ಬಿಗ್ ಬಾಸ್ ಮನೆಯಲ್ಲಿ ಸಂಗಾತಿಗಳನ್ನು ಹುಡುಕಿಕೊಂಡ ಈ ಜೋಡಿಗಳು ಮದುವೆ ಆಗಲು ರೆಡಿ ಆಗಿವೆ. ಹಾಗಾದರೆ ಯಾವಾಗ ಮದುವೆ?
ʼಬಿಗ್ ಬಾಸ್ʼ ಮನೆಗೂ ಪ್ರೀತಿಗೂ ಒಂದು ನಂಟಿದೆ. ಹೆಚ್ಚು ಗಮನಸೆಳೆಯಬಹುದು ಎಂದು ಕೆಲವರು ಪ್ರೀತಿ ನಾಟಕವಾಡಿದರೆ, ಇನ್ನೂ ಕೆಲವರಿಗೆ ನಿಜವಾಗಿ ಲವ್ ಆಗುತ್ತದೆ. ಈ ಲವ್ ಎಷ್ಟು ದಿನ ಬಾಳಿಕೆ ಬರುತ್ತದೆ ಅಂತ ಮಾತ್ರ ಹೇಳಲಾಗೋದಿಲ್ಲ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರೀತಿಯನ್ನು ಕಂಡುಕೊಂಡ ಈ ಜೋಡಿಗಳು ಮದುವೆ ಆಗಲು ರೆಡಿ ಆಗಿವೆ!
ದಿವ್ಯಾ ಉರುಡುಗ-ಕೆಪಿ ಅರವಿಂದ್!
‘ಬಿಗ್ ಬಾಸ್ ಕನ್ನಡ ಸೀಸನ್ 8’ ಶೋನಲ್ಲಿ ಭಾಗವಹಿಸಿದ್ದ ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್ ಅವರು ಆದಷ್ಟು ಬೇಗ ಮದುವೆ ಆಗಲಿದ್ದಾರಂತೆ. ತಾವು ಪ್ರೀತಿ ಮಾಡುತ್ತಿರುವ ವಿಷಯವನ್ನು ಈ ಜೋಡಿ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ನಟ ಡಾಲಿ ಧನಂಜಯ ಮದುವೆಗೆ ಆಗಮಿಸಿದ್ದ ಈ ಜೋಡಿ, “ಆದಷ್ಟು ಬೇಗ ಮದುವೆ ಆಗಲಿದ್ದೇವೆ, ಯಾರಿಗೂ ಹೇಳದೆ ಮದುವೆ ಆಗೋದಿಲ್ಲ” ಎಂದು ಹೇಳಿದ್ದರು. ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ಕೂಡ ಅಂತ್ಯ ಆಗಿದೆ. ಸೀಸನ್ 8ರಿಂದ ಸೀಸನ್ 11ರವರೆಗೆ ಈ ಜೋಡಿ ಅದೇ ರೀತಿ ಬಾಂಧವ್ಯ, ಪ್ರೀತಿಯನ್ನು ಉಳಿಸಿಕೊಂಡಿರೋದು ನೋಡೋದು ಒಂದು ಖುಷಿ. ಅಂದಹಾಗೆ ಮೋಟಾರ್‌ಸ್ಪೋರ್ಟ್ಸ್‌ನಲ್ಲಿದ್ದ ಕೆಪಿ ಅರವಿಂದ್ ಅವರು ದಿವ್ಯಾ ಜೊತೆಗೆ ಸಿನಿಮಾ ಕೂಡ ಮಾಡಿದ್ದು, ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ!
ಸ್ಮಶಾನದಲ್ಲಿ ಸುತ್ತಾಡಿದ ಬಿಗ್ಬಾಸ್ ಹಂಸಾ! ಸಮಾಧಿ ನೋಡುತ್ತಲೇ ಭಾವುಕ ಮಾತು- ನಟಿಗೆ ಏನಾಯ್ತು?
