ಹಿಂದಿ ಬಿಗ್‌ಬಾಸ್ ಸೀಸನ್ 15ನ ವಿನ್ನರ್ ಆಗಿ ತೇಜಸ್ವಿ ಪ್ರಕಾಶ್ ಕೈಯನ್ನು ಸಲ್ಮಾನ್ ಖಾನ್ ಮೇಲೆತ್ತಿದ್ದಾರೆ. ಶಿಲ್ಪಾ ಶೆಟ್ಟಿ ತಂಗಿಗೆ ಆಂಟಿ ಅನ್ನೋ ಮೂಲಕ ಸುದ್ದಿಯಾಗಿದ್ದ ಈ ತೇಜಸ್ವಿ ಪ್ರಕಾಶ್ ಬಗ್ಗೆ ಡೀಟೇಲ್ ಸ್ಟೋರಿ ಇಲ್ಲಿದೆ.
ಹಿಂದಿ ಬಿಗ್‌ಬಾಸ್ (BiggBoss) ಸೀಸನ್ 15ಗೆ ಅಂತಿಮ ತೆರೆ ಬಿದ್ದಿದೆ. ಹಿಂದಿ (Hindi) ಕಿರುತೆರೆಯ ಈ ಜನಪ್ರಿಯ ಕಾರ್ಯಕ್ರಮವನ್ನು ಆರಂಭದಿಂದಲೂ ಸಲ್ಮಾನ್ ಖಾನ್ (Salman Khan) ನಡೆಸಿಕೊಡುತ್ತಿದ್ದಾರೆ. ಜ.29 ಹಾಗೂ ಜ.30ರಂದು ಹಿಂದಿ ಬಿಗ್‌ಬಾಸ್ ಸೀಸನ್ 15ನ ಗ್ರಾಂಡ್ ಫಿನಾಲೆ (Grand Finale) ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮ ಅಂತಿಮ ಘಟ್ಟ ಪ್ರಸಾರವನ್ನು ದೇಶಾದ್ಯಂತದ ಜನ ವೀಕ್ಷಿಸಿದರು. ಮಧ್ಯರಾತ್ರಿಯವರೆಗೂ ಪ್ರಸಾರವಾದ ಕಾರ್ಯಕ್ರಮದ ವಿನ್ನರ್ ಯಾರು ಅನ್ನೋದು ಇಂದಿಡೀ ಮೀಡಿಯಾಗಳಲ್ಲಿ ಬಹು ಚರ್ಚಿತವಾದ ವಿಷಯ. ಬಿಗ್ ಬಾಸ್ ಸೀಸನ್ 15ನ ಕೊನೆಯ ಹಂತದಲ್ಲಿ ಟಾಪ್ ಆರು ಸ್ಪರ್ಧಿಗಳಾಗಿ ಕರಣ್ ಕುಂದ್ರಾ, ಶಮಿತಾ ಶೆಟ್ಟಿ (Shamitha Shetty), ತೇಜಸ್ವಿ ಪ್ರಕಾಶ್, ಪ್ರತೀಕ್ ಸೆಹಜ್‌ಪಾಲ್, ನಿಶಾಂತ್ ಭಟ್ ಹಾಗೂ ರಶ್ಮಿ ದೇಸಾಯಿ ಇದ್ದರು. ಅಂತಿಮವಾಗಿ ತೇಜಸ್ವಿ ಪ್ರಕಾಶ್ ಎಂಬ 28ರ ತುಂಟ ಚೆಲುವೆ ಬಿಗ್‌ಬಾಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಈಗ ಬಿಗ್‌ಬಾಸ್ ಸೀಸನ್ 15ನಲ್ಲಿ ಸೃಷ್ಟಿಸಿದ ಸೆನ್ಸೇಶನ್ ಸಣ್ಣದಲ್ಲ. ಈಕೆ ಮತ್ತು ಕರಣ್ ಕುಂದ್ರಾ ನಡುವೆ ಪ್ರೀತಿ ಕುಡಿಯೊಡೆದದ್ದಕ್ಕೂ ಈ ಸೀಸನ್ ಸಾಕ್ಷಿಯಾಯಿತು. ಈ ಸೀಸನ್‌ನಲ್ಲಿ ಪ್ರತೀಕ್ ಸೆಹಜ್‌ಪಾಲ್ ಗೆಲ್ಲುತ್ತಾರೆ ಎಂದೇ ಹಲವರು ಭಾವಿಸಿದ್ದರು. ಅವರು ರನ್ನರ್‌ಅಪ್ ಆಗಿರುವುದು ಹಲವರಿಗೆ ನಿರಾಸೆ ತಂದಿದೆ. ಅದನ್ನವರು ಸೋಷಿಯಲ್ ಮೀಡಿಯಾದಲ್ಲೂ ಪ್ರಕಟಿಸಿದ್ದಾರೆ. ಇನ್ನೊಂದು ಕಡೆ ನಲವತ್ತು ಲಕ್ಷ ರೂ. ಜೊತೆಗೆ ಬಿಗ್‌ಬಾಸ್ ಟ್ರೋಫಿಗೆ ತೇಜಸ್ವಿ ಒಡತಿಯಾಗಿದ್ದಾರೆ.
