ಚಾಂದನಿ ಜೊತೆ ಸೀತಾ ಚೈಯಾ ಚೈಯಾ... ಅವ್ಳು ಒಳ್ಳೆಯವಳಲ್ಲ ಕಣೇ ಹುಷಾರ್ ಎಂದ ಫ್ಯಾನ್ಸ್...
ಸೀತಾರಾಮ ಸೀರಿಯಲ್ನ ಮೂವರು ಮಹಿಳಾಮಣಿಗಳು ಸೇರಿ ರೀಲ್ಸ್ ಮಾಡಿದ್ದಾರೆ. ಸೀತಾ ಮತ್ತು ಚಾಂದನಿಯನ್ನು ಒಟ್ಟಿಗೇ ನೋಡಿ ಫ್ಯಾನ್ಸ್ ಏನಂದ್ರು?
ಸೀತಾ ರಾಮ ಸೀರಿಯಲ್ ಇದೀಗ ಕುತೂಹಲದ ಘಟ್ಟ ತಲುಪಿದೆ. ಇತ್ತ ಸೀತಾ- ರಾಮ ಒಂದಾಗುವ ಕಾಲ ಬಂದಿದೆ. ಇವರಿಬ್ಬರನ್ನೂ ಒಂದು ಮಾಡಲು ಅಶೋಕ ಹರಸಾಹಸ ಮಾಡುತ್ತಿದ್ದಾರೆ. ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಾಳೆ. ಇದೇ ಅವಮಾನದಲ್ಲಿ ರಾಮ್ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿದೆ. ಅಷ್ಟಕ್ಕೂ ಈ ಆ್ಯಕ್ಸಿಡೆಂಟ್ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಾಳೆ. ಜೈಲು ಸೇರಿದ್ದ ರುದ್ರಪ್ರತಾಪ್ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್ ಕೈಯಲ್ಲಿ ಅಪಘಾತ ಮಾಡಿಸಿದ್ದಾಳೆ. ಭೀಕರ ಅಪಘಾತದಲ್ಲಿ ರಾಮ್ ಆಸ್ಪತ್ರೆಗೆ ಸೇರಿದ್ದಾನೆ. ಸೀತಾ ರಕ್ತ ಕೊಟ್ಟು ಪ್ರಾಣ ಕಾಪಾಡಿದ್ದಾಳೆ.
ರಾಮ್ ಸೀತಾಳನ್ನು ಪ್ರೀತಿ ಮಾಡುವ ವಿಷ್ಯ ರಾಮ್ ತಾತನಿಗೆ ತಿಳಿದಿದೆ. ಆದರೆ ಸೀತಾ ಒಂದು ಮಗುವಿನ ತಾಯಿ ಎನ್ನುವ ಸತ್ಯ ಗೊತ್ತಿಲ್ಲ. ರಾಮ್ನನ್ನೇ ಸೀತಾಳಿಗೆ ಕೊಟ್ಟು ಮದುವೆ ಮಾಡಿಸುವ ಯೋಚನೆ ಮಾಡುತ್ತಿದ್ದಾನೆ. ರಾಮ್ಗೆ ಅಪಘಾತ ಸಂಭವಿಸುವ ಪೂರ್ವದಲ್ಲಿ ಆತ ಸೀತಾಳ ಜೊತೆ ಮಾತನಾಡಿದ್ದು ಎನ್ನುವ ಸತ್ಯ ತಾತಾ ಸೂರಿಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ಆತ ಸೀತಾಳನ್ನು ಕರೆದು ರಾಮ್ ಅಂದ್ರೆ ನಿನಗೆ ಏನು ಅನಿಸುತ್ತೆ ಎಂದು ಕೇಳಿದ್ದಾನೆ. ಸೀತಾ ಸ್ವಲ್ಪ ಶಾಕ್ ಆದ್ರೂ ಅವ್ರು ತುಂಬಾ ಒಳ್ಳೆಯವರು ಎಂದಿದ್ದಾಳೆ. ನಂತರ ರಾಮ್ ನಿನ್ನ ಹತ್ರನೇ ಕೊನೆಯದಾಗಿ ಮಾತನಾಡಿದ್ದ. ಆ ಬಳಿಕ ಅಪಘಾತವಾಗಿದೆ. ಹಾಗಿದ್ರೆ ಆತ ಏನು ಮಾತನಾಡಿದ ಎಂದು ಕೇಳಿದ್ದಾನೆ. ಇದನ್ನು ಕೇಳಿ ಸೀತಾ ಅರೆಕ್ಷಣ ವಿಚಲಿತಳಾಗಿದ್ದಾಳೆ.
ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ ಮದುಮಕ್ಕಳು: ತೆರೆ ಮೆರೆ ಪ್ಯಾರ್ಕೆ ಹಾಡಿಗೆ ಭರ್ಜರಿ ಸ್ಟೆಪ್
ಅದೇ ಇನ್ನೊಂದೆಡೆ, ರಾಮ್ ಚಿಕ್ಕಮ್ಮ ಅಶೋಕನ ಬಳಿ ಬಂದು ರಾಮ್ ಇಷ್ಟು ಬೇಗ ಚೇತರಿಸಿಕೊಳ್ಳುತ್ತಾನೆ ಎಂದು ತಿಳಿದಿರಲಿಲ್ಲ. ಇದಕ್ಕೆ ಆತನ ಮಾಜಿ ಪ್ರೇಯಸಿ ಚಾಂದನಿ ಕಾರಣ ಎಂದಿದ್ದಾಳೆ. ಆದರೆ ರಾಮ್ಗೆ ಚಿಕ್ಕಮ್ಮ ಹಾಗೂ ಚಾಂದನಿಯ ಕುತಂತ್ರ ಗೊತ್ತು. ಅದೇ ಕಾರಣಕ್ಕೆ ಆತ, ಚಾಂದನಿ ಅಲ್ಲ, ಸೀತಾ ಮತ್ತು ಸಿಹಿ ಕಾರಣ ಎಂದಿದ್ದಾನೆ. ಇದನ್ನು ಕೇಳಿ ಚಿಕ್ಕಮ್ಮನ ಸಿಟ್ಟು ನೆತ್ತಿಗೇರಿದೆ. ಚಾಂದನಿಯನ್ನು ಮತ್ತೆ ರಾಮ್ನ ಬಾಳಲ್ಲಿ ತರುವಲ್ಲಿ ಚಿಕ್ಕಮ್ಮ ಯಶಸ್ವಿಯಾಗ್ತಾಳಾ? ಮುಂದೇನು ಎನ್ನುವುದು ಈಗಿರುವ ಕುತೂಹಲ.
ಇದರ ನಡುವೆಯೇ ಸೀತಾ-ರಾಮ ಸೀರಿಯಲ್ನ ಸೀತಾ, ಚಾಂದನಿ ಮತ್ತು ಅಶೋಕ್ ಪ್ರೇಯಸಿ ಪ್ರಿಯಾ ಸೇರಿ ಚೈಯ ಚೈಯ ಚೈಯಾ ಚೈಯಾ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಶೂಟಿಂಗ್ನ ಬಿಡುವಿನ ಅವಧಿಯಲ್ಲಿ ಮೂವರೂ ಸೇರಿ ರೀಲ್ಸ್ ಮಾಡಿದ್ದು, ಅದನ್ನು ನೋಡಿ ಥಹರೇವಾರಿ ಕಮೆಂಟ್ಸ್ ಮಾಡಿದ್ದಾರೆ ನೆಟ್ಟಿಗರು. ಚಾಂದನಿಯ ಕಂತ್ರಿ. ಅವಳ ಜೊತೆ ರೀಲ್ಸ್ ಮಾಡಬೇಡಿ, ಅವಳು ಒಳ್ಳೆಯವಲ್ಲ, ಕೆಟ್ಟವಳು ಎಂದೆಲ್ಲಾ ಕಮೆಂಟಿಗರು ಸೀರಿಯಸ್ ಆಗಿ ಹಾಗೂ ಕೆಲವರು ತಮಾಷೆಗಾಗಿ ಹೇಳುತ್ತಿದ್ದಾರೆ.
ಅಂದುಕೊಂಡದ್ದೆಲ್ಲಾ ಆಗಬೇಕೆ? ನೆಗೆಟಿವ್ ಎನರ್ಜಿ ಸುಳಿಯಬಾರದೆ? ನಟಿ ವೈಷ್ಣವಿ ಹೇಳಿದ್ದಾರೆ ಸಿಂಪಲ್ ಟಿಪ್ಸ್...