ತೇಜಸ್ವಿ ಪ್ರಕಾಶ್-ಕರಣ್ ಕುಂದ್ರಾ
2022ರಲ್ಲಿ ʼಬಿಗ್ ಬಾಸ್ 15ʼ ಶೋ ಪ್ರಸಾರ ಆಗಿತ್ತು. ಆ ವೇಳೆ ನಟಿ ತೇಜಸ್ವಿ ಪ್ರಕಾಶ್, ಕರಣ್ ಕುಂದ್ರಾ ಭಾಗವಹಿಸಿದ್ದರು. ದೊಡ್ಮನೆಯೊಳಗಡೆಯೇ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು. ಶೋ ಮುಗಿದ ಬಳಿಕವೂ ತೇಜಸ್ವಿ, ಕರಣ್ ಅವರು ಒಟ್ಟಿಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ, ಹಾಲಿಡೇ ಕಳೆದಿದ್ದಾರೆ, ಹಬ್ಬಗಳನ್ನು ಕೂಡ ಒಟ್ಟಿಗೆ ಆಚರಿಸಿದ್ದರು. ಸಾಕಷ್ಟು ಬಾರಿ ಬ್ರೇಕಪ್ ಆಗಿದೆ ಎಂಬ ಮಾತು ಬಂದಾಗಲೂ ಕೂಡ ಈ ಜೋಡಿ ಅದನ್ನೆಲ್ಲ ತಳ್ಳಿ ಹಾಕಿತ್ತು. ತೇಜಸ್ವಿ ಅವರು ಒಂದಾದ ಮೇಲೆ ಒಂದರಂತೆ ಧಾರಾವಾಹಿ, ರಿಯಾಲಿಟಿ ಶೋ ಮಾಡ್ತಿದ್ರೆ, ಅತ್ತ ಕರಣ್ ಅವರು ರಿಯಾಲಿಟಿ ಶೋ ಜೊತೆಗೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ವರ್ಷ ಅಥವಾ ಮುಂದಿನ ವರ್ಷ ಇವರಿಬ್ಬರು ಮದುವೆ ಆಗಲಿದ್ದಾರಂತೆ.
ಕೋಣ ಚಿತ್ರದ ಶೂಟಿಂಗ್ ವೇಳೆ ತಲೆ ಸುತ್ತಿ ಬಿದ್ದ ತನಿಷಾ ಕುಪ್ಪಂಡ !
ಜಾಸ್ಮಿನ್ ಭಾಸಿನ್-ಅಲಿ ಗೋನಿ
ಮೊದಲೇ ಸ್ನೇಹಿತರಾಗಿದ್ದರೂ ಕೂಡ ದೊಡ್ಮನೆಯಲ್ಲಿ ಈ ಜೋಡಿ ʼನಮ್ಮ ಮಧ್ಯೆ ಇರೋದು ಬರೀ ಸ್ನೇಹ ಅಲ್ಲ, ಪ್ರೀತಿ” ಎಂದು ಕಂಡುಕೊಂಡಿತ್ತು. ಹೌದು, ನಾವು ಪ್ರೀತಿ ಮಾಡ್ತಿದ್ದೇವೆ ಎಂದು ಜಾಸ್ಮಿನ್ ಭಾಸಿನ್, ಅಲಿ ಗೋನಿ ಅವರು ಪ್ರೀತಿಸುತ್ತಿದ್ದಾರೆ, ಮುಂದಿನ ವರ್ಷ ಮದುವೆ ಆಗುವ ಯೋಜನೆ ಹಾಕಿದ್ದಾರೆ. ಕಳೆದ ಕೆಲ ವರ್ಷಗಳಿಂದ ಈ ಜೋಡಿ ಒಟ್ಟಿಗೆ ಬದುಕುತ್ತಿದೆ. ಈ ವರ್ಷಾಂತ್ಯದಲ್ಲಿ ಮದುವೆ ಆಗುವ ಯೋಜನೆ ಹಾಕಿಕೊಂಡಿದ್ದಾರೆ.
ಕರಣ್ ವೀರ್-ಚುಮ್ ದರಂಗ್
ಕರಣ್ ವೀರ್ ಮೆಹ್ರಾಗೆ ಈಗಾಗಲೇ ಮದುವೆ ಆಗಿ ಡಿವೋರ್ಸ್ ಆಗಿದೆ. ಇತ್ತೀಚೆಗೆ ʼಬಿಗ್ ಬಾಸ್ 18ʼ ರಿಯಾಲಿಟಿ ಶೋನಲ್ಲಿ ಅವರು ಭಾಗವಹಿಸಿದ್ದು, ಆ ವೇಳೆ ಚುಮ್ ದರಂಗ್ ಜೊತೆ ನಡುವೆ ಆಪ್ತತೆ ಬೆಳೆದಿತ್ತು. ದೊಡ್ಮನೆಯೊಳಗಡೆ ಕರಣ್ ಅವರು ಚುಮ್‌ಗೆ ಮನದ ಭಾವನೆ ಹೇಳಿಕೊಂಡಿದ್ದರು. ಅದಕ್ಕೆ ಚುಮ್ ಯೆಸ್ ಅಥವಾ ನೋ ಎಂದು ಹೇಳದೆ, ಕರಣ್ ಅವರ ಪ್ರಯತ್ನವನ್ನು ಶ್ಲಾಘಿಸಿದ್ದರು. ಇತ್ತೀಚೆಗೆ ಹೋಳಿ ಇವೆಂಟ್‌ನಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು, ಸಂಬಂಧವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿರಬಹುದು.
