Asianet Suvarna News Asianet Suvarna News

'ಗಂಡನನ್ನು ಮರೆತುಬಿಡು' ಚಂದ್ರಕಾಂತ್‌ ಪತ್ನಿಗೆ ಕರೆ ಮಾಡಿ ಹೇಳಿದ್ದ ನಟಿ ಪವಿತ್ರಾ ಜಯರಾಂ!

ತ್ರಿನಯನಿ ಧಾರಾವಾಹಿ ನಟಿ ಮಂಡ್ಯದ ಪವಿತ್ರಾ ಜಯರಾಂ ನನಗೆ ಕರೆ ಮಾಡಿ ನಿನ್ನ ಗಂಡ ಚಂದ್ರಕಾಂತ್‌ನನ್ನು ಮರೆತು ಬಿಡು ಎಂದು ಬೆದರಿಕೆ ಹಾಕಿದ್ದರು ಎಂದು ಚಂದ್ರಕಾಂತ್ ಪತ್ನಿ ಶಿಲ್ಪಾ ಹೇಳಿಕೊಂಡು ಭಾವುಕರಾಗಿದ್ದಾರೆ. 

Trinayani serial Actress Pavitra Jayaram Called me and says you forget Chandrakanth sat
Author
First Published May 18, 2024, 4:19 PM IST

ಹೈದರಾಬಾದ್ (ಮೇ 18): ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಅವರು ನನಗೆ ಕರೆ ಮಾಡಿ ನಿನ್ನ ಗಂಡ ಚಂದ್ರಕಾಂತನನ್ನು ಮರೆತುಬಿಡು ಎಂದು ಬೆದರಿಕೆ ಹಾಕಿದ್ದರು ಎಂದು ನಟ ಚಂದ್ರಕಾಂತ ಸಾವಿನ ಬಳಿಕ ಅವರ ಪತ್ನಿ ಶಿಲ್ಪಾ ಅಳಲು ತೋಡಿಕೊಂಡಿದ್ದಾರೆ.

ಕಳೆದ ಐದು ದಿನಗಳ ಹಿಂದೆ ತೆಲುಗು ತ್ರಿನಯನಿ ಧಾರಾವಾಹಿ ನಟಿ ಮಂಡ್ಯದ ಪವಿತ್ರಾ ಜಯರಾಂ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲಿಯೇ ಇಂದು ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಗಂಡ ಚಂದ್ರಕಾಂತನ  ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಲ್ಪಾ ಅವರು, ನಟಿ ಪವಿತ್ರಾ ಜಯರಾಂ ನನಗೆ ಕರೆ ಮಾಡಿ ನಿನ್ನ ಗಂಡ ಚಂದ್ರಕಾಂತ್‌ನನ್ನು ಮರೆತು ಬಿಡಿ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಹೇಳುವ ಮೂಲಕ ಪವಿತ್ರಾ ಮತ್ತು ಚಂದ್ರಕಾಂತ ನಡುವಿನ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ.

