Asianet Suvarna News Asianet Suvarna News

ಅಪಘಾತದಲ್ಲಿ ಸಾವಿಗೀಡಾದ ಕನ್ನಡದ ಕಿರುತೆರೆ ಜನಪ್ರಿಯ ನಟಿ ಪವಿತ್ರ ಜಯರಾಂ!

ತೆಲುಗಿನ ತ್ರಿನಯನಿ ಮೂಲಕ ತೆಲುಗರ ಮನೆಮಾತಾಗಿದ್ದ ಪವಿತ್ರ ಇಂದು ಮುಂಜಾನೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಸಮೀಪ ನಡೆದ ಕಾರು ಅಪಘಾತದಲ್ಲಿ ನಟಿ ಪವಿತ್ರಾ ಸ್ಥಳದಲ್ಲೇ ಮರಣ ಹೊಂದಿದ್ದಾರೆ. 

Small Screen actress Pavithra Jayaram died in an accident at Andhra Pradesh srb
Author
First Published May 12, 2024, 12:14 PM IST

ಕಿರುತೆರೆ ನಟಿ ಪವಿತ್ರಾ ಜಯರಾಂ (Pavithra Jayaram) ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲು ಸಮೀಪ ಅಪಘಾತಕ್ಕೀಡಾಗಿ ಪವಿತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲತಃ ಕನ್ನಡಿಗರಾದ ಪವಿತ್ರ ಜಯರಾಂ, ತೆಲುಗಿನ 'ತ್ರಿನಯನಿ' ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ 'ರೋಬೋ ಫ್ಯಾಮಿಲಿ' ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು. ನಟಿ ಪವಿತ್ರಾ ಅವರು ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದರು.

Small Screen actress Pavithra Jayaram died in an accident at Andhra Pradesh srb

ತೆಲುಗಿನ ತ್ರಿನಯನಿ ಮೂಲಕ ತೆಲುಗರ ಮನೆಮಾತಾಗಿದ್ದ ಪವಿತ್ರ ಇಂದು ಮುಂಜಾನೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಸಮೀಪ ನಡೆದ ಕಾರು ಅಪಘಾತದಲ್ಲಿ ನಟಿ ಪವಿತ್ರಾ ಸ್ಥಳದಲ್ಲೇ ಮರಣ ಹೊಂದಿದ್ದಾರೆ. 

ನಾವು ಒಬ್ರೇ ಅಲ್ವಲ್ಲಾಇಲ್ಲಿ ಆಟ ಆಡೋರು, ಎದ್ರುಗಡೆನೂ ಇರ್ತಾರೆ; ಕೆಜಿಎಫ್ ಸ್ಟಾರ್ ಯಶ್!

Small Screen actress Pavithra Jayaram died in an accident at Andhra Pradesh srb

ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಅಪಘಾತಕ್ಕೀಡಾಗಿ ಪವಿತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಮತ್ತು ಅಲ್ಲಿ ಸಂಚರಿಸುತ್ತಿದ್ದ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ದುರಂತದಲ್ಲಿ ನಟಿ ಪವಿತ್ರಾ ಜಯರಾಂ ಅವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮೂಲತಃ ಕನ್ನಡಿಗರಾದ ಪವಿತ್ರ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ನಟಿಸುತ್ತಿದ್ದು, ಅಲ್ಲಿ ಕೂಡ ಬಹಳಷ್ಟು ಜನಪ್ರಿಯತೆ ಪಡೆದಿದ್ದರು. 

ರಕ್ಷಿತಾ ಪ್ರೇಮ್: ನನ್ನಮ್ಮ ರೋಡ್‌ ಸೈಡ್ ಮಲಗಿದ್ರು, ಬಳೆ ಮಾರಿ ಮುಂಬೈಗೆ ಕರ್ಕೊಂಡು ಹೋಗಿದ್ರು

ನಟಿ ಪವಿತ್ರಾ ಜಯರಾಂ ಸಾವಿಗೆ ಕನ್ನಡ ಹಾಗೂ ತೆಲುಗಿನ ಕಿರುತೆರೆ ಲೋಕ ದಿಗ್ಭ್ರಮೆ ವ್ಯಕ್ತಪಡಿಸಿದೆ. ಈ ಅನಿರೀಕ್ಷಿತ ಸಾವಿನಿಂದ ಕಂಗಾಲಾಗಿರುವ ಕುಟುಂಬದ ಸದಸ್ಯರನ್ನು ನೆನದು ಹಲವರು ಕಂಬನಿ ಮಿಡಿದಿದ್ದಾರೆ. ಶೂಟಿಂಗ್‌ಗೆಂದು ಹೊರಟಿದ್ದ ನಟಿ ಮರಳಿ ಬಾರದ ಲೋಕಕ್ಕೆ ಹೊರಟುಹೋಗಿದ್ದು, ಈ ಸಾವಿಗೆ ಎಲ್ಲರೂ ಮರುಗುತ್ತಿದ್ದಾರೆ. 

ವಿಷ್ಣುವರ್ಧನ್ ಶಾಲೆ ತಪ್ಪಿಸಿ ಈ ಕೆಲಸ ಮಾಡಿ ಪೆಟ್ಟು ತಿಂದಿದ್ರಂತೆ!

Latest Videos
Follow Us:
Download App:
  • android
  • ios