ಒಂದೇ ದಿನದಲ್ಲಿ ಉರ್ಫಿ ಜಾವೇದ್ ರಿಸ್ಕಿ ವಿಡಿಯೋ 50M ವೀಕ್ಷಣೆ, ಸಮಂತಾ ಸೇರಿ ಸೆಲೆಬ್ರೆಟಿಗಳ ಕಮೆಂಟ್ಸ್!

ಉರ್ಫಿ ಜಾವೇದ್ ಇದೀಗ ಭಾರಿ ಸಾಹಸದ ವಿಡಿಯೋ ಒಂದನ್ನು ಮಾಡಿದ್ದಾರೆ. ಈ ವಿಡಿಯೋಗೆ ಉರ್ಫಿ ಅಭಿಮಾನಿಗಳು ಮಾತ್ರವಲ್ಲ ನಟಿ ಸಮಂತಾ ಸೇರಿ ಹಲವು ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದೇ ದಿನದಲ್ಲಿ ಉರ್ಫಿ ವಿಡಿಯೋ 50 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಉರ್ಫಿ ಕಮಾಲ್ ಮಾಡಿದ ವಿಡಿಯೋ ಇಲ್ಲಿದೆ.

Actress Samantha comments Urfi Javed risky video receives record break views ckm

ಮುಂಬೈ(ಅ.08) ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ಫ್ಯಾಶನ್ ಜಗತ್ತು ಕಲ್ಪನೆ, ಊಹೆಗೂ ಮೀರಿದೆ. ಆರಂಭದಲ್ಲಿ ಉರ್ಫಿ ಅವತಾರಕ್ಕೆ ಟೀಕೆಗಳು ಹೆಚ್ಚಾಗಿದ್ದರೆ, ಇದೀಗ ಬಾಲಿವುಡ್ ಸೆಲೆಬ್ರೆಟಿಗಳು ಉರ್ಫಿ ಫ್ಯಾಶನ್ ಸೆನ್ಸ್‌ಗೆ ಮಾರು ಹೋಗಿದ್ದಾರೆ. ಇದರ ನಡುವೆ ಉರ್ಫಿ ಶೂಟ್ ಮಾಡುವ ಹಲವು ವಿಡಿಯೋಗಳು ಭಾರಿ ಕೋಲಾಹಲ ಸೃಷ್ಟಿಸಿದೆ. ಇದೀಗ ಉರ್ಫಿ ಭಾರಿ ರಿಸ್ಕ್ ತೆಗೆದುಕೊಂಡು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಆರಂಭದಲ್ಲೇ ಕುತೂಹಲ, ಆತಂಕ ಹುಟ್ಟಿಸಿದೆ. ಹೀಗಾಗಿ ನಟಿ ಸಮಂತಾ ರುತ್ ಪ್ರಭು ಸೇರಿದಂತೆ ಹಲವು ಸೆಲೆಬ್ರೆಟಿಗಳು ಉರ್ಫಿಯ  ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ಸ್ವತಃ ಉರ್ಫಿ ಜಾವೇದ್ ಇದು ಅತ್ಯಂತ ರಿಸ್ಕಿ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ದಪ್ಪನೆಯ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾರೆ. ಮಿನಿ ಸ್ಕರ್ಟ್ ರೀತಿ ಸುತ್ತಿಕೊಂಡ ಉರ್ಫಿ ಮತ್ತೊಂದು ತುದಿಯನ್ನು ಶಕ್ತಿಶಾಲಿ ಎಸ್‌ಯುವಿ ಕಾರಿಗೆ ಕಟ್ಟಿದ್ದಾರೆ. ಉರ್ಫಿ ಕ್ಯಾಮೆರಾಗೆ ಫೋಸ್ ನೀಡುತ್ತಾ ನಿಂತರೆ ಹಿಂಬದಿಯಿಂದ ಕಾರು ಸ್ಟಾರ್ಟ್ ಮಾಡಿ ಎಳೆಯುವ ಪ್ರಯತ್ನ ಮಾಡಿದ್ದರೆ. 

ಇವತ್ತು ಫುಲ್ ಟೈಟ್-ಬಿಟ್ಟುಬಿಡಿ, ಬ್ಯಾಕ್‌ಲೆಸ್ ಫೋಟೋಗೆ ಮುಗಿಬಿದ್ದ ಪಾಪ್ಸ್‌ಗೆ ಉರ್ಫಿ ಮನವಿ ವೈರಲ್!

