ಚಮಕ್ ರಾಣಿ ಊರ್ಫಿಯನ್ನು ಬಜಾರ್‌ನಲ್ಲಿ ನಿಲ್ಸಿ ಬಟ್ಟೆ ಬಿಚ್ಚಿದ ನಾಲ್ಕೈದು ಅಭಿಮಾನಿಗಳು!

ಮುಂಬೈನ ಅಂಧೇರಿ ಹೋಟೆಲ್‌ನಲ್ಲಿ ಊರ್ಫಿ ಜಾವೇದ್ ಅವರ ವಿಭಿನ್ನ ಫ್ಯಾಷನ್ ಪ್ರದರ್ಶನದ ವೇಳೆ ನಡೆದ ಆಶ್ಚರ್ಯಕರ ಘಟನೆ. ಅಭಿಮಾನಿಗಳು ಮತ್ತು ಪಾಪರಾಜಿಗಳಿಗೆ ಮ್ಯಾಜಿಕ್ ತೋರಿಸುವವಾಗ ನಾಲ್ಕೈದು ಅಭಿಮಾನಿಗಳು ಊರ್ಫಿ ಬಟ್ಟೆಗಳನ್ನು ಬಿಚ್ಚಿರುವ ಘಟನೆ ವೈರಲ್ ಆಗಿದೆ.

TV Actress Uorfi Javed showing Magic dress in Andheri street sat

ಮುಂಬೈ (ಡಿ.04): ನಟಿ ಊರ್ಫಿ ಜಾವೇದ್ ಸಿನಿಮಾ, ಧಾರಾವಾಹಿಗಳಲ್ಲಿ ಹೆಚ್ಚಾಗಿ ನಟಿಸದಿದ್ದರೂ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಮಿಲಿಯನ್‌ಗಟ್ಟಲೆ ಅಭಿಮಾನಿಗಳನ್ನು ಹೊಂದಿದ್ದಾರೆ. ಈಕೆ ಕೇವಲ ವಿಭಿನ್ನ ಫ್ಯಾಷನ್‌ ಉಡುಪುಗಳನ್ನು ಧರಿಸುವುದರಿಂದಲೇ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ಹೀಗಾಗಿ, ಊರ್ಫಿ ಜಾವೇದ್‌ಗೆ ಚಮಕ್ ರಾಣಿ ಎಂದೂ ಕರೆಯುತ್ತಾರೆ. ಆದರೆ, ಈ ಚಮಕ್ ರಾಣಿಯನ್ನು ಮುಂಬೈನ ಅಂಧೇರಿ ಹೋಟೆಲ್‌ನ ಮುಂಭಾಗ ನಿಲ್ಲಿಸಿ ನಾಲ್ಕೈದು ಜನರು ಬಟ್ಟೆ ಬಿಚ್ಚಿದ ಪ್ರಸಂಗವೊಂದು ನಡೆದಿದೆ.

ಭಾರತದಲ್ಲಿ ಇನ್ನೂ ಮಹಿಳೆಯರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದೇ ಕೆಲವರು ಹೇಳುತ್ತಾರೆ. ಮಧ್ಯರಾತ್ರಿ ಮಹಿಳೆಯೊಬ್ಬರು ನಿರ್ಭಯವಾಗಿ ಓಡಾಡುವ ಕಾಲ ಬಂದಾಗಲೇ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂದು ಮಹಿಳಾಪರ ಹೋರಾಟಗಾರರು ಹೇಳುತ್ತಾರೆ. ಆದರೆ, ಇಲ್ಲಿ ಊರ್ಫಿ ಜಾವೇದ್ ಅವರು ಸ್ವಾತಂತ್ರ್ಯಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಸ್ವಾತಂತ್ರ್ಯವನ್ನೂ ಮೀರಿದ ವರ್ತಿಸುತ್ತಿದ್ದಾರೆ. ನಡು ರಸ್ತೆಗಳಲ್ಲಿ ವಿಭಿನ್ನವಾದ ಫ್ಯಾಷನ್ ಉಡುಪುಗಳನ್ನು ಧರಿಸಿ ಓಡಾಡುತ್ತಾರೆ. ಈ ಮೂಲಕ ಜನರು ಹೀಗೂ ಡ್ರೆಸ್ ಧರಿಸಬಹುದಾ? ಎಂದು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳವಂತೆ ಆಶ್ಚರ್ಯ ಮೂಡಿಸಿದ್ದಾರೆ. ಮುಂದುವರೆದು ಕೆಲವೊಮ್ಮೆ ಬಟ್ಟೆಗಳಿಲ್ಲದೇ ದಿನಬಳಕೆ ವಸ್ತುಗಳ ಮೂಲಕವೂ ಮೈ ಮುಚ್ಚಿಕೊಂಡು ಪೋಸ್ ಕೊಟ್ಟು ವೈರಲ್ ಆಗುತ್ತಿದ್ದಾರೆ.

