ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಒಂದು ಕಡೆ ಮದುವೆ ಸಂಭ್ರಮ ಮನೆ ಮಾಡಿದೆ. ಮತ್ತೊಂದು ಕಡೆ ತಾಂಡವ್ ಕಾಟ ಶುರುವಾಗಿದೆ. ಅದನ್ನು ತಡೆಯೋಕೆ ಹೀರೋ ಎಂಟ್ರಿಯಾಗಿದ್ದು, ಯಾರಾತ ಗೊತ್ತಾ? 

ಕಲರ್ಸ್ ಕನ್ನಡ (Colors Kannada) ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ನಲ್ಲಿ ಸದ್ಯ ಭಾಗ್ಯಾ ತಂಗಿ ಪೂಜಾ ಕಲ್ಯಾಣೋತ್ಸವ (Puja Kalyanotsava) ನಡೆಯುತ್ತಿದೆ. ತಂಗಿ ಪೂಜಾ ಮದುವೆಗಾಗಿ ಭಾಗ್ಯಾ ಸಿಕ್ಕಾಪಟ್ಟೆ ಕಷ್ಟಪಡ್ತಿದ್ದಾಳೆ. ಎಲ್ಲಿಂದ ಹಣ ಹೊಂದಿಸೋದು ಎನ್ನುವ ಚಿಂತೆಗೆ ಸದ್ಯ ಕಿಶನ್ ಮನೆಯವರು ನೆಮ್ಮದಿ ನೀಡಿದ್ದಾರೆ. ಮದುವೆ ಹೊಣೆಯನ್ನು ಕಾಮತ್ ಕುಟುಂಬ ವಹಿಸಿಕೊಂಡಿದೆ. ಇದ್ರಿಂದ ಭಾಗ್ಯಾ ಸ್ವಲ್ಪ ರಿಲೀಫ್ ಆಗಿದ್ರೂ, ತಾಂಡವ್ ಕಾಟ ಮತ್ತೆ ಶುರುವಾಗಿದೆ.

ಪೂಜಾ ಹಾಗೂ ಕಿಶನ್ ಪ್ರೀತಿ ಮಾಡ್ತಿದ್ದಾರೆ ಎಂಬುದು ಗೊತ್ತಾಗಿ ಪಾರ್ಕ್ ನಲ್ಲಿ ಇಬ್ಬರಿಗೂ ಮದುವೆ ಮಾಡಿಸುವ ಪ್ಲಾನ್ ಮಾಡಿದ್ದ ತಾಂಡವ್ ಅದ್ರಲ್ಲಿ ಸೋತಿದ್ದ. ಮದುವೆಗೆ ತಾಂಡವ್ ನನ್ನು ಇನ್ವೈಟ್ ಮಾಡಲು ಭಾಗ್ಯಾ ಮುಂದಾಗಿದ್ಲು. ಆದ್ರೆ ಕುಸುಮಾ ಇದಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಳು. ಮಗನನ್ನು ಮದುವೆಗೆ ಕರೆಯೋದು ಬೇಡ ಎಂದಿದ್ದಳು. ಆದ್ರೀಗ ಮದುವೆಗೆ ತಾಂಡವ್ ಎಂಟ್ರಿಯಾಗಿದೆ. ಮದುವೆ ನಿಲ್ಲಿಸ್ತೇನೆ ಅಂತ ತಾಂಡವ್ ಪಣ ತೊಟ್ಟಿದ್ದಾನೆ. ಇದಕ್ಕೆ ಕುಸುಮಾ ಒಂದ್ಕಡೆಯಿಂದ ವಿರೋಧ ಮಾಡ್ತಿದ್ದರೆ ಇನ್ನೊಂದು ಕಡೆಯಿಂದ ತಾಂಡವ್ ತಡೆಯಲು ವೈಷ್ಣವ್ ಎಂಟ್ರಿಯಾಗಿದೆ.

ಕಲರ್ಸ್ ಕನ್ನಡ ಸೀರಿಯಲ್ ಪ್ರೋಮೋ ಪೋಸ್ಟ್ ಮಾಡಿದೆ. ಇದ್ರಲ್ಲಿ ತಾಂಡವ್ ಕೋಪದಲ್ಲಿ ಬರ್ತಿರೋದನ್ನು ನೀವು ಕಾಣ್ಬಹುದು. ತಾಂಡವ್ ನೋಡಿ ಭಾಗ್ಯಾ ಶಾಕ್ ಆಗಿದ್ರೆ, ಕುಸುಮಾ ಅವನನ್ನು ತಡೆಯುವ ಪ್ರಯತ್ನ ಮಾಡ್ತಿದ್ದಾಳೆ. ಆದ್ರೆ ಮದುವೆ ನಿಲ್ಸಿಯೇ ನಿಲ್ಲಿಸ್ತೇನೆ ಅಂತ ರೂಮಿನಿಂದ ಹೊರಗೆ ಹೋಗ್ತಿದ್ದ ತಾಂಡವ್ ಮುಂದೆ ಅಪುರೂಪದ ವ್ಯಕ್ತಿ ಎಂಟ್ರಿಯಾಗಿದೆ. ಲಕ್ಷ್ಮಿ ಭಾರಮ್ಮ ಸೀರಿಯಲ್ ವೈಷ್ಣವ್ ಅಲ್ಲಿಗೆ ಬಂದಿದ್ದಾನೆ. ವೈಷ್ಣವ್ ಸಂಬಂಧದಲ್ಲಿ ಭಾಗ್ಯಾ ಮೈದುನನಾಗ್ಬೇಕು. ವೈಷ್ಣವ್ ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಇದ್ರ ಜೊತೆ ಅವ್ರ ನಿರೀಕ್ಷೆ ಹೆಚ್ಚಾಗಿದೆ.

