- Home
- Entertainment
- TV Talk
- ದೇವಿ, ಸನ್ನಿಧಿ, ಸೀತಾ ಬಳಿಕ ಪಾರ್ವತಿಯಾಗಿ ಸೀರಿಯಲ್‌ಗೆ ಎಂಟ್ರಿಕೊಟ್ಟ ವೈಷ್ಣವಿ ಗೌಡ!; ಇಲ್ಲಿದೆ ಪ್ರೋಮೋ ಸೀಕ್ರೆಟ್ಸ್!
ದೇವಿ, ಸನ್ನಿಧಿ, ಸೀತಾ ಬಳಿಕ ಪಾರ್ವತಿಯಾಗಿ ಸೀರಿಯಲ್‌ಗೆ ಎಂಟ್ರಿಕೊಟ್ಟ ವೈಷ್ಣವಿ ಗೌಡ!; ಇಲ್ಲಿದೆ ಪ್ರೋಮೋ ಸೀಕ್ರೆಟ್ಸ್!
ನಟಿ ವೈಷ್ಣವಿ ಗೌಡ 'ಗೆಳತಿ ಗಾಯತ್ರಿ' ಎಂಬ ಹೊಸ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ. ಸನ್ ಉದಯದಲ್ಲಿ ಪ್ರಸಾರವಾಗಲಿರುವ ಈ ಸೀರಿಯಲ್‌ನಲ್ಲಿ ಅವರು 'ಪಾರ್ವತಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಳೆದುಹೋದ ಬಾಲ್ಯದ ಗೆಳತಿಯನ್ನು ಹುಡುಕುವ ಸ್ನೇಹದ ಕಥೆಯನ್ನು ಇದು ಹೊಂದಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ದೇವಿ ಸೀರಿಯಲ್‌ನಲ್ಲಿ ದೇವಿ, ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ಸನ್ನಿಧಿ ಹಾಗೂ ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ಪಾತ್ರದ ಬಳಿಕ ಮತ್ತೊಂದು ಪೌರಾಣಿಕ ಹೆಸರಿನಲ್ಲಿ ನಟಿ ವೈಷ್ಣವಿ ಗೌಡ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಸನ್ ಉದಯದಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವ 'ಗೆಳತಿ ಗಾಯತ್ರಿ' ಸೀರಿಯಲ್‌ನಲ್ಲಿ ಪ್ರಧಾನ 'ಪಾರ್ವತಿ' ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾೆ.
ಇಂದು ಹೊಸ ಸೀರಿಯಲ್‌ನ ಪ್ರೋಮೋವನ್ನು ಸನ್ ಉದಯ ಹಂಚಿಕೊಂಡಿದ್ದು, 'ಕಳೆದುಹೋದ ಗೆಳತಿಯನ್ನು ಹುಡುಕುತ್ತಾ ಬರುತ್ತಿದ್ದಾಳೆ 'ಪಾರ್ವತಿ'. ಶುರುವಾಗ್ತಿದೆ ಹೊಸ ಕತೆ - 'ಗೆಳತಿ ಗಾಯತ್ರಿ' ಶೀಘ್ರದಲ್ಲಿ' ಎನ್ನುವ ಮೂಲಕ ಹೊಸ ಧಾರವಾಹಿಯನ್ನ ವೀಕ್ಷಕರಿಗೆ ನೀಡುತ್ತಿದೆ. ಇಲ್ಲಿಯವರೆಗೂ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದ ವೈಷ್ಣವಿ ಗೌಡ ಇದೇ ಮೊದಲ ಬಾರಿಗೆ ಸನ್ ಉದಯ ನಿರ್ಮಾಣದ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
1 ನಿಮಿಷ 5 ಸೆಕೆಂಡ್ ಪ್ರೋಮೋದಲ್ಲಿ ಇರುವ ಅಂಶ ನೋಡೋದಾದರೆ, 'ಮೊದಲನೇ ಸಲ ಸ್ಕೂಲ್‌ಗೆ ಹೋದಾಗ ಪಕ್ಕಕ್ಕೆ ಬಂದು ಕೂತಳು. ಹೆಸರು ಹೇಳಿ ಪರಿಚಯ ಮಾಡಿಕೊಳ್ಳೋಕು ಮೊದಲೇ, ಫ್ರೆಂಡ್‌ಶಿಪ್ ಬ್ಯಾಂಡ್ ಶೇರ್ ಮಾಡಿದ್ಲು. ನನ್ನ ಮೊದಲ ಫ್ರೆಂಡ್ ಗಾಯತ್ರಿ. ನಾನೇ ಗೆದ್‌ಬಿಡ್ಲಿ ಅಂತಾ ರನ್ನಂಗ್ ರೇಸ್‌ನ ಬೇಕು ಅಂತಾನೇ ಸೋತಳು. ಅಷ್ಟು ಪ್ರೀತಿ. ನನ್ನ ಬೆಸ್ಟ್ ಗೆಳತಿ ಗಾಯತ್ರಿ. ಈಗ ಮನೆ, ಮಗಳು, ಗಂಡ, ಕಾರು ಎಲ್ಲಾ ಇದೆ. ಜೀವದ ಥರ ಇದ್ದ ಗೆಳತಿಯೊಬ್ಬಳನ್ನು ಬಿಟ್ಟು ಎಂದು ಪಾರ್ವತಿ ಪಾತ್ರದಲ್ಲಿರುವ ವೈಷ್ಣವಿ ಹೇಳಿದ್ದಾರೆ. ಅದರೊಂದಿಗೆ ಇದು ಸ್ನೇಹದ ಕಥಾ ಹಂದರ ಹೊಂದಿರುವ ಸೀರಿಯಲ್ ಎನ್ನುವುದು ಗೊತ್ತಾಗಿದೆ.
