Asianet Suvarna News Asianet Suvarna News

ಡಿಪ್ರೆಶನ್‌ನಲ್ಲಿ ಇರಲಿಲ್ಲ, ನಿಶ್ಚಿತಾರ್ಥ ಮುರಿತು ಅಂತ ಟ್ಯಾಟೂ ಹಾಕ್ಸಿಲ್ಲ: ಮದುವೆ ಬಗ್ಗೆ ವೈಷ್ಣವಿ ಸ್ಪಷ್ಟನೆ

ಕೊನೆಗೂ ಮೌನ ಮುರಿದ ವೈಷ್ಣವಿ ಗೌಡ. ಎಲ್ಲರೂ ಹೇಳಿದ ಹಾಗೆ ನಾನು ಡಿಪ್ರೆಶನ್‌ಗೆ ಜಾರಿಲ್ಲ ಬ್ರೈಟ್‌ ಸೈಡ್ ನೋಡಿ ಖುಷಿಯಾಗಿರುವೆ ಎಂದ ನಟಿ....
 

Vaishnavi Gowda clarifies about engagement marriage and tattoo rumours on YouTube channel vcs
Author
First Published Dec 8, 2022, 12:20 PM IST

ಕನ್ನಡ ಕಿರುತೆರೆ ಜನಪ್ರಿಯ ನಟಿ, ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಕೊನೆಗೂ ಮೌನ ಮುರಿದಿದ್ದಾರೆ. ಕಳೆದ ತಿಂಗಳು ವಿದ್ಯಾಭರಣ್‌ ಎಂಬುವವರ ಜೊತೆ ಮದುವೆ ನಿಶ್ಚಯವಾಗಿದ್ದು ಕುಟುಂಬಸ್ಥರ ಸಮ್ಮುಖದಲ್ಲಿ ಬೊಟ್ಟು ಇಡುವ ಶಾಸ್ತ್ರ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ವಿದ್ಯಾಭರಣ್‌ ಗುಣದ ಬಗ್ಗೆ ನೆಗೆಟಿವ್ ಕಾಮೆಂಟ್ ಕೇಳಿ ಬರುತ್ತಿತ್ತು, ಒಂದೆರಡು ದಿನಗಳ ನಂತರ ಸಂಬಂಧ ಮುಂದುವರೆಸುವುದಿಲ್ಲ ಎಂದು ವೈಷ್ಣವಿ ಪೋಸ್ಟ್ ಮಾಡಿದ್ದರು. ವೈಷ್ಣವಿ ಪೋಷಕರು ಪ್ರೆಸ್‌ಮೀಟ್ ಮಾಡುವ ಮೂಲಕ ಘಟನೆ ಬಗ್ಗೆ ಕ್ಲಾರಿಟಿ ಕೊಟ್ಟಿದ್ದರು. ಈಗ ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ವೈಷ್ಣವಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

'ನನ್ನ ಪರ್ಸನಲ್ ವಿಚಾರವನ್ನು ನೀವೆಲ್ಲರೂ ನ್ಯೂಸ್‌ನಲ್ಲಿ ನೋಡಿದ್ದೀರಿ. ಕೆಲವೊಂದು ವಿಚಾರಗಳನ್ನು ನಾನು ಮಾತನಾಡಬೇಕಿತ್ತು. ಕ್ಲಾರಿಟಿ ಅಂತ ಹೇಳೋಕೆ ಆಗಲ್ಲ ಒಂದಷ್ಟು ವಿಚಾರಗಳನ್ನ ಅಡ್ರೆಸ್ ಮಾಡಬೇಕಿತ್ತು. ಈ ವಿಡಿಯೋ ಮಾಡ್ಬೇಕಾ ಬೇಡ ಅಂತ ನಾನು ಯೊಚನೆ ಮಾಡುತ್ತಿದ್ದೆ ಏಕೆಂದರೆ  ಮುಗಿದು ಹೋಗಿದೆ ನಾನು ಮತ್ತೆ ಅದರ ಬಗ್ಗೆ ಮಾತನಾಡಿದಂತೆ ಇರುತ್ತೆ ಅಂತ. ಏನೇ ಇರಲಿ ಕೆಲವೊಂದು ವಿಚಾರಗಳನ್ನು ಅಡ್ರೆಸ್ ಮಾಡಲೇ ಬೇಕು' ಎಂದು ಹೇಳುವ ಮೂಲಕ ವೈಷ್ಣವಿ ವಿಡಿಯೋ ಆರಂಭಿಸಿದ್ದಾರೆ.

