Asianet Suvarna News Asianet Suvarna News

ಅಬ್ಬಬ್ಬಾ ಸೀರಿಯಲ್​ ಪ್ರೇಮಿಗಳಾ...? ಛೇ... ಛೇ... ನಿರ್ದೇಶಕರನ್ನೇ ಈ ಪರಿ ತರಾಟೆಗೆ ತೆಗೆದುಕೊಳ್ಳೋದಾ?

ಕೆಲಸ ಕೇಳಿಕೊಂಡು ಹೋದ ಭಾಗ್ಯಲಕ್ಷ್ಮಿಗೆ ಅವಮಾನವಾಗಿದೆ. ಓರ್ವ ಅಮಾಯಕ ಸ್ತ್ರೀಗೆ ಇಷ್ಟೊಂದು ಟಾರ್ಚರ್​ ಕೊಡುವುದನ್ನು ನೋಡಿ ಸೀರಿಯಲ್​ ಫ್ಯಾನ್ಸ್​ ರೊಚ್ಚಿಗೆದ್ದಿದ್ದಾರೆ.
 

The fans of Bhagyalakshmi serial are outraged against director after  such torture to an innocent woman suc
Author
First Published Apr 29, 2024, 2:13 PM IST

ಕೆಲಸ ಕೇಳಿಕೊಂಡು ಹೋಗಿರೋ ಭಾಗ್ಯಳಿಗೆ ಸಿಕ್ಕಾಪಟ್ಟೆ ಅವಮಾನ ಮಾಡಿ ಕಳಿಸಿದ್ದಾಳೆ ಲೇಡಿ ಓನರ್​. ನನಗೆ ಈ ಕೆಲಸ ಬೇಕೇ ಬೇಕು ಎಂದು ಭಾಗ್ಯ ಮನವಿ ಮಾಡಿಕೊಂಡ್ರೆ, ಅದೂ ಆ ಓನರ್​ ತಂದೆನೇ ಕೆಲಸಕ್ಕೆ ಓಕೆ ಅಂದಿರುವಾಗಿ ಕೇಳಿನೋಡಿ ಎಂದ್ರೂ ಅವರಿಗೆ ಅರಳುಮರಳು ಎಂದು ಈಕೆ ದಬಾಯಿಸಿದ್ದಾಳೆ. ಸಾಲದು ಎನ್ನುವುದಕ್ಕೆ ಕೈ ಹಿಡಿದು ಬೀದಿಗೆ ನೂಕಿದ್ದಾಳೆ. ಅಮಾಯಕ ಭಾಗ್ಯ ರಸ್ತೆಯ ಮೇಲೆ ಬಿದ್ದಿದ್ದಾಳೆ. ಅದೇ ಇನ್ನೊಂದೆಡೆ, ತಾಂಡವ್​ ಮತ್ತು ಶ್ರೇಷ್ಠಾ ರೊಮ್ಯಾನ್ಸ್​ ಶುರುವಾಗಿದೆ. ಶ್ರೇಷ್ಠಾಳಿಗಾಗಿ ತಾಂಡವ್​ ದುಬಾರಿ ಬ್ರೇಸ್​ಲೈಟ್​ ತಂದುಕೊಟ್ಟಿದ್ದಾನೆ. ಇತ್ತ ಪೈಸೆ ಪೈಸೆ ಹೊಂದಿಸಲು ಭಾಗ್ಯ ಅಲೆದಾಡುತ್ತಿದ್ದರೆ, ಅತ್ತ ಶ್ರೇಷ್ಠಾ ಮತ್ತು ಭಾಗ್ಯ ರೊಮ್ಯಾನ್ಸ್​ ಮಾಡುತ್ತಿದ್ದಾರೆ. 

ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಭಾಗ್ಯಲಕ್ಷ್ಮಿ ಫ್ಯಾನ್ಸ್​ ನಿರ್ದೇಶಕರ ವಿರುದ್ಧ ಗರಂ ಆಗಿದ್ದಾರೆ. ಒಬ್ಬ ಅಮಾಯಕ ಹೆಣ್ಣಿಗೆ ಇಷ್ಟೆಲ್ಲಾ ತೊಂದರೆ ಕೊಡುತ್ತೀರಿ. ಹೀಗಾದರೆ ಸೀರಿಯಲ್​ ಬೈಕಾಟ್​ ಮಾಡುತ್ತೇವೆ. ಈ ರೀತಿ ಓರ್ವ ಮುಗ್ಧ ಹೆಣ್ಣಿಗೆ ಕಷ್ಟ ಕೊಡುವುದನ್ನು ನೋಡಲು ಆಗುತ್ತಿಲ್ಲ ಎಂದೆಲ್ಲಾ ಹೇಳುತ್ತಿದ್ದಾರೆ. 

