Asianet Suvarna News Asianet Suvarna News

ಕುಡಿತದ ಚಟಕ್ಕೆ ಖ್ಯಾತ ಯೂಟ್ಯೂಬರ್ ಸಾವು; ಹಣ ಸಹಾಯ ಮಾಡಿದರೂ ಬದುಕಲಿಲ್ಲ!

ಹಣ ಸಹಾಯಕ್ಕೆ ಮನವಿ ಮಾಡಿದ್ದ ಕುಟುಂಬಸ್ಥರು. ಲಕ್ಷ ಲಕ್ಷ ಕಲೆಕ್ಟ್‌ ಆದರೂ ರಮೇಶ್ ಉಳಿಯಲಿಲ್ಲ.....

Tamil actor youtuber Bijili Ramesh passes away to illness vcs
Author
First Published Aug 27, 2024, 2:20 PM IST | Last Updated Aug 27, 2024, 2:20 PM IST

2018ರಲ್ಲಿ ವೈರಲ್ ಆದ ಪ್ರ್ಯಾಂಕ್ ವಿಡಿಯೋ ಮೂಲಕ ಬಿಜಲಿ ರಮೇಶ್ ಸೆನ್ಸೇಷನಲ್ ಸ್ಟಾರ್ ಆಗಿಬಿಟ್ಟರು.  ಅಲ್ಲಿಂದ ಸಿನಿಮಾ ಜರ್ನಿ ಆರಂಭಿಸಿದ ಹಾಸ್ಯ ನಟ ಸಿಕ್ಕಾಪಟ್ಟೆ ಫ್ಯಾನ್ ಬೇಸ್ ಹೊಂದಿದ್ದರು. ಕೆಲವು ತಿಂಗಳಿನಿಂದ ಬಿಜಲಿ ರಮೇಶ್ ಆರೋಗ್ಯದಲ್ಲಿ ಏರುಪೇರು ಖಂಡಿತ್ತು, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದಾಗ ತಿಳಿಯಿತ್ತು ರಮೇಶ್‌ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು.  ಬಿಜಲಿ ರಮೇಶ್ ಅಂತ್ಯ ಸಂಸ್ಕಾರ ಚೆನ್ನೈನ ಎಂಜಿಆರ್‌ ನಗರದ ರುಧ್ರಭೂಮಿಯಲ್ಲಿ ನಡೆದಿದೆ.

 ಪ್ರ್ಯಾಂಕ್ ವಿಡಿಯೋ ಹಿಟ್‌ ಆದ ಸಮಯದಲ್ಲಿ ಕೊಲಮಾವು ಕೋಕಿಲ ಚಿತ್ರದ ಸಾಂಗ್ ಪ್ರಮೋಷನ್‌ನಲ್ಲಿ ಬಿಜಲಿ ರಮೇಶ್‌ರನ್ನು ಬಳಸಿಕೊಳ್ಳಲಾಗಿತ್ತು. ಚಿತ್ರ ಹಿಟ್ ಆದ ಬೆನ್ನಲ್ಲೇ ರಮೇಶ್ ನಟನೆಗೆ ಕಾಲಿಟ್ಟರು. 2019ರಲ್ಲಿ ನಪ್ಟೆ ತುನೈ ಸಿನಿಮಾದಲ್ಲಿ ನಟಿಸಿದ್ದರು...ಇದಾದ ಏಲೆ ಪೊನ್ಮಗಲ್ ವಂದಲ್, ಕೋಮಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಜಲಿ ರಮೇಶ್ ಆರೋಗ್ಯ ಗಂಭೀರವಾಗಿ ಸಹಾಯ ಮಾಡಿ ಎಂದು ಕುಟುಂಬಸ್ಥರು ವಿಡಿಯೋ ಮಾಡಿದ್ದರು. ಜನ ಸಾಮಾನ್ಯರು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಹಣ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

ರೀಲ್ಸ್‌ ಮಾಡೋಕೆ ನಿಮ್ಮಪ್ಪನ ದುಡ್ಡು ವೇಸ್ಟ್ ಮಾಡ್ತಿದ್ಯಾ, ಬಟ್ಟೆ ಬಗ್ಗೆ ತೀರಾ ಕೊಳಕು ಕಾಮೆಂಟ್ ಮಾಡ್ತಾರೆ: ನಮ್ರತಾ ಗೌಡ