ನಾನು ಮತ್ತು ಚಂದ್ರಕಾಂತ್ ಅವರು ಪ್ರೀತಿಸಿ ಮದುವೆ ಆಗಿದ್ದೆವು. ಆದರೆ, ನಮ್ಮ ಪ್ರೀತಿಗೆ ಮೊದಲು ಒಪ್ಪದ ಹಿರಿಯರನ್ನು ಚಂದ್ರಕಾಂತ ಅವರೇ ಒಪ್ಪಿಸಿ 2015ರಲ್ಲಿ ಮದುವೆಯಾಗಿದ್ದರು. ಮದುವೆಯಾದ ನಂತರ ತುಂಬಾ ಪ್ರೀತಿಯಿಂದ ಸಂಸಾರ ಸಾಗುತ್ತಿದ್ದು, ನಮಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ, ತ್ರಿನಯನಿ ಧಾರಾವಾಹಿಯಲ್ಲಿ ನನ್ನ ಗಂಡನಿಗೆ ಚಾನ್ಸ್ ಸಿಕ್ಕಿದ್ದೇ ತಡ, ನನ್ನ ಕುಟುಂಬದ ಶಾಂತಿ, ನೆಮ್ಮದಿ, ಸುಖ-ಸಂತೋಷ ಎಲ್ಲವೂ ಹಾಳಾಗುತ್ತಾ ಹೋಯಿತು. ಈ ಧಾರಾವಾಹಿಯ ಖಳನಾಯಕಿ ಪವಿತ್ರಾ ಜಯರಾಂ ನಮ್ಮ ಸಂಸಾರಕ್ಕೆ ನಿಜವಾಗಿಯೂ ಖಳನಾಯಕಿಯಾದಳು. ಸ್ವತಃ ಪವಿತ್ರಾ ಜಯರಾಂ ನನಗೆ ಕರೆ ಮಾಡಿ ಪತಿ ಚಂದ್ರಕಾಂತನನ್ನು ಮರೆತು ಬಿಡು ಎಂದು ಬೆದರಿಕೆ ಹಾಕುತ್ತಿದ್ದರು ಎಂಬುದನ್ನು ಚಂದ್ರಕಾಂತ್ ಪತ್ನಿ ಶಿಲ್ಪಾ ಬಹಿರಂಗಪಡಿಸಿದ್ದಾರೆ.

ಪವಿತ್ರಾ ಜಯರಾಂ ಸಂಬಂಧಿ ಮಂಡ್ಯದ ಲೋಕೇಶ್‌ ಚಂದು ಲವ್, ಆತ್ಮಹತ್ಯೆ ಬಗ್ಗೆ ಹೇಳಿದ್ದೇನು?

ಪವಿತ್ರಾ ಜಯರಾಂ ಅವರ ಸಂಪರ್ಕ ಹೊಂದಿದ್ದ ನನ್ನ ಪತಿ ಚಂದ್ರಕಾಂತ್, ಧಾರಾವಾಹಿ ಶೂಟಿಂಗ್ ಮುಗಿಸಿಕೊಂಡು ಬರುವಾಗ ಪ್ರತಿದಿನ ಕುಡಿದು ಬಂದು ನನಗೆ ಚಿತ್ರಹಿಂಸೆ ಕೊಡಲು ಆರಂಭಿಸಿದರು. ನಂತರ, ಪ್ರೀತಿಸಿ ಮದುವೆಯಾದ ನನ್ನನ್ನು, ಮಕ್ಕಳನ್ನು ಹಾಗೂ ಇಡೀ ಕುಟುಂಬದ ಬಗ್ಗೆ ಕಾಳಜಿ ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಇನ್ನು ಅವರಿಬ್ಬರ ಸಂಬಂಧದಿಂದ ನಮ್ಮ ಸಂಸಾರ ಹಾಳಾಗುತ್ತಿರುವುದನ್ನು ನನಗೆ ಸಹಿಸಲಾಗದೇ, ಒಮ್ಮೆ ನಾನು ಪವಿತ್ರಾ ಅವರ ಮಗನನ್ನು ಭೇಟಿಯಾದೆ. ಆದರೆ, ಅವರ ಮಗ ಕೂಡ ಅವರವರ ಜೀವನ ಅವರ ಇಷ್ಟಕ್ಕೆ ಬಿಟ್ಟದ್ದಾಗಿದೆ. ನನಗೂ ಅವರಿಬ್ಬರ ಸಂಬಂಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿ ಕಳುಹಿಸಿದ್ದರು ಎಂಬುದನ್ನು ಶಿಲ್ಪಾ ಹೇಳಿಕೊಂಡಿದ್ದಾರೆ.

