ಮಾವನನ್ನು ಕೊಂದು ಮುಗಿಸಿದಳೇ ವೈಶಾಖಾ, ಕಂಡು ಜೋರಾಗಿ ಕಿರುಚಿದ ಚಾರುಗೆ ಮುಂದೇನು ಗತಿ..?
ಸಹಜವಾಗಿಯೇ ವೈಶಾಖಾ ಚಾರು ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾಳೆ. ಚಾರು ಆ ಮನೆಯಲ್ಲಿ ಮನೆಯವರ ಗೌರವ ಸಂಪಾದಿಸಿಬಿಟ್ಟರೆ ವೈಶಾಖಾ ಅಲ್ಲಿ ಮೂಲೆ ಗುಂಪಾಗುತ್ತಾಳೆ. ರಾಮಾಚಾರಿಯನ್ನು ಮದುವೆಯಾಗುವ ಅವಳ ಕನಸಿಗೆ ಕೊಳ್ಳಿ ಬೀಳುತ್ತದೆ. ಹೀಗಾಗಿ ವೈಶಾಖಾ ಮಾವನ ಆರೋಗ್ಯ ತಾಳ ತಪ್ಪುವಂತೆ ಮಾಡಿದ್ದಾಳೆ.

ವೈಶಾಖಾ ಪ್ಲಾನ್ ಅನಿರೀಕ್ಷಿತ ಹೊಸ ತಿರುವು ಪಡೆದುಕೊಳ್ಳುತ್ತಿದೆ. ವೈಶಾಖಾ ಮಾವನನ್ನು ಮುಗಿಸಲು ಪ್ಲಾನ್ ಮಾಡಿದ್ದಾಳೆ. ಅದರಂತೆ ಮಾವ ಒಬ್ಬನೇ ಕುಳಿತಿರುವಾಗ ಬಂದು ಮನಸ್ಸಿನಲ್ಲೇ ' ಮಾವಾ, ನಾನು ಇಲ್ಲಿಗೆ ಯಾಕೆ ಬಂದೆ ಗೊತ್ತಾ? ನೀನು ಕೈ ಬಿದ್ದೋಗಿದ್ರೂ ನನ್ನ ಹೆಸರು ಬರೆದು ಗುಟ್ಟು ತಿಳಿಸಿದ್ಯಲ್ಲಾ, ನಿನ್ನ ಸುಮ್ನೆ ಬಿಡೋದಕ್ಕೆ ಆಗುತ್ತಾ? ನಿನ್ನ ಸಾಯಿಸ್ತೀನಿ' ಎಂದು ಹೇಳಿಕೊಳ್ಳುತ್ತ ಮಾವನ ಸಮೀಪಕ್ಕೆ ಬಂದ ವೈಶಾಖಾ ಚೇರ್‌ನಲ್ಲಿ ಕುಳಿತಿದ್ದ ಮಾವನ ಕತ್ತು ಹಿಸುಕುತ್ತಾಳೆ. ಮಾವ ಅವಳನ್ನು ನೋಡಿದರೂ ಅಸಹಾಯಕ ಸ್ಥಿತಿಯಲ್ಲಿದ್ದಾನೆ. ಕತ್ತು ಕೆಳಗೆ ಹಾಕುತ್ತಾನೆ ಮಾವ.
ವೈಶಾಖಾ ಕತ್ತು ಹಿಸುಕಿದ ಮೇಲೆ ಮಾವ ನಿಜವಾಗಿಯೂ ಸತ್ತಿದ್ದಾನಾ? ಅಥವಾ, ಜಸ್ಟ್ ಪ್ರಜ್ಞೆ ತಪ್ಪಿದೆಯಾ? ಈ ಪ್ರಶ್ನೆಗಳಿಗೆ ಉತ್ತರಕ್ಕೆ ಇಂದಿನ ರಾಮಾಚಾರಿ ಸೀರಿಯಲ್ ಸಂಚಿಕೆ ನೋಡಬೇಕು ಅಷ್ಟೇ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ರಾಮಾಚಾರಿ ಸೀರಿಯಲ್ ನಲ್ಲಿ ಕಥೆಯಲ್ಲಿ ಹೊಸ ಹೊಸ ತಿರುವುಗಳು ಘಟಿಸುತ್ತಿದ್ದು, ವೀಕ್ಷಕರು ತೀವ್ರ ಕುತೂಹಲದಿಂದ ಕಾಯುವಂತಾಗಿದೆ ಎನ್ನಬಹುದು. ರಾಮಾಚಾರಿ ಹೆಂಡತಿ ಚಾರು ಮನೆಯಲ್ಲಿ ತನ್ನ ಹಿರಿಮೆ ಹೆಚ್ಚಿಸಿಕೊಳ್ಳುತ್ತಿದ್ದಾಳೆ. ಈ ಮೂಲಕ ವೈಶಾಖಾ ಕಂಟ್ರೋಲ್ ಆ ಫ್ಯಾಮಿಲಿ ಮೇಲೆ ತಪ್ಪಲು ಶುರುವಾಗಿದೆ.
