ತೆಲಗು ಬಿಗ್ಬಾಸ್ನಲ್ಲಿ ಶುದ್ಧ ಕನ್ನಡದಲ್ಲಿ ಜ್ಯೂನಿಯರ್ ಎನ್ಟಿಆರ್ ಮಾತು: ವಿಡಿಯೋ ವೈರಲ್
ತೆಲಗು ಬಿಗ್ಬಾಸ್ನ ಸೀಸನ್-2 ನಲ್ಲಿ ಹೋಸ್ಟ್ ಆಗಿದ್ದ ಜ್ಯೂನಿಯರ್ ಎನ್ಟಿಆರ್ ಅವರು, ಕನ್ನಡದಲ್ಲಿಯೇ ಮಾತನಾಡಿದ್ದ ವಿಡಿಯೋ ಈಗ ಪುನಃ ವೈರಲ್ ಆಗಿದೆ.
ತೆಲುಗು ಬಿಗ್ ಬಾಸ್ ಸೀಸನ್ 8 ಸೀಸನ್ ನಡೆಯುತ್ತಿದೆ. ಕಳೆದ ತಿಂಗಳಿನಿಂದ ಈ ಷೋ ಆರಂಭವಾಗಿದೆ. ಈ ಬಾರಿಯೂ ಬಿಗ್ಬಾಸ್ನಲ್ಲಿ ಕನ್ನಡಿಗರು ಹವಾ ಮೆಂಟೇನ್ ಮಾಡಿದ್ದಾರೆ. ಈ ಬಾರಿ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಷೋ ಹೋಸ್ಟ್ ಮಾಡ್ತಿದ್ದು, ಕರ್ನಾಟಕದ ನಾಲ್ವರು ಸ್ಪರ್ಧಿಗಳು, ಕನ್ನಡ ವೀಕ್ಷಕರನ್ನು ಸೆಳೆಯೋದರಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇರುವ ಸ್ಪರ್ಧಿಗಳಲ್ಲಿ ನಿಖಿಲ್, ಪೃಥ್ವಿ, ಪ್ರೇರಣಾ ಮತು ಯಶ್ಮಿ ಗೌಡ ಕರ್ನಾಟಕದವರು. ಕನ್ನಡದಲ್ಲಿಯೇ ಮಾತನಾಡಿ ಕೆಲವು ಸ್ಪರ್ಧಿಗಳು ಕನ್ನಡಿಗರಿಗೆ ಖುಷಿಪಡಿಸಿದ್ದು ಇದೆ. ಆದರೆ ಈಗ 2017ರಲ್ಲಿ ನಡೆದ ತೆಲಗು ಬಿಗ್ಬಾಸ್ ಸೀಸನ್-2 ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ.
ಆಗ ಈ ಷೋ ಅನ್ನು ಜ್ಯೂನಿಯರ್ ಎನ್ಟಿಆರ್ ಹೋಸ್ಟ್ ಮಾಡಿದ್ದರು. ಅಷ್ಟಕ್ಕೂ ಇವರ ತಾಯಿ ಕುಂದಾಪುರದವರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಇವರಿಗೂ ನಂಟಿದೆ. ಬಿಗ್ಬಾಸ್ ಸೀಸನ್-2 ನಲ್ಲಿ ಇವರು ಅಲ್ಲಿರುವ ಸ್ಪರ್ಧಿಗಳ ಜೊತೆ ಕನ್ನಡದಲ್ಲಿಯೇ ಮಾತನಾಡಿದ್ದರು. ಆಗ ಸೋಷಿಯಲ್ ಮೀಡಿಯಾ ಇಷ್ಟೊಂದು ಪವರ್ಫುಲ್ ಆಗಿರದ ಹಿನ್ನೆಲೆಯಲ್ಲಿ ಇಷ್ಟೊಂದು ಸದ್ದು ಮಾಡಿರಲಿಲ್ಲ. ಆದರೆ ಇದೀಗ ಆ ವಿಡಿಯೋ ಪುನಃ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಸ್ಪಷ್ಟವಾಗಿ ಕನ್ನಡದ ಸ್ಪರ್ಧಿಗಳ ಜೊತೆ ಕನ್ನಡದಲ್ಲಿಯೇ ಮಾತನಾಡಿದ್ದು, ಇದು ಕನ್ನಡಿಗರ ಮನಸ್ಸನ್ನು ಗೆದ್ದಿದೆ.
