ಬಿಗ್​ಬಾಸ್​ಗೆ ಪೈಪೋಟಿ?ಸೀರಿಯಲ್​ ತಾರೆಯರ ಭಯಾನಕ ಸ್ಟಂಟ್​! ದೊಡ್ಡ ರಿಯಾಲಿಟಿ ಷೋ ಪ್ರೊಮೋ ರಿಲೀಸ್​

ಬಿಗ್​ಬಾಸ್​ಗೆ ಸೆಡ್ಡು ಹೊಡೆಯಲು ಜೀ ವಾಹಿನಿ  ಅತ್ಯಂತ ದೊಡ್ಡ ರಿಯಾಲಿಟಿ ಷೋ ಹೆಸರಿನ ಮತ್ತೊಂದು ಪ್ರೊಮೋ ರಿಲೀಸ್​ ಮಾಡಿದೆ. ಏನಿದೆ ಇದರಲ್ಲಿ? 
 

Televisions Biggest Entertainment Shows another promo has been relased by Zee Kannada suc

  ಕನ್ನಡದ ಬಿಗ್​ಬಾಸ್​ಗೆ ಪೈಪೋಟಿ ಕೊಡಲೋ ಎಂಬಂತೆ ಜೀ ಕನ್ನಡ ವಾಹಿನಿಯು ಕಿರುತೆರೆಯ ಇತಿಹಾಸದಲ್ಲಿಯೇ ಅತಿ ದೊಡ್ಡ ರಿಯಾಲಿಟಿ ಷೋ ಹೆಸರಿನ ಪ್ರೊಮೋ ರಿಲೀಸ್​ ಮಾಡಿದೆ. ಅಷ್ಟಕ್ಕೂ, ಹತ್ತು ಸೀಸನ್​ಗಳನ್ನು ಪೂರೈಸಿ 11ನೇ ಸೀಸನ್​ಗೆ ಕಾಲಿಟ್ಟಿರುವ ಕಲರ್ಸ್​ ಕನ್ನಡದ ಬಿಗ್​ಬಾಸ್​ನಲ್ಲಿ ಸದ್ಯ ಕೋಲಾಹಲದ ವಾತಾವರಣ. ಎಲ್ಲಾ ರಿಯಾಲಿಟಿ ಷೋ, ಸೀರಿಯಲ್​ಗಳನ್ನು ಹಿಂದಿಕ್ಕಿ ನಂಬರ್​ 1 ಸ್ಥಾನ ಪಡೆಯುವ ಬಿಗ್​ಬಾಸ್​ನಿಂದ ಸುದೀಪ್​ ಅವರು ಹೊರಕ್ಕೆ ಹೋಗಲಿದ್ದಾರೆ ಎನ್ನುವ ವಿಷಯ ಅಭಿಮಾನಿಗಳನ್ನು ಬರಸಿಡಿಲಿನಂತೆ ಬಡಿದಿದೆ. ಇದರ ಗೊಂದಲದ ನಡುವೆಯೇ ಇತ್ತ ಜೀ ಕನ್ನಡ ವಾಹಿನಿ ಈ ವಿಷಯವನ್ನು ಹೊರಹಾಕಿತ್ತು. ಇದಾಗಲೇ ಕೆಲವು ಪ್ರೊಮೋಗಳನ್ನು ರಿಲೀಸ್​ ಮಾಡಿದ್ದ ವಾಹಿನಿ, ಇದೀಗ ಮತ್ತೊಂದು ಪ್ರೊಮೋ ಬಿಡುಗಡೆ ಮಾಡಿದೆ. ಇದು ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಆಗಿದ್ದು, ಶೀಘ್ರದಲ್ಲಿ ನಿಮ್ಮ ಮುಂದೆ,  ಇದು ಮನರಂಜನೆಯ ಹೊಸ ಚಾಪ್ಟರ್​ ಎಂದು ಶೀರ್ಷಿಕೆ ಕೊಡಲಾಗಿದೆ. 

ಇದರಲ್ಲಿ ಕಿರುತೆರೆಯ ಕಲಾವಿದರ ದಂಡೇ ಇದೆ. ಈ ಹಿಂದೆ ಎರಡನೆಯ ಬಾರಿ ರಿಲೀಸ್​ ಮಾಡಿದ್ದ ಪ್ರೊಮೋದಲ್ಲಿ,  ಎಂಟರ್‌ಟೇನ್​ಮೆಂಟ್​ನ ಸೈರನ್‌ ಕೊಡೋಕೆ ಬರ್ತಿದ್ದಾರೆ ಎನ್ನುವ ಶೀರ್ಷಿಕೆ ಕೊಡಲಾಗಿತ್ತು. ಇದೀಗ ಬಹುತೇಕ ಕ್ಲೂ ಕೊಡಲಾಗಿದೆ. ಈ ಪ್ರೊಮೋದಲ್ಲಿ ಇದರಲ್ಲಿ ಸೀತಾ ರಾಮ ಧಾರಾವಾಹಿಯ ಸೀತಾ  ಮತ್ತು ರಾಮ, ಜೊತೆಗೆ ಇದೇ ಸೀರಿಯಲ್​ನ  ಪ್ರಿಯಾ, ಅಶೋಕ ಮತ್ತು ಸಿಹಿಯನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೇ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಜಾನು- ಜಯಂತ್‌,ಯ ಸಿದ್ಧೇಗೌಡ- ಭಾವನಾ ಅವರೂ ಕಾಣಿಸಿದ್ದಾರೆ.  ಇವರ ಜೊತೆಗೆ,  ಅಮೃತಧಾರೆಯ ಪಾರ್ಥ ಮತ್ತು ಅಪ್ಪಿ ಜೋಡಿ,  ಪುಟ್ಟಕ್ಕನ ಮಕ್ಕಳುವಿನಿಂದ ಕಂಠಿ ಅವರನ್ನು ನೋಡಬಹುದು. ಕಂಠಿ  ಬೈಕ್‌ ಸ್ಟಂಟ್‌ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ  ಅಣ್ಣಯ್ಯ ಮತ್ತು ಬ್ರಹ್ಮಗಂಟು ಸೀರಿಯಲ್‌ ಕಲಾವಿದರನ್ನೂ ಇದರಲ್ಲಿ ನೋಡಬಹುದಾಗಿದೆ.  

