ಎಂದಿದ್ದಾರೆ. ನನ್ನನ್ನು ತುಳಿಯಬೇಕು ಎಂದುಕೊಂಡರು. ಆದರೆ ಅದು ಅವರಿಗೇ ರಿವರ್ಸ್ ಹೊಡೆಯಿತು. ಬಿಟ್ಟ ಬಾಣ ಅವರಿಗೇ ತಿರುಗಿತು. ಕೇರಿಯ ಧೂಳು ವಾಪಸ್ ಕೇರಿಗೇ ಹೋಗಬೇಕು ಅನ್ನೋ ಹಾಗೆ. ನನ್ನನ್ನು ಹಳ್ಳ ತೋಡಿ ಹುಗಿಯಬೇಕು ಎಂದು ಮಾಡಿದ್ರು. ಆದರೆ ಅವರೇ ಹಳ್ಳಕ್ಕೆ ಬಿದ್ದರು ಎಂದು ನೋವು ತೋಡಿಕೊಂಡಿದ್ದಾರೆ ವರ್ತೂರು.
ಇಂಥ ಹುಡುಗ ಸಿಕ್ರೆ ಮಾತ್ರ ಮದ್ವೆಯಾಗಿ, ಇಲ್ಲದಿದ್ರೆ ಮತ್ತೊಬ್ರನ್ನ ಹುಡುಕಿ ಅಷ್ಟೇ- ಯುವತಿಯರಿಗೆ ತನಿಷಾ ಕಿವಿಮಾತೇನು?
ವಜ್ರ ಯಾವತ್ತಿದ್ದರೂ ವಜ್ರನೇ. ನಾನು ಯಾರಿಗೂ ಮೋಸ ಮಾಡಿದವನಲ್ಲ. ಆದರೆ ನನ್ನ ಮೇಲೆ ಪಿತೂರಿ ಮ ಆಡಿದ್ರು. ಅವರಿಗೆ ಭಗವಂತನೇ ಉತ್ತರ ಕೊಡುತ್ತಾನೆ. ನಾನು, ನನ್ನ ಮನೆಯವರ ಕಣ್ಣೀರಿನ ಶಾಪ ತಟ್ಟುತ್ತದೆ ಎಂದರು ವರ್ತೂರು. ಇದೇ ಸಂದರ್ಭದಲ್ಲಿ ತಮ್ಮನ್ನು ಜೈಲಿನಲ್ಲಿ ಪೊಲೀಸರು, ಅಧಿಕಾರಿಗಳು ನಡೆಸಿಕೊಂಡ ರೀತಿಯನ್ನು ಹೇಳಿ ಭಾವುಕರಾದರು ಅವರು. ಕಾನೂನಿನ ಕೆಲಸ ಅವರು ಮಾಡಿ ನನ್ನನ್ನು ಜೈಲಿಗೆ ಕರೆದುಕೊಂಡು ಹೋದರು. ಆದರೆ ಅಲ್ಲಿಯ ಆಫೀಸರ್ ನನ್ನ ಕೈಹಿಡಿದುಕೊಂಡು ನಿಮ್ಮನ್ನು ಬಲಿಪಶು ಮಾಡಿರುವುದು ನನಗೆ ಗೊತ್ತು. ನಿಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಹೇಳಿದರು. ಅವರು ನನಗೆ ಕೊಟ್ಟ ಗೌರವ ನೋಡಿ ಇಂದಿಗೂ ಕಣ್ಣೀರು ಬರುತ್ತದೆ ಎಂದ ವರ್ತೂರು ಸಂತೋಷ್, ಅವರಿಗೆ ನಾನು ಸದಾ ಚಿರಋಣಿ. ಅವರ ಹೆಂಡತಿ, ಮಕ್ಕಳು ತಣ್ಣಗೆ ಇರಲಿ ಎಂದು ಹಾರೈಸಿದರು.
ಪೊಲೀಸರಿಗೆ ಕಳ್ಳ ಯಾರು, ನಿರಪರಾಧಿ ಯಾರು ಎಂದು ಸುಲಭದಲ್ಲಿ ಗೊತ್ತಾಗುತ್ತದೆ. ನನ್ನನ್ನು ಅಣ್ಣ ತಮ್ಮಂದಿರ ರೀತಿ ನೋಡಿಕೊಂಡಿದರು. ನನ್ನನ್ನು ಅರೆಸ್ಟ್ ಮಾಡಿದಾಗ ಆರಂಭದಲ್ಲಿ ಸಿಕ್ಕಾಪಟ್ಟೆ ಪ್ಯಾನಿಕ್ ಆಗಿದ್ದೆ. ಅದರ ಜೊತೆಗೆ ಮಾಧ್ಯಮಗಳವರು ಮನೆಗೆ ಬಂದಾಗ ಅಮ್ಮ ಶಾಕ್ ಆದರು. ಆದರೆ ಕೃಷ್ಣ ಹುಟ್ಟಿದ ಜಾಗಕ್ಕೆ ಹೋಗ್ತಾ ಇದ್ದಿಯಾ. ನಿನ್ನ ಬದುಕು ಬದಲಾಗುತ್ತದೆ ಎಂದು ಆಶೀರ್ವಾದ ಮಾಡಿದರು. ಅದೇ ರೀತಿ ಆಯಿತು. ನನ್ನ ಜೀವನ ಟರ್ನ್ ಆಯಿತು. ಆದರೆ ಜೈಲಿನಲ್ಲಿ ಪೊಲೀಸರು, ಅಧಿಕಾರಿಗಳು ನನ್ನನ್ನು ನಡೆಸಿಕೊಂಡ ರೀತಿ, ಕೊಟ್ಟ ಗೌರವ ಮಾತ್ರ ಕೊನೆಯ ಉಸಿರು ಇರುವವರೆಗೂ ನೆನಪಿಸಿಕೊಳ್ಳುವೆ ಎಂದಿದ್ದಾರೆ ವರ್ತೂರು ಸಂತೋಷ್.
ಸರ್ಕಾರ ಸರಿಯಿಲ್ಲ ಎಂದು ಬೈತಾ ಕೂತ್ಕೊಳೋಕೆ ಆಗತ್ತಾ? ಸಿನಿ ಇಂಡಸ್ಟ್ರಿ ಬಗ್ಗೆ ಕಿರಣ್ ರಾಜ್ ಹೇಳಿದ್ದೇನು?