ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ಬಿಗ್​ಬಾಸ್​ ಪಯಣದ ಕುರಿತು ಮಾತನಾಡಿದ್ದಾರೆ. ಕಂಗ್ಲಿಷ್​ನಲ್ಲಿ ಮಾತನಾಡಿದ ತುಕಾಲಿ ಹೇಳಿದ್ದೇನು? 

ಬಿಗ್​ಬಾಸ್ ಕನ್ನಡ ಸೀಸನ್ 10 ಮುಗಿದರೂ ಇದರ ಗುಂಗಿನಿಂದ ಬಿಗ್​ಬಾಸ್​ ಪ್ರೇಮಿಗಳು ಹೊರಕ್ಕೆ ಬಂದಿಲ್ಲ. ಈ ಬಾರಿಯ ಬಿಗ್​ಬಾಸ್​ನಲ್ಲಿ ಕಾರ್ತಿಕ್​ ಅವರು ವಿನ್​ ಆಗಿ, ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ ಶೃಂಗೇರಿ ರನ್ನರ್ಸ್​ ಅಪ್​ ಆದರೂ ಸಖತ್ ಹೈಲೈಟ್ ಆಗಿದ್ದು ‘ಸಂತು-ಪಂತು’ ಗೆಳೆತನ. ಬಿಗ್​ಬಾಸ್​ ಅಂದ್ರೇನೇ ಇಲ್ಲಿ ಕಿತ್ತಾಟ, ಜಗಳ, ಅಸೂಯೆ, ಕಿರುಚಾಟ, ಲವ್​ ಸ್ಟೋರಿ ಎಲ್ಲವೂ ಮಾಮೂಲು. ಇವೆಲ್ಲವುಗಳ ನಡುವೆ ಕೆಲವೊಮ್ಮೆ ಒಳ್ಳೆಯದ್ದನ್ನೂ ನೋಡಲು ಸಿಕ್ಕಿದ್ದೆಂದರೆ ಅದು ಸೀಸನ್ ಆರಂಭದಿಂದಲೂ ಪರಸ್ಪರ ಗೆಳೆಯರಾಗಿಯೇ ಇದ್ದ ಸಂತು-ಪಂತು ಜೋಡಿ. ಇಬ್ಬರೂ ಸಂತೋಷಂದಿರು ಎಲ್ಲರಿಗೂ ಸಂತೋಷವನ್ನೇ ನೀಡುತ್ತಾ ಬಂದರು. ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಸಂತು-ಪಂತು ಎಂದೇ ಖ್ಯಾತಿ ಪಡೆದರು. ಅದರಲ್ಲಿಯೂ ತುಕಾಲಿ ಸಂತೋಷ್​ ಅವರ ಹಾಸ್ಯದ ಮಾತುಗಳಂತೂ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುವುದು ಇದೆ.

ಸಂತು – ಪಂತು ಜೋಡಿಯಾದ ಇಬ್ಬರೂ ಆಡಿದ ಮಾತುಗಳಿಗೆ, ಆಡಿದ ಆಟಗಳಿಗೆ ಲೆಕ್ಕವೇ ಇಲ್ಲ. ಎಷ್ಟೇ ಮಾತುಗಳು ಕೇಳಿಬಂದರೂ ಅವರ ಸ್ನೇಹದಲ್ಲಿ ಬಿರುಕು ಬರಲೇ ಇಲ್ಲ. ಹಾಗೆಂದು ಭಿನ್ನಾಭಿಪ್ರಾಯಗಳಿಲ್ಲ ಎಂದಲ್ಲ. ಒಬ್ಬರಿಗೊಬ್ಬರು ಮಾತುಗಳಲ್ಲಿ ತಿವಿದುಕೊಂಡಿದ್ದು ಇದೆ, ಮುನಿಸಿಕೊಂಡಿದ್ದು ಇದೆ. ಆದರೆ ಮರುಕ್ಷಣದಲ್ಲಿಯೇ ಅದು ಸರಿಹೋಗಿ ಬಿಗ್‌ಬ್ಯಾಗ್‌ ಮೇಲೆ ಕೂತು ಹರಟಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಬಿಗ್​ಬಾಸ್​ ಸ್ಪರ್ಧಿಗಳ ಸಂದರ್ಶನ ನಡೆಸುತ್ತಿದ್ದು, ಅದರಲ್ಲಿ ಈಗ ಇಬ್ಬರು ಸಂತೋಷ್​ ಅವರನ್ನು ಕರೆಸಲಾಗಿದೆ. ಬಿಗ್​ಬಾಸ್ ಪಯಣದ ಕುರಿತು ಮೊದಲಿಗೆ ತುಕಾಲಿ ಸಂತೋಷ್​ ಅವರಿಗೆ ಕೇಳಲಾಯಿತು. ಆದರೆ ವಿಶೇಷವೆಂದರೆ ಇಂಗ್ಲಿಷ್​ನಲ್ಲಿ ಅನುಭವ ಹೇಳುವಂತೆ ಹೇಳಲಾಯಿತು. 