ಪ್ರೋಮೋದ ಕೊನೆಯಲ್ಲಿ '25 ವರ್ಷದಿಂದ ಕಾಯ್ತಿದ್ದೀನಿ ಅಂದ್ರೆ, ನಿಮಗೊಂದು ಸ್ವಲ್ಪ ಓವರ್ ಅನ್ಸುತ್ತೆ ಅಲ್ವಾ? ಒಂದ್ ಕೆಲ್ಸಾ ಮಾಡಿ. ಕಣ್ಮುಚ್ಚಿಕೊಳ್ಳಿ. ಈಗ ನಿಮ್ಮ ಮೊದಲನೇ ಫ್ರೆಂಡ್ ಹೆಸರನ್ನ ಜೋರಾಗಿ ಹೇಳಿಕೊಳ್ಳಿ. ಈಗ ಪ್ರತಿದಿನ ನಿಮ್ಮ ಪಾರು ಏನ್ ಫೀಲ್ ಮಾಡಿಕೊಳ್ತಿದ್ದಾಳೆ ಅಂತಾ ಅರ್ಥ ಆಗುತ್ತೆ. ಇನ್ನೂ ಕಾಯ್ತಾನೇ ಇದ್ದೀನಿ ನನ್ನ ಗೆಳತಿ ಗಾಯತ್ರಿ ಬರ್ತಾಳೆ ಅಂತಾ. ಬರ್ತಾಳೆ..ಬಂದೇ ಬರ್ತಾಳೆ..' ಎಂದು ಹೇಳಿ ಮುಗಿಸಲಾಗಿದೆ.
ಪ್ರೋಮೋದಲ್ಲಿ ವೈಷ್ಣವಿ ಗೌಡ ಅವರು ಹುಡುಕುತ್ತಿರುವ ಗೆಳತಿ ಗಾಯತ್ರಿ ಯಾರು ಅನ್ನೋದನ್ನು ತೋರಿಸಲಾಗಿಲ್ಲ. ಮೂಲಗಳ ಪ್ರಕಾರ ಕೃತಿಕಾ ರವೀಂದ್ರ ಅವರು ಈ ಪಾತ್ರದಲ್ಲಿ ನಟಿಸಿದ್ದರೆ. ಇತ್ತೀಚೆಗೆ ಇವರಿಬ್ಬರೂ ಹೊಸ ಸೀರಿಯಲ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು ವರದಿಯಾಗಿತ್ತು. ಇದು ಇದೇ ಸೀರಿಯಲ್‌ನ ದೃಶ್ಯವಾಗಿರಬಹುದು ಎನ್ನಲಾಗಿದೆ.
ಮದುವೆಯಾದ ಒಂದು ವರ್ಷದ ಬಳಿಕ ವೈಷ್ಣವಿ ಗೌಡ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ವರ್ಷದ ಜೂನ್ 5 ರಂದು ವೈಷ್ಣವಿ ಏರ್‌ಫೋರ್ಸ್ ಅಧಿಕಾರಿ ಅನುಕೂಲ್ ಮಿಶ್ರಾ ಅವರನ್ನು ವಿವಾಹವಾಗಿದ್ದರು. ಅದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಗಂಡ ಜೊತೆಗಿನ ಫೋಸ್ಟ್‌ಗಳ್ನು ಹಂಚಿಕೊಂಡಿದ್ದರು. ಇದರ ನಡುವೆ ಅವರು ಸೀರಿಯಲ್‌ಗೆ ಮತ್ತೆ ವಾಪಾಸ್ ಬರವ ಸುಳಿವನ್ನೂ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

