ವಯಸ್ಸು ರಿವೀಲ್ ಮಾಡಿದ ವೈಷ್ಣವಿ, ಇನ್ನಾದ್ರೂ ಮದ್ವೆ ಆಗಿ ಅಂತಿದ್ದಾರೆ ಫ್ಯಾನ್ಸ್ !
ವೈಷ್ಣವಿ ಗೌಡ ತನ್ನ ವಯಸ್ಸು ಎಷ್ಟು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿದ ಫ್ಯಾನ್ಸ್ ಇನ್ನಾದ್ರೂ ಮದುವೆ ಆಗಿ ಮೇಡಂ ಅಂತಿದ್ದಾರೆ.
ವೈಷ್ಣವಿ ಗೌಡ ಸದ್ಯ 'ಸೀತಾರಾಮ' ಸೀರಿಯಲ್‌ನ ಸೀತಾ ಪಾತ್ರದಲ್ಲಿ ಸಖತ್ತಾಗಿ ನಟಿಸ್ತಾ ಇದ್ದಾರೆ. ಅವರ ಆಕ್ಟಿಂಗ್‌ಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಈ ನಟಿಗೆ ಇದೀಗ ತನ್ನ ವಯಸ್ಸನ್ನ ರಿವೀಲ್ ಮಾಡಿದ್ದೇ ಪೇಚಿಗಿಟ್ಟುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕ ಮಂದಿ ಫ್ಯಾನ್ಸ್, ಇಷ್ಟು ವಯಸ್ಸಾಯ್ತಲ್ಲಾ ಇನ್ನು ಮದುವೆ ಆಗಿ ಮೇಡಂ ಅಂತ ಹೇಳ್ತಿದ್ದಾರೆ. ಹಾಗೆ ನೋಡಿದರೆ ಈ ವೈಷ್ಣವಿ ಮದುವೆಯನ್ನು ನಿರಾಕರಿಸಿದವರಲ್ಲ. 2022ರ ನವೆಂಬರ್‌ನಲ್ಲಿ ವೈಷ್ಣವಿ ಗೌಡ, ವಿದ್ಯಾಶಂಕರ್ ಎನ್ನುವವರು ಕುಟುಂಬದ ಮುಂದೆ ಹಾರ ಹಾಕಿಕೊಂಡಿದ್ದ ಫೋಟೋವೊಂದು ವೈರಲ್ ಆಗಿತ್ತು. ಎಲ್ಲರೂ ಇದು ನಿಶ್ಚಿತಾರ್ಥ ಎಂದೇ ಭಾವಿಸಿದರು. ಆಮೇಲೆ ವೈಷ್ಣವಿ ಕುಟುಂಬವೇ ಇದು ನಿಶ್ಚಿತಾರ್ಥ ಅಲ್ಲ ಎಂದು ಹೂ ಮುಡಿಸುವ ಶಾಸ್ತ್ರ ಎಂದು ಸ್ಪಷ್ಟನೆ ನೀಡಿತು. ಆ ನಂತರ ವಿದ್ಯಾಶಂಕರ್ ಕುರಿತಾದ ಆಡಿಯೋವೊಂದು ವೈರಲ್ ಆಗಿತ್ತು. ಆ ನಂತರ ವೈಷ್ಣವಿ ಅವರು ವಿದ್ಯಾಶಂಕರ್ ಜೊತೆ ಸಂಬಂಧ ಮುಂದುವರೆಸೋದಿಲ್ಲ ಎಂದು ಹೇಳಿದ್ದರು.
'ಅದು ನನ್ನ ತಾಯಿಯಿಂದ ಬಂದ ಸಂಬಂಧವಾಗಿತ್ತು. ಕೆಲ ದಿನಗಳ ನಂತರ ಸಂದರ್ಭ ಬದಲಾಯ್ತು, ನಾವು ಸಂಬಂಧ ಮುಂದುವರೆಸಲಿಲ್ಲ. ಆ ಘಟನೆ ನಮ್ಮ ಹಿಂದೆ ನಡೆದಿದ್ದಾಗಿತ್ತು. ಏನಾಗತ್ತೋ ಅದು ಒಳ್ಳೆಯದಕ್ಕೆ ಆಗುವುದು. ನನಗೆ ಇಂದಿಗೂ ಕೂಡ ರಿಲೇಶನ್‌ಶಿಪ್‌ನಲ್ಲಿ ನಂಬಿಕೆಯಿದೆ. ಮುಂದೊಂದು ದಿನ ನನಗೂ ಮದುವೆಯಾಗಿ ಕುಟುಂಬ ಇರುತ್ತದೆ ಎಂದು ನಂಬಿದ್ದೇನೆ. ಆ ರೀತಿ ಘಟನೆಗಳು ನನ್ನ ನಂಬಿಕೆಯನ್ನು ಮುರಿಯೋದಿಲ್ಲ' ಎಂಬ ಮಾತನ್ನು ಈ ಘಟನೆ ನಡೆದು ಎಷ್ಟೋ ದಿನಗಳ ಬಳಿಕ ಸಂದರ್ಶನವೊಂದರಲ್ಲಿ ವೈಷ್ಣವಿ ಹೇಳಿದ್ದರು. ಇದಾದ ಮೇಲೆ ಕ್ರಮೇಣ ವೈಷ್ಣವಿ ಮದುವೆ ಸುದ್ದಿ ಹಿನ್ನೆಲೆಗೆ ಸರಿಯಿತು. 'ಸೀತಾರಾಮ' ಸೀರಿಯಲ್ ಮೂಲಕ ಅವರ ನಟನೆ ಮುನ್ನೆಲೆಗೆ ಬಂತು. ಸದ್ಯಕ್ಕಂತೂ ಈ ಹಿಂದಿನ ಘಟನೆಯನ್ನು ಎಲ್ಲರೂ ಮರೆತಿದ್ದಾರೆ. ಎಲ್ಲರೂ ಬೇಗ ಮದುವೆ ಆಗುವಂತೆ ವೈಷ್ಣವಿ ಅವರನ್ನು ಒತ್ತಾಯಿಸುತ್ತಿದ್ದಾರೆ.
