ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರದ ನಂತರ ಬಂದ ಸುಬ್ಬಿ, ಈಗ ಸಿಹಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಭಿನ್ನ ಪಾತ್ರಗಳಲ್ಲಿ ಚಿಕ್ಕ ರಿತು ಸಿಂಗ್ ಮಿಂಚುತ್ತಿದ್ದಾಳೆ. ಸಿಹಿ ಪಾತ್ರ ತೆಗೆದ ನಂತರ ಧಾರಾವಾಹಿಯ ಟಿಆರ್‌ಪಿ ಕುಸಿದಿದ್ದು, ಸುಬ್ಬಿ ಪಾತ್ರವೂ ವೀಕ್ಷಕರನ್ನು ಸೆಳೆಯಲಿಲ್ಲ. ಈಗ ಸಿಹಿಯಂತೆ ಕಾಣುವ ಸುಬ್ಬಿಯ ನಟನೆ ಧಾರಾವಾಹಿಯ ಟಿಆರ್‌ಪಿ ಹೆಚ್ಚಿಸುವುದೇ ಎಂಬುದು ಕುತೂಹಲ.

ಸಿಹಿ ಈಗ ಸುಬ್ಬಿ ಆಗಿದ್ದಾಳೆ. ಇಲ್ಲಿಯವರೆಗೆ ಸಿಹಿ ಸಿಹಿ ಎಂದು ಎಲ್ಲರ ಬಾಯಲ್ಲಿಯೂ ನಲಿದಾಡುತ್ತಿದ್ದ ಮುದ್ದು ರಿತು ಸಿಂಗ್​ ಈಗ ಸುಬ್ಬಿ ಆಗಿ ವಿಭಿನ್ನ ರೀತಿಯ ಗೆಟಪ್​ ಜೊತೆ, ಹಳ್ಳಿ ಭಾಷೆಯಲ್ಲಿಯೂ ಮಿಂಚುತ್ತಿದ್ದಾಳೆ. ಈಗ ಆಕೆಯನ್ನು ಹುಡುಕಿ ಬಂದಿರುವ ರಾಮ್​ ಮತ್ತು ಅಶೋಕ, ಸುಬ್ಬಿಯನ್ನು ಸಿಹಿಯ ಗೆಟಪ್​ನಲ್ಲಿ ತಂದಿದ್ದಾರೆ. ಆದರೆ, ಸುಬ್ಬಿ ಮತ್ತು ಸಿಹಿ ಎರಡು ವಿಭಿನ್ನ ಕ್ಯಾರೆಕ್ಟರ್​ಗಳಲ್ಲಿ ಭಿನ್ನ ರೀತಿಯದ್ದೇ ನಟನೆಯ ಅಗತ್ಯವಿದೆ. ಅವೆರಡನ್ನೂ ಜಾಣ್ಮೆಯಿಂದ ನಿಭಾಯಿಸುತ್ತಿದ್ದಾಳೆ ಪುಟಾಣಿ ರಿತು ಸಿಂಗ್​. ಈಗಲೂ ಅಷ್ಟೇ. ಸುಬ್ಬಿಯನ್ನು ಸಿಹಿ ಮಾಡಿರುವ ಪ್ರೊಮೋ ಬಿಡುಗಡೆಯಾಗಿದೆ. ಸುಬ್ಬಿಯನ್ನು ಸಿಹಿಯ ರೂಪದಲ್ಲಿ ನೋಡಿದ ರಾಮ್​ಗೆ ಸಿಹಿಯೇ ಬಂದಂತೆ ಕಾಣಿಸುತ್ತದೆ. ಅವನು ಆಕೆಯನ್ನು ತಬ್ಬಿ ಮುದ್ದಾಡುತ್ತಾನೆ. ಆದರೆ ಸುಬ್ಬಿಗೆ ರಾಮ್​ ಹೊಸಬ. ಅದು ಅಪ್ಪನ ಅಪ್ಪುಗೆ ಎಂದು ಅವಳಿಗೆ ಅನ್ನಿಸುವುದಿಲ್ಲ. ಆದ್ದರಿಂದ ಅವಳು ಮುಖವನ್ನು ಕಿವುಚಿಕೊಳ್ಳುತ್ತಾಳೆ. ಈ ನಟನೆಯನ್ನು ಬಾಲಕಿ ರಿತುಸಿಂಗ್​ ಅದ್ಭುತವಾಗಿ ನಟಿಸಿ ಭೇಷ್​ ಎನ್ನಿಸಿಕೊಂಡಿದ್ದಾಳೆ.

