ಪೆಂಟಗನ್​ ಚಿತ್ರದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ ಈಗ ಪೆನ್​ಡ್ರೈವ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹೇಳಿದ್ದೇನು?  

'ಬಿಗ್ ಬಾಸ್' ಮನೆಯಲ್ಲಿ ಬೆಂಕಿ ಎಂದು ಕರೆಸಿಕೊಳ್ಳುತ್ತಿದ್ದ ನಟಿ ತನಿಷಾ ಕುಪ್ಪಂಡ ಈಗ ಪೆನ್​ಡ್ರೈವ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್​ಬಾಸ್​ ಬಳಿಕ ಸಕತ್​ ಫೇಮಸ್​ ಆಗಿರೋ ತನಿಷಾ ಅವರಿಗೆ ಸಿನಿಮಾದಿಂದಲೂ ಆಫರ್​ ಬರುತ್ತಿದ್ದು, ಅವರ ಪೆನ್​ಡ್ರೈವ್​ ಸಿನಿಮಾ ಶೀಘ್ರದಲ್ಲಿಯೇ ತೆರೆಯ ಮೇಲೆ ಬರಲಿದೆ. ಈ ಚಿತ್ರದಲ್ಲಿ ತನಿಷಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಕೆಲ ದಿನಗಳ ಹಿಂದೆ ನಟಿ ಬಹಿರಂಗಪಡಿಸಿದ್ದರು. ಪೆನ್‌ ಡ್ರೈವ್ ಚಿತ್ರದ ಕಥೆ ತುಂಬ ಚೆನ್ನಾಗಿದ್ದು ನಾನು ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ ಎಂದಿದ್ದರು. ಜೊತೆಗೆ ನೀವು ಅಂದುಕೊಂಡಂತೆ ಅದು ಬಹಳ ಸದ್ದು ಮಾಡಿರೋ ಪೆನ್​ಡ್ರೈವ್​ ಕಥೆಯಲ್ಲ, ಅಂದ್ರೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೇಸ್ ಅಲ್ಲ ಮತ್ತೆ. ಇದರಲ್ಲಿ ಇರೋದೇ ಬೇರೆ ಎಂದು ಹೇಳುವುದನ್ನೂ ಮರೆಯಲಿಲ್ಲ ನಟಿ.

ಅಂದಹಾಗೆ ಪೆನ್​ಡ್ರೈವ್​ನಲ್ಲಿ ತನಿಷಾ ಅವರು ಓರ್ವ ಮಹಿಳಾ ಪೊಲೀಸ್ ಹೇಗೆಲ್ಲಾ ಕರ್ತವ್ಯ ನಿರ್ವಹಿಸಬೇಕಾಗುತ್ತದೆ, ಯಾವ್ಯಾರ ರೀತಿಗಳ ಕೇಸ್‌ ಹ್ಯಾಂಡಲ್ ಮಾಡಬೇಕಾಗುತ್ತದೆ ಎಂಬುದನ್ನು ತಿಳಿಸಿದ್ದಾರಂತೆ. ಅಂದಹಾಗೆ ಈ ಚಿತ್ರವನ್ನು ಸೆಬಾಸ್ಟಿನ್ ಡೇವಿಡ್ ಮಾಡುತ್ತಿದ್ದಾರೆ. ಲಯನ್ ಆರ್. ವೆಂಕಟೇಶ್ ಮತ್ತು ಲಯನ್ ಎಸ್. ವೆಂಕಟೇಶ್ ಚಿತ್ರದ ನಿರ್ಮಾಪಕರು. ಈ ಚಿತ್ರದ ಶೀರ್ಷಿಕೆ ಕುರಿತು ವಿವರಿಸಿದ್ದ ಅವರು, ಇಂಥದ್ದೊಂದು ಶೀರ್ಷಿಕೆ ನೀಡಿದ ವಾಣಿಜ್ಯ ಮಂಡಳಿಗೆ ಧನ್ಯವಾದ. ಪ್ರಸ್ತುತ ಚಾಲ್ತಿಯಲ್ಲಿರುವ ಪೆನ್ ಡ್ರೈವ್​ಗೂ ನಮ್ಮ ಚಿತ್ರದ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರೂ ಸ್ಪಷ್ಟಪಡಿಸಿದ್ದರು. ಮಾಲಾಶ್ರೀ ಅವರನ್ನು ನೋಡಿದಾಗ ಅವರು ಮಾಡಿದ ಪೊಲೀಸ್​ ಪಾತ್ರ ಮಾಡಬೇಕು ಎಂದು ಆಸೆ ಇತ್ತು. ಇದೀಗ ನೆರವೇರಿದೆ ಎಂದು ತನಿಷಾ ಸಂದರ್ಶನದಲ್ಲಿ ಹೇಳಿದ್ದರು. 

