ಈ 'ವಿಶೇಷ' ತಮ್ಮನಿಗಾಗಿ ಬದುಕು ಮೀಸಲಿಟ್ಟಿರೋ ಪಾರು ದಿನನಿತ್ಯದ ಜೀವನ ಹೀಗಿದೆ ನೋಡಿ...

ಪಾರು ಧಾರಾವಾಹಿಯ ನಾಯಕಿ ಮೋಕ್ಷಿತಾ ಪೈ ಅವರ ರಿಯಲ್​ ಲೈಫ್​ ಕೂಡ ತ್ಯಾಗಮಯವೇ. ಅದರ ವಿಡಿಯೋ ಒಂದು ವೈರಲ್​ ಆಗಿದೆ. 
 

The real life of Mokshita Pai the heroine of Paru serial is also sacrificial actress day out suc

ಮನೆಯಲ್ಲೊಂದು ಚಿಕ್ಕ ಮಗುವಿದ್ದರೆ ಅಮ್ಮನಾದವಳ ಇಡೀ ದಿನವೂ ಆ ಮಗುವಿನ ಆರೈಕೆಯಲ್ಲಿಯೇ ಕಳೆದು ಹೋಗುತ್ತದೆ. ಇನ್ನು ದುಡಿಯುವ ಮಹಿಳೆಯಾದರಂತೂ ಇನ್ನೂ ಹೆಚ್ಚಿನ ಜವಾಬ್ದಾರಿ ಹೊತ್ತು ಮಗುವಿನ ಲಾಲನೆ ಪಾಲನೆ ಮಾಡಬೇಕು. ಅದು ಒಂದಷ್ಟು ವರ್ಷಗಳ ಸವಾಲು ಅಮ್ಮನಿಗೆ. ಆದರೆ ಅದೇ ಮನೆಯಲ್ಲಿ   ವಿಶೇಷ ಚೇತನ ಅಂದರೆ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿರುವ ಮಕ್ಕಳು ಇದ್ದರೆ? ಆ ತಾಯಿಯ ನೋವು ಯಾರಿಗೂ ಬೇಡ. ಆ ಮಗುವಿನ ಭವಿಷ್ಯಪೂರ್ತಿ ಈ ಅಮ್ಮನ ಮಡಿಲಿಗೇ ಸೀಮಿತ. ಅದು ಅಮ್ಮನೇ ಆಗಿರಬೇಕೆಂದೇನೂ ಇಲ್ಲ. ಕೆಲವೊಮ್ಮೆ ಮನೆಯಲ್ಲಿರುವ ಇತರರು ಈ ಅಮ್ಮನ ಜವಾಬ್ದಾರಿ ಹೊರುತ್ತಾರೆ. ಆ ಮಗುವಿಗೆ ಜೀವನಪೂರ್ತಿ ಅಮ್ಮನಾಗಿಯೇ ಉಳಿಯುತ್ತಾರೆ.

ಅಂಥದ್ದೇ ಓರ್ವ ಮಾತೃಸ್ವರೂಪಿಣಿ ಮೋಕ್ಷಿತಾ ಪೈ. ಸೀರಿಯಲ್​ ನಟಿ ಮೋಕ್ಷಿತಾ ಪೈ ಎಂದರೆ ಬಹುಶಃ ಹೆಚ್ಚಿನವರಿಗೆ ತಿಳಿಯುವುದೇ ಇಲ್ಲ. ಆದರೆ ಪಾರು ಎಂದರೆ ಸಾಕು, ಎಲ್ಲರ ಚಿತ್ರ ಜೀ ಟಿವಿಯಲ್ಲಿ ಈಚೆಗಷ್ಟೇ ಮುಗಿದಿರೋ  ಪಾರು ಸೀರಿಯಲ್​ನತ್ತ ಹೋಗುತ್ತದೆ.   ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ಪಾರು (Paaru)  ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಅರಸನ ಕೋಟೆಯ ಮನೆ ಕೆಲಸದಾಳುವಾಗಿರುವ ಪಾರು ಅದೇ ಮನೆಗೆ ಸೊಸೆಯಾಗಿ ಬಂದ ನಂತರ ನಡೆದಿರುವ ಘಟನೆಗಳ ಸುತ್ತಲೂ ಈ ಧಾರಾವಾಹಿಯ ಕಥೆ ಹೆಣೆಯಲ್ಪಟ್ಟಿದೆ. ಈ ಧಾರಾವಾಹಿಯಲ್ಲಿ ಪಾರುವಿನದ್ದು ತ್ಯಾಗಮಯ ಪಾತ್ರ. ಅದು ಎಷ್ಟರಮಟ್ಟಿಗೆ ಎಂದರೆ ಮೈದುನನ ಪತ್ನಿಗಾಗಿ ತನ್ನ ಮಗುವನ್ನೇ ತ್ಯಾಗ ಮಾಡಿದ್ದಾಳೆ. ಮೈದುನನ ಪತ್ನಿ ಜನನಿ ತನ್ನ ಮಗುವನ್ನು ಕಳೆದುಕೊಂಡಾಗ ಅದು ಆಕೆಗೆ ಗೊತ್ತಾಗಬಾರದು ಎಂದು ಪಾರು ತನ್ನ ಮಗುವನ್ನೇ  ಆಕೆಗೆ ಕೊಟ್ಟಿದ್ದಾಳೆ. ಇದು ಜನನಿಗೆ ತಿಳಿದಿರಲಿಲ್ಲ. ಕೊನೆಗೂ ಅಂತ್ಯದಲ್ಲಿ ಎಲ್ಲವೂ ತಿಳಿದು ಸೀರಿಯಲ್​ ಸುಖಾಂತ್ಯವಾಗಿದೆ. ಇಂಥ ತ್ಯಾಗಮಯ ಪಾತ್ರ ಮಾಡುತ್ತಿದ್ದಾರೆ ಪಾರು ಅರ್ಥಾತ್​ ಮೋಕ್ಷಿತಾ ಪೈ.

