ಆರಂಭದಲ್ಲಿ ತೀರ ಪಡ್ಡೆ ಹೈಕಳ ಲೆವೆಲ್‌ನಲ್ಲಿರುವ ಕಳ್ಳರು ಇದ್ದಕ್ಕಿದ್ದ ಹಾಗೆ ಕಂಪ್ಲೀಟ್ ಪ್ರಬುದ್ಧರಾಗಿ ಬದಲಾಗುವ ಬಗೆ ಇನ್ನಷ್ಟು ಕನ್ವಿನ್ಸಿಂಗ್ ಆಗಿರಬಹುದಿತ್ತು. ಯದ್ವಾತದ್ವಾ ಅನಾವಶ್ಯಕ ಅಂಶಗಳಿವೆ. ಹಾಡು, ಡ್ಯಾನ್ಸ್ ಕಿಕ್ ಹೆಚ್ಚಿಸಲ್ಲ.
ಪೀಕೆ
ಕಿಸೆಗಳ್ಳತನ ಮಾಡ್ತಿದ್ದ ಐದಾರು ಯುವಕರಿಗೆ ಇದ್ದಕ್ಕಿದ್ದಂತೆ ದೊಡ್ಡ ಲೆವೆಲ್‌ಗೆ ಬೆಳೆಯಬೇಕು ಎಂಬ ಕಿಚ್ಚು ಬಂದು ಅವರು ಬ್ಯಾಂಕ್ ದರೋಡೆಗೆ ಮುಂದಾಗುತ್ತಾರೆ. ಸಿಟಿಯ ಬ್ಯಾಂಕ್‌ಗಳಾದರೆ ಸೆಕ್ಯೂರಿಟಿ ಹೆಚ್ಚು ಅನ್ನೋ ಕಾರಣಕ್ಕೆ ಹಳ್ಳಿ ಬ್ಯಾಂಕ್ ಅನ್ನು ಆಯ್ಕೆ ಮಾಡುತ್ತಾರೆ. ಅದರ ಹೆಸರೇ ಭಾಗ್ಯಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್.
ಅಲ್ಲಿ ಅನನುಭವಿ ಕಳ್ಳರ ಪೇಚಾಟ, ಪರಿಸ್ಥಿತಿಯೂ ಇವರ ವಿರುದ್ಧವಾಗಿದ್ದು ಆಗುವ ಅವಘಡ, ಸಡನ್ನಾಗಿ ಎದುರಾಗುವ ಸರ್ಪ್ರೈಸ್ ಇವೆಲ್ಲ ಸಿನಿಮಾದ ಮೊದ ಮೊದಲ ಕಥಾಭಾಗ. ಎರಡನೇ ಭಾಗದಲ್ಲಿ ಸಿನಿಮಾ ಗಂಭೀರ ಅಂಶಕ್ಕೆ ಹೊರಳಿ, ಕಥೆ ಕಡಿದಾದ ಹಾದಿಯಲ್ಲಿ ಮುಂದುವರಿದು ಕೊನೆಯಲ್ಲಿ ರಾಬಿನ್‌ಹುಡ್ ರೀತಿಯ ವರ್ಶನ್‌ಗೆ ಜಿಗಿಯುತ್ತದೆ.
ಈ ಥರ ಕಥೆ ಮಾಡುವಾಗ ಫೋಕಸ್, ವೇಗ, ಸ್ಪಷ್ಟತೆ, ಸಸ್ಪೆನ್ಸ್ ತೀಕ್ಷ್ಣವಾಗಿದ್ದಷ್ಟೂ ಸಿನಿಮಾ ಪರಿಣಾಮಕಾರಿಯಾಗುತ್ತದೆ. ಈ ಸಿನಿಮಾದಲ್ಲಿ ಅದೇ ಮಿಸ್ಸಿಂಗ್. ಆರಂಭದಲ್ಲಿ ತೀರ ಪಡ್ಡೆ ಹೈಕಳ ಲೆವೆಲ್‌ನಲ್ಲಿರುವ ಕಳ್ಳರು ಇದ್ದಕ್ಕಿದ್ದ ಹಾಗೆ ಕಂಪ್ಲೀಟ್ ಪ್ರಬುದ್ಧರಾಗಿ ಬದಲಾಗುವ ಬಗೆ ಇನ್ನಷ್ಟು ಕನ್ವಿನ್ಸಿಂಗ್ ಆಗಿರಬಹುದಿತ್ತು. ಯದ್ವಾತದ್ವಾ ಅನಾವಶ್ಯಕ ಅಂಶಗಳಿವೆ. ಹಾಡು, ಡ್ಯಾನ್ಸ್ ಕಿಕ್ ಹೆಚ್ಚಿಸಲ್ಲ.
ಚಿತ್ರ: ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ
ನಿರ್ದೇಶನ: ಅಭಿಷೇಕ್ ಮಂಜುನಾಥ್
ತಾರಾಗಣ: ದೀಕ್ಷಿತ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಬೃಂದಾ ಆಚಾರ್ಯ, ವಿಶ್ವನಾಥ್ ಮಂಡಲಿಕ
ಬದಲಿಗೆ ದೃಶ್ಯವೊಂದರಲ್ಲಿ ಬ್ಯಾಂಕ್ ಮ್ಯಾನೇಜರ್ ನಾಯಕಿ ಜೊತೆ ಕುಣಿಯೋದೇ ಮಜಾ ಅನಿಸುತ್ತದೆ. ಈ ಥರ ಸಿಚುವೇಶನಲ್ ಕಾಮಿಡಿ ಸಿನಿಮಾದ ಪಾಸಿಟಿವ್ ಅಂಶ. ಅಮೆಚ್ಯೂರ್ ಹುಡುಗರಂತೆ ಸಿನಿಮಾವೂ ಎಲ್ಲೆಲ್ಲೆಲ್ಲೋ ಅಲೆದಾಡಿ ಕೊನೆಗೆ ಕಷ್ಟಪಟ್ಟು ಟ್ರಾಕಿಗೆ ಮರಳುತ್ತದೆ. ಅಷ್ಟರವರೆಗೆ ಈ ಕಾಲದ ಪ್ರೇಕ್ಷಕ ಥೇಟರಲ್ಲಿ ಕೂರುತ್ತಾನಾ ಅನ್ನುವುದು ಪ್ರಶ್ನೆ. ಬೆಟ್ಟ ಅಗೆದು ಇಲಿ ಹಿಡಿದ ಕಥೆಯನ್ನು ಈ ಚಿತ್ರಕ್ಕೆ ಬೇರೆ ಬಗೆಯಲ್ಲಿ ಅನ್ವಯಿಸಬಹುದು.


