ಸಾವಿನ ನಂತರ ಏನು ಎಂದು ತಿಳಿದುಕೊಳ್ಳಲು ಗರುಡ ಪುರಾಣ ಓದಲು ಶುರು ಮಾಡಿದ ಧ್ರುವ ಸರ್ಜಾ. ಪತ್ನಿ ಗರ್ಭಿಣಿ ಆಗಿದ್ದರೂ ಹೊರ ಹೋಗುವಷ್ಟು ಅಡಿಕ್ಷನ್...... 

ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾ ಮತ್ತು ಫ್ಯಾಮಿಲಿ ಟೈಂ ಎಂದು ಸಖತ್ ಬ್ಯುಸಿಯಾಗಿರುವ ನಟ ಬಿಡುವು ಮಾಡಿಕೊಂಡು ಪುಸ್ತಕ ಓದಲು ಶುರು ಮಾಡಿದ್ದಾರೆ. ಗರುಡ ಪುರಾಣವನ್ನು ಯಾಕೆ ಆಯ್ಕೆ ಮಾಡಿಕೊಂಡರು ಎಂದು ರಿವೀಲ್ ಮಾಡಿದ್ದಾರೆ. 

'ಕೆಲವೊಂದು ದಿನ ಹೆಂಡತಿ ಮಕ್ಕಳ ಜೊತೆ ಆರಾಮಾಗಿ ಇರುವೆ ಆದರೆ ಕೆಲವು ದಿನ ಸಿಕ್ಕಾಪಟ್ಟೆ ಕೆಲಸದಲ್ಲಿ ಬ್ಯುಸಿಯಾಗಿರುವೆ. ಟ್ರೈಲರ್‌ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಗಿದೆ ಅಲ್ಲದೆ ಜವಾಬ್ದಾರಿ ಹೆಚ್ಚಾಗಿದೆ. ನನ್ನ ಜೀವನದಲ್ಲಿ ನಡೆದ ಕೆಟ್ಟ ಘಟನೆಯಿಂದ ನಾನು ಗರುಡ ಪುರಾಣ ಓದಲು ಶುರು ಮಾಡಿದೆ. ಜನರು ಸತ್ತ ಮೇಲೆ ಏನಾಗುತ್ತೆ ಎಂದು ತಿಳಿದುಕೊಳ್ಳುವ ಕುತೂಹಲವಿತ್ತು, ಇದನ್ನು ಓದುವುದರಿಂದ ಜೀವನದ ಬಗ್ಗೆ ಸಾಕಷ್ಟು ಕಲಿತೆ. ಗರುಡ ಪುರಾಣ ಓದಲು ಶುರು ಮಾಡಿದ ಮೇಲೆ ನನ್ನ ಹೆಂಡತಿ ಗರ್ಭಿಣಿ ಆದಲು ಆಗ ಮನೆಯಲ್ಲಿ ಓದಬಾರದು ಎಂದು ಹಿರಿಯ ಹೇಳಿದ್ದರು. ಪ್ರತಿ ದಿನ ನಾನು ಹೊರಗಡೆ ಹೋಗಿ ಓದಿಕೊಂಡು ಬರುತ್ತಿದ್ದೆ. ಪರಿಹಾರ ಸಿಗದೇ ಉಳಿದಿರುವ ಮಿಸ್ಟರಿಗಳ ಬಗ್ಗೆ ಓದಲು ನನಗೆ ತುಂಬಾನೇ ಆಸಕ್ತಿ ಜಾಸ್ತಿ ಅದರಲ್ಲೂ ಬರಮುಡಾ ಟ್ರಯಾಂಗಲ್‌, ಮೂರನೇ ಕಣ್ಣು, ಡಿಜಾವೂ...ಹೀಗೆ ಸಾಕಷ್ಟಿದೆ. ಸದ್ಯಕ್ಕೆ ನಾನು ಗರುಡ ಪುರಾಣದ ಇಂಟರ್‌ಪ್ರಿಟೇಶನ್‌ ಓದುತ್ತಿರುವೆ' ಎಂದು ಧ್ರುವ ಟೈಮ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಬೀಪ್‌ ಪದಗಳನ್ನು ಬಳಸಿರುವ ಖಡಕ್ ಪೊಲೀಸ್‌ ಪ್ರಿಯಾ; ಭೀಮಾ ನಾಯಕಿಯಾ ರಿಯಲ್ ಗಂಡ ಇವರೇ ನೋಡಿ!

ನನ್ನೊಬ್ಬನ ಶೂಟಿಂಗ್ 240 ದಿನಗಳು ತೆಗೆದುಕೊಂಡಿದೆ ಇದರ ಜೊತೆಗೆ 52 ದಿನಗಳ ಕಾಲ ಕ್ಲೈಮ್ಯಾಕ್ಸ್‌ ಮತ್ತು ಸೀಕ್ವೆನ್ಸ್‌ ಶೂಟಿಂಗ್ ನಡೆದಿದೆ. ಪೋಸ್ಟ್‌ ಪ್ರೋಡಕ್ಷನ್‌ ಕೆಲಸಗಳು ಹೆಚ್ಚಿಗೆ ದಿನ ಹಿಡಿದಿತ್ತು ಆದರೆ ಕೊನೆಯಲ್ಲಿ ಸಿನಿಮಾ ಹೇಗೆ ಬಂತು ಅನ್ನೋದು ಮುಖ್ಯವಾಗುತ್ತದೆ. ಮಾರ್ಟಿನ್ ಅಂದ್ರೆ ನಾನೊಬ್ಬನೇ ಅಲ್ಲ ಇಡೀ ತಂಡ. ಈ ಚಿತ್ರದಲ್ಲಿ ಲೇಟೆಸ್ಟ್‌ ಟೆಕ್ನಾಲಜಿ ಬಳಸಿದ್ದೀವಿ ಅಂದ್ರೆ ಮೋಕೋಬಾಟ್ ಕ್ಯಾಮೆರಾ, ಹೈ ಸ್ಪೀಡ್‌ ಕ್ಯಾಮೆರಾ ರೋಬೋಟ್, ಫಾಸ್ಟ್‌ ಆಕ್ಷನ್‌ಗಳನ್ನು ತೆಗೆಯಲು ಕೆಲವೊಂದುಕ ಕ್ಯಾಮೆರಾ. 11 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಬೇರೆ ಭಾಷೆಗಳಲ್ಲಿ ಡಬ್ ಮಾಡಲು ಒಳ್ಳೆ ಒಳ್ಳೆ ಆರ್ಟಿಸ್ಟ್‌ಗಳನ್ನು ಕರೆಸಿದ್ದೀವಿ ಆದರೆ ನನ್ನ ಧ್ವನಿಯನ್ನು ಮಾತ್ರ AI ಮೂಲಕ ಹಾಗೆ ಉಳಿಸಿಕೊಳ್ಳಲಾಗಿದೆ' ಎಂದು ಧ್ರುವ ಸರ್ಜಾ ಹೇಳಿದ್ದಾರೆ.