Asianet Suvarna News Asianet Suvarna News

ಸೀರಿಯಲ್​ ತಾರೆಯರಿಂದ 'ಬಿಂಕದ ಸಿಂಗಾರಿ' ಟ್ರೆಂಡ್​: ಅಮೃತಧಾರೆ ಟೀಂನಿಂದ ಭರ್ಜರಿ ಸ್ಟೆಪ್​

 ಸೀರಿಯಲ್​ ತಾರೆಯರಿಂದ 'ಬಿಂಕದ ಸಿಂಗಾರಿ' ಹಾಡಿಗೆ ರೀಲ್ಸ್ ಮಾಡುವ ಟ್ರೆಂಡ್ ಶುರುವಾಗಿದೆ. ಇದೀಗ ಅಮೃತಧಾರೆ ಟೀಂನಿಂದ ಭರ್ಜರಿ ಸ್ಟೆಪ್​ ಹಾಕಿದ್ದು ಫ್ಯಾನ್ಸ್​ ಫಿದಾ ಆಗಿದ್ದಾರೆ. 
 

Binkada Singari trend by serial actors Amrutadhare team reels on this song suc
Author
First Published Apr 27, 2024, 6:32 PM IST

1963ರಲ್ಲಿ ಬಿಡುಗಡೆಯಾದ ಡಾ.ರಾಜ್​ಕುಮಾರ್​ ಮತ್ತು ಲೀಲಾವತಿ ಅಭಿನಯದ ಕನ್ಯಾರತ್ನ ಚಿತ್ರದ ಬಿಂಕದ ಸಿಂಗಾರಿ... ಮೈ ಡೊಂಕಿನ ವೈಯ್ಯಾರಿ ಹಾಡು 60 ವರ್ಷಗಳ ಬಳಿಕವೂ ಇಂದಿಗೂ ಜನಜನಿತವಾಗಿದೆ. ಡಾ.ರಾಜ್​ಕುಮಾರ್​ ಅವರ ಚಿತ್ರದ ಹಾಡುಗಳೆಂದರೆ ಹಾಗೇ ಅಲ್ಲವೆ? ಶತಮಾನ ಕಳೆದರೂ ನೆನಪಿನಲ್ಲಿ ಇರುವ ಮಧುರ ಗೀತೆಗಳವು. ಇಂದಿನ ಸಿನಿಮಾಗಳ ಬಹುತೇಕ ಹಾಡುಗಳು ಅರ್ಥಹೀನವಾಗಿದ್ದರೆ, ಕೆಲವು ತಿಂಗಳುಗಳು ರೀಲ್ಸ್ ರೂಪದಲ್ಲಿ ಹಿಟ್​ ಆಗುತ್ತಲೇ ಅದೇ ವೇಗದಲ್ಲಿ ಮರೆತೇ ಹೋಗುವಂಥದ್ದು. ಆದರೆ 60-80ರ ದಶಕದ ಹಾಡುಗಳ ಮಾಧುರ್ಯವೇ ಬೇರೆ. ಅದರ ಸೊಗಡು, ಸೊಗಸೇ ಬೇರೆ. ಅವು ಎಂದೆಂದಿಗೂ ಜನಜನಿತವೇ. ಅಂಥವುಗಳಲ್ಲಿ ಒಂದು ಬಿಂಕದ ಸಿಂಗಾರಿ... ಮೈ ಡೊಂಕಿನ ವೈಯ್ಯಾರಿ ಹಾಡು. 60 ವರ್ಷಗಳ ಅಂದಿನ ಹಾಡಿಗೆ ಇದಾಗಲೇ ಹಲವು ಸೀರಿಯಲ್​ ತಾರೆಯರು ರೀಲ್ಸ್​ ಮಾಡಿದ್ದಾರೆ.

