ಇದ್ದಕ್ಕಿದ್ದಂತೆ ರೂಪೇಶ್‌ಗೆ ಶರ್ಟ್ ಗಿಫ್ಟ್ ತಲುಪಿಸುವುದು ನಿಲ್ಲಿಸಿದ್ದ ಬಿಗ್ ಬಾಸ್; ರಹಸ್ಯ ತಿಳಿದು ಸಾನ್ಯಾ ಶಾಕ್
ಮತ್ತಷ್ಟು ದೊಡ್ಡದಾಯ್ತು ಸಾನ್ಯಾ -ಬಿಗ್ ಬಾಸ್ ನಡುವೆ ಫೈಟ್. ರೂಪೇಶ್ ಶೆಟ್ಟಿಗೆ ಶರ್ಟ್ ನೀಡದಿರಲು ಕಾರಣ ಕೇಳಿ ಶಾಕ್...
ಕನ್ನಡ ಕಿರುತೆರೆ ಜನಪ್ರಿಯ ನಟಿ ಸಾನ್ಯಾ ಅಯ್ಯರ್ ಬಿಗ್ ಬಾಸ್ ಸೀಸನ್ 1 ಓಟಿಟಿ ಪ್ರವೇಶಿಸಿದ 50 ದಿನಗಳನ್ನು ಪೂರೈಸಿದ ನಂತರ ನೇರವಾಗಿ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೀಣರ ಪಟ್ಟಿಯಲ್ಲಿ ಎಂಟ್ರಿ ಪಡೆದುಕೊಂಡಿದ್ದಾರೆ. ಓಟಿಟಿಯಿಂದ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ತುಂಬಾನೇ ಕ್ಲೋಸ್ ಹೀಗಾಗಿ ಸಾನ್ಯಾ ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಂತೆ ರಾಕೇಶ್ ಬೇಡಿಕೆ ಮುಂದಿಡುತ್ತಾರೆ. ಪ್ರತಿ ವಾರವೂ ಕೆಂಪು ಬಣ್ಣದ ಟೀ-ಶರ್ಟ್ ಅಥವಾ ಶರ್ಟ್ ನನಗೆ ಕಳುಹಿಸಿ ಕೊಡಬೇಕು ಅದರ ಮೇಲೆ S ಅಕ್ಷರ ಇರಬೇಕು ಎಂದು. ಅದರಂತೆ ಪ್ರತಿ ವಾರವೂ ಸಾನ್ಯಾ ಕಳುಹಿಸಿದ್ದಾರೆ.
ಸಾನ್ಯಾ ಕಳುಹಿಸಿದ ಗಿಫ್ಟ್ ಮೊದಲ ವಾರ ರೂಪೇಶ್ ಕೈ ತಲುಪಿತ್ತು ಆದರೆ ಎರಡನೇ ವಾರದಿಂದ ಬಂದಿರುವುದಿಲ್ಲ. ರೂಪಿ ಕೊಂಚ ಗೊಂದಲದಲ್ಲಿದ್ದಾಗ ಬಿಬಿ ಮನೆಗೆ ಎಂಟ್ರಿ ಕೊಟ್ಟ ತಂದೆ ತಲೆ ಪಟ್ಟಿ ಕಟ್ಟಿಕೊಳ್ಳುವುದು ಕೆಂಪು ಶರ್ಟ್ ಅವೆಲ್ಲಾ ಏನೂ ಬೇಡ ಎಂದು ಸೂಕ್ಷ್ಮವಾಗಿ ಕಿವಿ ಮಾತು ಹೇಳಿದ್ದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಾನ್ಯಾ ಬಿಗ್ ಬಾಸ್ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದರು. ಇದೊಂದು ಬಿಗ್ ಫೈಟ್ ಆಗಿ ಕನ್ವರ್ಟ್ ಆಗಿತ್ತು. ಇದೀಗ ಮತ್ತೊಂದು ಪೋಸ್ಟ್ ಬರೆಯುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸಾನ್ಯಾ ಪೋಸ್ಟ್:
'ಎಲ್ಲರಿಗೂ ನಮಸ್ಕಾರ. ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಡುವ ಮೂಲಕ ಇಲ್ಲಿ ನಿಲ್ಲಿಸಬೇಕು ಎಂದು ತೀರ್ಮಾನ ಮಾಡಿರುವೆ. ಮೊದಲ ವಿಚಾರ, ಮೊದಲೆರಡು ವಾರ ರೂಪೇಶ್ ಶೆಟ್ಟಿಗೆ ನಾನು ಕಳುಹಿಸಿದ ಕೆಂಪು ಟೀ-ಶರ್ಟ್ ನೀಡಲಾಗಿತ್ತು ಆದರೆ ಇದ್ದಕ್ಕಿದ್ದಂತೆ ನಿಲ್ಲಿಸಿದ್ದರು. ಇಲ್ಲಿ ಸಮಸ್ಯೆ ಆಗಿದ್ದು ಏನೆಂದರೆ ರೂಪೇಶ್ ಮೈಂಡ್‌ಗೆ ಇಲ್ಲಸಲ್ಲದ ವಿಚಾರಗಳನ್ನು ತುಂಬಿಸಲಾಗುತ್ತದೆ ಎಂದು ತಲುಪಿಸುತ್ತಿರಲಿಲ್ಲ. ಇದರಿಂದ ದೊಡ್ಡ ಗೊಂದಲ ಕೂಡ ಕ್ರಿಯೇಟ್ ಆಗಿತ್ತು, ರೂಪಿ ಹೇಳಿದನ್ನು ನಾನು ಉಳಿಸಿಕೊಳ್ಳಲಿಲ್ಲ ಅವರಿಗೆ ಬಿಬಿ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬರುವಾಗ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು. ಈ ವಿಚಾರದ ಬಗ್ಗೆ ನಾನು ಮತ್ತೆ ಚರ್ಚೆ ಮಾಡಲು ಕಾರಣ ಎನೆಂದರೆ ಟಿವಿಯಲ್ಲಿ ಲೈವ್ ನೀಡಿ ರೂಪಿ ತಪ್ಪಾಗಿ ತಿಳಿದುಕೊಂಡಿರುವುದಕ್ಕೆ.
