ಐದು ಭಾಷೆಯಲ್ಲಿ ಸಿದ್ಧವಾಗಿರುವ ‘ಪಾರಿವಾಳ’ ಎಂಬ ಹೊಸ ವಿಡಿಯೋ ಆಲ್ಬಂ ಸದ್ಯ ಕನ್ನಡದಲ್ಲಿ ಬಿಡುಗಡೆಯಾಗಿದೆ. ಭಾನವಿ ಕ್ಯಾಪ್ಚರ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಲಭ್ಯವಿದೆ.
ರಾಮ್ ಕಿರಣ್ ತಾವೇ ನೃತ್ಯ ಸಂಯೋಜಿಸಿ, ನಿರ್ದೇಸಿ ಜತೆಗೆ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೇ ‘ಪಬ್ಲಿಕ್ ಟಾಯ್ಲೆಟ್’ ಕಿರುಚಿತ್ರ ನಿರ್ಮಿಸಿದ ಭಾನವಿ ಕ್ಯಾಪ್ಚರ್ ನಿರ್ಮಾಣದ ವಿಡಿಯೋ ಆಲ್ಬಂ ಇದು. ಸಿಂಗಲ್ ಟೇಕ್‌ನಲ್ಲಿ ರೂಪಿಸಿರುವ ವಿಡಿಯೋ ಆಲ್ಬಂ. ಇದನ್ನು ಬಿಡುಗಡೆ ಮಾಡಿದ್ದು ಖ್ಯಾತ ನೃತ್ಯ ಸಂಯೋಜಕ ಚಿನ್ನಿಪ್ರಕಾಶ್ ಅವರು. ರಾಮ್‌ಕಿರಣ್ ಅವರು ಚಿನ್ನಿಪ್ರಕಾಶ್ ಶಿಷ್ಯ. ಹಾಗಾಗಿ ಶಿಷ್ಯನ ಮೊದಲ ಪ್ರಯತ್ನ ಬೆಂಬಲಿಸಲು ಚಿನ್ನಿಪ್ರಕಾಶ್ ಆಗಮಿಸಿದ್ದರು.
ಕೃಷ್ಣ ಹೆಸರಲ್ಲಿ ನೂರು ಸಿನಿಮಾ ಬಂದ್ರೂ ಮಾಡ್ತೀನಿ: ಅಜಯ್ ರಾವ್
ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಒಂದೇ ರಾತ್ರಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ‘ಹಾಡು ತುಂಬಾ ಚೆನ್ನಾಗಿದೆ. ನಾನೇ ನೃತ್ಯ ಸಂಯೋಜನೆ ಮಾಡುವಷ್ಟುಚೆನ್ನಾಗಿ ರೂಪಿಸಿದ್ದಾರೆ. ನಾನಾಗಿದ್ರೆ ಈ ಹಾಡನ್ನು ನಾಲ್ಕೈದು ದಿನ ಮಾಡುತ್ತಿದ್ದೆ. ಆದರೆ ಈತನ ಆಲೋಚನೆ ಕಂಡು ಆಶ್ಚರ್ಯವಾಯ್ತು. ರಾಮ್‌ಕಿರಣ್ ನನ್ನ ಶಿಷ್ಯ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ’ ಎಂದರು ಚಿನ್ನಿಪ್ರಕಾಶ್.
ಇದು ನನ್ನ ಮತ್ತೊಂದು ಅಧ್ಯಾಯ: ಆದಿತ್ಯ
ಅಭಿಷೇಕ್ ಜಿ.ಕಾಸರಗೋಡು ವಿಡಿಯೋ ಆಲ್ಬಂ ಅನ್ನು ಸೆರೆಹಿಡಿದಿದ್ದು, ಅಗಸ್ತ್ಯ ಸಂತೋಪ್ ಸಾಹಿತ್ಯ ರಚಿಸಿ, ರಾಗ ಸಂಯೋಜನೆ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ‘ಪಾರಿವಾಳ’ ಮೂಡಿ ಬರುತ್ತಿದೆ. ‘ಸದ್ಯ ಕನ್ನಡದಲ್ಲಿ ಮಾತ್ರ ಹೊರಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯಲ್ಲಿ ಈ ವಿಡಿಯೋ ಹಾಡನ್ನು ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಎಲ್ಲ ಭಾಷೆಯಲ್ಲೂ ಗಾಯಕ ಶಶಾಂಕ್ ಶೇಷಗಿರಿ ಅವರೇ ಹಾಡಿದ್ದಾರೆ’ ಎಂದರು ರಾಮ್‌ಕಿರಣ್. ನಾಯಕ ರಾಮ್‌ಕಿರಣ್ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶರ್ಮಾ ನಟಿಸಿದ್ದಾರೆ. ಅರುಣ್ ಬಸವರಾಜ್ ಅವರ ಜತೆಗೆ ರೋಹಿತ್ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