ಪವಿತ್ರಾ ಅವರ ಸಂಬಂಧದಲ್ಲಿ ಸಿಲುಕಿದ ನಂತರ ನನ್ನ ಪತಿ ಚಂದ್ರಕಾಂತ್ ಮನೆಯಲ್ಲಿದ್ದರೂ ಕಟುಂಬಕ್ಕೆಂದು ಸಮಯ ಕೊಡುತ್ತಿರಲಿಲ್ಲ. ಪವಿತ್ರಾ ಮೇಲೆಯೇ ಫೋಕಸ್ ಮಾಡುತ್ತಾ ಅವರೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು. ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀಯಾ' ಎಂದೆಲ್ಲಾ ಕೇಳುತ್ತಿದ್ದರು. ಮುಂದುವರೆದು ಅವರಿಬ್ಬರು ಕೆಟ್ಟದಾಗಿ ಮಾತನಾಡಿಕೊಳ್ಳುವುದನ್ನು ನನಗೆ ಕೇಳಿಸಿಕೊಳ್ಳಲೂ ಆಗುತ್ತಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ನನಗೆ ಹೊಡೆದು ಹಿಡಿಶಾಪ ಹಾಕುತ್ತಿದ್ದನು ಎಂದು ಚಂದ್ರಕಾಂತ ನೀಡುತ್ತಿದ್ದ ಕಿರುಕುಳದ ಬಗ್ಗೆ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಪವಿತ್ರಾ ಜಯರಾಂ ಜೊತೆಗಿದ್ದ ಚಂದು ನಿಧನ; ಮೊದಲೇ ಸೂಚನೆ ಕೊಟ್ಟು ಪೋಸ್ಟ್‌ ಹಾಕಿದ್ದ ನಟ?

ಇನ್ನು ಪವಿತ್ರಾ ಜಯರಾಂ ಅವರಿಗೆ ಅಪಘಾತವಾದ ಸುದ್ದಿಯ ಬೆನ್ನಲ್ಲಿಯೇ ಚಂದ್ರಕಾಂತ್ ಕೂಡ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದರು. ಚಂದ್ರಕಾಂತ್ ಚಿಕಿತ್ಸೆ ಪಡೆಯುವ ವೇಳೆ ನಮ್ಮೆದುರಿಗೆ ಪವಿತ್ರಾಳ ಬಗ್ಗೆ ಮಾತನಾಡುತ್ತಾ ಅಳಲು ತೋಡಿಕೊಂಡಿದ್ದರು. ಇನ್ನು ಪವಿತ್ರಾ ಸಾವಿನ ನಂತರವಾದರೂ ಜೀವನವನ್ನು ಅರ್ಥ ಮಾಡಿಕೊಂಡು ನಮ್ಮೊಂದಿಗೆ ಸುಖ ಜೀವನ ಕಳೆಯುತ್ತಾರೆ ಎಂದುಕೊಂಡಿದ್ದೆವು. ಆದರೆ, ಈಗ ಅವರು ಆತ್ಮಹತ್ಯೆಗೆ ಶರಣಾಗಿದ್ದು ನಮಗೆ ಜೀವನದ ಮೇಲಿನ ನಂಬಿಕೆಯೇ ಹೊರಟು ಹೋಗಿದೆ. ಪವಿತ್ರಾ ನಮ್ಮ ಜೀವನದಲ್ಲಿ ಬಂದಾಗಿನಿಂದ ಚಂದ್ರಕಾಂತ್ ತಮ್ಮ ಸಂಸಾರ, ಕುಟುಂಬ ಮತ್ತು ಜೀವನವ್ನೇ ಹಾಳು ಮಾಡಿಕೊಂಡರು ಎಂದು ಮೃತ ಚಂದ್ರಕಾಂತ್ ಪತ್ನಿ ಶಿಲ್ಪಾ ಕಣ್ಣೀರಿಟ್ಟಿದ್ದಾರೆ.

Latest Videos
Follow Us:
Download App:
  • android
  • ios