Asianet Suvarna News Asianet Suvarna News

ಸ್ನಾನ ಮಾಡೋ ವೀಡಿಯೋ ಶೇರ್ ಮಾಡಿದ ವೈಷ್ಣವಿ ಗೌಡ, ಸೊಂಟ ಪಟ್ಟಿ ನೋಡಿ ಬಿದ್ದೇ ಹೋದ ಫ್ಯಾನ್ಸ್!

ನಟಿ ವೈಷ್ಣವಿ ಗೌಡ ಸ್ನಾನ ಮಾಡುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

zee kannada seetharam serial seetha fame vaishnavi gowda bathing scene viral
Author
First Published Sep 16, 2024, 10:39 AM IST | Last Updated Sep 17, 2024, 11:22 AM IST

ವೈಷ್ಣವಿ ಗೌಡ ಹೋಗ್ ಹೋಗಿ ಸ್ನಾನ ಮಾಡ್ತಿರೋ ಫೋಟೋ ಶೇರ್ ಮಾಡಿದ್ದಾರೆ. ಇವ್ರು ಸೀರೆಯುಟ್ಟ ಗರತಿ ಗೌರಮ್ಮನ ಥರ ಬಂದರೇ ಕಣ್ ಬಾಯಿ ಬಿಟ್ಟು ನೋಡೋ ಫ್ಯಾನ್ಸ್ ಇಂಥಾ ಫೋಟೋ ಹಾಕಿದ್ರೆ ಸುಮ್ಮನಿರ್ತಾರ? ಕಾಮೆಂಟ್‌ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈಷ್ಣವಿ ಗೌಡ ಮೊದಲಿಂದಲೂ ಸೌಂದರ್ಯವತಿ ಅಂತಲೇ ಗುರುತಿಸಿಕೊಂಡವರು. ಉಳಿದವ್ರೆಲ್ಲ ಚಟಪಟ ಮಾತಾಡ್ತಿದ್ರೆ ಇವ್ರು ಮೌನ ಸುಂದರಿ. ನಟಿ ಅಮೂಲ್ಯ ಇವರ ಬೆಸ್ಟ್ ಫ್ರೆಂಡ್. ಮೌಂಟ್ ಕಾರ್ಮೆಲ್ ಕಾಲೇಜಲ್ಲಿ ಓದ್ತಿದ್ದಾಗಿಂತಲೇ ಇವ್ರೆಲ್ಲ ಫ್ರೆಂಡ್ಸ್. ಕಾಲೇಜಿನ ಗೆಳೆತನವನ್ನು ಲೈಫ್‌ ಲಾಂಗ್ ಹಾಗೇ ಇಟ್ಕೊಳ್ತೀವಿ ಅಂತ ಪಣ ತೊಟ್ಟವರ ಹಾಗೆ ತಮ್ಮ ಥರಾವರಿ ಫೋಟೋಗಳನ್ನು ಇನ್‌ಸ್ಟಾದಲ್ಲಿ ಶೇರ್ ಮಾಡ್ತಿರುತ್ತಾರೆ. ಅಷ್ಟೇ ಅಲ್ಲಇವ್ರು ನಾಲ್ಕೈದು ಜನ ವುಮೆನ್ ಫ್ರೆಂಡ್ಸ್ ಗ್ಯಾಂಗ್ ಆಗಾಗ ಟ್ರಾವೆಲ್ ಮಾಡ್ತಾ ಇರ್ತಾರೆ. ಆ ಟ್ರಾವೆಲ್ ಜಾಗದ ಫೋಟೋ ಮಾತ್ರ ಅಲ್ಲ, ಅಲ್ಲಿ ತಮ್ಮ ನಡುವೆ ನಡೆಯೋ ಮಾತುಕತೆಯನ್ನೂ ರೀಲ್ಸ್‌ ಮಾಡಿ ಶೇರ್ ಮಾಡ್ತಿರ್ತಾರೆ. ಅದ್ರಲ್ಲಿ ಇತ್ತೀಚೆಗೆ ಸಖತ್ ವೈರಲ್ ಆಗಿರೋದು ಅಮೂಲ್ಯ ಈಕೆಯ ಬಗ್ಗೆ ಮಾಡಿರೋ ಕಾಮೆಂಟ್. ಮೌನ ಗೌರಿ ಅನ್ನೋ ಥರ ಅಮ್ಮು ಕಾಮೆಂಟ್ ಮಾಡಿದ್ರು.