ಹೋಟೆಲ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ನಟಿ Urfi Jadav ವಿಡಿಯೋ ವೈರಲ್!
ಕಳೆದ ಹದಿನೈದು ವರ್ಷಗಳಿಂದ ಹಿಂದಿಯಲ್ಲಿ ಬಿಗ್‌ಬಾಸ್ ಶೋ ನಡೆಯುತ್ತಿದೆ. ಈ ವರ್ಷದ ವಿನ್ನರ್ ತೇಜಸ್ವಿ ಪ್ರಕಾಶ್ ಹುಟ್ಟಿದ್ದು ಸೌದಿ ಅರೇಬಿಯಾ (Saudi Arabia) ದಲ್ಲಿ. 1993ರಲ್ಲಿ ಹುಟ್ಟಿದ ಈಕೆ ಹುಟ್ಟಿದ್ದು ಸೌದಿಯಲ್ಲಾದರೂ ಬೆಳೆದದ್ದೆಲ್ಲ ಮುಂಬೈ (Mumbai) ಯಲ್ಲೇ. ಮರಾಠಿ ಕುಟುಂಬದ ಈ ಹೆಣ್ಣುಮಗಳು ಇಂಜಿನಿಯರಿಂಗ್ (Engineering) ಪದವೀಧರೆ. ಮುಂಬೈ ವಿವಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯೂನಿಕೇಶನ್ಸ್‌ನಲ್ಲಿ ಇವರು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಆಕ್ಟಿಂಗ್‌ನಲ್ಲಿ ಬಲವಾದ ಆಸಕ್ತಿ ಬೆಳೆಸಿಕೊಂಡಿದ್ದ ಈಕೆ ಕಾಲಿಟ್ಟದ್ದು ಹಿಂದಿ ಸೀರಿಯಲ್ (Serial) ಜಗತ್ತಿಗೆ. ನಟನೆಯ ಮೇಲಿನ ಆಸಕ್ತಿಯಿಂದಲೇ. ಸಂಸ್ಕಾರ್, ಸ್ವರಾಗಿಣಿ ಸೀರಿಯಲ್‌ಗಳು ಈಕೆಗೆ ಜನಪ್ರಿಯತೆ ತಂದುಕೊಟ್ಟವು. 'ರಿಶ್ತಾ ದೇಖೇಂಗೇ ಹಮ್ ನಯಾ', 'ಸ್ವಿಜ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ 2', 'ಸಿಲ್‌ಸಿಲಾ ಬದಲ್ತೇ ರಿಷ್ತೋಂಕಾ, ಶಾಹಿ ಹೋ ತೋ ಐಸಿ ಇತ್ಯಾದಿ ಇವರ ನಟನೆಯ ಕೆಲವು ಸೀರಿಯಲ್‌ಗಳು. ಕೆಲವು ರಿಯಾಲಿಟಿ ಶೋಗಳಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇಂಥಾ ಜನಪ್ರಿಯ ನಟಿಯನ್ನು ಬಿಗ್‌ಬಾಸ್ ವೇದಿಕೆಗೆ ಕರೆದಾಗ ಈಕೆ ನಖರಾ ಮಾಡದೇ ಓಕೆ ಅಂದರು. ಅಲ್ಲಿ ಲವ್ವಿ ಡವ್ವಿ ಮೂಲಕ, ಇತರೇ ನಟಿಯರ ಬಗ್ಗೆ ಭಂಡತನದ ಮಾತಾಡುವ ಮೂಲಕವೂ ಗಮನ ಸೆಳೆದರು.
