ಕಿರುತೆರೆ ನಟಿ ತೇಜಸ್ವಿನಿ ಆಚಾರ್ ಹಾಗೂ ವಿರಾಟ್ ವತ್ಸಲ್ ಮದುವೆ ತಯಾರಿಯಲ್ಲಿದ್ದಾರೆ. ಈ ಮಧ್ಯೆ ತೇಜಸ್ವಿನಿ ಆಚಾರ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ತಾವು ಮೋಸ ಹೋಗಿರೋದಾಗಿ ತಿಳಿಸಿದ್ದಾರೆ.
ಕಿರುತೆರೆ ನಟಿ ತೇಜಸ್ವಿನಿ ಆಚಾರ್ (Tejaswini Achar) ಹಾಗೂ ನಟ ವಿರಾಟ್ ವತ್ಸಲ್ (Virat Vatsal) ದಾಂಪತ್ಯ ಜೀವನಕ್ಕೆ ಕಾಲಿಟ್ತಿದ್ದಾರೆ. ಫೆಬ್ರವರಿ 8 ರಂದು ಇಬ್ಬರು ಸಪ್ತಪದಿ ತುಳಿಯಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕಷುಇ ಸುದ್ದಿಯನ್ನು ಈಗಾಗಲೇ ಅಭಿಮಾನಿಗಳ ಮುಂದೆ ಹಂಚಿಕೊಂಡಿರುವ ಜೋಡಿ, ಈಗ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ತೇಜಸ್ವಿನಿ ಆಚಾರ್ ತಮಗಾದ ಮೋಸವನ್ನು ಎಲ್ಲರ ಮುಂದಿಟ್ಟಿದ್ದಾರೆ. ಆನ್ಲೈನ್ ಶಾಪಿಂಗ್ ಮುನ್ನ ಏನೆಲ್ಲ ಎಚ್ಚರಿಗೆ ತೆಗೆದುಕೊಳ್ಬೇಕು ಎಂಬುದನ್ನು ಹೇಳಿದ್ದಾರೆ.
ತೇಜಸ್ವಿನಿ ಆಚಾರ್ ಗೆ ಮೋಸ
ಮದುವೆ ಅಂದ್ಮೇಲೆ ಶಾಪಿಂಗ್ ಭರ್ಜರಿಯಾಗಿಯೇ ಇರುತ್ತೆ. ಹಳಸಿ, ಮೆಹಂದಿ, ಸಂಗೀತ ಅಂತ ನಾನಾ ಕಾರ್ಯಕ್ರಮಕ್ಕೆ ಬಟ್ಟೆ ಜೊತೆ ಮ್ಯಾಚಿಂಗ್ ಬಳೆ, ಜ್ಯುವೆಲರಿ ಅಗತ್ಯ. ಹೆಣ್ಮಕ್ಕಳು ಬೇರೆಯವರ ಮದುವೆಗೇ ಹತ್ತಾರು ಸಾವಿರ ರೂಪಾಯಿ ಶಾಪಿಂಗ್ ಮಾಡ್ತಾರೆ. ಇನ್ನು ತಮ್ಮ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡೋದ್ರಲ್ಲಿ ಅಚ್ಚರಿ ಇಲ್ಲ. ಅದ್ರಲ್ಲೂ ಸೆಲೆಬ್ರಿಟಿಗಳ ಖರ್ಚು ಸ್ವಲ್ಪ ಜಾಸ್ತಿ.
Veg or Non-veg: ಅಮ್ಮ ಕವಿತಾ ವೆಜ್, ಅಪ್ಪ ಚಂದನ್ ನಾನ್ ವೆಜ್, ಮಗ ಅದ್ವಿಕ್
ಈಗ ಸೋಶಿಯಲ್ ಮೀಡಿಯಾದಲ್ಲಿಯೇ ನೀವು ಜ್ಯುವೆಲರಿ, ಬಟ್ಟೆ, ಸೀರೆ, ಬಂಗಾರ ಖರೀದಿ ಮಾಡ್ಬಹುದು. ಅನೇಕ ಇನ್ಸ್ಟಾಖಾತೆಗಳಲ್ಲಿ ಜನರು ಆಭರಣಗಳ ಮಾರಾಟ ಮಾಡ್ತಿದ್ದಾರೆ. ನೋಡೋಕೆ ತುಂಬಾ ಸುಂದರವಾಗಿ ಕಾಣೋದ್ರಿಂದ ಖರೀದಿ ಆಸೆ ಸಹಜವಾಗಿ ಬರುತ್ತೆ. ತೇಜಸ್ವಿನಿ ಆಚಾರ್ ಕೂಡ ತಮ್ಮ ಮದುವೆಗೆ ಆನ್ಲೈನ್ ಶಾಪಿಂಗ್ ಗೆ ಮುಂದಾಗಿದ್ದರು. ಒಂದಿಷ್ಟು ಆಭರಣಗಳನ್ನು ಅವರು ಇನ್ಸ್ಟಾಗ್ರಾಮ್ ಖಾತೆಯೊಂದರಿಂದ ತರಿಸಿಕೊಂಡಿದ್ದಾರೆ. ಆದ್ರೆ ಅಲ್ಲಿಯೇ ಅವರಿಗೆ ಮೋಸ ಆಗಿದೆ.