ಸೀತಾರಾಮ ಸೀರಿಯಲ್​ನ ಸೀತಾ-ರಾಮ, ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಪೂರ್ಣಿ ಮತ್ತು ದೀಪಿಕಾ ಬಳಿಕ ಇದೀಗ ಅಮೃತಧಾರೆ ಟೀಂ ಈ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದೆ. ಇದರಲ್ಲಿ ಮಲ್ಲಿ, ಆನಂದ್​, ಆನಂದ್ ಪತ್ನಿ, ಜೀವಾ, ಅಪ್ಪಿ ಅವರನ್ನು ನೋಡಬಹುದು. ಬಿಂಕದ ಸಿಂಗಾರಿ ಎನ್ನುತ್ತಾ ಇವರು ಕೆಲ ಸೆಕೆಂಡ್​ಗಳ ಸ್ಟೆಪ್​ ಹಾಕಿದ್ದು, ಅಭಿಮಾನಿಗಳು ಸೂಪರ್​ ಸೂಪರ್​ ಎನ್ನುತ್ತಿದ್ದಾರೆ. ಇನ್ನು ಕೆಲವರು ಗೌತಮ್​-ಭೂಮಿಕಾ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. 

ಬಿಂಕದ ಸಿಂಗಾರಿ ಎಂದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು: ಅಲ್ಲೂ ಹೀಗೆ ಇರೋಕೆ ಏನಾಗತ್ತೆ ಕೇಳಿದ ಫ್ಯಾನ್ಸ್​...

ಈ ಮುಂಚೆ ಸೀತಾ ರಾಮ ಜೋಡಿ ಇದೇ ಹಾಡಿಗೆ ಡ್ಯಾನ್ಸ್​ ಮಾಡಿತ್ತು. ಈ ಡ್ಯಾನ್ಸ್​ ಆರಂಭದಲ್ಲಿ ಬ್ಲ್ಯಾಕ್​ ಆ್ಯಂಡ್​ ವೈಟ್​ ಟಚ್​ ಕೊಡಲಾಗಿದ್ದು, ಬಳಿಕ ಮಾಡರ್ನ್​ ಟಚ್​ ಕೊಡಲಾಗಿದೆ ಇದರಲ್ಲಿ ಸೀತಾ ಮತ್ತು ರಾಮ್​ ಪಾತ್ರಧಾರಿಗಳು ಸಕತ್​ ಸ್ಟೆಪ್​ ಹಾಕಿದ್ದರು. ಈ ಜೋಡಿಯ ಡ್ಯಾನ್ಸ್​ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಸೀತೆ ಮತ್ತು ರಾಮ್​ ನೃತ್ಯ ಮಾಡುವುದನ್ನು ನೋಡಬಹುದು. ಅಷ್ಟಕ್ಕೂ ಸೀತಾ ಪಾತ್ರಧಾರಿ ವೈಷ್ಣವಿ ಗೌಡ, ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದು, ಡ್ಯಾನ್ಸ್​ನಲ್ಲಿಯೂ ಎಕ್ಸ್​ಪರ್ಟ್​. ಈ ರೀಲ್ಸ್​ಗೆ ಥಹರೇವಾರಿ ಕಮೆಂಟ್ಸ್​ ಬಂದಿವೆ. ನಿಮ್ಮ ಜೋಡಿ ಸೂಪರ್​ ಎಂದಿದ್ದರು  ಅಭಿಮಾನಿಗಳು. 

ಅದಾದ ಬಳಿಕ ಶ್ರೀರಸ್ತು ಶುಭಮಸ್ತು ಸೀರಿಯಲ್​ ಸೊಸೆಯಂದಿರಾದ ಪೂರ್ಣಿ ಮತ್ತು ದೀಪಿಕಾ ಇದೇ ಹಾಡಿಗೆ ರೀಲ್ಸ್​ ಮಾಡಿದ್ದರು. ಸೀರಿಯಲ್​ನಲ್ಲಿ ಹಾವು-ಮುಂಗುಸಿ ಇರೋ ನೀವು ಅಲ್ಲಿಯೂ ಇದೇ ರೀತಿ ಇದ್ದರೆ ಎಷ್ಟು ಚೆಂದ ಎಂದು ಅಭಿಮಾನಿಗಳು ಕಮೆಂಟ್ಸ್​ ಮಾಡಿದ್ದರು. 

ಬಿಂಕದ ಸಿಂಗಾರಿ... ಡಾ.ರಾಜ್​ ಹಾಡಿಗೆ ಸೀತಾ-ರಾಮ ಮಾಡರ್ನ್​ ಸ್ಟೆಪ್​: ಮನಸೋತ ಅಭಿಮಾನಿಗಳು


 

Follow Us:
Download App:
  • android
  • ios