ಅಷ್ಟಕ್ಕೂ, ಆದರೆ ಸಿಹಿ ಪಾತ್ರವನ್ನು ಸಾಯಿಸಿದ ಮೇಲೆ ಸೀತಾರಾಮ ಸೀರಿಯಲ್​ ಟಿಆರ್​ಪಿ ದಿಢೀರ್​ ಕುಸಿದಿದೆ ಎನ್ನುವುದಕ್ಕೆ ಬದಲಾಗಿರುವ ಸೀರಿಯಲ್​ ಸಮಯವೇ ಸಾಕ್ಷಿಯಾಗಿದೆ. ಸೀತಾ ಮತ್ತು ರಾಮ ಯಾವಾಗ ಒಂದಾಗ್ತಾರೆ ಎಂದು ಆರಂಭದಿಂದ ಕಾತರದಿಂದ ಕಾಯುತ್ತಲೇ ಈ ಸೀರಿಯಲ್​ ಟಿಆರ್​ಪಿ ಏರಿಸಿಕೊಂಡಿತ್ತು. ವರ್ಷಗಟ್ಟಲೆ ಇದಕ್ಕಾಗಿಯೇ ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ಚಿತ್ರ-ವಿಚಿತ್ರ ತಿರುವು ಪಡೆದುಕೊಂಡು ಸೀತಾ ಮತ್ತು ರಾಮ ಒಂದಾದರು. ಅದಾದ ಬಳಿಕ ಸಿಹಿಯ ಅಧ್ಯಾಯ ಶುರುವಾಯಿತು. ಸಿಹಿಯ ಅಪ್ಪ ಯಾರು ಎಂಬೆಲ್ಲಾ ಕುತೂಹಲವನ್ನು ಧಾರಾವಾಹಿ ಹಿಡಿದಿಟ್ಟುಕೊಂಡಿತು. ಯಾರೂ ಊಹಿಸಲಾಗದ ಟ್ವಿಸ್ಟ್​ ಅನ್ನು ಸೀರಿಯಲ್​ಗೆ ಕೊಟ್ಟು, ಸೀತಾ ಸಿಹಿಗೆ ಬಾಡಿಗೆ ತಾಯಿ ಎಂದು ತೋರಿಸಲಾಯಿತು. 

ರೀಲ್​ ಮತ್ತು ರಿಯಲ್​ ಅಮ್ಮನ ಜೊತೆ ಸೀತಾರಾಮ ಸಿಹಿಯ ಮೊದಲ ವಿಮಾನ ಪ್ರಯಾಣ ಹೀಗಿತ್ತು ನೋಡಿ...!

ಇದೇ ವೇಳೆ, ರಿಯಲ್​ ಅಪ್ಪ-ಅಮ್ಮನ ಎಂಟ್ರಿಯಾಗಿ ಸಿಹಿಗಾಗಿ ಜಟಾಪಟಿ ನಡೆಯಿತು. ದೇವರೇ ಸಿಹಿ ಸೀತಾಳ ಮಗಳು, ಅವಳಿಗೇ ಸಿಗಬೇಕು ಎಂದು ಅದೆಷ್ಟೋ ಅಭಿಮಾನಿಗಳು ಹರಕೆಯನ್ನೂ ಹೊತ್ತುಬಿಟ್ಟರು. ಸಿಹಿ ಯಾರ ಪಾಲಾಗುತ್ತಾಳೆ ಎಂದು ಕಾತರದಿಂದ ಕಾಯುತ್ತಲೇ ಸೀರಿಯಲ್​ ಮತ್ತಷ್ಟು ಟಿಆರ್​ಪಿ ಹೆಚ್ಚಿಸಿಕೊಂಡಿತು. ಇನ್ನೇನು ಎಲ್ಲವೂ ಸುಗಮವಾಗಿ ವೀಕ್ಷಕರು ಖುಷಿಯಿಂದ ಇದ್ದಾರೆ ಎನ್ನುವಾಗಲೇ ಟಿಆರ್​ಪಿ ರೇಟ್​ ನೋಡಿ ಧಾರಾವಾಹಿಯನ್ನು ಮತ್ತಷ್ಟು ಎಳೆಯಲಾಯಿತು. ಸಿಹಿಯ ಪಾತ್ರವನ್ನೇ ಸಾಯಿಸಿಬಿಟ್ಟರು. ಇದು ವೀಕ್ಷಕರಿಗೆ ನುಂಗುಲಾಗದ ತುತ್ತಾಯಿತು.


