ಭಾಗ್ಯಾಳಿಗೆ ಸಲಹೆ ಕೊಡೋಹಾಗೆ ನಿಜ ಜೀವನದಲ್ಲೂ ಹೀಗೇ ಹೇಳ್ತೀರಾ? ನೆಟ್ಟಿಗರ ವಾದ- ಪ್ರತಿವಾದ
ಸೀರಿಯಲ್ಗಳಲ್ಲಿ ನಿರ್ದೇಶಕರಿಗೆ ಸಲಹೆ ಕೊಡುವುದು ಎಷ್ಟು ಸುಲಭ. ನಿಜ ಜೀವನದಲ್ಲಿಯೂ ಓರ್ವ ಹೆಣ್ಣು ಇದೇ ಪರಿಸ್ಥಿತಿಯಲ್ಲಿದ್ದರೆ ನೋಡುವ ದೃಷ್ಟಿಯೇ ಬೇರೆಯಾಗುವುದ್ಯಾಕೆ?
ಭಾಗ್ಯಳ ಸ್ಥಿತಿ ಇದೀಗ ಶೋಚನೀಯವಾಗಿದೆ. ಮನೆಯವರಿಗೆ ಹೇಳದೇ ಕೆಲಸ ಹುಡುಕಿಕೊಂಡು ಹೋಗಿದ್ದಾಳೆ ಭಾಗ್ಯ. ಆದರೆ ಎಲ್ಲೆಲ್ಲೂ ಅವಳಿಗೆ ಅವಮಾನವೇ ಆಗಿದೆ. ಕೆಲಸ ಕೇಳಿಕೊಂಡು ಹೋಗಿರೋ ಭಾಗ್ಯಳಿಗೆ ಸಿಕ್ಕಾಪಟ್ಟೆ ಅವಮಾನ ಮಾಡಿ ಕಳಿಸಿದ್ದಾಳೆ ಲೇಡಿ ಓನರ್. ನನಗೆ ಈ ಕೆಲಸ ಬೇಕೇ ಬೇಕು ಎಂದು ಭಾಗ್ಯ ಮನವಿ ಮಾಡಿಕೊಂಡ್ರೆ, ಅದೂ ಆ ಓನರ್ ತಂದೆನೇ ಕೆಲಸಕ್ಕೆ ಓಕೆ ಅಂದಿರುವಾಗಿ ಕೇಳಿನೋಡಿ ಎಂದ್ರೂ ಅವರಿಗೆ ಅರಳುಮರಳು ಎಂದು ಈಕೆ ದಬಾಯಿಸಿದ್ದಾಳೆ. ಸಾಲದು ಎನ್ನುವುದಕ್ಕೆ ಕೈ ಹಿಡಿದು ಬೀದಿಗೆ ನೂಕಿದ್ದಾಳೆ. ಅಮಾಯಕ ಭಾಗ್ಯ ರಸ್ತೆಯ ಮೇಲೆ ಬಿದ್ದಿದ್ದಾಳೆ. ಅದೇ ಇನ್ನೊಂದೆಡೆ, ತಾಂಡವ್ ಮತ್ತು ಶ್ರೇಷ್ಠಾ ರೊಮ್ಯಾನ್ಸ್ ಶುರುವಾಗಿದೆ. ಶ್ರೇಷ್ಠಾಳಿಗಾಗಿ ತಾಂಡವ್ ದುಬಾರಿ ಬ್ರೇಸ್ಲೈಟ್ ತಂದುಕೊಟ್ಟಿದ್ದಾನೆ. ಇತ್ತ ಪೈಸೆ ಪೈಸೆ ಹೊಂದಿಸಲು ಭಾಗ್ಯ ಅಲೆದಾಡುತ್ತಿದ್ದರೆ, ಅತ್ತ ಶ್ರೇಷ್ಠಾ ಮತ್ತು ಭಾಗ್ಯ ರೊಮ್ಯಾನ್ಸ್ ಮಾಡುತ್ತಿದ್ದಾರೆ.
ಹೇಗಾದರೂ ಮಾಡಿ ಭಾಗ್ಯಳನ್ನು ಮನೆಯಿಂದ ಓಡಿಸಲು ತಾಂಡವ್ ಪ್ರಯತ್ನಿಸುತ್ತಿದ್ದಾನೆ. ಅವನಿಗೆ ಏನಿದ್ದರೂ ಬೇಕಿರುವುದು ಶ್ರೇಷ್ಠಾ ಮಾತ್ರ. ಆದರೆ ಭಾಗ್ಯ ಈಗ ಸುಲಭದಲ್ಲಿ ಜಗ್ಗುತ್ತಿಲ್ಲ. ಆದರೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಧೈರ್ಯ ಮಾಡಿ ಒಂದು ಹೋಟೆಲ್ಗೆ ಹೋದಾಗ ಅವಳನ್ನು ಹೋಟೆಲ್ ಮಾಲೀಕ ಕೆಲಸ ಇಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಸಾಲದು ಎನ್ನುವುದಕ್ಕೆ ಆಕೆಗೆ ಅಲ್ಲಿ ಒಂದಿಷ್ಟು ಅವಮರ್ಯಾದೆಯೂ ಆಗುತ್ತದೆ. ಅಷ್ಟಕ್ಕೂ ಸದ್ಯ ಭಾಗ್ಯಳ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ.
