Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ತಾಂಡವ್ ಮನೆ ಬಿಟ್ಟು ಬಂದಿದ್ದಾನೆ. ಬೀದಿ ಪಾಲಾಗಿರುವ ತಾಂಡವ್ ಅವರು ಭಾಗ್ಯ ಬಳಿ ಕ್ಷಮೆ ಕೇಳುತ್ತಾರೆ. ಈ ಧಾರಾವಾಹಿ ಕಥೆಯ ಬಗ್ಗೆ ಸುದರ್ಶನ್ ರಂಗಪ್ರಸಾದ್ ಅವರು ಮಾತನಾಡಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ( Bhagyalakshmi Kannada Serial ) ತಾಂಡವ್ ಬದಲಾಗಿದ್ದು, ಭಾಗ್ಯ ಬಳಿ ಕ್ಷಮೆ ಕೇಳುವ ಪ್ರೋಮೋವೊಂದು ರಿಲೀಸ್ ಆಗಿದೆ. ಇದನ್ನು ನೋಡಿ ವೀಕ್ಷಕರಂತೂ ಫುಲ್ ಖುಷಿಯಾಗಿದ್ದಾರೆ. ಈ ಬಗ್ಗೆ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ.
ತಾಂಡವ್ ಪಾತ್ರ ಈಗ ಬದಲಾಗಿದೆ
ಹೌದು, ಸದ್ಯ ಒಂದು ಪ್ರೋಮೋ ಔಟ್ ಆಗಿದೆ. ಮುಂದೆ ಏನು ಎನ್ನೋದು ನಮಗೂ ಕೂಡ ಗೊತ್ತಿಲ್ಲ.
ತಾಂಡವ್ ಪಾತ್ರ ಬದಲಾಗಿರುವ ಬಗ್ಗೆ ವೀಕ್ಷಕರು ಏನು ಹೇಳುತ್ತಾರೆ?
ಬಹುತೇಕರು ಮಾತ್ರ ತಾಂಡವ್ ಒಳ್ಳೆಯವನಲ್ಲ, ಕೆಟ್ಟವನು, ತಾಂಡವ್ ಮಾತ್ರ ಬದಲಾಗೋದಿಲ್ಲ, ಇದು ನಾಟಕ ಆಗಿರುತ್ತದೆ, ನಂಬಲೇಬೇಡಿ ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ ತಾಂಡವ್ ಬದಲಾಗಿದ್ದು ನೋಡಿ ಕೆಲವರು ಖುಷಿಪಟ್ಟಿದ್ದಾರೆ.
ಕಲಾವಿದರಾಗಿ ಒಂದೇ ಧಾರಾವಾಹಿಯಲ್ಲಿ ಎರಡು ಶೇಡ್ ನಿಭಾಯಿಸುತ್ತಿರುವುದು ಹೇಗೆ ಅನಿಸುತ್ತಿದೆ?
ಕಳೆದ ಮೂರು ವರ್ಷಗಳಿಂದ ಕಿರುಚೋದಿ, ಕೂಗಾಡೋದು ಮಾಡುತ್ತಿದ್ದೆ. ಈಗ ತಾಂಡವ್ ಬದಲಾದರೆ ಅದೆಲ್ಲ ಇರೋದಿಲ್ಲ. ತಾಂಡವ್ ಬದಲಾಗಿರೋದು ನಿಜವಾದರೆ, ನನ್ನ ನಟನೆ ಕೂಡ ಬದಲಾಗುವುದು, ಕಲಾವಿದನಾಗಿ ಈ ಬದಲಾವಣೆ ನನಗೆ ಖುಷಿಯಾಗಿದೆ.
ತಾಂಡವ್ ಬದಲಾಗಿದ್ದನ್ನು ವೀಕ್ಷಕರ ಸ್ವೀಕಾರಿಸುವ ಬಗ್ಗೆ ಏನು ಹೇಳುತ್ತೀರಿ?
ತಾಂಡವ್ ಕೆಟ್ಟವನು ಎಂದು ವೀಕ್ಷಕರು ಅಂದುಕೊಂಡಿದ್ದಾರೆ. ಈಗ ಅವನು ಒಳ್ಳೆಯವನಾದರೆ ವೀಕ್ಷಕರು ಸ್ವೀಕರಿಸೋದು ಕೂಡ ಸುಲಭ ಇಲ್ಲ. ಮೂರು ವರ್ಷದ ಇಮೇಜ್ ತಲೆಯಲ್ಲಿ ಕೂತಾಗ, ಅದನ್ನು ಬದಲಿಸಬೇಕು. ಒಟ್ಟಿನಲ್ಲಿ ನಮ್ಮ ಕಥೆಗಾರರು, ಬರಹಗಾರರು ಯಾವ ರೀತಿ ಕಥೆ ಮಾಡಲಿದ್ದಾರೆ ಎಂಬ ಕುತೂಹಲ ನನಗೂ ಇದೆ.
ಭಾಗ್ಯ ಈಗ ಎರಡನೇ ಮದುವೆ ಆಗಬೇಕಾ? ತಾಂಡವ್ ಜೊತೆ ಮತ್ತೆ ಸಂಸಾರ ಮಾಡಬೇಕಾ ಎಂಬ ಚರ್ಚೆ ನಡೆಯುತ್ತಿದೆ. ನಿಮ್ಮ ಪ್ರಕಾರ ಯಾವುದು ಸರಿ?
ಇದರಲ್ಲಿ ಸರಿ ತಪ್ಪು ಎಂದು ಚರ್ಚೆ ಮಾಡೋದು ನನ್ನ ಪ್ರಕಾರ ತಪ್ಪು. ಕೆಲವರು ಒಂದು ರಿಲೇಶನ್‌ಶಿಪ್ ಅಂತ್ಯವಾಗುತ್ತಿದ್ದಂತೆ ಇನ್ನೊಂದು ರಿಲೇಶನ್‌ಶಿಪ್‌ಗೆ ತರಾತುರಿಯಲ್ಲಿ, ಆತುರದ ನಿರ್ಧಾರ ಮಾಡಿ ಕಾಲಿಡುತ್ತಾರೆ. ಇದು ತಪ್ಪು. ಭಾಗ್ಯ ಮತ್ತೆ ಮದುವೆ ಆಗಬೇಕಾ? ತಾಂಡವ್ ಜೊತೆ ಇರಬೇಕಾ ಎನ್ನೋದು ಅವಳಿಗೆ ಬಿಟ್ಟಿದ್ದು. ಹೀಗಾಗಿ ನಾನು ಏನೂ ಹೇಳೋದಿಲ್ಲ.
ಭಾಗ್ಯಲಕ್ಷ್ಮೀ ಧಾರಾವಾಹಿ ಮುಕ್ತಾಯ ಆಗುತ್ತಿದೆಯಂತೆ?
ಸದ್ಯದ ಧಾರಾವಾಹಿ ಎಪಿಸೋಡ್ ನೋಡಿ ಇದು ಕ್ಲೈಮ್ಯಾಕ್ಸ್ ಇರಬಹುದು ಎಂದು ವೀಕ್ಷಕರಿಗೆ ಅನಿಸಿದೆ. ಆದರೆ ಭಾಗ್ಯಲಕ್ಷ್ಮೀ ಸದ್ಯ ಮುಕ್ತಾಯ ಆಗೋದಿಲ್ಲ.