ಉರ್ಫಿಯ ಕೆಳಗೆ ಸುತ್ತಿಟ್ಟ ಹಗ್ಗ ಬಿಚ್ಚುತ್ತಾ ಸಾಗಿದೆ. ಹಗ್ಗದ ಮತ್ತೊಂದು ತುದಿ ಉರ್ಫಿ ಜಾವೇದ್ ತಮ್ಮ ಸೊಂಟಕ್ಕೆ ಕಟ್ಟಿಕೊಂಡಿದ್ದ ಕಾರಣ ಕೆಲ ಹೊತ್ತಲ್ಲೇ ಕಾರು ಉರ್ಫಿಯನ್ನು ದರದರನೇ ಎಳೆದೊಯ್ಯಲಿದೆ ಅನ್ನೋ ಆತಂಕ ಒಂದಡೆಯಾದರೆ, ಮತ್ತೊಂದಡೆ ಉರ್ಫಿ ಸ್ಕರ್ಟ್ ರೀತಿ ಸುತ್ತಿಕೊಂಡಿರುವ ಹಗ್ಗ ಬಿಚ್ಚಿಕೊಳ್ಳಲಿದೆ ಅನ್ನೋ ಕುತೂಹಲ ಮತ್ತೊಂದೆಡೆ. ಆದರೆ ಕೊನೆಯ ಹಂತದಲ್ಲಿ ಉರ್ಫಿ ಟ್ವಿಸ್ಟ್ ನೀಡಿದ್ದಾರೆ. ಕಾರಣ ಹಗ್ಗದ ಒಂದು ತುದಿ ಕಾರಿಗೆ ಕಟ್ಟಿದ್ದರೆ, ಮತ್ತೊಂದು ತುದಿ ಉರ್ಫಿ ಸೊಂಟಕ್ಕೆ ಕಟ್ಟಿ ಸುತ್ತಿಕೊಂಡಿದ್ದಾರೆ ನಿಜ. ಆದರೆ ಹಗ್ಗದ ಮಧ್ಯ ಭಾಗವನ್ನು ಕಟ್ ಮಾಡಿದ್ದಾರೆ. ಹೀಗಾಗಿ ಕಾರು ಕಾರು ಮುಂದೆಕ್ಕೆ ಸಾಗಿದರೂ ಉರ್ಫಿ ಮಾತ್ರ  ಯಾವುದೇ ಸಮಸ್ಯೆ ಇಲ್ಲದೆ ಅಲ್ಲೆ ನಿಂತುಕೊಂಡಿದ್ದರೆ.

 

 
 
 
 
 
 
 
 
 
 
 
 
 
 
 

A post shared by Uorfi (@urf7i)

 

ಉರ್ಫಿಯ ಈ ಶಾರ್ಟ್ ವಿಡಿಯೋ ಭಾರಿ ವೀಕ್ಷಣೆ ಪಡೆದಿದೆ. ಒಂದೇ ದಿನದಲ್ಲಿ 50 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದಿದೆ. ಈ ವಿಡಿಯೋಗೆ ಹಲವು ಸೆಲೆಬ್ರೆಟಿಗಳು ಕಮೆಂಟ್ ಮಾಡಿದ್ದಾರೆ. ನಟಿ ಸಮಂತಾ ಕೂಡ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಸಮಂತಾ ಬೆಂಕಿಯ ಸ್ಟಿಕ್ಕರ್ ಪೋಸ್ಟ್ ಮಾಡಿದ್ದಾರೆ. ಇನ್ನು ನಟಿ ಡೋಲಿ ಸಿಂಗ್, ಗಾಯಕಿ ವರ್ಷಾ ಸಿಂಗ್ ಗಧೋನಾ, ಖ್ಯಾತ ಯೂಟ್ಯೂಬರ್ ರೋಹನ್ ಜೋಶಿ ಸೇರಿಂತೆ ಹಲವರು ಕಮೆಂಟ್ ಮಾಡಿದ್ದಾರೆ.

ಕಣ್ಣು ಕದ್ದು ನೋಡ್ತಿದೆ-ಮನಸ್ಸು ಮುದ್ದು ಮಾಡ್ತಿದೆ,ಸೀರೆಯಲ್ಲಿ ಟೆಂಪರೇಚರ್ ಹೆಚ್ಚಿಸಿದ ಉರ್ಫಿ!

ಉರ್ಫಿ ಈ ರೀತಿಯ ಹಲವು ರಿಸ್ಕಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ತಮ್ಮ ಬಟ್ಟೆಗೆ ಬೆಂಕಿ ಹಚ್ಚಿಕೊಂಡ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಉರ್ಫಿ ಜಾವೇದ್ ಹೊಸತನ, ಹೊಸ ಫ್ಯಾಶನ್ ಮೂಲಕವೇ ಜನಪ್ರಿಯವಾಗಿದ್ದಾರೆ. ಇದೀಗ ಸ್ಟಂಟ್ ಮೂಲಕವೂ ಉರ್ಫಿ ಜನಪ್ರಿಯವಾಗುತ್ತಿದ್ದಾರೆ.
 

Latest Videos
Follow Us:
Download App:
  • android
  • ios