Viral Video: ಗರ್ಲ್‌ಫ್ರೆಂಡ್ ಜೊತೇಲಿದ್ದರೆ ಸಿಂಹ ಕೂಡ ಸೈಲೆಂಟ್!
ವೈರಲ್ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಗೆಳತಿಯೊಂದಿಗೆ ಸಿಂಹಗಳ ಮುಂದೆ ಬೈಕ್‌ನಲ್ಲಿ ಹೋಗುತ್ತಾನೆ. ಇದನ್ನು ನೋಡಿದ ಜನರು ಗರ್ಲ್‌ಫ್ರೆಂಡ್ ಜೊತೇಲಿದ್ದರೆ ಸಿಂಹವೂ ಸೈಲೆಂಟ್ ಆಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿ: ನಾವು ಚಿಕ್ಕಂದಿನಿಂದಲೂ ಓದಿಕೊಂಡು ಬಂದಿರುವ ನೀತಿ ಕಥೆಗಳಲ್ಲಿ ಸಿಂಹವನ್ನು ಕಾಡಿನ ರಾಜ ಎಂತಲೇ ಕರೆಯುತ್ತೇವೆ. ಕಾರಣ ಸಿಂಹಕ್ಕೆ ಇರುವ ಶಕ್ತಿ, ದಾಳಿ ಮಾಡುವ ತಾಕತ್ತು, ಬಲಿಷ್ಠತೆಯ ಮುಂದೆ ಎಲ್ಲ ಪ್ರಾಣಿಗಳೂ ಅಡಿಯಾಳು ಎಂಬಂತೆ ಈ ಕಥೆಯ ಸಾರಾಂಶ ಆಗಿದೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಪ್ರೇಯಸಿಯೊಂದಿಗೆ ಹೋಗುವಾಗ ಸಿಂಹ ಎದುರಾದರೂ ಅದನ್ನು ಲೆಕ್ಕಿಸದೇ ಅದರ ಮುಂದೆ ಬೈಕ್‌ನಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಗರ್ಲ್‌ಫ್ರೆಂಡ್ ಒಬ್ಬಳು ಜೊತೆಯಲ್ಲಿದ್ದರೆ ಇಡೀ ಜಗತ್ತೇ ಗೆಲ್ಲಬಹುದು, ಈ ಸಿಂಹ ಯಾವ ಲೆಕ್ಕ ಎಂದು ಕಾಮೆಂಟ್ ಮಾಡಿದ್ದಾರೆ.
ಕಾಡಿನ ರಾಜ ಸಿಂಹದ ಘರ್ಜನೆ ಕೇಳಿದರೆ ಪ್ರಾಣಿಗಳು ಓಡಿಹೋಗುತ್ತವೆ. ಅದರಲ್ಲಿಯೂ ಸಿಂಹಗಳೇ ತುಂಬಿರುವ ಈ ಹಿಂಸ್ರ ಅಭಯಾರಣ್ಯ ಪ್ರದೇಶದ ಮೂಲಕ ಹೋಗುವ ಮೊದಲು 10 ಬಾರಿ ಯೋಚಿಸಬೇಕು. ಆದರೆ, ಮನುಷ್ಯ ವಿಚಿತ್ರ ಜೀವಿ, ತನಗೆ ಉತ್ಸಾಹ ಇದ್ದಾಗ ಯಾವುದೇ ಅಪಾಯವನ್ನು ಎದುರಿಸಲು ಹಿಂಜರಿಯುವುದಿಲ್ಲ. ಅದರಲ್ಲಿಯೂ ಗೆಳತಿ ಜೊತೆಗಿದ್ದಾಗ ಪುರುಷರು ಹೆಚ್ಚು ಧೈರ್ಯ ತೋರಿಸುತ್ತಾರೆ ಎನ್ನುವುಸು ಸಾರ್ವಕಾಲಿಕ ಸತ್ಯವಾಗಿದೆ. ಹೀಗಾಗಿ ಗೆಳತಿಯರು ಇದ್ದಾಗ ತುಸು ಹೆಚ್ಚುವರಿ ಅಪಾಯವನ್ನು ತೆಗೆದುಕೊಳ್ಳಲು ಸಹ ಹಿಂಜರಿಯುವುದಿಲ್ಲ. ಇದಕ್ಕೆ ಸಾಮಾಜಿಕ ಜಾಲತಾಣದ ವಿಡಿಯೋವೊಂದು ಸಾಕ್ಷಿಯಾಗಿದೆ. ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ವೇಗವಾಗಿ ಒಬ್ಬ ವ್ಯಕ್ತಿ ತನ್ನ ಗೆಳತಿಯನ್ನು ಕೂರಿಸಿಕೊಂಡು ಎರಡು ಸಿಂಹಗಳ ಮುಂದೆ ಬೈಕ್ ಓಡಿಸುತ್ತಾನೆ.
