ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿದ ಧಾರಾವಾಹಿ ಮನಸಾರೆಯ ಪ್ರಮುಖ ಪಾತ್ರಧಾರಿ ಸಾಗರ್‌ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಈ ಧಾರಾವಾಹಿಯಿಂದ ಹೊರ ಬರಲು ಕಾರಣವೇನು ಎಂದು ನೆಟ್ಟಿಗರು ಪ್ರಶ್ನಸಿದ್ದಾರೆ. ಈ ಕಾರಣಕ್ಕೆ ಫೋಟೋವೊಂದನ್ನು ಶೇರ್ ಮಾಡಿಕೊಂಡು ತಮ್ಮ ಸೆಟ್‌ ಅನುಭವ ಹಂಚಿಕೊಂಡಿದ್ದಾರೆ.

ಸಾಗರ್ ಪೋಸ್ಟ್:
'ನನಗೆ ಜ್ಞಾಪಕ ಇರುವುದು ನಾವು ಚಿತ್ರೀಕರಣ ಹಾಗೂ ಡ್ಯಾನ್ಸ್‌ ರಿಹರ್ಸಲ್‌ ವೇಳೆ ಕಳೆದ ಒಳ್ಳೆಯ ಸಮಯ.  ನಾನು ಹೀಗೆ ಮುಂದೊಂದು ದಿನ ಸಮಯ ಕಳೆಯುತ್ತೇವೋ ಇಲ್ವೋ ಗೊತ್ತಿಲ್ಲ. ಆದರೆ ಈ ಕ್ಷಣ ಮಾತ್ರ ಫಾರ್‌ಎವರ್. ನಮ್ಮ ಧಾರಾವಾಹಿ ಸುಮಾರು 6.5 ಟಿಆರ್‌ಪಿ ಪಡೆದುಕೊಂಡು, ಉತ್ತಮ ಸ್ಥಾನ ಪಡೆದಿತ್ತು. ಸದಾ ಟಾಪ್‌ನಲ್ಲಿ ಇರುತ್ತಿದ್ದೆವು. ನನ್ನ ಬಿಲಿಯನ್ ಸುಮಧುರ ಕ್ಷಣಗಳಲ್ಲಿ ಈ ಇಬ್ಬರು ನನ್ನ ಜೊತೆಗಿದ್ದರು. ಈಗ ನಾವು ನಮ್ಮದೇ ದಾರಿ ಹುಡುಕಿಕೊಂಡು ಹೋಗಬೇಕಾಗಿದೆ,' ಎಂದು ಇನ್‌ಸ್ಟಾಗ್ರಾಂನಲ್ಲಿ ಸಾಗರ್ ಬರೆದದುಕೊಂಡಿದ್ದಾರೆ.

 

'ನೀವು ಧಾರಾವಾಹಿಯಿಂದ ಹೋದರೆ ನಗು ಇರುವುದಿಲ್ಲ. ನನಗೆ ತುಂಬಾ ನೋವಾಗಿದೆ.ಮನಸಾರೆ ನಿಮ್ಮ ಧಾರಾವಾಹಿಗೆ ನಾನು ಸೋತೆ. ನಾನು ನಿಮ್ಮ ಬಿಗ್ ಫ್ಯಾನ್ ಐ ಮಿಸ್ ಯು' ಎಂದು ಸುಪ್ಪಿ ಶೈವಾ ಕಾಮೆಂಟ್ ಮಾಡಿದ್ದಾರೆ.

ಇವರೇ ನೋಡಿ ಪೌರಾಣಿಕ ಪಾತ್ರದಲ್ಲಿ ಮಿಂಚುತ್ತಿರುವ ನಿಮ್ಮ ನೆಚ್ಚಿನ ನಟ-ನಟಿಯರು!

ಸಾಗರ್ ಧಾವಾಹಿಯಿಂದ ಹೊರ ನಡೆದ ಕಾರಣ ಏನೆಂದು ಬಹಿರಂಗ ಮಾಡಿಲ್ಲ. ಆದರೆ ಯಾವುದೋ ದೊಡ್ಡ ಪಾಜೆಕ್ಟ್‌ಗೆ ಕೈ ಹಾಕಿದ್ದಾರೆ, ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.