ಭಿನ್ನ, ವಿಭಿನ್ನ ಡ್ರೆಸ್ ಗಳ ಮೂಲಕ ತನ್ನ ಅಭಿಮಾನಿಗಳನ್ನು ಆಗಾಗ್ಗೆ ಹೊಸ ಲೋಕಕ್ಕೆ ಕೊಂಡೊಯ್ಯುವ ಬಾಲಿವುಡ್ ನಟಿ, ಉರ್ಫಿ ಜಾವೇದ್(Uorfi Javed) ಇದೀಗ ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದಿರುವ ವಿಡಿಯೋವೊಂದು  ವೈರಲ್(video viral) ಆಗಿದೆ.

ಮುಂಬೈ (ಮಾ.13): ಭಿನ್ನ, ವಿಭಿನ್ನ ಡ್ರೆಸ್ ಗಳ ಮೂಲಕ ತನ್ನ ಅಭಿಮಾನಿಗಳನ್ನು ಆಗಾಗ್ಗೆ ಹೊಸ ಲೋಕಕ್ಕೆ ಕೊಂಡೊಯ್ಯುವ ಬಾಲಿವುಡ್ ನಟಿ, ಉರ್ಫಿ ಜಾವೇದ್(Uorfi Javed) ಇದೀಗ ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದಿರುವ ವಿಡಿಯೋವೊಂದು ವೈರಲ್(video viral) ಆಗಿದೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆ(Instagram account)ಯಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಉರ್ಫಿ ಜಾವೇದ್, ಬಿದಿರಿನ ಟೋಕ್ರಿ( tokri) (ಬುಟ್ಟಿ) ಯಿಂದ ತಯಾರಿಸಲಾದ ಡ್ರೆಸ್ ನಲ್ಲಿ ಫೋಸ್ ನೀಡಿದ್ದಾರೆ. ಈಗ ಅಸ್ವಿತ್ವ ಕಳೆದುಕೊಳ್ಳುತ್ತಿರುವ ಬಿದಿರಿನಿಂದ ಹೇಗೆ ಉತ್ಪನ್ನಗಳನ್ನು ತಯಾರಿಸಬಹುದು ಎಂದು ಬರೆದುಕೊಂಡಿದ್ದಾರೆ.

Urfi vs Malaika: ಉರ್ಫಿ ಪಕ್ಕ ನಿಲ್ಲಲು ಹೆದರಿದ ಅರ್ಜುನ್​ ಕಪೂರ್​, ಗರ್ಲ್‌ಫ್ರೆಂಡ್‌ಗೆ ಹೆದರಿದ್ರಾ ಅಂದ್ರು ನೆಟ್ಟಿಗರು!

ಕುಶಲ ಕರ್ಮಿಗಳು ಅದ್ಬುತವಾದ ಕುರ್ಚಿಗಳು, ಟೇಬಲ್ ತಯಾರಿಸಲು ಬಿದಿರಿನ ದಾರಗಳನ್ನು ಹೇಗೆ ಬಳಸುತ್ತಾರೆ ಎಂಬುದು ನನಗೆ ಯಾವಾಗಲೂ ಅಶ್ಚರ್ಯವನ್ನುಂಟು ಮಾಡುತ್ತದೆ. ನನ್ನ ಮನಸ್ಸನ್ನು ಬೆಚ್ಚಿ ಬೀಳಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. 
ಉರ್ಫಿಯ ಈ ಅವತಾರಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

View post on Instagram