ಬಿಗ್​ಬಾಸ್​ ಮನೆಯಲ್ಲಿ ಇಲ್ಲಿಯವರೆಗೆ ನಡೆದ ಸ್ಪರ್ಧಿಗಳ ಜಗಳದ ವಿಡಿಯೋಗಳನ್ನು ಶೇರ್​ ಮಾಡಲಾಗಿದೆ. ಬಿಗ್​ಬಾಸ್​ ಫ್ಯಾನ್ಸ್​ ಇದಕ್ಕೆ ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ. 

ಬಿಗ್​ಬಾಸ್​ ಭಾಷೆ ಯಾವುದೇ ಇರಲಿ... ಅಲ್ಲಿ ನಡೆಯುವುದೆಲ್ಲವೂ ಹೈಡ್ರಾಮಾಗಳೇ ಎನ್ನುವುದು ಬಹುತೇಕರ ಅಭಿಪ್ರಾಯ. ಇಲ್ಲಿ ಏನೇ ನಡೆದರೂ, ಯಾವುದೇ ಕೃತ್ಯ ಜರುಗಿದರೂ ಅದು ಎಲ್ಲವೂ ಅಚಾನಕ್​ ಆಗಿ ನಡೆಯುವಂಥದ್ದು ಎಂದು ಬಿಗ್​ಬಾಸ್​ ಪ್ರಿಯರೆಲ್ಲಾ ಕಣ್​ಕಣ್​ ಬಿಟ್ಟು ನೋಡುತ್ತಿದ್ದರೂ, ಅದರಲ್ಲಿ ನಡೆಯುವ ಘಟನೆಗಳೆಲ್ಲವೂ ಸ್ಕ್ರಿಪ್ಟೆಡ್​ ಅಂದರೆ ಹೇಳಿ ಮಾಡಿಸಿರುವುದು ಎಂಬುದಾಗಿ ಬಿಗ್​ಬಾಸ್​​ ಮನೆಯಿಂದ ಈ ಹಿಂದೆ ಹೊರಬಂದಿರುವ ಹಲವು ಸ್ಪರ್ಧಿಗಳು ಹೇಳಿದ್ದುಂಟು. ಅಳುವುದು, ಕಿರುಚಾಡುವುದು, ಹೊರಗಡೆ ಇದ್ದಾಗ ಕುಟುಂಬದವರ ಬಳಿ ಸುಳಿಯದೇ ಇದ್ದವರು ಬಿಗ್​ಬಾಸ್​ ಮನೆಯೊಳಕ್ಕೆ ಹೋಗುತ್ತಿದ್ದಂತೆಯೇ ಅವರು ನೆನಪಾಗುತ್ತಾರೆ, ಇವರು ನೆನಪಾಗುತ್ತಾರೆ ಎಂದು ತಾವೂ ಅಳುವುದು ಅಲ್ಲದೇ, ಪ್ರೇಕ್ಷಕರನ್ನೂ ಅಳಿಸುವುದು, ಅದಕ್ಕೆ ಬಿಗ್​ಬಾಸ್​ ನಡೆಸಿಕೊಡುವವರೂ ಸೇರಿದಂತೆ ಮತ್ತೊಂದಿಷ್ಟು ಮಂದಿ ಸಮಾಧಾನ ಮಾಡಿದಂತೆ ಮಾಡುವುದು... ಹೀಗೆ ಎಲ್ಲವೂ ಇಲ್ಲಿ ಮೊದಲೇ ನಿಗದಿಯಾಗಿರುತ್ತದೆ, ಮನೆಯೊಳಕ್ಕೆ ಇದ್ದವರು ಕೈಗೊಂಬೆಗಳಷ್ಟೇ ಎಂದು ಬೇರೆ ಬೇರೆ ಭಾಷೆಗಳ ಸ್ಪರ್ಧಿಗಳೂ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇನೇ ಇದ್ದರೂ ಬಿಗ್​ಬಾಸ್​ ನೋಡುವ ದೊಡ್ಡ ವರ್ಗವೇ ಇದೆ. ಅದೇ ಕಾರಣಕ್ಕೆ ಟಿಆರ್​ಪಿಯಲ್ಲಿಯೂ ಈ ಷೋ ನಂಬರ್​ 1 ಸ್ಥಾನ ಗಳಿಸುತ್ತದೆ. ಸೋಷಿಯಲ್​ ಮೀಡಿಯಾಗಳಲ್ಲಿ ಬಿಗ್​ಬಾಸ್​ ಸ್ಪರ್ಧಿಗಳ ಬಗ್ಗೆ ಟೀಕೆ ಮಾಡುವವರು ಅದೆಷ್ಟೋ ಮಂದಿ, ಮೀಮ್ಸ್​ಗಳಿಗಂತೂ ಕೊರತೆ ಇಲ್ಲ. ಹೀಗೆ ಶಪಿಸುತ್ತಲೇ, ಇದೊಂದು ಕೆಟ್ಟ ಆಟ, ಹುಚ್ಚರ ಸಂತೆ ಅಂತೆಲ್ಲಾ ಹೇಳುತ್ತಲೇ ದಿನವೂ ಮಿಸ್​ ಮಾಡದೇ ನೋಡುವ ವರ್ಗವೂ ಬಹಳ ದೊಡ್ಡದೇ ಇದೆ. ಆದರೆ ಇದರಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್​ ಎನ್ನುವುದು ಮಾತ್ರ ಅರಿತವರು ಕೆಲವೇ ಮಂದಿ. ಇದರಲ್ಲಿ ನಡೆಯುವ ಕಾದಾಟ, ಹೊಡೆದಾಟ ನೋಡುವುದಕ್ಕಾಗಿಯೇ ಹಲವರು ಉತ್ಸುಕರಾಗುವುದು ಉಂಟು. ಇದೇ ಕಾರಣಕ್ಕೆ, ಇಲ್ಲಿ ಇದನ್ನು ಯಥೇಚ್ಛವಾಗಿ ತೋರಿಸಲಾಗುತ್ತದೆ.