ಆ ಬಳಿಕ, ಸುಬ್ಬಿ ಪಾತ್ರವನ್ನು ಅನಗತ್ಯವಾಗಿ ತುರುಕಲಾಯಿತು. ಅವಳಿ ಮಕ್ಕಳು ಹುಟ್ಟಿದ್ದರು ಎನ್ನುವ ವಿಷಯವನ್ನು ಅಲ್ಲಿ ಸೇರಿಸಿದ್ದು, ಆ ಬಳಿಕ ಸಿಹಿ ಭೂತಳಾಗಿ ಯಾರಿಗೂ ಕಾಣಿಸದೇ, ಸುಬ್ಬಿಗೆ ಮಾತ್ರ ಕಾಣಿಸುವುದು... ಇವೆಲ್ಲವೂ ಯಾಕೋ ವೀಕ್ಷಕರಿಗೆ ರುಚಿಸಲೇ ಇಲ್ಲ. ಅಲ್ಲಿಯೇ ಸೀರಿಯಲ್​ ತಳ ಹಿಡಿಯಲು ಶುರುವಾಗಿದ್ದು, ಸಮಯದ ಬದಲಾವಣೆ ಆಗಿದೆ. ಈಗ ಏನಿದ್ದರೂ ಸುಬ್ಬಿ ಮತ್ತು ಸಿಹಿ ಒಂದಾಗಿ ಭಾರ್ಗವಿ ಚಿಕ್ಕಿಯ ಅಸಲಿಯತ್ತನ್ನು ಬಯಲು ಮಾಡಬೇಕಿದೆ ಅಷ್ಟೇ. ಆದರೆ, ಸೀರಿಯಲ್​ ವೀಕ್ಷಕರಿಗೆ ಅಷ್ಟು ಪ್ರಿಯ ಆಗದೇ ಇದ್ದರೂ ಸಿಹಿ ಮತ್ತು ಸುಬ್ಬಿ ಪಾತ್ರಧಾರಿ ರಿತು ಸಿಂಗ್​ ಮಾತ್ರ ಆಪ್ತಳಾಗುತ್ತಲೇ ಇದ್ದಾಳೆ. ಇದೀಗ ಸಿಹಿಯ ರೂಪದಲ್ಲಿರುವ ಸುಬ್ಬಿಗೆ ಮತ್ತೊಂದು ಹಂತದ ನಟನೆಯನ್ನು ತೋರುತ್ತಿದ್ದಾಳೆ ರಿತು. ಈಗಲಾದರೂ ಸೀರಿಯಲ್​ ಟಿಆರ್​ಪಿ ಮೇಲಕ್ಕೆ ಹೋಗುತ್ತಾ ಎಂದು ಕಾಯುತ್ತಿದ್ದಾರೆ ವೀಕ್ಷಕರು. 

ಫ್ಯಾನ್ಸ್​ ಆಸೆ ನೆರವೇರಿಸಿದ ಸೀತಾರಾಮ ಪ್ರಿಯಾ: ಭಾವಿ ಪತಿ ಜೊತೆಗಿನ ರೊಮಾನ್ಸ್​ ವಿಡಿಯೋ ಶೇರ್​ ಮಾಡಿದ ನಟಿ