ಆಗ ನನಗಿನ್ನೂ 19 ವರ್ಷ... ಸೌತ್​ ನಿರ್ಮಾಪಕ ಮಂಚಕ್ಕೆ ಕರೆದ್ರು... ಅನುಭವ ಹೇಳಿದ ಬಿಗ್​ಬಾಸ್​ ಅಂಕಿತಾ

View post on Instagram

ಇದಕ್ಕೆ ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದ ತುಕಾಲಿ ಸಂತೋಷ್​, ಬಿಗ್​ಬಾಸ್​ನ ಎಲ್ಲ ಸ್ಪರ್ಧಿಗಳ ಬಗ್ಗೆಯೂ ತಮ್ಮದೇ ಕನ್ನಡ ಮಿಕ್ಸ್​ ಇಂಗ್ಲಿಷ್​ನಲ್ಲಿ ಮಾತನಾಡಿದರು. ಈ ಮಾತನ್ನು ಕೇಳಿದರೆ ಬಹುಶಃ ಎಲ್ಲರೂ ಬಿದ್ದೂ ಬಿದ್ದೂ ನಗುವುದು ಗ್ಯಾರೆಂಟಿ. ವಿನಯ್​, ಸಂಗೀತಾ ಸೇರಿದಂತೆ ಕೆಲವರ ಗುಣಗಳನ್ನು ಕಂಗ್ಲಿಷ್​ ಭಾಷೆಯಲ್ಲಿ ಹಾಸ್ಯಭರಿತವಾಗಿ ಹೇಳಿದ್ದನ್ನು ಕೇಳಿದರೆ ಎಂಥ ನೋವಿನಲ್ಲೂ ನಕ್ಕು ನಗುತ್ತೀರಿ, ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿದೆ. ಅಂದ ಹಾಗೆ ತುಕಾಲಿ ಅವರಲ್ಲಿ ನಗಿಸುವ ವ್ಯಕ್ತಿತ್ವ ಅಷ್ಟೆ ಅಲ್ಲ, ಬಿಗ್​ಬಾಸ್​ ಮನೆಯಲ್ಲಿ ಅವರೊಳಗೊಬ್ಬ ತಂತ್ರಗಾರನೂ ಇದ್ದ. ಗಾಸಿಪ್ ಮಾಡುತ್ತೇನೆ ಎಂದು ಹೇಳಿಕೊಂಡೇ ಅವರು ಆಡಿದ ಗಾಳಿಸುದ್ದಿಗಳು ಮನೆಯೊಳಗೆ ಬೆಂಕಿ ಹಚ್ಚಿದ್ದೂ ಇದೆ. ಏನೇ ಆದರೂ ಅವರ ತಮಾಷೆಯಿಂದ ಬಿಗ್​ಬಾಸ್​ನಲ್ಲಿ ಶಾಂತ ವಾತಾವರಣ ಬಂದಿದ್ದಂತೂ ದಿಟ.

ಇದೇ ವೇಳೆ, ವರ್ತೂರು ಸಂತೋಷ್​ ಅವರಿಗೆ ತುಕಾಲಿ ಅವರ ಬಗ್ಗೆ ಕೇಳಲಾಗಿದೆ. ಆಗ ವರ್ತೂರು ಅವರು, ಬಹುಶಃ ತುಕಾಲಿ ಸಂತೋಷ್​ ಇಲ್ಲದಿದ್ದರೆ ಈ ಸೀಸನ್​ ಇಷ್ಟೊಂದು ಚೆನ್ನಾಗಿ ಮೂಡಿಬರುತ್ತಿಲ್ಲ ಎಂದು ಹೇಳಿದ್ದಾರೆ. ಈ ಸೀಸನ್​ನಲ್ಲಿ ತುಕಾಲಿ ಅವರ ಕೊಡುಗೆ ತುಂಬಾ ಇದೆ ಎಂದು ಅವರು ಹೇಳಿದ್ದಾರೆ. ಅಂದಹಾಗೆ, ಸಂತು-ಪಂತು ಅವರ ಗೆಳೆತನ ಎಷ್ಟರಮಟ್ಟಿಗೆ ಸಕ್ಸಸ್​ ಆಗಿದೆ ಎಂದರೆ ಈ ಇಬ್ಬರ ಗೆಳೆತನವನ್ನು ಇಟ್ಟುಕೊಂಡೇ ‘ಸಂತು-ಪಂತು’ ಹೆಸರಿನ ಸಿನಿಮಾ ಬರುತ್ತಿದೆ. ಈ ಬಗ್ಗೆ ಸ್ವತಃ ತುಕಾಲಿ ಸಂತು ಅವರೇ ವಿಷಯ ತಿಳಿಸಿದ್ದರು.

ವೇದಿಕೆ ಮೇಲೆ ಪ್ರೇಮಲೋಕ ಸೃಷ್ಟಿಸಿ ಕಿಚ್ಚು ಹೊತ್ತಿಸಿದ ಕ್ರೇಜಿಸ್ಟಾರ್​ ರವಿಚಂದ್ರನ್​- ರಚಿತಾ ರಾಮ್​