ಪ್ರೋಮೋ ನೋಡಿದ ಫ್ಯಾನ್ಸ್, ವೈಷ್ಣವ್ ಜೊತೆ ಲಕ್ಷ್ಮಿ ಬಂದ್ರೆ ಚೆನ್ನಾಗಿರ್ತಾಯಿತ್ತು ಅಂತ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಇಲ್ಲೂ ಟ್ವಿಸ್ಟ್ ಇದೆ, ವೈಷ್ಣವ್ ಹಿಂದೆ ಲಕ್ಷ್ಮಿ ಇದ್ದೇ ಇರ್ತಾಳೆ ಎನ್ನುತ್ತಿದ್ದಾರೆ. ವೈಷ್ಣವ್ ಜೊತೆ ಲಕ್ಷ್ಮಿ ಬಂದಿರೋದನ್ನು ಪ್ರೋಮೋದಲ್ಲಿ ತೋರಿಸಲಾಗಿಲ್ಲ. ವೀಕ್ಷಕರೇ ಊಹೆ ಮಾಡಿಕೊಳ್ತಿದ್ದಾರೆ. ಲಕ್ಷ್ಮಿಬಾರಮ್ಮ ಸೀರಿಯಲ್ ಮುಗಿದ್ರೂ ಅದ್ರ ಕ್ರೇಜ್ ಕಡಿಮೆ ಆಗಿಲ್ಲ. ಜನರಿಹೆ ಲಕ್ಷ್ಮಿ, ವೈಷ್ಣವ್ ಹಾಗೂ ಕೀರ್ತಿ ನೋಡುವ ಆಸೆ ಈಗ್ಲೂ ಇದೆ. ಸೀರಿಯಲ್ ಮುಗಿಯೋ ಟೈಂನಲ್ಲಿ ಲಕ್ಷ್ಮಿ ಗರ್ಭಿಣಿ ಆಗಿದ್ಲು. ಈಗ ಪೂಜಾ ಮದುವೆಗೆ ಮಗು ಜೊತೆ ಲಕ್ಷ್ಮಿ ಬರ್ತಾಳಾ ಎನ್ನುವ ಪ್ರಶ್ನೆಯನ್ನೂ ಜನರು ಕೇಳಿದ್ದಾರೆ. ಕೀರ್ತಿ ಹಾಗೂ ಲಕ್ಷ್ಮಿ ನೋಡ್ದೆ ಬಹಳ ದಿನವಾಯ್ತು, ಅವರನ್ನೂ ಮದುವೆಗೆ ಕರೆಯಿಸಿ ಎನ್ನುತ್ತಿದ್ದಾರೆ ಫ್ಯಾನ್ಸ್.

ಇನ್ನು ಸೀರಿಯಲ್ ಬಗ್ಗೆ ಹೇಳೋದಾದ್ರೆ ಪೂಜಾ ಮದುವೆ ಕಥೆ ಕಳೆದ ಒಂದೆರಡು ತಿಂಗಳಿಂದ ನಡೆಯುತ್ತಿದೆ. ಮೊದಲು ಕಿಶನ್ ಪರೀಕ್ಷೆ ನಡೀತು. ನಂತ್ರ ಕಿಶನ್ ಅಣ್ಣನಾಗಿ ಆದಿ ಎಂಟ್ರಿಯಾಯ್ತು. ಅದಾದ್ಮೇಲೆ ಕಿಶನ್ ಅತ್ತೆಯಾಗಿ ಮೀನಾಕ್ಷಿ ಎಂಟ್ರಿಯಾಯ್ತು. ಇಬ್ಬರೂ ಭಾಗ್ಯಾಗೆ ಕಷ್ಟಕೊಡಲು ಪಣತೊಟ್ಟಿದ್ದಾರೆ. ಆದಿ, ವೀಲ್ ಬರೆಸಿ, ಭಾಗ್ಯಾಳ ಪರೀಕ್ಷೆ ಮಾಡಿದ್ರೆ, ಮೀನಾಕ್ಷಿ ಒಂದಾದ್ಮೇಲೆ ಒಂದರಂತೆ ಭಾಗ್ಯಾಗೆ ಕಷ್ಟಕೊಡ್ತಾನೇ ಬಂದಿದ್ದಾಳೆ. ಇಷ್ಟು ದಿನ ಹಣದ ಆಟವಾಡ್ತಿದ್ದ ಮೀನಾಕ್ಷಿ ಈಗ ಭಾಗ್ಯಾ ಭಾವನೆ ಜೊತೆ ಆಟ ಆಡುವ ನಿರ್ಧಾರ ಮಾಡಿದ್ದಾಳೆ. ಮದುವೆಯಲ್ಲಿ ಭಾಗ್ಯಾಗೆ ಯಾವುದೇ ಕೆಲ್ಸ ನೀಡ್ದೆ ಅಳನ್ನು ದೂರವಿಟ್ಟು ನೋವು ನೀಡಲು ಮುಂದಾಗಿದ್ದಾಳೆ. ಏನೇ ಆಗ್ಲಿ,ಆದಷ್ಟು ಬೇಗ, ಸುಸೂತ್ರವಾಗಿ ಪೂಜಾ ಹಾಗೂ ಕಿಶನ್ ಮದುವೆ ಮುಗಿಸಿ ಎನ್ನುತ್ತಿದ್ದಾರೆ ಫ್ಯಾನ್ಸ್.

View post on Instagram