'ಕುಕ್ಕೂ ವಿತ್ ಕೋಮಲಿ' ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಬಿಜಲಿ ರಮೇಶ್‌ಗೆ ತಲೈವ ರಜನಿಕಾಂತ್‌ ಜೊನೆ ನಟಿಸಬೇಕು ಅನ್ನೋ ಆಸೆ ತುಂಬಾನೇ ಇತ್ತು. ತಮ್ಮ ಕೊನೆ ಕ್ಷಣದಲ್ಲೂ 'ಚಿತ್ರರಂಗದಲ್ಲಿ ಇರುವ ಪ್ರತಿಯೊಬ್ಬರ ಜೊತೆ ನಾನು ನಟಿಸಬೇಕು ಅನ್ನೋ ಆಸೆ ತುಂಬಾನೇ ಇದೆ. ಅದರಲ್ಲೂ ನನ್ನ ಲೀಡರ್ ರಜನಿಕಾಂತ್ ಸರ್ ಜೊತೆ ನಟಿಸಬೇಕು ಆದರೆ ಆ ಕನಸು ನನಸಾಗಲಿಲ್ಲ' ಎಂದು ಹೇಳಿದ್ದರು. ಹಲವರಿಗೆ ಹಣ ಸಹಾಯ ಸಿಕ್ಕರೂ ರಮೇಶ್ ಪ್ರಾಣ ಉಳಿಸಿಕೊಳ್ಳಲು ಆಗಲಿಲ್ಲ ಅನ್ನೋ ಬೇಸರುವಿದೆ.

ಸಾವಿನ ಸತ್ಯ ತಿಳಿಯಲು ಗರುಡ ಪುರಾಣ ಓದುತ್ತಿರುವ ಧ್ರುವ ಸರ್ಜಾ; ಪತ್ನಿ ಗರ್ಭಿಣಿ ಎಂದು ಮನೆಯಿಂದ ಹೊರ ಹೋಗಲು

ಬಿಜಲಿ ರಮೇಶ್ ವಿಪರೀತ ಕುಡಿಯುತ್ತಿದ್ದರು ಎಂದು ಅನೇಕರು ಹೇಳಿದ್ದಾರೆ. 'ನನ್ನ ಆರೋಗ್ಯ ಸ್ಥಿತಿ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಈಗ ನಾನು ಸರಿಯಾಗಿ ತಿನ್ನಲು ಆಗುತ್ತಿಲ್ಲ ಜನರಿಗೆ ಕುಡಿತ ಕೆಟ್ಟದು ಎಂದು ಹೇಳಲು ನಾನು ಸರಿಯಾದ ವ್ಯಕ್ತಿ ಅಲ್ಲ. ನನಗೆ ಆ ಯೋಗ್ಯತೆ ಇಲ್ಲ. ಯಾವಾಗ ಓಡುವ ಕುದುರೆ ನಿಲ್ಲುತ್ತದೆ ಎಂದು ನನಗೆ ಗೊತ್ತಿಲ್ಲ. ಕುಡಿಯಬೇಡಿ ಎಂದು ನಾವು ಯಾರಿಗೆ ಹೇಳಿದರೂ ಕೇಳುವುದಿಲ್ಲ ಹೋಗಿ ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ಹೇಳುತ್ತಾರೆ. ನನ್ನ ಮಕ್ಕಳ ಬಗ್ಗೆ ಯೋಚನೆ ಮಾಡಿದೆ ಬೇಸರವಾಗುತ್ತದೆ. ನಾನು ಸತ್ತ ಮೇಲೆ ಯಾರು ಅವರನ್ನು ನೋಡಿಕೊಳ್ಳುತ್ತಾರೆ ಗೊತ್ತಿಲ್ಲ' ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಬಿಜಲಿ ರಮೇಶ್ ಕಣ್ಣೀರಿಟ್ಟಿದ್ದರು. 

Latest Videos
Follow Us:
Download App:
  • android
  • ios