ರೂಪೇಶ್ ಶೆಟ್ಟಿ ಬೇಕೆಂದು ದೂರ ಉಳಿಯುತ್ತಿದ್ದಾನೆ, ನಮ್ಮ ಸಂಬಂಧ ಬದಲಾಗುವುದಿಲ್ಲ: ಸಾನ್ಯಾ ಅಯ್ಯರ್
ಎರಡನೇ ವಿಚಾರ,ಮೂರು ವಾರಗಳ ಕಾಲ ನಾನು ಕೊಟ್ಟ ಕೆಂಪು ಟೀ-ಶರ್ಟ್‌ಗಳ ಬಗ್ಗೆ ಬಿಗ್ ಬಾಸ್ ತಂಡಕ್ಕೆ ಸಂಬಂಧಿಸಿದ್ದವರನ್ನು ಸಂಪರ್ಕ ಮಾಡಿ ಕೇಳಿದೆ. ಸರಿಯಾದ ಕಂಡಿಷನ್‌ನಲ್ಲಿ ಇದ್ಯಾ ಎಂದು ಆದರೆ ಇದರ ಬಗ್ಗೆ ಟೀಂ ಯಾವುದೇ ಮಾಹಿತಿ ನೀಡಿಲ್ಲ. ಮಾಹಿತಿ ಕೊಡದಷ್ಟು ಗೌರವ ಇಲ್ವಾ? ಯಾವುದೇ ಕ್ಲಾರಿಟಿ ಇಲ್ಲದ ಕಾರಣ ನಾನು ನಾಲ್ಕನೇ ವಾರಕ್ಕೆ ಟೀ-ಶರ್ಟ್ ಕೂಡ ಕಳುಹಿಸಬೇಕಾ ಬೇಡ್ವಾ ಎನ್ನುವ ಗೊಂದಲದಲ್ಲಿರುವೆ. ಇರಲಿ ಎಂದು ಒಂದು ಪ್ರಯತ್ನ ಪಟ್ಟು ನಾವು ಮತ್ತೊಮ್ಮೆ ಕಳುಹಿಸಿದೆವು.
ಖಂಡಿತ, ನಾನು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಸ್ಪರ್ಧಿ ನನಗೆ ಎಲ್ಲಾ ರೀತಿ ರೂಲ್ಸ್, ಕಂಡಿಷನ್ ಮತ್ತು ಆಬ್ಲಿಗೇಷನ್ ಅರ್ಥವಾಗುತ್ತದೆ. ಗೌರವದಿಂದ ನನಗೆ ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಕೊಟ್ಟಿದ್ದರೆ ನಾನು ಈ ವಿಚಾರವಾಗಿ ಯಾವ ಪೋಸ್ಟ್ ಮಾಡುತ್ತಿರಲಿಲ್ಲ. ಹಾಗಿದ್ದರೆ ಮೊದಲ ಸಲ ನಾನು ಕೊಟ್ಟ ಟೀ-ಶರ್ಟ್‌ನೂ ಕೊಡಬಾರದಿತ್ತು. ಪಬ್ಲಿಕ್ ಫಿಗರ್ ಆಗಿರುವ ಕಾರಣ ಇಲ್ಲಿ ಜನರು ಕೇಳುವ ಪ್ರಶ್ನೆಗೆ ನಾನು ಉತ್ತರಿಸಬೇಕಿದೆ. ಪ್ರತಿ ಹೆಜ್ಜೆನೂ ಜನರು ಗಮನಿಸುತ್ತಾರೆ, ಪ್ರಶ್ನೆ ಮಾಡುತ್ತಾರೆ.
ಸಾನ್ಯ ಅಯ್ಯರ್ ಮೈ ಮೇಲೆ ಕಾಮಾಕ್ಯ ದೇವಿ; ವೈರಲ್ ವಿಡಿಯೋ ಹಿಂದಿರುವ ಗುಟ್ಟು ಏನು?
ರೂಪೇಶ್ ಶೆಟ್ಟಿ ಜೊತೆ ಹೆಚ್ಚಿನ ಸಮಯ ಕಳೆದಿರುವ ಕಾರಣ ಅವರ ಮೈಂಡ್‌ಸೆಟ್‌ನ ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವೆ. ಅವರು ತೆಗೆದುಕೊಳ್ಳುವ ನಿರ್ಧಾರವನ್ನು ನಾನು ಗೌರವಿಸುತ್ತೀನಿ. ಈ ವಿಚಾರವನ್ನು ರೂಪೇಶ್‌ಗೆ ತಲುಪಿಸಿದ ಬಿಗ್ ಬಾಸ್ ಟೀಂಗೆ ನನ್ನ ವಂದನೆಗಳು' ಎಂದು ಬರೆದುಕೊಂಡಿದ್ದಾರೆ.