ತೆಲಗು ಬಿಗ್​ಬಾಸ್​ನಲ್ಲಿ ಶುದ್ಧ ಕನ್ನಡದಲ್ಲಿ ಜ್ಯೂನಿಯರ್​ ಎನ್​ಟಿಆರ್ ಮಾತು​: ವಿಡಿಯೋ ವೈರಲ್​

 ಇದರಲ್ಲಿ ಮೇಕಿಂಗ್​ ವಿಡಿಯೋ ತೋರಿಸಲಾಗಿದ್ದು, ಇದು ಸರ್ಕಸ್​ ರೀತಿಯಲ್ಲಿ ಕಾಣಿಸುತ್ತದೆ. ಇದಾಗಲೇ ಹಿಂದಿಯಲ್ಲಿ ಖತರೋಂಕಿ ಖಿಲಾಡಿ ಹೆಸರಿನಲ್ಲಿ ಕೆಲವು ಸೆಲೆಬ್ರಿಟಿಗಳು ಹಲವು ರೀತಿಯ ಸರ್ಕಸ್​ ಮಾಡುತ್ತಿದ್ದಾರೆ. ಇದು ಅದರ ರೂಪವೇ ಇರಬಹುದೇನೋ ಎನ್ನುವಂತೆ ಕಾಣುತ್ತಿದೆ. ಇದೀಗ ಡಾನ್ಸ್​ ಷೋಗಳಲ್ಲಿ ನೃತ್ಯಕ್ಕಿಂತಲೂ ಹೆಚ್ಚಾಗಿ ಸರ್ಕಸ್​ಗಳೇ ಕಾಣಿಸುತ್ತಿವೆ ಎನ್ನುವ ದೊಡ್ಡ ಆರೋಪವೂ ಇದೆ. ಆದರೆ ಈ ರಿಯಾಲಿಟಿ ಷೋನಲ್ಲಿ ನಿಜಕ್ಕೂ ತಾರೆಯರು ಸರ್ಕಸ್​ ಮಾಡುತ್ತಾರೆ ಇರಬಹುದು ಎನ್ನಲಾಗಿದೆ. ಆದರ ಇದು ಯಾವ ರೀತಿಯ ರಿಯಾಲಿಟಿ ಷೋ ಎನ್ನುವ ಬಗ್ಗೆ ಸಸ್ಪೆನ್ಸ್​ ಇಡಲಾಗಿದೆ. ಯಾವಾಗ ಶುರುವಾಗಲಿ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಆದ್ರೆ ಸದ್ಯ ಇನ್ನೇನು ಶೀಘ್ರದಲ್ಲಿಯೇ ಶುರುವಾಗಲಿದೆ ಎಂಬ ಸುಳಿವು ನೀಡಲಾಗಿದೆ.  ಅಂದಹಾಗೆ ಹಾಗೆ  ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ನಡೆಯುತ್ತಿದ್ದು, ಅದು ಮುಗಿಯುವ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಅದು ಮುಗಿದ ಮೇಲೆ ಈ ಷೋ ಆರಂಭವಾಗಬಹುದು ಎಂದು ಅಂದುಕೊಳ್ಳಲಾಗಿದೆ.  

ಇವ್ರೆಲ್ಲ ತಗೋಳ್ಳೋಕೆ ರೆಡಿಯಾಗಿದ್ದಾರೆ ರಿಸ್ಕು; ಇನ್ಮುಂದೆ ನಿಮಗೆ ಭರ್ಜರಿ ಎಂಟರ್ಟೈನ್ಮೆಂಟ್ ಫಿಕ್ಸು ಎನ್ನುವ ಶೀರ್ಷಿಕೆ ಇದಕ್ಕೆ ಕೊಡಲಾಗಿದೆ. ಅದಕ್ಕಾಗಿ ಇದು ಪಕ್ಕಾ ಸರ್ಕಸ್​ ಷೋ ಎಂದೇ ಕಾಣಬರುತ್ತಿದೆ. ಈ ಹಿಂದೆ ಇದರ  ಪ್ರೊಮೋ ರಿಲೀಸ್​ ಆದಾಗ  ಕ್ಷಣ ಮಾತ್ರದಲ್ಲಿ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿತ್ತು. ಬಿಗ್​ಬಾಸ್​ಗಿಂತಲೂ ಇದ್ಯಾವ ರಿಯಾಲಿಟಿ ಷೋ ಎಂದು ಪ್ರಶ್ನಿಸಿದ್ದರು.  ಈ ಪ್ರೊಮೋ ಅಭಿಮಾನಿಗಳ ತಲೆಗೆ ಹುಳುಬಿಟ್ಟಂತಾಗಿತ್ತು. ಈಗ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಎಂದು ಹೇಳಿಕೊಂಡಿರುವ ಕಾರಣ, ಬಿಗ್‌ಬಾಸ್​ಗೆ ಠಕ್ಕರ್​ ಕೊಡತ್ತಾ ಕಾದು ನೋಡಬೇಕಿದೆ.

ಒಂದು ವರ್ಷ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ: ಬಿಗ್​ಬಾಸ್​ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು

Latest Videos
Follow Us:
Download App:
  • android
  • ios