ಕಣ್ಣುಮುಚ್ಚಿ ಮೇಕಪ್​ ಮಾಡಿದ ಸೀತಾ-ಸಿಹಿ: ಸೀರಿಯಲ್​ ನಿರ್ದೇಶಕರಿಗೆ ಬೆದರಿಕೆ ಹಾಕಿದ ಫ್ಯಾನ್ಸ್​!

ಇನ್ನು ವೈಷ್ಣವಿ ಗೌಡ ಸೀರಿಯಲ್ ಫ್ಯಾನ್ಸ್ ಅಂತೂ ಇವ್ರ ಪಾತ್ರದ ಬಗ್ಗೆ ಮಾತ್ರ ಅಲ್ಲ, ಇವ್ರ ಬಗ್ಗೆನೂ ಕಾಮೆಂಟ್ ಮಾಡ್ತಾನೆ ಇರ್ತಾರೆ. ಈ ಸೀರಿಯಲ್‌ನಲ್ಲಿ ಸೀತಾ ಆಗಿಯೇ ಫೇಮಸ್ ವೈಷ್ಣವಿ. ಸರೋಗೇಟ್ ಮದರ್ ಆಗಿರುವ ಸೀತಾ ಮಗು ಹೆತ್ತ ಮೇಲೆ ಪೋಷಕರು ಬರದ ಕಾರಣ ಅವಳೇ ಮಗುವನ್ನು ಇಟ್ಕೊಂಡಿದ್ದಾಳೆ. ಇನ್ನೊಂದೆಡೆ ಶ್ಯಾಮ್‌ಗೆ ತನ್ನ ಪತ್ನಿ ಶಾಲಿನಿ ಮಾಡಿರೋ ಕುತಂತ್ರದ ಅರಿವಿಲ್ಲ. ಆತ ಬಾಡಿಗೆ ಗರ್ಭ ಧರಿಸಿರೋ ಹೆಣ್ಣೇ ಮೋಸ ಮಾಡಿದ್ದಾಳೆ ಅಂದುಕೊಂಡಿದ್ದಾನೆ. ಸದ್ಯ ಆತನಿಗೆ ತನ್ನ ಮಗು ಬದುಕಿರೋ ಸಂಗತಿ ಗೊತ್ತಾಗಿದೆ. ಹೇಗಾದರೂ ಮಗು ವಾಪಾಸ್ ಪಡೀಬೇಕು ಅಂದುಕೊಂಡಿದ್ದಾನೆ. ಇತ್ತ ರಾಮ್ ಸ್ನೇಹಿತ ಶ್ಯಾಮ್ ಸಪೋರ್ಟ್‌ಗೆ ಬಂದಿದ್ದಾನೆ.

