ಡಿವೋರ್ಸ್ ಲಾಯರ್ ವೃತ್ತಿಯ ವಧು, ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿ. ಆಕೆ ದಾಂಪತ್ಯದಲ್ಲಿ ಸೋತ ಸಾರ್ಥಕ್ ಎಂಬುವವರ ಕೇಸ್ ತೆಗೆದುಕೊಳ್ಳುತ್ತಾಳೆ. ಈ ಸೀರಿಯಲ್ ಇವರಿಬ್ಬರ ಸುತ್ತ ಸುತ್ತುತ್ತದೆ. ನೇತ್ರಾವತಿ ಧಾರಾವಾಹಿಯಿಂದ ಪರಿಚಿತರಾದ ದುರ್ಗಾಶ್ರೀ ವಧುವಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಪ್ರೊಡಕ್ಷನ್‌ನಲ್ಲಿ ಈ ಸೀರಿಯಲ್ ತಯಾರಾಗಿದೆ. ದುರ್ಗಾಶ್ರೀ ತನಗೆ ಒಳ್ಳೆಯ ಹುಡುಗ ಬೇಕೆಂದು ಹೇಳಿದ್ದಾರೆ. ಅವರು ಬಿಕಾಂ ಪದವೀಧರರು ಮತ್ತು ಭರತನಾಟ್ಯ ಕಲಿತಿದ್ದಾರೆ.

ಆಕೆ ವಧು. ವೃತ್ತಿಯಲ್ಲಿ ಡಿವೋರ್ಸ್​ ಲಾಯರ್​. ಆಕೆಯ ಮನಸ್ಸು ಸಂಬಂಧಗಳನ್ನು ಪ್ರೀತಿಸುವಂಥದ್ದು ಜೊತೆಗೆ ಗೌರವಿಸುವಂಥದ್ದು. ಆದ್ದರಿಂದ ಯಾರೇ ಡಿವೋರ್ಸ್​ಗೆ ಬಂದರೂ ಅವರಲ್ಲಿ ಸಾಮರಸ್ಯ ಮೂಡಿಸುವಲ್ಲಿ ಒಂದು ಹೆಜ್ಜೆ ಮುಮದು. ಮನುಷ್ಯ ಸಂಬಂಧಗಳ ಬಗ್ಗೆ ಅವಳಿಗಿರುವ ಗೌರವವೇ ಹಲವಾರು ಬಾರಿ ಈ ಡಿವೋರ್ಸ್​ ಲಾಯರ್​ ಅನ್ನು ವೃತ್ತಿಯಲ್ಲಿ ಹಿಂದುಳಿಯುವಂತೆ ಮಾಡಿದೆ. ಅದೇ ಇನ್ನೊಂದೆಡೆ, ಸಾರ್ಥಕ್. ಈತ ತನ್ನ ದಾಂಪತ್ಯದಲ್ಲಿ ಸೋತು, ಪತ್ನಿ ಪ್ರಿಯಾಂಕಾಳಿಂದ ಡಿವೋರ್ಸ್ ಬೇಕೆಂದು ಅರ್ಜಿ ಹಾಕಿ ಇದೇ ವಧು ಬಳಿ ಬರುತ್ತಾನೆ. ಈ ಮೂವರ ಸುತ್ತ ಈ ಸೀರಿಯಲ್​ ಸುತ್ತುತ್ತದೆ. ಇವರಿಗೆ ಡಿವೋರ್ಸ್​ ಆಗತ್ತಾ, ಅಥ್ವಾ ದಂಪತಿಯನ್ನು ಒಂದು ಮಾಡಲು ಹೋಗಿ ಇವರಿಬ್ಬರೇ ಲವ್​ನಲ್ಲಿ ಬೀಳ್ತಾರಾ ಎನ್ನುವ ಕುತೂಹಲ ಈ ಸೀರಿಯಲ್​ದ್ದು. 

