Asianet Suvarna News Asianet Suvarna News

ಕುಂಬಾರನಹಳ್ಳಿಯಲ್ಲಿ ಸುತ್ತಾಡಿದ ದುನಿಯಾ ವಿಜಯ್; ಹುಟ್ಟುಹಬ್ಬದ ಹೊಸ್ತಿಲಲ್ಲಿ ಖುಷಿ ಧಮಾಕಾ!

ನಟ ವಿಜಯ್ ತಮ್ಮ ಊರಿನಲ್ಲಿ ಸುತ್ತಾಟ ನಡೆಸುತ್ತ, ತಾವೊಬ್ಬರು ನಟ ಎಂಬ ಹಮ್ಮುಬಿಮ್ಮು ತೊರೆದು ಊರ ಮಂದಿ ಜೊತೆ ಒಬ್ಬರಾಗಿದ್ದಾರೆ. ಎಲ್ಲರ ಜತೆ ಚೆನ್ನಾಗಿ ಮಾತಾಡಿ, ಎಲ್ಲರ ಜತೆ ನಗುನಗುತ್ತ ಬೆರೆತು ಓಡಾಡಿದ್ದಾರೆ. 

Sandalwood actor Duniya Vijay rounds in his birth village Kumbaranahalli srb
Author
First Published Jan 17, 2024, 7:44 PM IST

ಕುಂಬಾರನಹಳ್ಳಿಯಲ್ಲಿ ನಟ ದುನಿಯಾ ವಿಜಯ್ ರೌಂಡ್ಸ್​. ಈ ಸುದ್ದೀಯೀಗ ಕರ್ನಾಟಕದ ತುಂಬೆಲ್ಲಾ ರೌಂಡ್ ಹೊಡೆಯುತ್ತಿದೆ. ನಟ ದುನಿಯಾ ವಿಜಯ್ ಈಗ ಹುಟ್ಟುಹಬ್ಬದ ಹೊಸ್ತಿಲಲ್ಲಿದ್ದಾರೆ. ಇದೇ ಜನವರಿ 20ಕ್ಕೆ ನಟ ವಿಜಯ್ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ವಿಜಯ್ ತಮ್ಮ ಹುಟ್ಟೂರು ಆನೇಕಲ್​​ನ ಕುಂಬಾರನಹಳ್ಳಿಯಲ್ಲಿ ಫ್ಯಾನ್ಸ್​ ಭೇಟಿ ಮಾಡೋಕೆ ಸಿದ್ಧತೆಗಳನ್ನ ಮಾಡುತ್ತಿದ್ದಾರೆ. 

ಈ ಗ್ಯಾಪ್​ನಲ್ಲಿ ಸ್ವಲ್ಪ ಫ್ರೀ ಮಾಡಿಕೊಂಡಿರೋ ನಟ ವಿಜಯ್ ತನ್ನ ಹುಟ್ಟೂರನ್ನ ಒಂದು ರೌಂಡ್ ಸುತ್ತಿದ್ದಾರೆ. ಈ ಮೂಲಕ ಊರು ಸುತ್ತಿ ಬಾಲ್ಯದ ದಿನ ನೆನಪಿಸಿಕೊಂಡರು ವಿಜಯ್. ನಟ ವಿಜಯ್ ಹುಟ್ಟೂರು ಆನೇಕಲ್​ನ ಕುಂಬಾರನಹಳ್ಳಿ. ಓದು ಬರಹ ಕಲಿತದ್ದು ಇಲ್ಲೇ. ವಿಜಯ್ ರ ಚಿಕ್ಕಪ್ಪ ದೊಡ್ಡಪ್ಪ ಸೇರಿ ಇಡೀ ಫ್ಯಾಮಿಲಿ ಇರೋದು ಇದೇ ಊರಿನಲ್ಲೇ. 

ರುದ್ರಶಿವನಿಗೆ 'ಹೊಡಿರೋ ಸೆಲ್ಯೂಟ್' ಹೇಳಿ 'ಶಭ್ಭಾಷ್'ಗಿರಿ ಕೊಟ್ಟ ಓಂ ಸಾಯಿ ಪ್ರಕಾಶ್; ಶರತ್-ನಿಸರ್ಗ ಜೋಡಿ ರೊಮಾನ್ಸ್!

ಹೀಗಾಗಿ ತನ್ನ ಬಾಲ್ಯ, ಹಾಗು ಯವ್ವನದ ದಿನಗಳನ್ನ ಕಳೆದ ಊರಿನಲ್ಲೇ ವಿಜಯ್ ರೌಂಡ್ಸ್ ಹೊಡೆದಿದ್ದು ಹಳೇ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಹಿರಿಯ ಆಶೀರ್ವಾದ ಪಡೆದಿದ್ದಾರೆ. ತಮ್ಮ ಊರಿನ ಹೊಲ, ಗದ್ದೆ ಹಾಗೂ ಕಾಡಿನಲ್ಲಿ ವಿಜಯ್ ಸುತ್ತಾಟ ನಡೆಸಿದ್ದಾರೆ. ವಿಜಯ್ ತನ್ನ ಕ್ಲಾಸ್​ಮೇಟ್ಸ್,​​​ ಹಳೆಯ  ಸ್ನೇಹಿತರನ್ನ ಭೇಟಿ ಮಾಡಿದ್ದಾರೆ. ಊರು ಕೇರಿ, ಹೊಲ ಗದ್ದೆಯಲ್ಲಿ ಸುತ್ತಾಡಿ, ತನ್ನ ಊರಿನ ಈಗಿನ ಸ್ತಿತಿ ಗತಿಯನ್ನ ಕಣ್ಣಾರೆ ನೋಡಿದ್ದಾರೆ. 

ನಾಗಭೂಷಣ್ ಈಗ ವಿದ್ಯಾಪತಿ; ಸಂಕ್ರಾಂತಿ ಹಬ್ಬಕ್ಕೆ ಡಾಲಿ ಪಿಕ್ಚರ್ಸ್ ಹೊಸ ಸಿನಿಮಾ ಘೋಷಣೆ

ನಟ ವಿಜಯ್ ತಮ್ಮ ಊರಿನಲ್ಲಿ ಸುತ್ತಾಟ ನಡೆಸುತ್ತಿರುವ, ತಾವೊಬ್ಬರು ನಟ ಎಂಬ ಹಮ್ಮುಬಿಮ್ಮು ತೊರೆದು ಊರ ಮಂದಿ ಜೊತೆ ಒಬ್ಬರಾಗಿದ್ದಾರೆ. ಎಲ್ಲರ ಜತೆ ಚೆನ್ನಾಗಿ ಮಾತಾಡಿ, ಎಲ್ಲರ ಜತೆ ನಗುನಗುತ್ತ ಬೆರೆತು ಓಡಾಡಿರುವ ಈ ವೀಡಿಯೋ ಈಗ ಎಲ್ಲಡೆ ವೈರಲ್ ಆಗುತ್ತಿದೆ. ಒಟ್ಟನಲ್ಲಿ, ನಟ ದುನಿಯಾ ವಿಜಯ್‌ಗೆ ಹುಟ್ಟುಹಬ್ಬಕ್ಕೂ ಮೊದಲು ಹುಟ್ಟೂರಿನ ಸಾಂಗತ್ಯ ದೊರಕಿದ್ದು ಡಬಲ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. 

Follow Us:
Download App:
  • android
  • ios