ತವರಿಗೆ ವಾಪಸಾದ ಮಗಳು ಅಮ್ಮನ ಮನೆಗೆ ಭಾರವಾಗ್ತಾಳಾ? ಹೆಣ್ಣಿನ ಜೀವನ ಇಷ್ಟೆನಾ? ನೆಟ್ಟಿಗರ ಅಸಮಾಧಾನ
ಮನೆಯಲ್ಲಿ ಹೇಳದೇ ಕೆಲಸ ಹುಡುಕೋಕೆ ಹೋಗಿದ್ದಾಳೆ. ಮನೆಗೆ ಲೇಟಾಗಿ ಬರುತ್ತಿರುವುದಕ್ಕೆ ಅತ್ತೆ ಕುಸುಮಾ ಬೇರೆ ಬೈಯುತ್ತಿದ್ದಾಳೆ. ತಾಂಡವ್ ಅಂತೂ ಪತ್ನಿಯನ್ನು ಆಡಿಕೊಳ್ಳುವ ಒಂದೂ ಕ್ಷಣ ಬಿಡುತ್ತಿಲ್ಲ. ಭಾಗ್ಯ ಅಳುವುದನ್ನು ನೋಡುವುದು ಎಂದರೆ ಅವನಿಗೆ ತುಂಬಾ ಇಷ್ಟ. ಇಂಥ ಗಂಡ ಬೇಕಾ ಎಂದು ಹಲವಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಇಂಥ ಗಂಡ ನಿನಗೆ ಬೇಕಾ? ಅವನನ್ನು ಬಿಟ್ಟುಬಿಡು. ಅವನು ಇದ್ದರೆಷ್ಟು ಬಿಟ್ಟರೆಷ್ಟು ಎಂದೆಲ್ಲಾ ಭಾಗ್ಯಳಿಗೆ ನೆಟ್ಟಿಗರು ಸಲಹೆ ಕೊಡುತ್ತಿದ್ದಾರೆ. ಇದೀಗ ಬಿಡುಗಡೆಯಾಗಿರುವ ಪ್ರೊಮೋ ನೋಡಿಯೂ ಹಲವರು ಇದೇ ಮಾತನ್ನು ಹೇಳುತ್ತಿದ್ದಾರೆ.
ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದವೂ ಶುರುವಾಗಿದೆ. ಇಂಥ ಸೀರಿಯಲ್ಗಳಲ್ಲಿ ಹೆಣ್ಣಿನ ಕಷ್ಟ ನೋಡಲಾಗದೇ ಗಂಡನನ್ನು ಬಿಟ್ಟುಬಿಡು ಎಂದು ಹೇಳುವುದು ಬಹಳ ಸುಲಭ. ಆದರೆ ಇಷ್ಟೇ ಕಷ್ಟವನ್ನು ನೋಡಿ ಹೆಣ್ಣೊಬ್ಬಳು ಗಂಡನನ್ನು ಬಿಟ್ಟು ತವರು ಮನೆಗೆ ಬಂದಾಗಲೂ ಸೀರಿಯಲ್ಗಳಲ್ಲಿ ಬುದ್ಧಿ ಹೇಳುವವರೇ, ನಿಜ ಜೀವನದಲ್ಲಿಯೂ ಆಕೆ ಮಾಡಿದ್ದು ಸರಿ ಅಂತಾರಾ? ಯಾಕೆ ಹೀಗೆ? ಧಾರಾವಾಹಿಗಳಲ್ಲಿ ಮಹಿಳೆಯರ ಕಷ್ಟ ನೋಡದೇ ಕಣ್ಣೀರು ಹಾಕುವವರು, ಅದೇ ರಿಯಲ್ ಲೈಫ್ನಲ್ಲಿಯೂ ಕಣ್ಣೀರು ಹಾಕ್ತಾರಾ? ಸೊಸೆಯ ಮೇಲೆ ಅತ್ತೆಯೋ ಇಲ್ಲವೇ ಅತ್ತೆಯ ಮೇಲೆ ಸೊಸೆಯೋ ದೌರ್ಜನ್ಯ ನಡೆಸುತ್ತಿರುವ ಸಂದರ್ಭದಲ್ಲಿ ಚೆನ್ನಾಗಿ ನಾಲ್ಕು ಏಟು ಹೊಡೆಯಬಾರದಾ ಎನ್ನುವ ಅತ್ತೆ-ಸೊಸೆಯಂದಿರಿಗೆ ನಿಜ ಜೀವನದಲ್ಲಿಯೂ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿಯುವುದೆ ಎನ್ನುವುದು ಈಗಿರುವ ಪ್ರಶ್ನೆ. ಇನ್ನು ಗಂಡ ಬಿಡುವ ವಿಷಯಕ್ಕೆ ಬಂದರಂತೂ ತಲೆಗೊಂದರಂತೆ ಮಾತನಾಡುವವರ ನಡುವೆ ಸೀರಿಯಲ್ಗಳ ನಿರ್ದೇಶಕರಿಗೆ ಬಿಟ್ಟಿ ಸಲಹೆ ಕೊಡುವುದು ಎಷ್ಟು ಸುಲಭ ಅಲ್ವಾ?
ನಟಿ ಅಮೃತಾ ಆತ್ಮಹತ್ಯೆಗೆ ಭಾರಿ ಟ್ವಿಸ್ಟ್! ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಸಾವಿನ ರಹಸ್ಯ ಬಯಲು?