ಟ್ಯಾಟೂ ವಿಚಾರ:

'ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನನಗೆ ಸಿಕ್ಕಿರುವಂತೆ ಸಪೋರ್ಟ್‌, ಪಾಸಿಟಿವಿಟಿ ಹಾಗೂ ಮೇಲ್‌ನಲ್ಲಿ ಇಷ್ಟುದ್ದ ಬರೆದು ಕಳುಹಿಸಿದ್ದೀರಿ...ನಿಮ್ಮಗೆಲ್ಲಾ ಥ್ಯಾಂಕ್ಸ್‌ ಹೇಳ್ತೀನಿ. ನಿಮ್ಮ ಪ್ರೀತಿಗೆ ನಾನು ಯಾವತ್ತಿದ್ದರೂ ಋಣಿಯಾಗಿರುತ್ತೀನಿ. ನ್ಯೂಸ್‌ಗಳಲ್ಲಿ ತೋರಿಸಿದ ಹಾಗೆ ನಾನು ಡಿಪ್ರೆಶನ್‌ನಲ್ಲಿದ್ದೆ ಆಮೇಲೆ ಬೇಜಾರ್ ಆಯ್ತು ಅಂತ ಅತ್ಕೊಂಡು ಹೋಗಿ ಕೈಯಲ್ಲಿ ಟ್ಯಾಟೂ ಹಾಕಿಸಿಕೊಂಡೆ ಆಮೇಲೆ ನನ್ನ ಲೈಫ್‌ ಚೇಂಜ್‌......ಆ ತರ ಏನೂ ಆಗಿಲ್ಲ. ಟ್ಯಾಟೂ ಹಾಕಿಸಿದ್ದು ನವೆಂಬರ್ 7 ಅಥವಾ 8ರಂದು ಅಂದ್ರೆ ಈ ಘಟನೆ ನಡೆಯುವುದಕ್ಕೂ ಮುನ್ನ ಹಾಕಿಸಿದ್ದು. ಅದಕ್ಕೂ ಟ್ಯಾಟೂಗೂ ಏನೂ ಸಂಬಂಧವಿಲ್ಲ ನನಗೆ ಟ್ಯಾಟೂ ಹಾಕಿಸಿಕೊಳ್ಳಬೇಕು ಅನಿಸಿತ್ತು ಅದಿಕ್ಕೆ ಹಾಕಿಸಿಕೊಂಡಿರುವುದು' ಎಂದು ಟ್ಯಾಟೂ ವಿಡಿಯೋ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. 

Vaishnavi Gowda clarifies about engagement marriage and tattoo rumours on YouTube channel vcs

ಆನೆ - ಇರುವೆ ಕಥೆ:

'ಡಿಸ್ಟರ್ಬ್‌ ಆಗಿದ್ದು ನಿಜ ಆದರೆ ಯಾವುದೇ ರೀತಿ ಡಿಪ್ರೆಶನ್‌ ಅಂತ ಹೋಗಿರಲಿಲ್ಲ. ನನ್ನ ಲೈಫಲ್ಲಿ ಏನೇ ನಡೆದ್ದರು ಯಾವಾಗಲೂ ಒಂದು ಬ್ರೈಟರ್ ಸೈಡ್‌ ನೋಡಲು ಇಷ್ಟ ಪಡುತ್ತೀನಿ ಅದರಿಂದ ಏನು ಪಾಸಿಟಿವ್ ಇದೆ ಅದನ್ನು ತೆಗೆದುಕೊಂಡು ಮುಂದೆ ನಡೆಯಬೇಕು ಎಂದು ಇಷ್ಟ ಪಡಿತ್ತೀನಿ ನನಗೆ ಗೊತ್ತು ಇದು ಚೂರು ಮೋಟಿವೇಷನ್‌ ತರ ಇದೆ ಅಂತ. ಇರಲಿ ಬ್ರೈಟರ್ ಸೈಡ್‌ ನೋಡಿದ್ದರೆ ನಮ್ಮ ಜೀವನ ಚೆನ್ನಾಗಿರುತ್ತದೆ. ಒಂದು ವಿಚಾರ ನಾನು ಸದಾ ನೆನಪಿಸಿಕೊಳ್ಳುವುದು ನಿಮ್ಮೆಲ್ಲರ ಪ್ರೀತಿ. ಪ್ರತಿಯೊಂದು ದಿನವೂ ನನಗೋಸ್ಕರ ಮೆಸೇಜ್ ಮಾಡುತ್ತಿದ್ರೆ ಖುಷಿ ವಿಚಾರ ಏನೆಂದರೆ ಆನೆ ಇರುವ ಜೋಕ್‌ನ ಹೇಳಿ ಕಳುಹಿಸುತ್ತಿದ್ದರು ಇದೆಲ್ಲಾ ನನ್ನ ಸಂತೋಷ ಕೊಟ್ಟಿದೆ' ಎಂದು ವೈಷ್ಣವಿ ಮಾತನಾಡಿದ್ದಾರೆ. 