ಬಿಗ್​ಬಾಸ್​ ಮಜಾ ಮಾಡ್ತಾವ್ರೆ ಬಾಸು.... 'ಸಮ್​ಥಿಂಗ್​ ಸ್ಪೆಷಲ್'​ ಎನ್ನುತ್ತಲೇ ಹೊಸ ಪ್ರೊಮೋ ಬಿಡುಗಡೆ!

ಈಗ ಎಲ್ಲಾ, ಹೊಡೆದಾಟ- ಬಡಿದಾಟಗಳು ಒಂದೇ ಕಡೆ ನೋಡುವ ಭಾಗ್ಯವನ್ನು ಬಿಗ್​ಬಾಸ್​ನ ಹೊಡೆದಾಟ ಪ್ರೇಮಿಗಳಿಗೆ ಕಲರ್ಸ್​ ಕನ್ನಡ ವಾಹಿನಿ ನೀಡಿದೆ! ಹೌದು. ಇಲ್ಲಿಯವರೆಗೆ ನಡೆದಿರುವ ಬಿಗ್​ಬಾಸ್​ ಸ್ಪರ್ಧಿಗಳ ಕಾದಾಟದ ದೃಶ್ಯಗಳನ್ನು ಒಂದೇ ವಿಡಿಯೋದಲ್ಲಿ ತೋರಿಸಿ ಅದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದೆ. ಇದನ್ನು ನೋಡಿದ ಬಿಗ್​ಬಾಸ್​ ಪ್ರೇಮಿಗಳು ಆಹಾ! ನೋಡಲು ಎರಡು ಕಣ್ಣು ಸಾಲ್ತಿಲ್ಲ ಎಂದಿದ್ದಾರೆ. ಇದರಲ್ಲಿ ಅಸಲಿಗೆ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಅದನ್ನು ಬಿಡಿಸಲು ಹೋದವರ ಬಗ್ಗೆ ತೋರಿಸಲಾಗಿದೆ. ಇದೇ ಕಾರಣಕ್ಕೆ, ಇದಕ್ಕೆ ಜಗಳದ ಬೆಂಕಿಯನ್ನು ನಂದಿಸುವವರೇ ನಮ್ಮ ಹೀರೋಗಳು ಎಂದು ಶೀರ್ಷಿಕೆ ನೀಡಲಾಗಿದೆ. 

ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಆದರೆ ಹಲವರು ಇಲ್ಲಿಯೂ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಪ್ರಮೋಟ್​ ಮಾಡುತ್ತಿದ್ದಾರೆ. ಅವರನ್ನು ಉಳಿಸಿ, ಇವರನ್ನು ಉಳಿಸಿ ಎಂದು ಹೇಳುತ್ತಿದ್ದಾರೆ. ಓನ್ಲಿ ಪ್ರತಾಪ್​, ಓನ್ಲಿ ಕಾರ್ತಿಕ್​, ಓನ್ಲಿ ಸಂಗೀತಾ... ಹೀಗೆ ನಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಬ್ಯಾಟಿಂಗ್​ ಬೀಸುತ್ತಿದ್ದಾರೆ. ಕೊನೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಸದ್ಯ ಈಗಿರುವ ಕುತೂಹಲ. ಇದಾಗಲೇ ವೈಲ್ಡ್​ ಕಾರ್ಡ್​ ಎಂಟ್ರಿ ಕೂಡ ನಡೆದಿದ್ದು, ಬಿಗ್​ಬಾಸ್​ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. 

ನಾಮಿನೇಟ್​ ಆದವರ ಪೈಕಿ ಇಬ್ಬರನ್ನು ಸೇವ್​ ಮಾಡಲಿದ್ದಾರೆ ವೈಲ್ಡ್​ಕಾರ್ಡ್​ ಸ್ಪರ್ಧಿ: ಬಚಾವಾಗುವವರು ಯಾರು?

View post on Instagram