ಒಂದೇ ರೂಮಲ್ಲಿ Kangana Ranaut ಮತ್ತು ಶಾಹಿದ್ ಕಪೂರ್; ಕೆಟ್ಟ ದಿನದ ಬಗ್ಗೆ ನಟಿ ಮಾತು!
ಬಿಗ್‌ಬಾಸ್ ಬಳಿಕ 'ನಾಗಿನ್ 6'ನಲ್ಲಿ ನಾಗಿನಿ ಪಾತ್ರದಲ್ಲಿ ಈಕೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಬಿಗ್‌ಬಾಸ್ ಗ್ರಾಂಡ್ ಫಿನಾಲೆ ವೇಳೆಗೇ ಘೋಷಿಸಲಾಗಿದೆ. ಜೊತೆಗೆ ಈ ಸೀರಿಯಲ್‌ನ ಫೋಟೋಶೂಟ್‌ನಲ್ಲೂ ಈಕೆ ಪಾಲ್ಗೊಂಡಿದ್ದಾರೆ.
ಈಕೆ ಫಿನಾಲೆ ಹಂತದಲ್ಲಿ ಶಿಲ್ಪಾ ಶೆಟ್ಟಿ (Shilpa Shetty) ತಂಗಿ ಶಮಿತಾ ಶೆಟ್ಟಿ ಅವರನ್ನು 'ಆಂಟಿ' ಎಂದು ಕರೆದು ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಮಾತುಗಳೂ ಕೇಳಿಬಂದವು. ಕೆಲವರು ವಯಸ್ಸಿನಲ್ಲಿ ತೇಜಸ್ವಿಗಿಂತ ಹದಿನೈದು ವರ್ಷ ಹಿರಿಯವಳಾದ ಶಮಿತಾ ಶೆಟ್ಟಿಯನ್ನು ಆಂಟಿ ಎಂದು ಕರೆದದ್ದರಲ್ಲಿ ತಪ್ಪಿಲ್ಲ ಎಂದಿದ್ದರು. ಆದರೆ ಶಮಿತಾ ಶೆಟ್ಟಿ ಅಭಿಮಾನಿಗಳು, ಬಿಪಾಶಾ ಬಸು (Bipasa Basu) ಅವರಂಥಾ ಹಿರಿಯ ನಟಿ ತೇಜಸ್ವಿ ಅವರ ಈ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ಹೀಗೆ ಕರೆಯುವ ಮೂಲಕ ಸಹ ನಟಿಯ ತೇಜೋವಧೆಗೆ ತೇಜಸ್ವಿ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಗಂಡಸರ ಟಾಯ್ಲೆಟ್‌ಗೆ ನುಗ್ಗಿದ Deepika Padukone ಮತ್ತು ಆಲಿಯಾ ಭಟ್; ಶಾಕಿಂಗ್ ಘಟನೆ!
