ವೇದಿಕೆ ಮೇಲೆ ಕಿಚ್ಚು ಹೊತ್ತಿಸಿದ ಮದುಮಕ್ಕಳಾದ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​: ತೆರೆ ಮೆರೆ ಪ್ಯಾರ್​ಕೆ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. 

ಗುಜುರಾತಿನ ಜಾಮ್​ನಗರದಲ್ಲಿ ಅಂಬಾನಿ ಕುಟುಂಬದ ಮದುವೆ ಸಂಭ್ರಮ ಮನೆ ಮಾಡಿದೆ. ಇದಾಗಲೇ ಕೆಲವು ದಿನಗಳಿಂದ ಗಣ್ಯಾತಿಗಣ್ಯರು ಜಾಮ್​ನಗರದಲ್ಲಿ ಜಮಾಯಿಸಿದ್ದಾರೆ. ಮುಕೇಶ್ ಅಂಬಾನಿ-ನೀತಾ ಅಂಬಾನಿ ಮತ್ತು ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ (Pre Wedding) ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳ ದಂಡೇ ಹರಿದುಬಂದಿದೆ. ಬಾಲಿವುಡ್​​ನ ನಟ-ನಟಿಯರು ಇದಾಗಲೇ ವೇದಿಕೆ ಮೇಲೆ ಕಿಚ್ಚು ಹೊತ್ತಿಸುತ್ತಿದ್ದಾರೆ. ವಿಭಿನ್ನ ರೀತಿಯಲ್ಲಿ ಪರ್​ಫಾರ್ಮ್​ ಮಾಡುತ್ತ ಮದುವೆ ಸಂಭ್ರಮವನ್ನು ನೂರ್ಮಡಿಗೊಳಿಸುತ್ತಿದ್ದಾರೆ. ಇದಾಗಲೇ 72 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿರೋ ಗಾಯಕಿ ರಿಹಾನಾ ಭರ್ಜರಿ ಪರ್ಫಾಮೆನ್ಸ್​ ನೀಡಿದ್ದಾರೆ. ಬಾಲಿವುಡ್​​ ತಾರೆಯರು ಕೂಡ ಇಂಥ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ಕೋಟ್ಯಂತರ ರೂಪಾಯಿ ಪಡೆಯುವುದು ಇದ್ದರೂ ಈ ಕಾರ್ಯಕ್ರಮದ ಬಗ್ಗೆ ಇನ್ನೂ ಬಹಿರಂಗಗೊಂಡಿಲ್ಲ.

ಇದೀಗ ಎಲ್ಲರ ಗಮನ ಸೆಳೆದಿರುವುದು ಮದುಮಕ್ಕಳಾದ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಜೋಡಿಯ ಭರ್ಜರಿ ಡ್ಯಾನ್ಸ್​. ತೆರೆಮೆರೆ ಪ್ಯಾರ್​ಕೆ ಚರ್ಚಾ ಎಂಬ ಹಳೆಯ ಹಿಂದಿ ಹಾಡಿಗೆ ಜೋಡಿ ಭರ್ಜರಿ ಸ್ಟೆಪ್​ ಹಾಕಿದ್ದು ಜನರನ್ನು ರಂಜಿಸಿದೆ. ಇದಾಗಲೇ ಲಕ್ಷಾಂತರ ಕೋಟಿ ರೂಪಾಯಿಗಳ ಒಡೆಯರಾಗಿದ್ದರೂ ಸರಳ ನಡೆ-ನುಡಿಯಿಂದ ಎಲ್ಲರ ಮನಸ್ಸನ್ನು ಗೆದ್ದಿದೆ ಈ ಜೋಡಿ. ಅದರಲ್ಲಿಯೂ ಅನಂತ್​ ಅಂಬಾನಿಯವರ ಸರಳತೆಗೆ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

ಅಂಬಾನಿ ಪುತ್ರನ ಮದ್ವೆಯಲ್ಲಿ ಗರ್ಭಿಣಿ ದೀಪಿಕಾ ಭರ್ಜರಿ ಡ್ಯಾನ್ಸ್​: ಹಣದ ದುರಾಸೆ ಯಾಕಮ್ಮಾ ಎಂದ ಫ್ಯಾನ್ಸ್​

ಇದರ ನಡುವೆಯೇ, ಎಷ್ಟೇ ಶ್ರೀಮಂತರಾದರೂ ಎಲ್ಲರ ಬದುಕು ಹೂವಿನಷ್ಟೇ ಸುಲಭ ಆಗಿರುವುದಿಲ್ಲ ಎಂಬ ಬಗ್ಗೆ ಅನಂತ್​ ಅವರು ಮಾತನಾಡಿ ಎಲ್ಲರನ್ನೂ ಭಾವುಕರನ್ನಾಗಿಸಿದ್ದರು. 'ನನ್ನ ಬಾಲ್ಯವು ಹೂವಿನ ಹಾಸಿಗೆಯಾಗಿರಲಿಲ್ಲ. ತಾನು ಮುಳ್ಳುಗಳ ನೋವನ್ನು ಕೂಡಾ ಅನುಭವಿಸಿದ್ದೇನೆ. ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದು, ಈ ಸಂದರ್ಭದಲ್ಲಿ ನನಗೆ ಅಪ್ಪ ಅಮ್ಮ ಸಂಪೂರ್ಣ ಬೆಂಬಲವಾಗಿ ನಿಂತಿದ್ದರು' ಎಂದು ವೇದಿಕೆ ಮೇಲೆ ನೋವು ತೋಡಿಕೊಂಡಿದ್ದರು. ಈ ಮಾತುಗಳನ್ನು ಕೇಳುತ್ತಿದ್ದಂತೆ ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಭಾವನೆಗಳನ್ನು ಹತ್ತಿಕ್ಕಲಾಗದೆ ಕಣ್ಣೀರು ಸುರಿಸಿದ್ದರು.

ಇದೀಗ ಭರ್ಜರಿ ಸ್ಟೆಪ್​ ಹಾಕುವ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಒಟ್ಟಿಗೆ ರಾಮ್ ಚರಣ್ ಜತೆಗೆ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿನ ಹುಕ್ ಸ್ಟೆಪ್‌ಗೆ ಭರ್ಜರಿ ಡಾನ್ಸ್‌ ಮಾಡಿದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಯೂ ಅಂಬಾನಿ ಫ್ಯಾಮಿಲಿಯ ಮದುವೆ ಕಾರ್ಯಕ್ರಮದಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ನಟಿ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ದಂಪತಿಯೂ ವೇದಿಕೆ ಮೇಲೆ ಡಾನ್ಸ್‌ ಮೂಲಕ ಎಲ್ಲರನ್ನು ರಂಜಿಸಿದರು. ಮದುವೆಗೆ ಆಗಮಿಸಿದ ರಾಣಿ ಮುಖರ್ಜಿ ಕೆಂಪು ವರ್ಣದ ಸೀರೆಯಲ್ಲಿ ಕಂಗೊಳಿಸಿದರು.

View post on Instagram