ಈ ಸೀರಿಯಲ್​ನಲ್ಲಿ ಮುಗ್ಧತೆಯ ಮೂಲಕ, ಸಂಬಂಧಗಳನ್ನು ಅರಿತಿರುವ ವಧು ನಿಜವಾದ ಹೆಸರು, ದುರ್ಗಾಶ್ರೀ. ಉದಯ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ 'ನೇತ್ರಾವತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ದುರ್ಗಾಶ್ರೀ, ತೆಲುಗುವಿನಲ್ಲಿಯೂ ಮಿಂಚುತ್ತಿದ್ದಾರೆ. ಒಂದು ಕುತೂಹಲದ ಸಂಗತಿ ಏನೆಂದರೆ, ಪುನೀತ್ ರಾಜ್‌ಕುಮಾರ್ ಪ್ರೊಡಕ್ಷನ್‌ನಲ್ಲಿ ಈ ಸೀರಿಯಲ್​ ತಯಾರಾಗಿತ್ತು. ಅಪ್ಪು ಅವರೇ ನಟಿ ದುರ್ಗಾಶ್ರೀ ಅವರನ್ನು ಪರಿಚಯಿಸಿದ್ದು. 'ನನ್ನನ್ನು ಅಪ್ಪು ಸರ್ ಲಾಂಚ್ ಮಾಡಿರೋದು' ಎಂದು ಹೇಳಿಕೊಂಡಿದ್ದಾರೆ ನಟಿ. ಇದೀಗ ಇದೀಗ 'ವಧು' ಧಾರಾವಾಹಿಯಲ್ಲಿ ಡಿವೋರ್ಸ್​ ಲಾಯರ್​ ಆಗಿದ್ದಾರೆ. ಇಂತಿಪ್ಪ ವಧು ಅರ್ಥಾತ್​ ದುಗಾಶ್ರೀ ತಮ್ಮ ರಿಯಲ್​ ಲೈಫ್​ನಲ್ಲಿನ ಕನಸಿನ ಹುಡುಗ ಹೇಗೆ ಇರಬೇಕು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಬಾಸ್​ ಯೂಟ್ಯೂಬ್​ ಚಾನೆಲ್​ಗೆ ಅವರು ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ನನಗೆ ಮೂಡ್​ ಬಂದರೆ 3 ದಿನಕ್ಕೊಮ್ಮೆ... ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದ ಬಿಗ್​ಬಾಸ್​ ಸೋನು ಗೌಡ ವೈರಲ್​ ವಿಡಿಯೋ

ನಿಮ್ಮ ಮದುವೆಯಾಗುವ ಹುಡುಗ ಹೇಗಿರಬೇಕು ಎಂದಾಗ, ಆಕೆ ತುಂಬಾ ಒಳ್ಳೆಯವನಾಗಿರಬೇಕು. ಅಮ್ಮ ಒಪ್ಪಬೇಕು ಎಂದಿದ್ದಾರೆ. ಇಷ್ಟೇ. ಇನ್ನೇನೂ ಕ್ವಾಲಿಟಿಯನ್ನು ಅವರು ಹೇಳಿಲ್ಲ. ಆದ್ದರಿಂದ ತಾವೂ ತುಂಬಾ ಒಳ್ಳೆಯವರು ಇರುವುದಾಗಿ ದುರ್ಗಾಶ್ರೀ ಅಭಿಮಾನಿಗಳು ಹೇಳುತ್ತಿದ್ದಾರೆ. ಮತ್ತೆ ಕೆಲವರು ಎಷ್ಟು ಒಳ್ಳೆಯವರಾಗಿರಬೇಕು, ಒಳ್ಳೆಯವರು ಎಂದರೆ ನಿಮ್ಮರ್ಥದಲ್ಲಿ ಏನು ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಇನ್ನು ದುರ್ಗಾಶ್ರೀ ಅವರ ಕುರಿತು ಹೇಳುವುದಾದರೆ, ಇವರು ಬೆಂಗಳೂರಿನವರು. ಬಿಕಾಂ ಪದವಿ ಪಡೆದಿದ್ದಾರೆ. ಇವರು ಗುರು ಅನುರಾಧ ವೆಂಕಟರಮಣ ಅವರಿಂದ ಭರತನಾಟ್ಯ ಕಲಿತಿದ್ದಾರೆ. 

ಮೊದಲೇ ಹೇಳಿದಂತೆ, ಪುನೀತ್​ ರಾಜ್​ ಅವರ ಪ್ರೊಡಕ್ಷನ್‌ನಲ್ಲಿ ತಯಾರಾದ ಧಾರಾವಾಹಿ ನೇತ್ರಾವತಿಯಲ್ಲಿ ಅಪ್ಪು ಅವರು ದುರ್ಗಾಶ್ರೀಯವರನ್ನು ಪರಿಚಯಿಸಿದ್ದರು. ಬಳಿಕ ನಟಿ, ತೆಲುಗಿನ ವೈಷ್ಣವಿ ಎಂಬ ಸೀರಿಯಲ್​ನಲ್ಲಿ ನಟಿಸಿದ್ದರು. ಇದಾದ ಬಳಿಕ ಮಧುರ ನಗರಿಲೋ ಹಾಗೂ ಅರ್ಧಾಂಗಿ ಎಂಬ ಸೀರಿಯಲ್‌ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವಧು' ಸೀರಿಯಲ್ ಡಿವೋರ್ಸ್​ ಲಾಯರ್​ ಆಗಿದ್ದಾರೆ. ಪರಮೇಶ್ವರ್ ಗುಂಡ್ಕಲ್ ನಿರ್ದೇಶದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯನ್ನು ದಿಲೀಪ್ ರಾಜ್ ದಂಪತಿ ನಿರ್ಮಾಣ ಮಾಡಿದ್ದಾರೆ. 

ರಾ...ರಾ... ಎಂದ ಚೈತ್ರಾ... ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್​- ಇನ್ನೊಂದೆರಡು ಕಣ್ಣು ಕೊಡಪ್ಪಾ ಅಂತಿರೋ ಫ್ಯಾನ್ಸ್​.


YouTube video player