ಹೇರ್ ಕಲರ್ ತಂದ ಫಜೀತಿ: ಏನೋ ಹೇಳಿದ್ರೆ, ಏನೋ ಮಾಡಿದ್ರು! ಬಿಗ್ಬಾಸ್ ಸಂಗೀತಾ ಶೃಂಗೇರಿ ಗರಂ!
ಅಷ್ಟಕ್ಕೂ, ಜ್ಯೂನಿಯರ್ ಎನ್ಟಿಆರ್ ಅವರಿಗೆ ಕರ್ನಾಟಕದಲ್ಲಿಯೂ ಬೃಹತ್ ಪ್ರಮಾಣದ ಅಭಿಮಾನಿಗಳು ಇದ್ದಾರೆ. ಅದರಲ್ಲಿಯೂ ಅವರು ಕೆಲ ವರ್ಷಗಳಿಂದ ಕನ್ನಡ ಹಾಗೂ ಕರ್ನಾಟಕದ ಜೊತೆಗಿನ ನಂಟು ಹೆಚ್ಚಿಸಿಕೊಂಡಿದ್ದಾರೆ. ಈ ಷೋನಲ್ಲಿ ಅವರು, ಸ್ಪರ್ಧಿಯೊಬ್ಬರನ್ನು ಉದ್ದೇಶಿಸಿ, ‘ಕನ್ನಡದಲ್ಲಿ ಚೆನ್ನಾಗಿ ಮಾತಾಡ್ತಾ ಇದೀರಾ ನೀವು. ಅವರು ಕನ್ನಡದವರಾ ಅಥವಾ ನೀವು ಕನ್ನಡದವರಾ’ ಎಂದು ಕೇಳಿದ್ದಾರೆ. ‘ನಾವಿಬ್ಬರೂ ಕನ್ನಡಿಗರು’ ಎಂದು ಸ್ಪರ್ಧಿ ಹೇಳಿದಾಗ, ಇದಕ್ಕೆ ಖುಷಿಯಿಂದ ಉತ್ತರಿಸಿದ ಜೂನಿಯರ್ ಎನ್ಟಿಆರ್, ‘ನನ್ನ ಅಮ್ಮ ಕೂಡ ಕನ್ನಡದವರು. ಕುಂದಾಪುರದವರು’ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ಮೀಮ್ಸ್ ಡಾಟ್ ರಾಜಧಾರಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ.
ಅಂದಹಾಗೆ, ಜೂನಿಯರ್ ಎನ್ಟಿಆರ್ ಕೆಲ ತಿಂಗಳ ಹಿಂದೆ ಅಮ್ಮನ ಜೊತೆ ಕುಂದಾಪುರಕ್ಕೆ ಭೇಟಿ ಕೊಟ್ಟಿದ್ದರು. ಅವರ ತಾಯಿಗೆ ಉಡುಪಿ ನೋಡುವ ಹಂಬಲ ಇದ್ದುದರಿಂದ ಇಲ್ಲಿಗೆ ಬಂದಿದ್ದರು. ಅಷ್ಟೇ ಅಲ್ಲದೇ, ಕರ್ನಾಟಕಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಅವರು, ಕನ್ನಡದಲ್ಲೇ ಮಾತನಾಡುತ್ತಾರೆ. ಇನ್ನು ಜೂನಿಯರ್ ಎನ್ಟಿಆರ್ ಅವರ ಚಲನಚಿತ್ರದ ಕುರಿತು ಹೇಳುವುದಾದರೆ, ಅವರ ನಟನೆಯ ‘ದೇವರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆಯಿತು. ಇದಲ್ಲದೆ ‘ವಾರ್ 2’ ಸಿನಿಮಾ ಕೆಲಸಗಳಲ್ಲೂ ಅವರು ಬ್ಯುಸಿ ಆಗಲಿದ್ದಾರೆ. ಇದರ ಶೂಟ್ ಮುಂಬೈನಲ್ಲಿ ನಡೆಯುತ್ತಿದೆ. ಕನ್ನಡಿಗ ಪ್ರಶಾಂತ್ ನೀಲ್ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ.
ಅವ್ರು ಕೂಡ ಕೆಟ್ಟ ಪದ ಬಳಸಿದ್ರು... ಆದ್ರೆ ನಾನೊಬ್ಬನೇ ಟಾರ್ಗೆಟ್ ಆಗಿದ್ಯಾಕೊ? ನೋವು ತೋಡಿಕೊಂಡ ಲಾಯರ್ ಜಗದೀಶ್