ಇತ್ತೀಚೆಗೆ ವೈಷ್ಣವಿ 'ಸೀತಾರಾಮ' ಸೀರಿಯಲ್ ಹೀರೋ ಗಗನ್ ಚಿನ್ನಪ್ಪ ಜೊತೆಗೆ ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ತಾ ಇದ್ದಾರೆ. ಆರಂಭದಿಂದಲೇ ಈ ಇಬ್ಬರ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದರು. ಇವರಿಬ್ಬರೂ ಮದುವೆ ಆದರೆ ಚೆನ್ನಾಗಿರುತ್ತೆ ಅಂತ ಬಹಳ ಮಂದಿ ಆಗಾಗ ಕಾಮೆಂಟ್ ಮಾಡ್ತಿರುತ್ತಾರೆ. ಆದರೆ ಒಂದು ವರ್ಗದ ಜನ ಈ ಬಗ್ಗೆ ನಿರ್ಲಿಪ್ತವಾಗಿದ್ದಾರೆ. ಕಾರಣ ಈ ಹಿಂದೆ ಈ ನಟಿ 'ಅಗ್ನಿಸಾಕ್ಷಿ' ಸೀರಿಯಲ್‌ನಲ್ಲಿ ಸಖತ್ ಪಾಪ್ಯುಲರ್ ಆಗಿದ್ದರು. ಅಲ್ಲಿ ಇವರ ಮತ್ತು ವಿಜಯ್ ಸೂರ್ಯ ಜೋಡಿ ಬಹಳ ಮೋಡಿ ಮಾಡಿತ್ತು. ಎಲ್ಲರೂ ಇವರಿಬ್ಬರು ಮದುವೆ ಆಗುತ್ತಾರೆ ಎಂದೇ ನಂಬಿದ್ದರು. ಆದರೆ ವಿಜಯ್ ಅಮ್ಮ ಸೂಚಿಸಿದ ಗುಳಿಕೆನ್ನೆ ಹುಡುಗಿಗೆ ತಾಳಿ ಕಟ್ಟಿದರು. ವೈಷ್ಣವಿ ಮದುವೆಗೆ ಹೋಗಿ ಶುಭ ಹಾರೈಸಿದ್ದರು. ಇದೀಗ ಗಗನ್ ಚಿನ್ನಪ್ಪ, ವೈಷ್ ಕಥೆಯೂ ಹೀಗೇ ಆದರೆ ಕಷ್ಟ ಅನ್ನೋದು ಅವರ ಅಭಿಪ್ರಾಯ.
ಸ್ನಾನ ಮಾಡೋ ವೀಡಿಯೋ ಶೇರ್ ಮಾಡಿದ ವೈಷ್ಣವಿ ಗೌಡ, ಸೊಂಟ ಪಟ್ಟಿ ನೋಡಿ ಬಿದ್ದೇ ಹೋದ ಫ್ಯಾನ್ಸ್!
ಅಂದಹಾಗೆ ವೈಷ್ಣವಿ ಇತ್ತೀಚೆಗೆ ಜಾಹೀರಾತೊಂದರಲ್ಲಿ ತನಗೆ 31 ವರ್ಷ ಆಗಿದೆ ಅಂದಿದ್ದರು. ಇದನ್ನು ನೋಡಿ ಇದ್ದಬದ್ದ ಫ್ಯಾನ್ಸ್ ಎಲ್ಲ, 'ಬೇಗ ಮದ್ವೆ ಆಗಿ ಮೇಡಂ, ವಯಸ್ಸು ನಿಲ್ಲೋದಿಲ್ಲ. ಕರೆಕ್ಟ್ ಏಜ್‌ನಲ್ಲೇ ಮದುವೆ ಆದ್ರೆ ಚೆಂದ' ಅಂತೆಲ್ಲ ಸಲಹೆ ಕೊಟ್ಟಿದ್ದಾರೆ. ಈ ಗುಳಿಕೆನ್ನೆ ಚೆಲುವೆ ಸದ್ಯಕ್ಕಂತೂ ಇದಕ್ಕೆಲ್ಲ ರಿಯಾಕ್ಟ್ ಮಾಡಿಲ್ಲ. ಗಗನ್ ಜೊತೆಗೆ ಈಕೆ ಹಸೆಮಣೆ ಏರ್ತಾರ? ಇಲ್ಲಾ ಈ ಹಿಂದಿನಂತೆ ತನ್ನ ತಾಯಿ ತೋರಿಸಿದವರ ಜೊತೆಗೆ ಸಪ್ತಪದಿ ತುಳೀತಾರ ಅನ್ನೋದನ್ನು ಕಾದು ನೋಡಬೇಕು.
ಒಂದೇ ದಿನದಲ್ಲಿ ಉರ್ಫಿ ಜಾವೇದ್ ರಿಸ್ಕಿ ವಿಡಿಯೋ 50M ವೀಕ್ಷಣೆ, ಸಮಂತಾ ಸೇರಿ ಸೆಲೆಬ್ರೆಟಿಗಳ ಕಮೆಂಟ್ಸ್!