ಮಕ್ಕಳನ್ನ ಅಗತ್ಯಕ್ಕಿಂತ ಹೆಚ್ಚು ಮುದ್ದು ಮಾಡಿದ್ರೆ ಹೀಗೇ ಆಗೋದು! ಮೊದ್ಲೇ ಈ ಕೆಲ್ಸ ಮಾಡಿದ್ರೆ ಆಗ್ತಿರಲಿಲ್ವಾ?
ಸಂಧ್ಯಾಳ ಸ್ವಾರ್ಥ ಮಿತಿಮೀರಿದ ಹಿನ್ನೆಲೆಯಲ್ಲಿ ತುಳಸಿ ಮಗಳ ಕೆನ್ನೆಗೆ ಹೊಡೆದಿದ್ದಾಳೆ. ಇದನ್ನು ನೋಡಿ ವೀಕ್ಷಕರು ತುಳಸಿಗೆ ಹೇಳಿರೋ ಬುದ್ಧಿಮಾತೇನು?
ಮಕ್ಕಳನ್ನು ಎಷ್ಟು ಪ್ರೀತಿ ಮಾಡಬೇಕೋ ಅಷ್ಟೇ ಮಾಡಬೇಕು. ಈಗಲಂತೂ ಮನೆಯಲ್ಲಿ ಒಂದೋ, ಎರಡೋ ಮಕ್ಕಳು. ಅದಕ್ಕಾಗಿ ಅವರ ಮೇಲೆ ಅಪ್ಪ-ಅಮ್ಮಂದಿರಿಗೆ ಪಂಚಪ್ರಾಣವೇ ಸರಿ. ಅದರಲ್ಲಿಯೂ ಅಜ್ಜ-ಅಜ್ಜಿ ಇದ್ದರಂತೂ ಮುಗಿದೇ ಹೋಯ್ತು. ಮಕ್ಕಳನ್ನು ಅಷ್ಟು ಜೋಪಾನ ಮಾಡುತ್ತಾರೆ. ಅವರ ಕಾಲ ಮೇಲೆ ಅವರನ್ನು ನಿಲ್ಲಲು ಬಿಡುವುದೇ ಇಲ್ಲ. ಎಲ್ಲ ಮಕ್ಕಳು ಆಚೆ ಹೋಗಿ ಮಣ್ಣು ಮಾಡಿಕೊಂಡು ಬರ್ತಾರೋ, ಬಿದ್ದು ಬಿಡ್ತಾರೋ ಎನ್ನುವ ಭಯದಲ್ಲಿ ಮನೆಯಿಂದ ಅತ್ತ ಕಡೆಯೇ ಕಳಿಸದ ನಗರ ವಾಸಿಗಳು ಅದೆಷ್ಟೋ ಮಂದಿ. ಮಕ್ಕಳು ಕೇಳುವ ಮೊದಲೇ ಅವರಿಗೆ ಬೇಕಾದ ವಸ್ತುಗಳೆಲ್ಲಾ ಅವರ ಎದುರಿಗೇ ತಂದುಬಿಡುತ್ತಾರೆ. ಇದರಿಂದಾಗಲೇ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೋಲಿಸಿದರೆ ನಗರದಲ್ಲಿಯೇ ಹುಟ್ಟು ಬೆಳೆದ ಹಲವು ಮಕ್ಕಳಿಗೆ ಸ್ವಂತ ಬುದ್ಧಿ ಎನ್ನುವುದು ಎಷ್ಟು ದೊಡ್ಡವರಾದರೂ ಬರುವುದೇ ಇಲ್ಲ. ಎಲ್ಲದಕ್ಕೂ ಅಪ್ಪ-ಅಮ್ಮನ ಮೇಲೆಯೇ ಡಿಪೆಂಡ್ ಆಗಿಬಿಡುತ್ತಾರೆ. ಮನೆಯಿಂದ ಹೊರಕ್ಕೆ ಹೋದರೆ ಸ್ವಂತ ಬಲದ ಮೇಲೆ ಯಾವ ಕೆಲಸವನ್ನೂ ಮಾಡಲು ಸಾಧ್ಯವೇ ಇಲ್ಲ ಎನ್ನಿಸುವಷ್ಟರ ಮಟ್ಟಿಗೆ ಇಂದು ಮಕ್ಕಳನ್ನು ಬೆಳೆಸುತ್ತಿದ್ದಾರೆ ಹಲವು ಪಾಲಕರು.
