ಸಂಗೀತಾ ವಿರುದ್ಧ ಯಾಕೆ ರಾಕ್ಷಸನಂತೆ ರೋಷಾವೇಶ ತಾಳಿದ್ರು ವರ್ತೂರು ಸಂತೋಷ್!
ಯಾರು ಟಾಸ್ಕ್ ಮಾಡಲು ವಿಫಲರಾದರೋ ಏನೋ! ಆದರೆ, ವರ್ತೂರು ಸಂತೋಷ್ ಉಗ್ರಾವತಾರ ತಾಳಿ 'ಬೇರೆಯವರನ್ನು ದೂಷಿಸುವ ಮೊದಲು ತಾವೇನು ಅಂತ ಅರ್ಥ ಮಾಡಿಕೊಳ್ಳಬೇಕು' ಎಂದು ರೋಷಾವೇಷದಿಂದ ಕೂಗಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ಕೋಲಾಹಲ ಜೋರಾಗಿದೆ. ಕಾರಣ, ಗ್ರಾಂಡ್ ಫಿನಾಲೆ ಸಮೀಸುತ್ತಿದೆ. ಇರುವವರೆಲ್ಲರೂ ಅಲ್ಲಿರುವುದು ಗೆಲ್ಲಲಿಕ್ಕಾಗಿ ಮಾತ್ರ. ಹೀಗಾಗಿ ಅಲ್ಲಿ ಯಾವುದೇ ಸ್ನೇಹ-ಪ್ರೇಮಕ್ಕೆ ಜಾಗವಿಲ್ಲ ಎಂಬಂತಾಗಿದೆ. ಪ್ರೇಮಿಗಳಾಗಿದ್ದ ಸಂಗೀತಾ-ಕಾರ್ತಿಕ್ ಹಾಗೂ ನಮ್ರತಾ-ಸ್ನೇಹಿತ್ ದೂರವಾಗಿದ್ದಾರೆ. ಬೆಸ್ಟ್ ಫ್ರೆಂಡ್ಸ್ ಎಂಬಂತಿದ್ದ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕಿತ್ತಾಡಿಕೊಂಡಿದ್ದಾರೆ. ಸಂಗೀತಾ-ತನಿಷಾ ಸ್ನೇಹ ಕೂಡ ಮುರಿದುಬಿದ್ದಿದೆ.
ಹೀಗಿರುವಾಗ, ಗ್ರಾಂಡ್ ಫಿನಾಲೆಗೆ ಕೇವಲ ಒಂದು ವಾರ ಬಾಕಿ ಇರುವಾಗ, ಮನೆಯಲ್ಲಿ ಟಾಸ್ಕ್ ಒಂದರ ವಿಷಯವಾಗಿ ವರ್ತೂರು ಸಂತೋಷ್ ಕೆಂಡಾಮಂಡಲವಾಗಿದ್ದಾರೆ. ಬಿಗ್ ಬಾಸ್ ಒಂದು ಟಾಸ್ಕ್ ನೀಡಿ 'ಇದನ್ನು 15 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಈ ಟಾಸ್ಕ್‌ನಲ್ಲಿ ಗೆದ್ದರೆ ಮನೆಗೆ 1 ಲಕ್ಷ ರೂಪಾಯಿ ಕೊಡಲಾಗುವುದು' ಎಂದು ಘೋಷಿಸಿದ್ದಾರೆ. ಆದರೆ ಮನೆಯವರು ಆಯ್ಕೆ ಮಾಡಿದ ಸದಸ್ಯ ಈ ಟಾಸ್ಕ್ ಮಾಡಲು ವಿಫಲರಾಗಿದ್ದಾರೆ. ಹೀಗಾಗಿ ಮನೆಗೆ ಸಹಜವಾಗಿ ಬರಬೇಕಾದ ಹಣ ಬಾರದೇ ರಣರಂಗವಾಗಿದೆ.
ಕುಂಬಾರನಹಳ್ಳಿಯಲ್ಲಿ ಸುತ್ತಾಡಿದ ದುನಿಯಾ ವಿಜಯ್; ಹುಟ್ಟುಹಬ್ಬದ ಹೊಸ್ತಿಲಲ್ಲಿ ಖುಷಿ ಧಮಾಕಾ!
ಯಾರು ಟಾಸ್ಕ್ ಮಾಡಲು ವಿಫಲರಾದರೋ ಏನೋ! ಆದರೆ, ವರ್ತೂರು ಸಂತೋಷ್ ಉಗ್ರಾವತಾರ ತಾಳಿ 'ಬೇರೆಯವರನ್ನು ದೂಷಿಸುವ ಮೊದಲು ತಾವೇನು ಅಂತ ಅರ್ಥ ಮಾಡಿಕೊಳ್ಳಬೇಕು' ಎಂದು ರೋಷಾವೇಷದಿಂದ ಕೂಗಾಡಿದ್ದಾರೆ. ಹಾಗಿದ್ದರೆ , ಯಾರನ್ನು ಮನೆಯವರು ಆಯ್ಕೆ ಮಾಡಿ ಕಳಿಸಿದ್ದರು, ಯಾಕೆ ಅವರು ವಿಫಲರಾದರು ಎಂಬುದನ್ನು ತಿಳಿಯಲು ಇಂದಿನ ಸಂಚಿಕೆ ನೋಡಬೇಕು. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಸಂಚಿಕೆ ಪ್ರಸಾರವಾಗಲಿದೆ, ನೋಡಿ ಆನಂದಿಸಬಹುದು. ಇದೇ ತಿಂಗಳು, ಅಂದರೆ ಜನವರಿ 27-28 ರಂದು ಬಿಗ್ ಬಾಸ್ ಕನ್ನಡ ಸೀಸನ್ 10ರ ಗ್ರಾಂಡ್ ಫಿನಾಲೆ ನಡೆಯಲಿದೆ.
ನಾಗಭೂಷಣ್ ಈಗ ವಿದ್ಯಾಪತಿ; ಸಂಕ್ರಾಂತಿ ಹಬ್ಬಕ್ಕೆ ಡಾಲಿ ಪಿಕ್ಚರ್ಸ್ ಹೊಸ ಸಿನಿಮಾ ಘೋಷಣೆ
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.
ಸಿಲಿಕಾನ್ ಸಿಟಿಯಲ್ಲಿ '45' ಚಿತ್ರೀಕರಣ; ಅರ್ಜುನ್ ಜನ್ಯ ಚಿತ್ರದಲ್ಲಿ ಉಪೇಂದ್ರ, ಶಿವಣ್ಣಗೆ 'ಮೊಟ್ಟೆ' ಹೀರೋ ಸಾಥ್