ಯಾವುದೇ ಕಾರಣಕ್ಕೂ ಶ್ಯಾಮ್ ಗೆ ತನ್ನ ಮಗು ಸಿಗುವವರೆಗೂ ನಾವು ಮಗು ಮಾಡಿಕೊಳ್ಳುವುದು ಬೇಡ ಎಂದಿದ್ದಾನೆ. ಅಷ್ಟೇ ಅಲ್ಲದೇ, ಬಾಡಿಗೆ ತಾಯಿ ಬಗ್ಗೆ ಕೊಂಚ ತುಚ್ಛವಾಗಿ ಮಾತನಾಡಿದ್ದಾನೆ. ಶ್ಯಾಮ್ ಗೆ ಸುಳ್ಳು ಹೇಳಿ, ತಾನೇ ಮಗುವನ್ನು ಇಟ್ಟುಕೊಂಡಿರುವುದು ಆ ಬಾಡಿಗೆ ತಾಯಿಯ ತಪ್ಪು ಎಂದು ವಾದಿಸಿದ್ದಾನೆ. ಸೀತಾ ತನ್ನ ಬದುಕಲ್ಲಿ ನಡೆದ ಘಟನೆಯನ್ನು ರಾಮ್ ಬಳಿ ಹೇಳಲಾಗದೇ ಒದ್ದಾಡುವಂತಾಗಿದೆ. ಮದುವೆಗೂ ಮುನ್ನವೇ ತನ್ನ ಬದುಕಿನಲ್ಲಾಗಿರುವ ಕಹಿ ಘಟನೆಯನ್ನು ರಾಮ್ ಬಳಿ ಹಂಚಿಕೊಳ್ಳಬೇಕು ಎಂದಿದ್ದಳು. ಆದರೆ ರಾಮ್ ಅವಕಾಶ ಕೊಟ್ಟಿರಲಿಲ್ಲ. ಸದ್ಯ ಮಗುವಿನ ಕಾರಣಕ್ಕೆ ಶ್ಯಾಮ್, ಶಾಲಿನಿ ರಾಮ್ ಮನೆಗೇ ಬಂದಿದ್ದಾರೆ.

ಗುಲಾಬಿ ಹಾರ್ಟ್ ಡ್ರೆಸ್‌ನಲ್ಲಿ ಜಗಮಗಿಸಿದ ನಿವೇದಿತಾ ಗೌಡ: ಲಿಪ್‌ಸ್ಟಿಕ್‌ ಹಚ್ಚಿಕೊಂಡಿದ್ದಕ್ಕೆ ಬೇಜಾರಾದ ಫ್ಯಾನ್ಸ್!

ಇನ್ನು ಸೀತಾ ಪಾತ್ರ ಮಾಡಿರೋ ವೈಷ್ಣವಿ ವಿಚಾರಕ್ಕೆ ಬಂದ್ರೆ ಈಕೆ ಸ್ನಾನ ಮಾಡೋ ವೀಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ರಿಯಲ್ ಆಗಿ ಸ್ನಾನ ಮಾಡೋ ರೀಲ್ಸ್ ಹಾಕ್ಕೊಂಡ್ರಾ ಅಂದ್ರೆ ನೋ. ಇವ್ರು ಜಾಹೀರಾತಿಗೆ ಈ ರೀತಿಯ ವಿಜ್ಯುವಲ್ ಹಾಕಿದ್ದಾರೆ. ವೈಷ್ ಸ್ನಾನದ ವಿಜ್ಯುವಲ್ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಅಷ್ಟೇ ಅಲ್ಲ, ಸ್ನಾನ ಮಾಡುವಾಗ ವೈಷ್ಣವಿ ನಡುಪಟ್ಟಿ ಕಾಣಿಸಿದೆ. ಇದನ್ನು ಕಂಡು ಥರಾವರಿ ಪ್ರತಿಕ್ರಿಯೆ ಬಂದಿದೆ. 'ಈ ನೇವಲ್ ಚೈನ್ ನೋಡಿ ನನ್ನ ಈ ದಿನ ಪಾವನವಾಯ್ತು' ಅಂತೊಬ್ಬ ಅಭಿಮಾನಿ ಹೇಳ್ಕೊಂಡ್ರೆ, ಇನ್ನೊಬ್ರು ಇದನ್ನು ಶೂಟ್ ಮಾಡಿರೋ ಕ್ಯಾಮರಮೆನ್ ಅದೃಷ್ಟವಂತ ಅಂದುಬಿಟ್ಟಿದ್ದರು. ಸಾಕಷ್ಟು ಜನ ಹಾರ್ಟ್, ಬೆಂಕಿ ಇಮೋಜಿ ಮೂಲಕ ತಮ್ಮ ಭಾವನೆ ತಿಳಿಸಿದ್ದಾರೆ.

 

Latest Videos
Follow Us:
Download App:
  • android
  • ios