ನಟಿ ಅಮೃತಾ ಆತ್ಮಹತ್ಯೆಗೆ ಭಾರಿ ಟ್ವಿಸ್ಟ್​! ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಸಾವಿನ ರಹಸ್ಯ ಬಯಲು?

ಧಾರಾವಾಹಿಯಲ್ಲಿ ಬಿಡಿ, ಏನು ಬೇಕಾದರೂ ಆಗಬಹುದು ಎನ್ನಬಹುದು. ಆದರೆ ಅಸಲಿ ಜೀವನದಲ್ಲಿಯೂ ಮೋಕ್ಷಿತಾ ಅವರನ್ನು ನೋವಿನ ಕಥೆಯೇ. ತಮ್ಮ ಮುಗ್ಧ ನಗು ಹಾಗೂ ಅಷ್ಟೇ ಮುಗ್ಧ ಪಾತ್ರಗಳಿಂದ ಧಾರಾವಾಹಿಗೆ ಜೀವ ತುಂಬುತ್ತಿರುವ ಈ ನಟಿಯ ಬಾಳಿನಲ್ಲಿ ಮಾತ್ರ ಅತ್ಯಂತ ನೋವು ತುಂಬಿದೆ.  ತೆರೆಯ ಮೇಲೆ ತಮ್ಮ ನಗುವಿನ ಮೂಲಕ ರಂಜಿಸುವ ಪಾರು ಅಲಿಯಾಸ್​ ಮೋಕ್ಷಿತಾ ಪೈ ಅವರ ಜೀವನದಲ್ಲಿಯೂ  ನೋವು ತುಂಬಿದೆ.  ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಆತ ಮಾನಸಿಕ ಅಸ್ವಸ್ಥ. ಆತನ ಆರೈಕೆ ಮಾಡುವ ಜವಾಬ್ದಾರಿ ಮೋಕ್ಷಿತಾ ಅವರ ಮೇಲಿದೆ. ಒಮ್ಮೆ ರಿಯಾಲಿಟಿ ಷೋ (Reality Show) ಒಂದಕ್ಕೆ ತಮ್ಮ ತಮ್ಮನನ್ನು ಕರೆದುಕೊಂಡು ಬಂದಿದ್ದ ಪಾರು ಅವರು, ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ.  ಅವನಿಗೂ ನಾನೆಂದರೆ ತುಂಬಾ ಇಷ್ಟ ಎಂದು ಭಾವುಕರಾಗಿದ್ದರು. ಆಗಾಗ್ಗೆ ತಮ್ಮನ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. 