ವಿದ್ಯಾಭರಣ್ ಕುಟುಂಬಸ್ಥರು ಭೇಟಿ ಮಾಡಿದ್ದು, ಆ ಯುವತಿಯರು ಯಾರು ಎಂದು ಹೇಳಿದ ವೈಷ್ಣವಿ ಗೌಡ ತಾಯಿ

ಮದುವೆ ಕನಸು:

'ಜೀವನದಲ್ಲಿ ನಾನು ಖುಷಿಯಾಗಿರುವೆ. ಜೀವನಕ್ಕೆ ಗೊತ್ತು ಅನಿಸುತ್ತದೆ ಏನು ಕೊಡಬೇಕು ಏನು ಕೊಡಬಾರದು, ಏನ್ ಮಾಡ್ಬೇಕು ಏನ್ ಮಾಡ್ಬಾರದು ಅಂತ. ಜೀವನ ನಮಗಿಂತ ಇಂಟಲಿಜೆಂಟ್ ಯಾವಾಗಲೂ ಸರಿ ದಾರಿಗೆ ಕರೆದುಕೊಂಡು ಹೋಗುತ್ತದೆ ಯಾವುದೇ ರೀತಿಯಲ್ಲಿ ಕೆಟ್ಟದನ್ನು ಬಯಸುವುದಿಲ್ಲ. ನನ್ನ ಜೀವನದ ಮೇಲೆ ನನಗೆ ಹೆಚ್ಚಿನ ನಂಬಿಕೆ ಇದೆ. ಇನ್ನೊಂದು ವಿಚಾರ ಹೇಳಬೇಕು ಮದುವೆ ಈಗಲ್ಲೂ ನನ್ನ ಬಿಗ್ ಡ್ರೀಮ್. ಯಾವ ಕಾರಣಕ್ಕೂ give up ಮಾಡುವುದಿಲ್ಲ. ನಾನಾ ಜೀವನನಾ ಅಂತ ನೋಡೇ ಬಿಡುತ್ತೀನಿ ನನ್ನ ಕನಸು ನನಸು ಮಾಡೇ ಮಾಡ್ತೀನಿ. ಈ ಸಮಯದಲ್ಲಿ ನನ್ನ ಪರ ಇದ್ದವರೆಗೆ ಥ್ಯಾಂಕ್ಸ್‌. ಸ್ವಲ್ಪ ದಿನಗಳಲ್ಲಿ ನನ್ನ ಕೆಲಸ ಶುರುವಾಗಲಿದೆ. ನನ್ನ ಹೊಸ ಸೀರಿಯಲ್ ಶುರುವಾಗಲಿದೆ, ಯೂಟ್ಯೂಬ್‌ನಲ್ಲಿ ಹೊಸ ವೀಡಿಯೋಗಳು ಅಪ್ಲೋಡ್ ಆಗುತ್ತೆ. ನನ್ನ ಕೆಲಸದ ಮೂಲಕ ಎಲ್ಲರನ್ನು ಮನೋರಂಜಿಸುತ್ತೀನಿ.

 

Follow Us:
Download App:
  • android
  • ios