ಬರ್ತಾ ಬರ್ತಾ ಸಂಗೀತಾ ದೊಡ್ಡ 'ಚಮಚಾ ಗ್ಯಾಂಗ್' ಜತೆ ಸೇರಿ ಫೇಕ್ ಆಗ್ತಿದಾಳೆ ಅಂತಿದಾರೆ ನೆಟ್ಟಿಗರು!
ಹೀಗಾಗಿ ಸಹಜವಾಗಿಯೇ ವೈಶಾಖಾ ಚಾರು ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾಳೆ. ಚಾರು ಆ ಮನೆಯಲ್ಲಿ ಮನೆಯವರ ಗೌರವ ಸಂಪಾದಿಸಿಬಿಟ್ಟರೆ ವೈಶಾಖಾ ಅಲ್ಲಿ ಮೂಲೆ ಗುಂಪಾಗುತ್ತಾಳೆ. ರಾಮಾಚಾರಿಯನ್ನು ಮದುವೆಯಾಗುವ ಅವಳ ಕನಸಿಗೆ ಕೊಳ್ಳಿ ಬೀಳುತ್ತದೆ. ಹೀಗಾಗಿ ವೈಶಾಖಾ ಮಾವನ ಆರೋಗ್ಯ ತಾಳ ತಪ್ಪುವಂತೆ ಮಾಡಿದ್ದಾಳೆ. ಅದರ ಆರೋಪ ಚಾರು ಮೇಲೆ ಬಂದು ಚಾರು ಮನೆ ಬಿಡುವಂತಾಗಲಿ ಎಂಬುದು ವೈಶಾಖಾ ಪ್ಲಾನ್ ಇರಬಹುದು. ಆದರೆ, ಅದು ಆಕೆ ಅಂದುಕೊಂಡಂತೆ ನಡೆಯುತ್ತಿಲ್ಲ. ಚಾರು ಹರಕೆ ಹೊತ್ತು ಅದನ್ನು ನಡೆಸಿ ಮಾವನಿಗೆ ಕೈ ಬರುವಂತಾಗಿದೆ, ಇನ್ನು ಬಾಯಿಯೂ ಬಂದು ಬಿಟ್ಟರೆ ವೈಶಾಖಾಗೆ ದೇವರೇ ಗತಿ!
ಡಾಲಿ ಧನಂಜಯ್ ಸಿನಿಮಾದಲ್ಲಿ ರಮ್ಯಾ, ಶಿವರಾಜ್ ಕುಮಾರ್; ಯಾರಿಗೆ ಜೋಡಿಯಾಗ್ತಾರೆ ಸ್ಯಾಂಡಲ್‌ವುಡ್ ಕ್ವೀನ್?
ಹೀಗಾಗಿ ಆತಂಕಗೊಂಡ ವೈಶಾಖಾ ಸೀದಾ ಮಾವನ ಬಳಿ ಬಂದು ಅವನ ಕತ್ತು ಹಿಸುಕಿದ್ದಾಳೆ. ಮಾವ ಸತ್ತಿದ್ದಾನೋ ಬದುಕಿದ್ದಾನೋ ಎಂಬುದು ಸಂಪೂರ್ಣ ಸಂಚಿಕೆ ನೋಡಿಯೇ ತಿಳಿಯವೇಕು. ಒಟ್ಟಿನಲ್ಲಿ, ಮಾವ ವೈಶಾಖಾ ಹೆಸರು ಬರೆದು ಆ ಮೂಲಕ ತನ್ನ ಈ ಪರಿಸ್ಥಿತಿಗೆ ವೈಶಾಖಾ ಕಾರಣ ಎಂದು ಹೇಳುವ ಪ್ರಯತ್ನ ಮಾಡಿದ್ದಾನೆ. ವೈಶಾಖಾ ಕೂಡ ಮಾವನ ಕತ್ತು ಹಿಸುಕಿ ಸಾಯಿಸುವ ಪ್ರಯತ್ನ ಮಾಡಿದ್ದಾಳೆ. ಮುಂದೇನಾಗುತ್ತೆ ಎಂಬುದನ್ನು ಸಂಚಿಕೆ ನೋಡಿ ತಿಳಿಯಬೇಕಷ್ಟೇ. ಅಂದಹಾಗೆ. ರಾಮಾಚಾರಿ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ರಾತ್ರಿ 9.00ಕ್ಕೆ ಪ್ರಸಾರವಾಗುತ್ತಿದೆ.