ಸೀರಿಯಲ್​ ತಾರೆಯರಿಂದ 'ಬಿಂಕದ ಸಿಂಗಾರಿ' ಟ್ರೆಂಡ್​: ಅಮೃತಧಾರೆ ಟೀಂನಿಂದ ಭರ್ಜರಿ ಸ್ಟೆಪ್​

ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್​ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್​ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಧೈರ್ಯ ಮಾಡಿ ಒಂದು ಹೋಟೆಲ್​ಗೆ ಹೋದಾಗ ಅವಳನ್ನು ಹೋಟೆಲ್​ ಮಾಲೀಕ ಕೆಲಸ ಇಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಸಾಲದು ಎನ್ನುವುದಕ್ಕೆ ಆಕೆಗೆ ಅಲ್ಲಿ ಒಂದಿಷ್ಟು ಅವಮರ್ಯಾದೆಯೂ ಆಗುತ್ತದೆ. ಅಷ್ಟಕ್ಕೂ ಸದ್ಯ ಭಾಗ್ಯಳ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ.  

ಹೇಗಾದರೂ ಮಾಡಿ ಭಾಗ್ಯಳನ್ನು ಮನೆಯಿಂದ ಓಡಿಸಲು ತಾಂಡವ್​ ಪ್ರಯತ್ನಿಸುತ್ತಿದ್ದಾನೆ. ಅವನಿಗೆ ಏನಿದ್ದರೂ ಬೇಕಿರುವುದು ಶ್ರೇಷ್ಠಾ ಮಾತ್ರ. ಆದರೆ ಭಾಗ್ಯ ಈಗ ಸುಲಭದಲ್ಲಿ ಜಗ್ಗುತ್ತಿಲ್ಲ.  ಇದೇ  ಕಾರಣಕ್ಕೆ ತಾಂಡವ್​ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ. ತಾಂಡವ್​ಗೆ ಪತ್ನಿ ಎದುರು ಸೋಲನ್ನು ಅನುಭವಿಸಿದ ಹಾಗಾಗುತ್ತಿದೆ. ಗಂಡಸಾಗಿ ತಾನು ಸೋತೆ ಎನ್ನುವ ಅಹಂ ಅಡ್ಡ ಬರುತ್ತಿದೆ. ಏನೂ ಅರಿಯದ ಪೆದ್ದು ಪತ್ನಿಯನ್ನು ಸುಲಭದಲ್ಲಿ ಮನೆಯಿಂದ ಹೊರಕ್ಕೆ ಹಾಕಬಹುದು ಎಂದುಕೊಂಡಿದ್ದ ತಾಂಡವ್​ಗೆ ಅದು ಸಾಧ್ಯವೇ  ಆಗದ ಸ್ಥಿತಿ. ಪತ್ನಿಗೆ ಎಷ್ಟು ಟಾರ್ಚರ್​ ಕೊಡಬೇಕೋ ಅಷ್ಟನ್ನೆಲ್ಲಾ ಕೊಟ್ಟಾಯ್ತು. ಈತನ ಟಾರ್ಚರ್​ ತಾಳದೇ ಖುದ್ದು ಭಾಗ್ಯಳ ಮಾವನೇ ತನ್ನ ಮಗನಿಗೆ ಡಿವೋರ್ಸ್​ ಕೊಟ್ಟುಬಿಡಮ್ಮಾ, ನಿನ್ನ ಈ ಕಷ್ಟ ನೋಡಲು ಆಗ್ತಿಲ್ಲ ಎಂದೂ ಹೇಳಿ ಆಯ್ತು. ಆದರೆ ಈಕೆ ಭಾಗ್ಯ. ಪತ್ನಿಗಿಂತ ಹೆಚ್ಚಾಗಿ ಇಬ್ಬರು ಮಕ್ಕಳ ಅಮ್ಮ ಈಕೆ. ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ತಾಳಾ? ಸಾಧ್ಯವೇ ಇಲ್ಲ.  
 

ರಾಖಿ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು: ಫಾತೀಮಾ ಏನು ನಿನ್ನೀ ಅವತಾರವಮ್ಮಾ ಎಂದ ಫ್ಯಾನ್ಸ್​!

Latest Videos
Follow Us:
Download App:
  • android
  • ios