ಸೂಪರ್ ಸಂಡೇ with ಸುದೀಪ್: ಈ ಮನೆ ಖಾಲಿ ಡಬ್ಬ ಯಾರು, ಉತ್ತರ ಕೇಳಿದರೆ ಶಾಕ್ ಆಗ್ತೀರಾ..!
ಈ ಸೂಪರ್ ಸಂಡೆಯಲ್ಲಿ ಡ್ರೋನ್ ಪ್ರತಾಪ್ ಸಂಗೀತಾ ಹಾಗೂ ನಮ್ರತಾ ಜತೆ 'Ramp Walk'ಮಾಡಿದ್ದು, ತನಿಶಾ ಫನ್ ಫ್ರಡೈನಲ್ಲಿ ಮ್ಯೂಸಿಕಲ್ ಬಕೆಟ್ಸ್ ಗೇಮ್ ಗುದ್ದು ಬಹುಮಾನ ಪಡೆದಿದ್ದು ಎಲ್ಲವೂ ಪ್ರಸಾರ ಕಾಣಲಿವೆ.

ಬಿಗ್ ಬಾಸ್ ಕನ್ನಡ ಸೀಸನ್ 10ನ ಮೊದಲ ವೀಕೆಂಡ್ ಬಂದಿದೆ. ಈಗಾಗಲೇ ಶನಿವಾರದ ಕಿಚ್ಚನ ಪಂಚಾಯಿತಿ ಮುಗಿದು 'ಸೂಪರ್ ಸಂಡೇ ವಿತ್ ಸುದೀಪ' ಹಂತಕ್ಕೆ ಬಂದು ನಿಂತಿದೆ. ನಿನ್ನೆ ಸ್ಪರ್ಧಿಗಳ ಪ್ಲಸ್-ಮೈನಸ್ ಬಗ್ಗೆ ಚರ್ಚೆಯಾಗಿದೆ ಎನ್ನಬಹುದಾದರೂ ಅದಕ್ಕಿಂತ ಹೆಚ್ಚೇ ಎನ್ನಬಹುದಾದ ಸಂಗತಿಗಳು ಜರುಗಿವೆ ಎನ್ನಬಹುದು. ಕಾರಣ, ಡ್ರೋನ್ ಪ್ರತಾಪ್‌ನನ್ನು ವೈಯಕ್ತಿಕವಾಗಿ ನಿಂದಿಸಿ ಅವಮಾನ ಮಾಡಿ ತುಕಾಲಿ ಸಂತು ಮತ್ತು ಕೆಲವರು ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದು ಮಾತ್ರವಲ್ಲ, ತನಿಶಾ, ಸಂಗೀತಾ ಮತ್ತು ಕಾರ್ತಿಕ್ ಕದ್ದು ಟೊಮ್ಯಾಟೋ ತಿಂದು ಬಿಗ್ ಬಾಸ್‌ಗೆ ಸಿಕ್ಕಿಬಿದ್ದಿದ್ದಾರೆ.
ಇದೀಗ ಕಿಚ್ಚನ ಪಂಚಾಯಿತಿ ಮುಗಿದು 'ಸೂಪರ್ ಸಂಡೇ' ಕಾಲಿಡುತ್ತಿದೆ. ಇಂದು ರಾತ್ರಿ 9.00 ಗಂಟೆಗೆ ಕಿಚ್ಚ ಸುದೀಪ್ ಜತೆ ಚರ್ಚೆ ಇದೆ. ಈ ಸಂಚಿಕೆಯ ಪ್ರೊಮೋ ಹರಿದಾಡುತ್ತಿದ್ದು, ಭಾರೀ ಕುತೂಹಲ ಸೃಷ್ಟಿಸಿದೆ. ಕಿಚ್ಚ ಸುದೀಪ್ "ಈ ಮನೆನಲ್ಲಿ ಹೀರೋ ಯಾರು, ವಿಲನ್ ಯಾರು, ಖಾಲಿ ಡಬ್ಬ ಯಾರು? " ಎಂದು ಕೇಳುವ ಹಾಗೂ ಅದಕ್ಕುತ್ತರವಾಗಿ ಸ್ಪರ್ಧಿಗಳು ಹೇಳವ ಅನೇಕ ಹೆಸರುಗಳು ತುಂಡು ತುಂಡಾಗಿ ಕೇಳಿಸುತ್ತ ಸಂಚಿಕೆ ನೋಡಲೇಬೇಕೆಂಬ ಕುತೂಹಲಕ್ಕೆ ಕಾರಣವಾಗಿದೆ.
