ಅಭಿಷೇಕ್ ಅಂಬರೀಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಅಮರ್ ' ಸಿನಿಮಾ ಪ್ರಮೋಶನ್‌ಗೆಂದು ತಯಾರಿ ಮಾಡಿಕೊಳ್ಳುತ್ತಿದ್ದು ಚಿತ್ರದಲ್ಲಿ ಅಂಬರೀಶ್ ಬಳಸಿರುವ ಹಾಡನ್ನು ಬಳಸಿರುವುದಕ್ಕೆ ಕಾಪಿ ರೈಟ್ ಸಮಸ್ಯೆ ಎದುರಾಗಿದೆ.

ಅಂಬರೀಶ್ ಅಭಿನಯದ 100 ದಿನಗಳ ಭರ್ಜರಿ ಯಶಸ್ಸು ಕಂಡಂತಹ ಸಿನಿಮಾ 'ಒಲವಿನ ಉಡುಗೊರೆ'. ಅದರಲ್ಲಿರುವ ಹಾಡೊಂದನ್ನು ಪುತ್ರ ಅಭಿಷೇಕ್ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಇದಕ್ಕೆ ಸಂಗೀತ ಆಡಿಯೋ ಕಂಪನಿ ಕಡಿವಾಣ ಹಾಕಿದೆ.

'ಒಲವಿನ ಉಡುಗೊರೆ' ಹಾಡನ್ನು ಚಿತ್ರಮಂದಿರದಲ್ಲಿ ಮಾತ್ರ ಬಳಸಬೇಕು. ಪ್ರಮೋಷನ್‌ಗೆ, ಯೂಟ್ಯೂಬ್‌ಗೆ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವಂತಿಲ್ಲ ಎಂದು ಹೇಳಿದೆ.

ಜೂ.ರೆಬೆಲ್ ಸ್ಟಾರ್ ಗೆ ಸೀನಿಯರ್ ರೆಬೆಲ್ ಸ್ಟಾರ್ ಶೂಟಿಂಗ್ ಗೆ ಬಂದರೆ ಭಯ!