ಪವಿತ್ರಾಗೆ ಏನೂ ಆಗಿರಲಿಲ್ಲ ಆ್ಯಂಬುಲೆನ್ಸ್ ತಡವಾಗಿ ಬಂದಿದ್ದಕ್ಕೆ ಸತ್ತಳು: ಕಾರಲ್ಲಿದ್ದ ನಟ ಚಂದ್ರಕಾಂತ್ ಸ್ಪಷ್ಟನೆ

ಪವಿತ್ರಾ ಸಾವಿಗೆ ಆ್ಯಂಬುಲೆನ್ಸ್ ಕಾರಣ ಎಂದು ಬಿಕ್ಕಿ ಬಿಕ್ಕಿ ಅತ್ತ ಸ್ನೇಹಿತ ಚಂದ್ರಕಾಂತ್. ನಿಜಕ್ಕೂ ಆಗಿದ್ದೇನು? 

Telugu actor Chandrakanth clarifies about actress Pavithra Jayaram car accident vcs

ಸುಮಾರು 20 ವರ್ಷಗಳಿಂದ ಕನ್ನಡ, ತಮಿಳು ಮತ್ತು ತೆಲುಗು ಕಿರುತೆರೆ ಲೋಕದಲ್ಲಿ ಮಿಂಚುತ್ತಿರುವ ಪವಿತ್ರಾ ಜಯರಾಮ್‌ ರಸ್ತೆ ಅಪಘಾತದಲ್ಲಿ ಅಗಲಿದ್ದಾರೆ. ಬೆಂಗಳೂರಿನಿಂದ ಹೈದರಾಬಾದ್‌ ಕಡೆ ಪ್ರಯಾಣ ಮಾಡುವಾಗ ಅಪಘಾತ ಸಂಭವಿಸಿದೆ. ಸಂಪೂರ್ಣ ವಿವರವನ್ನು ಕಾರಿನಲ್ಲಿದ್ದ ಸ್ನೇಹಿತ ಚಂದ್ರಕಾಂತ್ ಸ್ಪಷ್ಟನೆ ನೀಡಿದ್ದಾರೆ.

'ಕಾರಿನಲ್ಲಿ ನಾವು ಬೆಂಗಳೂರಿನಿಂದ ಹೈದರಾಬಾದ್‌ ಕಡೆ ಪ್ರಯಾಣ ಮಾಡುತ್ತಿದ್ದೆವು. ಸುಮಾರು 2.30 ಮಧ್ಯಾಹ್ನ ನಮ್ಮ ಜರ್ನಿ ಶುರು ಮಾಡಿಲಾಗಿತ್ತು. ತುಂಬಾ ಮಳೆ ಬರುತ್ತಿದ್ದ ಕಾರಣ ಸುಮಾರು 3 ಗಂಟೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ತುಂಬಾ ಸುಸ್ತಾಗಿದ್ದ ಕಾರಣ ರೆಸ್ಟ್‌ ಬೇಕು ಎಂದು ನಿದ್ರೆ ಮಾಡಿದೆವು. ಕಾರಿನಲ್ಲಿ ಒಟ್ಟು ನಾಲ್ಕು ಜನ ಇದ್ವೆ...ಕಾರನ್ನು ಚಾಲಕ ಓಡಿಸುತ್ತದ್ದ ಆತನ ಪಕ್ಕ ಪವಿತ್ರಾ ಅಕ್ಕನ ಮಗಳು ಇದ್ದಳು..ಹಿಂದೆ ನಾನು ಮತ್ತು ಪವಿತ್ರಾ ಇದ್ವಿ' ಎಂದು ಚಂದ್ರಕಾಂತ್ ಮಾತನಾಡಿದ್ದಾರೆ. 

ಅಪಘಾತದಲ್ಲಿ ಸಾವಿಗೀಡಾದ ಕನ್ನಡದ ಕಿರುತೆರೆ ಜನಪ್ರಿಯ ನಟಿ ಪವಿತ್ರ ಜಯರಾಂ!

'ಡ್ರೈವರ್ ಹೇಳಿದ ಪ್ರಕಾರ ಆತ 60 ಫೀಟ್ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ಆಗ ಇದ್ದಕ್ಕಿದ್ದಂತೆ ವೇಗವಾಗಿ ಬಸ್‌ ಬಂತು. ಈ ವೇಳೆ ಎದರುಗಡೆಯಿಂದ ಬಂದ ಸ್ಕಾರ್ಪಿಯೋ ಕಾರಿಗೆ ನಮ್ಮ ಕಾರು ಡಿಕ್ಕೆ ಹೊಡೆದಿದೆ ರಭಸದಲ್ಲಿ ಬ್ರೇಕ್ ಹಾಕಿದ್ದಕ್ಕೆ ಕಾರು ಬಲಗಡೆಗೆ ವಾಲಿ ನಿಂತಿದ್ದ ಬಸ್‌ಗೆ ಡಿಕ್ಕೆ ಹೊಡೆದಿದೆ. ಈ ಅಪಘಾತದಲ್ಲಿ ಯಾರಿಗೂ ಏನೂ ಆಗಿಲ್ಲ. ನನಗೆ ಮಾತ್ರ ಕೈ ಪೆಟ್ಟು ಬಿದ್ದು ಕೈ ಫ್ರಾಕ್ಚರ್ ಆಗಿದೆ. ಅಪಘಾತವಾದಾಗ ಪವಿತ್ರಾ ನನ್ನನ್ನು ನೋಡಿ ಏನಾಯ್ತು ಏನಾಯ್ತು ಎಂದು ಜೋರಾಗಿ ಉಸಿರು ಎಳೆದುಕೊಂಡಳು ಅಷ್ಟೆ. ಘಟನೆ ನಡೆದಿರುವುದು ರಾತ್ರಿ 12.40 ಸಮಯದಲ್ಲಿ ಎಂದು ಅಲ್ಲಿದ್ದ ಜನರು ಹೇಳಿದ್ದಾರೆ ಆದರೆ ನನಗೆ ಪ್ರಜ್ಞೆ ಇರಲಿಲ್ಲ. ಬೆಳಗ್ಗೆ ನಾಲ್ಕು ಗಂಟೆಗೆ ನನಗೆ ಎಚ್ಚರವಾಗಿತ್ತು ಆಗ ಪವಿತ್ರಾ ಇಲ್ಲ ಅನ್ನೋ ವಿಚಾರ ಇಳಿಯಿತ್ತು. ನಾನು ಹುಚ್ಚನಂತೆ ವರ್ತಿಸುತ್ತಿದ್ದೆ ಎಂದು ಡಾಕ್ಟರ್ ಹೇಳುತ್ತಿದ್ದರು ಎಂದು ಚಂದ್ರಕಾಂತ್ ಹೇಳಿದ್ದಾರೆ. 

'ನಿಜ ಹೇಳಬೇಕು ಅಂದ್ರೆ ಅಲ್ಲಿಗೆ ಆ್ಯಂಬುಲೆನ್ಸ್ ತಡವಾಗಿ ಬಂತು. ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ ಸತ್ತಿದ್ದಾಳೆ ಇಲ್ಲ ಅಂದ್ರೆ ಪವಿತ್ರಾ ಬದುಕುತ್ತಿದ್ದಳು. ಪವಿತ್ರಾ ಸಾವಿಗೆ ಆ್ಯಂಬುಲೆನ್ಸ್ ಕಾರಣ' ಎಂದಿದ್ದಾರೆ ಚಂದ್ರಕಾಂ

Latest Videos
Follow Us:
Download App:
  • android
  • ios