Asianet Suvarna News Asianet Suvarna News

ಕಿರುತೆರೆಯಲ್ಲಿ ಅತೀ ಹೆಚ್ಚು ಎಪಿಸೋಡ್ ಕಂಡ ಧಾರಾವಾಹಿಗಳಿವು

ಸಂಜೆಯಾದರೆ ಸಾಕು ಧಾರಾವಾಹಿಗಳ ಅಬ್ಬರ ಶುರುವಾಗುತ್ತದೆ. ಹೊಸ ಹೊಸ ಧಾರಾವಾಹಿಗಳು ಬರುತ್ತಲೇ ಇರುತ್ತವೆ. ಸೀರಿಯಲ್ ಲೋಕದಲ್ಲಿ ಎಷ್ಟೇ ಸ್ಪರ್ಧೆ ಇದ್ದರೂ ಕೆಲವೊಂದು ಧಾರಾವಾಹಿಗಳು ವರ್ಷಾನುಗಟ್ಟಲೇ ಪ್ರಸಾರವಾಗಿ ದಾಖಲೆಯನ್ನೇ ನಿರ್ಮಾಣ ಮಾಡಿವೆ. 

Top 5 Kannada long term serials in small screen
Author
Bengaluru, First Published Mar 18, 2019, 5:42 PM IST

ಬೆಂಗಳೂರು (ಮಾ. 18): ಸಂಜೆಯಾದರೆ ಸಾಕು ಧಾರಾವಾಹಿಗಳ ಅಬ್ಬರ ಶುರುವಾಗುತ್ತದೆ. ಹೊಸ ಹೊಸ ಧಾರಾವಾಹಿಗಳು ಬರುತ್ತಲೇ ಇರುತ್ತವೆ. ಸೀರಿಯಲ್ ಲೋಕದಲ್ಲಿ ಎಷ್ಟೇ ಸ್ಪರ್ಧೆ ಇದ್ದರೂ ಕೆಲವೊಂದು ಧಾರಾವಾಹಿಗಳು ವರ್ಷಾನುಗಟ್ಟಲೇ ಪ್ರಸಾರವಾಗಿ ದಾಖಲೆಯನ್ನೇ ನಿರ್ಮಾಣ ಮಾಡಿವೆ. 

ಸರ್ಕಾರಿ ಶಾಲೆ ದತ್ತು ಪಡೆದ ಆ್ಯಂಕರ್ ಅಕುಲ್ ಬಾಲಾಜಿ

ಅತೀ ಹೆಚ್ಚು ಪ್ರಸಾರವಾದ ಟಾಪ್ 5 ಧಾರಾವಾಹಿಗಳು ಇಲ್ಲಿವೆ ನೋಡಿ. 

ಪುಟ್ಟಗೌರಿ ಮದುವೆ

ಧಾರಾವಾಹಿ ಇತಿಹಾಸದಲ್ಲೇ ಅತೀ ಹೆಚ್ಚು ಪ್ರಸಾರವಾದ ಧಾರಾವಾಹಿ ಎಂದರೆ ಅದು ಪುಟ್ಟಗೌರಿ ಮದುವೆ. ಬರೋಬ್ಬರಿ 1930 ಕ್ಕೂ ಹೆಚ್ಚು ಸಂಚಿಕೆಗಳನ್ನು ಕಂಡಿವೆ. ಹಿಂದಿಯ ’ಬಾಲಿಕಾ ವಧು’ ಧಾರಾವಾಹಿಯ ರಿಮೇಕ್ ಇದಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗಿದ್ದು ಇದೇ ಧಾರಾವಾಹಿ. 

ತಂದೆಯಿಂದಲೇ ಅಭಿಷೇಕ್‌ ಸಿನಿಮಾಗೆ ಎದುರಾಯ್ತು ಸಂಕಷ್ಟ!

ಅಗ್ನಿಸಾಕ್ಷಿ 

ಮನೆಮಂದಿಯೆಲ್ಲರ ನೆಚ್ಚಿನ ಧಾರಾವಾಹಿ ಇದು. ಕಳೆದ ಐದು ವರ್ಷಗಳಿಂದ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಸನ್ನಿಧಿ, ಸಿದ್ಧಾರ್ಥ್ ಜೋಡಿ ಮೋಡಿಯನ್ನೇ ಮಾಡಿದೆ. ಈಗಾಗಲೇ 1320 ಸಂಚಿಕೆಗಳನ್ನು ಪೂರೈಸಿದೆ. 

ಲಕ್ಷ್ಮೀ ಬಾರಮ್ಮ

ಅತೀ ಹೆಚ್ಚು ಟಿ ಆರ್ ಪಿ ಪಡೆದ ಧಾರಾವಾಹಿಗಳಲ್ಲಿ ಇದು ಕೂಡಾ ಒಂದು. 1850 ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿದೆ. 

ಅಮೃತವರ್ಷಿಣಿ 

ಮನೆಮಂದಿಯೆಲ್ಲಾ ಕುಳಿತು ನೋಡುತ್ತಿದ್ದ ಧಾರಾವಾಹಿ ಇದು. ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ಇದಾಗಿತ್ತು. 1724 ಸಂಚಿಕೆಗಳನ್ನು ಪೂರೈಸಿದೆ. 

ಕುಲವಧು 

ಇದೂ ಕೂಡಾ 1454 ಎಪಿಸೋಡ್ ಗಳನ್ನು ಪೂರೈಸಿದೆ. ಹೆಣ್ಣು ಮಕ್ಕಳ ಸೀರಿಯಲ್ ಸಂತೆ ಶುರುವಾಗುವುದೇ ಈ ಧಾರಾವಾಹಿಯನ್ನು ನೋಡುವುದರಿಂದ. 

ಕಿನ್ನರಿ 

1056 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಈ ಧಾರಾವಾಹಿ. 

Follow Us:
Download App:
  • android
  • ios