ಹೀಗಾಗಿ, ಉರ್ಫಿ ಜಾವೇದ್ ಅವರನ್ನು ಭಾರತೀಯ ಅಂತರ್ಜಾಲದ ರಾಣಿ, ಚಮಕ್ ರಾಣಿ ಎಂದೇ ಕರೆಯಲಾಗುತ್ತದೆ. ಮುಂಬೈನಲ್ಲಿ ನೆಲೆಸಿದ ಊರ್ಫಿ ಜಾವೇದ್ ಕಿರುತೆರೆ ನಟಿ ಆಗಿದ್ದು, ಮಾಜಿ ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದಾರೆ. ಇತ್ತೀಚೆಗೆ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇವರು ಅಸಾಂಪ್ರದಾಯಿಕ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಒಟ್ಟಾರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಎಂಬ ಪದಕ್ಕೆ ಅನ್ವರ್ಥವೇ ಊರ್ಫಿ ಎಂದು ಹೇಳಬಹುದು. ಜನರು ಊಹಿಸಲೂ ಸಾಧ್ಯವಿಲ್ಲದ ಶೈಲಿಗಳಲ್ಲಿ ಉಡುಪು ಧರಿಸಿಕೊಂಡು ಬಂದು ಸೋಶಿಯಲ್ ಮೀಡಿಯಾದ ಟಾಪಿಕ್ ಆಗಿಬಿಡುತ್ತಾರೆ. ಇನ್ನು ಸೌಂದರ್ಯದಲ್ಲಿಯೂ ಊರ್ಫಿಗೆ ಊರ್ಫಿಯೇ ಸಾಟಿ ಆಗಿದ್ದಾರೆ.

ಇದನ್ನೂ ಓದಿ: 'ಬನಾರಸಿ ಬಿಕಿನಿ ಧರಿಸಿ ಮದುವೆಯಾದ ವಧು' ಯಾರು? ಇಲ್ಲಿದೆ ಬೃಹನ್ನಾಟಕ!