ಇದೀಗ ಶ್ರೀರಸ್ತು ಶುಭಮಸ್ತುವಿನಲ್ಲಿಯೂ ಇದೇ ರೀತಿ ಆಗಿದೆ. ಎಷ್ಟೆಂದರೂ ಸೀರಿಯಲ್ಗಳು ನಿಜ ಜೀವನದ ಪ್ರತಿರೂಪವೇ ಅಲ್ವೆ? ಈ ಸೀರಿಯಲ್ನಲ್ಲಿ ಅಪ್ಪ ಇಲ್ಲ ಎನ್ನುವ ಕಾರಣಕ್ಕೆ, ತುಳಸಿ ಮಕ್ಕಳನ್ನು ಸಹಜವಾಗಿ ಹೆಚ್ಚು ಪ್ರೀತಿ ತೋರಿದ್ದಾರೆ. ಅದರಲ್ಲಿಯೂ ಮಗಳು ಸಂಧ್ಯಾ ಎಂದರೆ ಪಂಚಪ್ರಾಣ. ಅವಳು ಹೇಳಿದಂತೆಯೇ ಅಲ್ಲಿಂದ ಇಲ್ಲಿಯವರೆಗೂ ಕೇಳಿಕೊಂಡು ಬಂದಿದ್ದಾಳೆ. ಮಗಳು ಹೇಳಿದ್ದನ್ನೆಲ್ಲಾ ಕೊಡಿಸುತ್ತಾ, ಅವಳು ತಪ್ಪು ಮಾಡಿದಾಗಲೂ ಅದರ ಸಮರ್ಥನೆ ಮಾಡುತ್ತಲೇ ಬಂದಿದ್ದಾಳೆ. ಜೊತೆ ಅಜ್ಜನಿಗೂ ಮೊಮ್ಮಗಳು ಎಂದರೆ ಅತಿ ಪ್ರೀತಿ. ಆದರೆ ಅದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಾ ಬಂದಿದ್ದಾಳೆ. ಶ್ರೀಮಂತಿಕೆಯ ಕನಸು ಕಾಣುವವಳು ಅವಳು. ಇದೇ ಕಾರಣಕ್ಕೆ ಪದೇ ಪದೇ ಮನೆಯವರಿಗೆ ತೊಂದರೆ ಕೊಡುತ್ತಲೇ ಬಂದಿದ್ದಾಳೆ.
ಮಕ್ಕಳ ಜೊತೆ ಭಾಗ್ಯ ಕುಂಟೆಬಿಲ್ಲೆ: ಪ್ರತಿ ಅಮ್ಮನೂ ಹೀಗಿದ್ರೆ ಅದಕ್ಕಿಂತ ಸ್ವರ್ಗ ಇನ್ನೆಲ್ಲಿದೆ ಅಂತಿರೋ ಫ್ಯಾನ್ಸ್
ಇದಾಗಲೇ ಅತಿ ಕಿರಿಕಿರಿ ಎನ್ನುವಷ್ಟರ ಮಟ್ಟಿಗೆ ಸಂಧ್ಯಾಳ ಕ್ಯಾರೆಕ್ಟರ್ ರೂಪಿಸಲಾಗಿದೆ ಎಂದು ಸೀರಿಯಲ್ಲ್ ಪ್ರೇಕ್ಷಕರು ಹೇಳಿದ್ದೂ ಇದೆ. ಆದರೆ ನಿಜಜೀವನದಲ್ಲಿಯೂ ಇಂಥ ಮಕ್ಕಳು ಕೆಲವು ಮನೆಗಳಲ್ಲಿ ಇರುವುದು ಇದೆ. ಹಣದ ದುರಾಸೆಯ ಮಾವನೂ ಸಿಕ್ಕಿರುವ ಕಾರಣ, ಅಜ್ಜನ ಡೆತ್ ಸರ್ಟಿಫಿಕೇಟ್ ರೆಡಿ ಮಾಡಿಸಿ ಆಸ್ತಿಯನ್ನು ಕಬಳಿಸುವ ಹುನ್ನಾರ ಮಾಡಿದ್ದಾಳೆ ಸಂಧ್ಯಾ. ಇದು ತಾತ ದತ್ತನಿಗೆ ತಿಳಿಯುತ್ತಲೇ ಕುಸಿದು ಹೋಗಿದ್ದಾನೆ. ವಿಷಯವನ್ನು ತುಳಸಿಗೆ ಹೇಳಿದ್ದಾನೆ.
ಕೋಪದಿಂದ ಮನೆಗೆ ಬಂದಿರುವ ತುಳಸಿ ಮಗಳು ಸಂಧ್ಯಾಳ ಕೆನ್ನೆಗೆ ಏಟು ಹೊಡೆದಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ತುಳಸಿಯ ವಿರುದ್ಧವೇ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಈ ಕೆಲಸ ಮೊದಲೇ ಮಾಡಿದ್ದರೆ ಮಗಳು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಅಪ್ಪ ಇಲ್ಲದ ಮಕ್ಕಳು ಎಂದು ಅತಿಯಾದ ಪ್ರೀತಿ ತೋರಿದ್ದೇ ಇದಕ್ಕೆ ಕಾರಣ, ಎಲ್ಲದಕ್ಕೂ ಲಿಮಿಟ್ ಇದ್ದರೆ ಚೆನ್ನ. ಸಂಧ್ಯಾ ಇದಾಗಲೇ ಈ ರೀತಿಯ ಹಲವಾರು ಎಡವಟ್ಟು ಮಾಡಿದ್ದರೂ, ಗರ್ಭಿಣಿ ಎಂದು ಸುಳ್ಳೇ ಸೀಮಂತ ಮಾಡಿಸಿಕೊಂಡಿದ್ದರೂ ಬೈದು ಸುಮ್ಮನಾಗಿದ್ದು ನಿನ್ನ ತಪ್ಪು. ಇಂಥ ಅಮ್ಮ ಇರುವುದರಿಂದಲೇ ಮಕ್ಕಳು ಈ ಪರಿ ಬೆಳೆಯುತ್ತಾರೆ ಎಂದು ಬುದ್ಧಿಮಾತು ಹೇಳುತ್ತಿದ್ದಾರೆ.
ಕನ್ನಡದಲ್ಲೂ ಸ್ವಲ್ಪ ರೊಮಾನ್ಸ್ ಮಾಡ್ರಪ್ಪಾ... ಆ್ಯಂಕರ್ಸ್ ಅನುಶ್ರೀ-ಅಕುಲ್ ಬಾಲಾಜಿ ಕಾಲೆಳಿತಿರೋ ನೆಟ್ಟಿಗರು