ಇದೀಗ ಒಂದು ವಿಡಿಯೋ ಮಾಡಿರುವ ನಟಿ, ದಿನಪೂರ್ತಿ ತಾವು ಹೇಗೆ ಕಳೆಯುವುದು ಎಂದು ಹೇಳಿದ್ದಾರೆ. ಅದರಲ್ಲಿ, ಬಹುತೇಕ ಪಾಲು ತಮ್ಮ ತಮ್ಮನಿಗೇ ಮೀಸಲು. ಆತನ ಪ್ರತಿಯೊಂದು ಆಗುಹೋಗುಗಳನ್ನು ಮೋಕ್ಷಿತಾ ಅವರೇ ನೋಡಿಕೊಳ್ಳುತ್ತಾರೆ. ಓರ್ವ ನಟಿಗೆ ಇದು ಸುಲಭದ ಮಾತಲ್ಲ. ದಿನಪೂರ್ತಿ ಶೂಟಿಂಗ್​ ಇರುವ ಸಮಯದಲ್ಲಿ ಇಂಥ ಮಕ್ಕಳಿಗೆ ಗಮನ ಕೊಡುವುದು ಬಹಳ ಕಷ್ಟ ಆದರೂ ಅದನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಮೋಕ್ಷಿತಾ. ಇದನ್ನು ಈ ವಿಡಿಯೋದಲ್ಲಿ ನೋಡಬಹುದು. 

ಭಾಗ್ಯಾಳಿಗೆ ಸಲಹೆ ಕೊಡೋಹಾಗೆ ನಿಜ ಜೀವನದಲ್ಲೂ ಹೀಗೇ ಹೇಳ್ತೀರಾ? ನೆಟ್ಟಿಗರ ವಾದ- ಪ್ರತಿವಾದ

ಈ ಸಹೋದರನಿಗಾಗಿಯೇ ತಮ್ಮ ಕನಸನ್ನೂ ನನಸು ಮಾಡಿಕೊಳ್ಳಲು ಆಗದೇ ನೋವುಂಡವರು ಮೋಕ್ಷಿತಾ. ನಟನಾ ಕ್ಷೇತ್ರಕ್ಕೆ ತಾವು ಕಾಲಿಡುತ್ತೇವೆ ಎಂಬ ಕನಸು ಕಂಡಿರಲಿಲ್ಲ. ಆದರೆ ಅವರ ಇಂಟರೆರಸ್ಟ್​ ಇದ್ದುದು  ಫ್ಯಾಷನ್ ಡಿಸೈನಿಂಗ್ ಮೇಲೆ. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಈ ಕೋರ್ಸ್​ ಅನ್ನು ಸೇರಿದ್ದರು. ಆದರೆ ಅದಾಗಲೇ ಅವರ ಅಮ್ಮ  ಗೋದಾವರಿಯವರು, ಬುದ್ಧಿಮಾಂದ್ಯ ಮಕ್ಕಳ ಬಗೆಗಿನ ಉನ್ನತ ಅಧ್ಯಯನಕ್ಕೆ ತೆರಳಿದ್ದರಿಂದ ಮೋಕ್ಷಿತಾ ತಮ್ಮನ ಆರೈಕೆ ಮಾಡುವುದಕ್ಕಾಗಿ  ಫ್ಯಾಷನ್ ಡಿಸೈನಿಂಗ್ ಕೋರ್ಸ್ (Fashion Desiging Course) ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂದಿತ್ತು. ಅಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋದ ಕಾರಣಕ್ಕೆ, ಹದಿಹರೆಯದಲ್ಲಿಯೇ ತಮ್ಮನ ಸಂಪೂರ್ಣ ಹೊಣೆ ಹೊತ್ತವರು ಮೋಕ್ಷಿತಾ.  ಅಮ್ಮ ವಾಪಸ್​ ಬರುವವರೆಗೂ ಮೋಕ್ಷಿತಾ ಅವರದ್ದೇ ಜವಾಬ್ದಾರಿ. ತಮ್ಮನ ಪಾಲಿನ ಅಪ್ಪ- ಅಮ್ಮ ಇಬ್ಬರೂ ಇವರೇ ಆದರು. ಈ ತಮ್ಮನಿಗೂ ಅಕ್ಕನೇ ಅಮ್ಮ ಆಗಿಬಿಟ್ಟಿದ್ದು, ತಮ್ಮನ್ನು ಆತ ತುಂಬಾ ಇಷ್ಟಪಡುವ ಬಗ್ಗೆ ಮೋಕ್ಷಿತಾ ಹೇಳುತ್ತಾರೆ.  ಈಗ ಧಾರಾವಾಹಿಯಲ್ಲಿ ಬಿಜಿ ಇದ್ದರೂ ತಮ್ಮನ ಆರೈಕೆಯನ್ನು ಮರೆಯುವುದಿಲ್ಲ. ಆಗಾಗ್ಗೆ ತಮ್ಮನ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. 


Latest Videos
Follow Us:
Download App:
  • android
  • ios