Asianet Suvarna News Asianet Suvarna News

ರೀಲ್ಸ್‌ ಮಾಡೋಕೆ ನಿಮ್ಮಪ್ಪನ ದುಡ್ಡು ವೇಸ್ಟ್ ಮಾಡ್ತಿದ್ಯಾ, ಬಟ್ಟೆ ಬಗ್ಗೆ ತೀರಾ ಕೊಳಕು ಕಾಮೆಂಟ್ ಮಾಡ್ತಾರೆ: ನಮ್ರತಾ ಗೌಡ ಬೇಸರ

ಸೋಷಿಯಲ್ ಮೀಡಿಯಾದಿಂದ ಬರುತ್ತಿರುವ ನೆಗೆಟಿವ್ ಕಾಮೆಂಟ್ ನೋಡಿ ನಮ್ರತಾ ಗೌಡ ಬೇಸರ......

Bigg boss Namratha gowda expresses disappointment for false claims and personal attack vcs
Author
First Published Aug 27, 2024, 12:36 PM IST | Last Updated Aug 27, 2024, 12:36 PM IST

ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಬಿಬಿ ನಂತರ ಕೈ ತುಂಬಾ ಆಫರ್ ಬರುತ್ತಿದ್ದರೂ ಯೂಟ್ಯೂಬ್ ವ್ಲಾಗ್, ರೀಲ್ಸ್‌ ಮತ್ತು ಖಾಸಗಿ ಪ್ರಮೋಷನ್‌ಗಳಲ್ಲಿ ಬ್ಯುಸಿಯಾಗಿರುವ ನಟಿ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಡ್ಯಾನ್ಸರ್ ಕಿಶನ್‌ ಜೊತೆ ರೀಲ್ಸ್‌ ಮಾಡಿದರೆ ಜನರು ಯಾಕೆ ಅಷ್ಟೋಂದು ಟ್ರೋಲ್ ಮಾಡ್ತಾರೆ ಅನ್ನೋ ನಮ್ಮು ಪ್ರಶ್ನೆ.....

'ಸಾಮಾನ್ಯವಾಗಿ ನಾನು ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಒಂದೊಂದು ವಿಡಿಯೋ ನೋವು ಮಾಡುತ್ತದೆ. ನನಗೆ ಅವಕಾಶಗಳು ಸಿಗುತ್ತಿಲ್ಲ ಹೀಗಾಗಿ ರೀಲ್ಸ್ ಮಾಡುತ್ತಿರುವೆ ಎಂದು ಮಾತನಾಡುತ್ತಿದ್ದಾರೆ. ನಾನು ತುಂಬಾ ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇರುವ ಜನರಿಗೆ ನನ್ನ ಪರಿಸ್ಥಿತಿ ಏನೂ ನಾನು ಹೇಗೆ ಅನ್ನೋದು ಚೆನ್ನಾಗಿ ಅರ್ಥವಾಗಿದೆ. ಆದರೆ ಯಾರಿಗೆ ನನ್ನ ಬಗ್ಗೆ ಗೊತ್ತಿಲ್ಲದೆ ಕಾಮೆಂಟ್ ಮಾಡುತ್ತಿದ್ದಾರೆ ಅವರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ' ಎಂದು ನಮ್ರತಾ ಗೌಡ ಮಾತನಾಡಿದ್ದಾರೆ.

ಸಾವಿನ ಸತ್ಯ ತಿಳಿಯಲು ಗರುಡ ಪುರಾಣ ಓದುತ್ತಿರುವ ಧ್ರುವ ಸರ್ಜಾ; ಪತ್ನಿ ಗರ್ಭಿಣಿ ಎಂದು ಮನೆಯಿಂದ ಹೊರ ಹೋಗಲು

'ನಾನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಪೋಸ್ಟ್ ಮಾಡುತ್ತಿರುತ್ತೀನಿ. ನನಗೆ ದಿಢೀರ್‌ ಸಕ್ಸಸ್‌ ಸಿಕ್ಕಿಲ್ಲ ನಾನು ಹಲವು ವರ್ಷಗಳಿಂದ ಕಷ್ಟ ಪಟ್ಟಿದ್ದೀನಿ. ಕಿಶನ್ ಮತ್ತು ನನ್ನ ಬಗ್ಗೆ ಹಬ್ಬಿಸುವ ಗಾಸಿಪ್ ನಿಜಕ್ಕೂ ಬೇಸ್‌ಲೆಸ್‌. ನಾನು ಯಾರೊಟ್ಟಿಗೆ ಮಾತನಾಡಿದ್ದರೂ ಕನೆಕ್ಷನ್ ಸೃಷ್ಟಿ ಮಾಡುತ್ತಾರೆ. ಕಿಶನ್ ಒಳ್ಳೆಯ ಡ್ಯಾನ್ಸರ್‌....ಅಲ್ಲದೆ ನಮ್ಮ ಜೊತೆ ಹಲವರು ಕೊಲಾಬೋರೇಟ್ ಮಾಡಿಕೊಳ್ಳುತ್ತಾರೆ ಇಲ್ಲಿ ರೀಲ್ಸ್ ಮಾಡಲು ನಾವು ದುಡ್ಡು ವೇಸ್ಟ್ ಮಾಡುತ್ತಿಲ್ಲ ಹಾಗೆ ದುಡಿಯುತ್ತಿಲ್ಲ..ನಮ್ಮಿಂದ ಮತ್ತೊಬ್ಬರಿಗೆ ಸಹಾಯ ಆಗುತ್ತಿದೆ. ನಾವು ಕಲಾವಿದರಾಗಿ ಕೆಲಸವನ್ನು ಎಂಜಾಯ್ ಮಾಡುತ್ತಿದ್ದೀವಿ' ಎಂದು ನಮ್ರತಾ ಗೌಡ ಹೇಳಿದ್ದಾರೆ.

ಬೀಪ್‌ ಪದಗಳನ್ನು ಬಳಸಿರುವ ಖಡಕ್ ಪೊಲೀಸ್‌ ಪ್ರಿಯಾ; ಭೀಮಾ ನಾಯಕಿಯಾ ರಿಯಲ್ ಗಂಡ ಇವರೇ ನೋಡಿ!

'ಸೋಷಿಯಲ್ ಮೀಡಿಯಾ ತುಂಬಾ ನೆಗೆಟಿವ್ ಕಾಮೆಂಟ್‌ಗಳು ಇದೆ...ನಾನು ಧರಿಸುವ ಬಟ್ಟೆಯಿಂದ ಹಿಡಿದು ಕಾಮೆಂಟ್ ಮಾಡುತ್ತಾರೆ. ಬಿಗ್ ಬಾಸ್ ನಂತರ ಸಾಕಷ್ಟು ಆಫರ್‌ಗಳು ಬಂದರೂ ನಾನು ರಿಜೆಕ್ಟ್ ಮಾಡಿದ್ದೀನಿ. ಬಿಗ್ ಬಾಸ್‌ನಲ್ಲಿ ನಡೆದ ಘಟನೆಗಳನ್ನು ಸಂಪೂರ್ಣವಾಗಿ ಡಾಕ್ಯೂಮೆಂಟ್ ಮಾಡಲಾಗಿದೆ ಅಲ್ಲದೆ ಕೆಲಸ ಮತ್ತು ವೈಯಕ್ತಿಕ ನಿರ್ಧಾರಗಳು ನನ್ನ ಕೈಯಲ್ಲಿ ಇರುತ್ತದೆ. ಸುಳ್ಳು ಸುದ್ದಿಗಳಿಗೆ ನಾನು ಕವಿ ಕೊಡುವುದಿಲ್ಲ' ಎಂದಿದ್ದಾರೆ ನಮ್ರತಾ ಗೌಡ. 

Latest Videos
Follow Us:
Download App:
  • android
  • ios