ಪೂರ್ಣ ಬೆತ್ತಲಾಗೋಕೆ ರೆಡಿನಾ ಕೇಳಿದ... ಶಾಕಿಂಗ್​ ವಿಷ್ಯ ತಿಳಿಸಿದ ಬಿಗ್​ಬಾಸ್​ ತನಿಷಾ ಕುಪ್ಪಂಡ

ಈ ಚಿತ್ರದ ಡೈಲಾಗ್​ ಹೇಳುವಾಗ ತನಿಷಾ ಎಡವಟ್ಟು ಮಾಡಿದ್ದು, ಅದರ ತುಣುಕು ರೀಲ್ಸ್​ ರೂಪದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರಲ್ಲಿ ಮೊದಲಿಗೆ ನಟಿ, ನಮ್ಮ ಪೆನ್​ಡ್ರೈವ್​ ಸೆಟ್​ಗೆ ಬಂದಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದ ಎಂದಿದ್ದಾರೆ. ನಂತರ ಚಿತ್ರದ ಡೈಲಾಗ್​ ಹೇಳಲು ಮುಂದಾದರು. ನಿಮಗೆಲ್ಲಾ ಧನ್ಯವಾದ ಹೇಳ್ತಾ ಎಸಿಪಿ... ಮುಂದೆ ಚಿತ್ರದಲ್ಲಿ ತಮ್ಮ ಹೆಸರು ನೆನಪಾಗದೇ ಥೋ ಥೋ ಥೋ ಹೋಯ್ತದು ಎಂದಿದ್ದಾರೆ. ಇದಷ್ಟೇ ವಿಡಿಯೋ ಈಗ ಸಕತ್​ ಸೌಂಡ್​ ಮಾಡುತ್ತಿದೆ. ಎಸ್​ವಿಎನ್​ ಈ ವಿಡಿಯೋ ಹಂಚಿಕೊಂಡಿದೆ. ಅಂದಹಾಗೆ, ಚಿತ್ರದಲ್ಲಿ ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನಾ, ರೇಣುಕಾ, ಗೀತಾ, ಭಾಗ್ಯ, ಮತ್ತು ಗೀತಾ ಪ್ರಿಯಾ ಸೇರಿದಂತೆ ಹಲವರು ನಟಿಸಿದ್ದಾರೆ. ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವನ್ನು ಬರೆದಿದ್ದಾರೆ. 

ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ ಇದಾಗಲೇ ಹಲವಾರು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿರುವ ತನಿಷಾ ಕುಪ್ಪಂಡ ಬಿಗ್​ಬಾಸ್​ನಿಂದ ಸಕತ್​ ಫೇಮಸ್​ ಆದವರು. ಆದರೆ ಇವರು ಬಹಳ ಸದ್ದು ಮಾಡಿದ್ದು ‘ಪೆಂಟಗನ್’ ಚಿತ್ರದ ಮೂಲಕ. ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರದಲ್ಲಿ ತನಿಷಾ ಬಹಳ ಸದ್ದು ಮಾಡಲು ಕಾರಣ, ಅವರು ಇದರಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಕಾರಣ. ಚಿತ್ರ ಬಿಡುಗಡೆಗೂ ಮುನ್ನ, ಬ್ಯಾಕ್‌ಲೆಸ್ ಆಗಿರುವ ತನಿಷಾ ಕುಪ್ಪಂಡ ಲಿಪ್ ಲಾಕ್ ಕೂಡ ಮಾಡಿರುವ ಹಾಡು ರಿಲೀಸ್​ ಆಗುತ್ತಿದ್ದಂತೆಯೇ ಹಲ್​ಚಲ್​ ಸೃಷ್ಟಿಸಿತ್ತು. ಪೆಂಟಗನ್​ ಚಿತ್ರದಲ್ಲಿ ಇಂಟಿಮೇಟ್​ ಸೀನ್​ ಮಾಡುವಾಗ ತುಂಬಾ ಕನ್​ಫರ್ಟ್​ ಇತ್ತು. ಎಲ್ಲರನ್ನೂ ನಿರ್ದೇಶಕರು ಹೊರಕ್ಕೆ ಕಳಿಸಿದ್ದರು. ನನಗೆ ಈಜಿ ಫೀಲ್​ ಮಾಡಿದರು. ಕ್ಯಾಮೆರಾಮೆನ್​, ನಿರ್ದೇಶಕರು ಮತ್ತು ನಾವು ನಟರು ಅಷ್ಟೇ ಇದ್ವಿ. ಆದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ಚಿತ್ರದ ಮೊದಲ ಹಾಡು ಬಿಡುಗಡೆಯಾದಾಗ ತುಂಬಾ ಮಂದಿ ನೆಗೆಟಿವ್​ ಆಗಿಯೂ ಕಮೆಂಟ್​ ಮಾಡಿದ್ರು. ದುಡ್ಡಿಗಾಗಿ ಏನು ಬೇಕಾದ್ರೂ ಮಾಡ್ತಾರೆ ಎಂದ್ರು. ಇದು ನನಗೆ ನೋವಾಯಿತು. ಅಸಲಿಗೆ ಆ ಹಾಡಿನಲ್ಲಿ ಸಕತ್​ ಬೋಲ್ಡ್​ ಸೀನ್​ ಇತ್ತು ಬಿಟ್ಟರೆ, ಚಿತ್ರ ನೋಡಿದಾಗ ಇಷ್ಟೇನಾ ಎನ್ನುವ ಹಾಗಿದೆ ಎಂದಿದ್ದರು. ಈಗ ಪೆನ್​ಡ್ರೈವ್​ ಹೇಗೆ ವರ್ಕ್​ಔಟ್​ ಆಗಲಿದೆ ನೋಡಬೇಕಿದೆ. 

ನನ್ನ ಸೈಜ್​ 41, ಇಲ್ಲೇ ಕೊಡ್ಲಾ ಅಥವಾ ಅಲ್ಲಿಗೆ ಬರ್ತಿಯಾ? ನಿರ್ಮಾಪಕನಿಗೆ ಹೀಗೆ ಹೇಳಿದ್ರಂತೆ ಖುಷ್ಬೂ!