ಸಿಂಹಗಳನ್ನು ಲೆಕ್ಕಿಸದ ಜೋಡಿ: kashyap_memer ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಮೋಟಾರ್ ಸೈಕಲ್‌ನಲ್ಲಿ ವ್ಯಕ್ತಿಯೊಬ್ಬ ಕಾಣಿಸಿಕೊಳ್ಳುತ್ತಾನೆ. ರಸ್ತೆಯ ಈ ಬದಿಯಲ್ಲಿ ನಿಂತಿರುವ ಕೆಲವರು ಅವನನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದಾರೆ. ಈ ವ್ಯಕ್ತಿ ರಸ್ತೆಯ ಆ ಬದಿಯಲ್ಲಿ ಜನರು ತಮ್ಮ ಕ್ಯಾಮೆರಾದಲ್ಲಿ ಸಿಂಹಗಳನ್ನು ಸೆರೆಹಿಡಿಯುತ್ತಿರುವುದನ್ನು ನೋಡುತ್ತಾನೆ. ಆದರೂ, ಬೈಕ್ ಓಡಿಸುತ್ತಾ ಮುಂದೆ ಬರುತ್ತಾನೆ. ಅವನ ಜೊತೆ ಬಹುಶಃ ಅವನ ಗೆಳತಿ ಕೂತಿದ್ದಾಳೆ, ಅವಳು ತನ್ನ ಮುಖವನ್ನು ದುಪಟ್ಟಾದಿಂದ ಮುಚ್ಚಿಕೊಂಡಿದ್ದಾಳೆ.
ಇದನ್ನೂ ಓದಿ: ನಗು ನಗುತ್ತಲೇ ಮತ್ತೆ ಅಯೋಗ್ಯ-2 ತಂಡ ಸೇರಿಕೊಂಡ ನಟಿ ರಚಿತಾ ರಾಮ್, ಸತೀಶ್ ನಿನಾಸಂ!
ಅವಳು ಸಿಂಹಗಳ ಪಕ್ಕದಿಂದ ಹಾದು ಹೋಗುವಾಗ ಅವುಗಳನ್ನು ನೋಡುತ್ತಾಳೆ. ಅದೇ ಸಮಯದಲ್ಲಿ, ಸಿಂಹಗಳು ಸಹ ಮನುಷ್ಯರು ತಮ್ಮನ್ನು ಲೆಕ್ಕಿಸದೆ ಹೋಗುವುದನ್ನು ನೋಡಿ ಸ್ವಲ್ಪ ಆಶ್ಚರ್ಯಚಕಿತ ಆಗುವಂತೆ ವರ್ತನೆಯನ್ನು ತೋರಿಸಿವೆ. ಇನ್ನು ಈ ಜೋಡಿ ಸುರಕ್ಷಿತವಾಗಿ ಅಲ್ಲಿಂದ ಹೊರಟು ಹೋಗುತ್ತದೆ. ಇದನ್ನು ನೋಡಿದ ವಿಡಿಯೋ ಮಾಡುತ್ತಿದ್ದವರು ಕೂಡ ನಿಟ್ಟುಸಿರು ಬಿಡುತ್ತಾರೆ.
ಈ ವೈರಲ್ ವಿಡಿಯೋಗೆ ನೆಟ್ಟಿಗರು ಭರ್ಜರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬರು, ಗೆಳತಿ ಜೊತೆಗಿದ್ದರಿಂದ ಈತನಿಗೆ ಎಕ್ಸ್ಟ್ರಾ ಪವರ್ ಸಿಕ್ಕಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು - ಇದು ಗೆಳತಿಯಲ್ಲ, ಹೆಂಡತಿ, ಗಂಡ ಅವಳನ್ನು ಮಾವನ ಮನೆಗೆ ಬಿಡಲು ಹೋಗುತ್ತಿದ್ದಾನೆ' ಎಂದಿದ್ದಾರೆ. ಮತ್ತೆ ಕೆಲವರು ಸಿಂಹವನ್ನು ಟ್ರೋಲ್ ಮಾಡಿ ಕಾಮೆಂಟ್‌ಗಳನ್ನು ಮಾಡಿದ್ದಾರೆ..
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮಧ್ಯದಲ್ಲೇ ಹೊರಬಂದ ಚೈತ್ರಾ ಕುಂದಾಪುರ