ಡ್ರೆಸ್ ಮ್ಯಾಜಿಕ್ ಮಾಡಲು ಬಂದು ಪೇಚಿಗೆ ಸಿಲುಕಿದಳು: ಇಂತಹ ಚಮಕ್ ರಾಣಿ ಊರ್ಫಿ ಜಾವೇದ್ ಅವರನ್ನು ಕಂಡಾಕ್ಷಣ ನೂರಾರು ಅಭಿಮಾನಿಗಳು ಸುತ್ತುವರಿದು ಮುತ್ತಿಕೊಳ್ಳುತ್ತಾರೆ. ಇನ್ನು  ಊರ್ಫಿ ಜಾವೇದ್ ಅವರನ್ನು ವಿರೋಧಿಸುವ ಇನ್ನೊಂದು ವರ್ಗವಿದ್ದು, ಅವರು  ನಮ್ಮ ಭಾರತೀಯ ಸಂಸ್ಕೃತಿಯನ್ನು ಊರ್ಫಿ ಬೀದಿಗಳಲ್ಲಿ ಕಳೆಯುತ್ತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ. ಜೊತೆಗೆ, ಊರ್ಫಿ ಡ್ರೆಸ್ ನೋಡಿ ಬಾಯಿಗೆ ಬಂದಂತೆ ಬೈಯುತ್ತಾರೆ. ಇದ್ಯಾವುದನ್ನೂ ಲೆಕ್ಕಿಸದೇ ಊರ್ಫಿ ಜಾವೇದ್ ಅವರು ಮುಂಬೈನ ಅಂಧೇರಿಯ ಹೋಟೆಲ್ ಒಂದಕ್ಕೆ ಬಂದಾಗ ತಮ್ಮ ಡ್ರೆಸ್ ಮ್ಯಾಜಿಕ್ ತೋರಿಸಲು ಮುಂದಾಗಿದ್ದಾರೆ. ತನ್ನನ್ನು ಸುತ್ತುವರಿದ ಅಭಿಮಾನಿಗಳು ಹಾಗೂ ಪಾಪರಾಜಿಗಳಿಗೆ ನಿಮಗೊಂದು ಮ್ಯಾಜಿಕ್ ತೋರಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Viral Video: ಗರ್ಲ್‌ಫ್ರೆಂಡ್ ಜೊತೇಲಿದ್ದರೆ ಸಿಂಹ ಕೂಡ ಸೈಲೆಂಟ್!

ಈ ವೇಳೆ ಅಭಿಮಾನಿಗಳೊಂದಿಗೆ ಮಾತನಾಡುತ್ತಾ ನಿಂತಾಗ ನಾಲ್ಕೈದು ಜನರು ಸೇರಿ ಆಕೆಯ ಬಟ್ಟೆಯನ್ನು ಬಿಚ್ಚಿದ್ದಾರೆ. ಮೊದಲು ಊರ್ಫಿ ಹಿಂದೆ ಹೋದ ವ್ಯಕ್ತಿ ಊರ್ಫಿಯ ಮೈ ಮೇಲಿನ ಡ್ರೆಸ್ ಎಳೆಯುತ್ತಾನೆ. ಆಗ ಡ್ರೆಸ್ ಸಡನ್ ಆಗಿ ಬಿಚ್ಚಿಕೊಳ್ಳುತ್ತದೆ. ಆದರೆ, ಅದರೊಳಗೆ ಇನ್ನೊಂದು ಬಟ್ಟೆಯಿದ್ದು, ಊರ್ಫಿ ಮಾನ ಕಾಪಾಡುತ್ತದೆ. ನಂತರ ಮತ್ತೊಬ್ಬ ಯುವತಿ ಇದೇ ರೀತಿ ಊರ್ಫಿ ಬಟ್ಟೆ ಎಳೆದುಕೊಳ್ಳುತ್ತಾರೆ. ಆಗ ಬಟ್ಟೆ ಕಳಚಿ ಹೋಗುತ್ತದೆ. ಒಟ್ಟಾರೆ 5 ಜನರು ಊರ್ಫಿ ಬಟ್ಟೆಯನ್ನು ಎಳೆದು ಬಿಚ್ಚಿ ಹಾಕುತ್ತಾರೆ. ಆದರೆ, ಎಲ್ಲ ಡ್ರೆಸ್‌ಗಳ ಒಳಗೂ ಮತ್ತೊಂದು ಡ್ರೆಸ್ ತೆರೆದುಕೊಳ್ಳುತ್ತದೆ. ಇಲ್ಲಿ ಸ್ವತಃ ಊರ್ಫಿಯೇ ಅಭಿಮಾನಿಗಳಿಗೆ ಡ್ರೆಸ್ ಬಿಚ್ಚಿಹಾಕುವ ಮ್ಯಾಜಿಕ್ ತೋರಿಸಲು ಬಂದಿದ್ದಳು ಎಂಬುದು ನಂತರ ತಿಳಿಯುತ್ತದೆ.

 

 
 
 
 
 
 
 
 
 
 
 
 
 
 
 

A post shared by Voompla (@voompla)

Latest Videos
Follow Us:
Download App:
  • android
  • ios