ಈ ಸೂಪರ್ ಸಂಡೆಯಲ್ಲಿ ಡ್ರೋನ್ ಪ್ರತಾಪ್ ಸಂಗೀತಾ ಹಾಗೂ ನಮ್ರತಾ ಜತೆ 'Ramp Walk'ಮಾಡಿದ್ದು, ತನಿಶಾ ಫನ್ ಫ್ರಡೈನಲ್ಲಿ ಮ್ಯೂಸಿಕಲ್ ಬಕೆಟ್ಸ್ ಗೇಮ್ ಗುದ್ದು ಬಹುಮಾನ ಪಡೆದಿದ್ದು ಎಲ್ಲವೂ ಪ್ರಸಾರ ಕಾಣಲಿವೆ. ಒಟ್ಟಿನಲ್ಲಿ, ಈ ವೀಕೆಂಡ್ ನಿರೀಕ್ಷೆಯಂತೆ ಸಾಕಷ್ಟು ಹೊಸಹೊಸ ಗೇಮ್ಸ್ ಹಾಗೂ ಮಾತುಕತೆಯ ಜತೆ ಸಖತ್ ಸಂಚಿಕೆಯಾಗಿ ವೀಕ್ಷಕರನ್ನು ರಂಜಿಸಲಿದೆ. ಹೊಸ ಮನೆ, ಹೊಸ ಬಿಗ್ ಬಾಸ್ ಸೀಸನ್, ಹೊಸ ಸ್ಪರ್ಧಿಗಳು ಟಿವಿ ವೀಕ್ಷಕರಿಗೆ ಚೆನ್ನಗಿಯೇ ಮನರಂಜನೆ ನೀಡುತ್ತಿದ್ದಾರೆ ಎನ್ನಬಹುದು.
ಸಂಚಿಕೆಯಲ್ಲಿ ಪ್ರಸಾರವಾಗುವ ಆಟದ ರೋಚಕ ಘಳಿಗೆಗಳು, ಅದರ ಫಲಿತಾಂಶ ಎಲ್ಲವನ್ನೂ ಬಿಗ್‌ಬಾಸ್ ಕನ್ನಡದ ಉಚಿತ ನೇರಪ್ರಸಾರ ಮಾಡುತ್ತಿರುವ 'JioCinema'ದ 'ಫನ್ ಫ್ರೈಡೇ' ಸೆಗ್ಮೆಂಟ್‌ನಲ್ಲಿ (https://jiocinema.onelink.me/fRhd/z17wt8x0) ಎಕ್ಸ್‌ಕ್ಲೂಸಿವ್ ಆಗಿ ನೋಡಬಹುದು. ಜತೆಗೆ, ಬಿಗ್‌ಬಾಸ್ ಕನ್ನಡ ಶೋನ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಬಹುದು. ಶನಿವಾರ-ಭಾನುವಾರದ ವೀಕೆಂಡ್ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ರಾತ್ರಿ 9ಕ್ಕೆ ವೀಕ್ಷಿಸಬಹುದು. ಇಂದು 'ಸೂಪರ್ ಸಂಡೇ ವಿತ್ ಸುದೀಪ' ನೋಡಿ ಆನಂದಿಸಿ..!