ವಿಡಿಯೋದಲ್ಲಿ ಆಭರಣ, ಬಳೆಗಳು ತುಂಬಾ ಸುಂದರವಾಗಿ ಕಾಣಿಸಿವೆ. ಹಾಗಾಗಿ ದುಬಾರಿ ಬೆಲೆ ನೀಡಿ ತೇಜಸ್ವಿನಿ ಎಲ್ಲವನ್ನು ಖರೀದಿ ಮಾಡಿದ್ದಾರೆ. ಬರೀ ಬಳೆ ಸೆಟ್ ಗೆ 3 ಸಾವಿರ ನೀಡಿದ್ರೆ ಒಂದೊಂದು ಸರಕ್ಕೆ 5 – 8 ಸಾವಿರ ನೀಡಿ ಖರೀದಿ ಮಾಡಿದ್ದಾರೆ. ಆದ್ರೆ ಈ ಎಲ್ಲ ಪಾರ್ಸೆಲ್ ಮನೆಗೆ ಬಂದಾಗ ಅವರಿಗೆ ಶಾಕ್ ಆಗಿದೆ. ವಿಡಿಯೋದಲ್ಲಿ ನೋಡಿದ ಆಭರಣಕ್ಕಿಂತ ಈ ಆಭರಣ ತುಂಬಾ ಡಲ್ ಆಗಿತ್ತು. ಕೆಲವು ಕಡೆ ಬಣ್ಣ ಮಾಸಿತ್ತು. ಈ ಬಗ್ಗೆ ತೇಜಸ್ವಿನಿ ಪ್ರಶ್ನೆ ಮಾಡಿದ್ದಾರೆ. ಮಾರಾಟಗಾರರನ್ನು ಸಂಪರ್ಕಿಸಿದ್ದಾರೆ. ಆರಂಭದಲ್ಲಿ ಪ್ರತಿಕ್ರಿಯೆ ನೀಡದ ಮಾರಾಟಗಾರರು, ಸೋಶಿಯಲ್ ಮೀಡಿಯಾದಲ್ಲಿ ಈ ವಿಷ್ಯ ಹಾಕ್ತೇನೆ ಎಂದಾಗ ಉತ್ತರ ನೀಡಿದ್ದಾರೆ. ಆದ್ರೆ ಆಭರಣಗಳನ್ನು ವಾಪಸ್ ತೆಗೆದುಕೊಳ್ಳುವ ಬದಲು, ನೀವು ಎಲ್ಲವನ್ನೂ ಬಳಸಿ ವಾಪಸ್ ನೀಡ್ತಿದ್ದೀರಿ ಎನ್ನುವ ಆರೋಪ ಮಾಡಿದ್ದಾರೆ. ಇದು ತೇಜಸ್ವಿನಿ ಬೇಸರಕ್ಕೆ ಕಾರಣವಾಗಿದೆ.
ತುಂಡು ಬಟ್ಟೆ ಧರಿಸಲ್ಲ' ಎಂದಿರುವ ನಟಿ ಸಾಯಿ ಪಲ್ಲವಿ ಮಾತಿನ ಹಿಂದೆ 'ಈ ಒಂದು ಸೀಕ್ರೆಟ್' ಇದೆ..!
ಆನ್ಲೈನ್ ಶಾಪಿಂಗ್ ಬಗ್ಗೆ ವಿವರವಾಗಿ ವಿಡಿಯೋ ಮಾಡಿದ ತೇಜಸ್ವಿನಿ, ಯಾರಿಂದ ಈ ಆಭರಣ ಖರೀದಿ ಮಾಡಿದ್ದೆ, ಏನೆಲ್ಲ ಸಮಸ್ಯೆ ಆಗಿದೆ ಎಂಬುದನ್ನು ವಿವರಿಸಿದ್ದಾರೆ. ಅಲ್ಲದೆ ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಆನ್ಲೈನ್ ನಲ್ಲಿ ತೋರಿಸೋದು ಒಂದು, ಮನೆಗೆ ಬರೋದು ಇನ್ನೊಂದು ಆಗಿರುತ್ತೆ. ದೊಡ್ಡ ಮೊತ್ತದಲ್ಲಿ ಹಣ ನೀಡಿದಾಗ ಬೇಸರ ಡಬಲ್ ಆಗುತ್ತೆ. ಮದುವೆ ಅಥವಾ ಯಾವುದೇ ಸಮಾರಂಭಕ್ಕೆ ಆಭರಣ ಖರೀದಿ ಮಾಡೋದಾದಲ್ಲಿ ಶಾಪ್ಗೆ ಭೇಟಿ ನೀಡಿ. ಇಲ್ಲವೆ ಅನೇಕಾನೇಕ ವರ್ಷಗಳಿಂದ ಗ್ರಾಹಕರ ಭರವಸೆ ಗಳಿಸಿರುವ ವೆಬ್ ಸೈಟ್ ಗಳಲ್ಲಿಯೇ ಆಭರಣ ಖರೀದಿ ಮಾಡಿ ಅಂತ ತೇಜಸ್ವಿನಿ ಹೇಳಿದ್ದಾರೆ.
ತೇಜಸ್ವಿನಿ ಹಾಗೂ ವಿರಾಟ್ ಸೀರಿಯಲ್ ಮೂಲಕವೇ ಒಂದಾದವರು. ಸೀರಿಯಲ್ ಮಾಡ್ತಾ ಮಾಡ್ತಾ ಇಬ್ಬರ ಮಧ್ಯೆ ಸ್ನೇಹ ಚಿಗುರಿತ್ತು. ಅದು ಪ್ರೀತಿಯಾಗಿ ಈಗ ಮದುವೆಗೆ ಬಂದು ನಿಂತಿದೆ.


