ಹೆಣ್ಣುಮಗು ಹುಟ್ಟಿದ್ದು ನಿನಗೆ ಶಾಪ;ಮೆಸೇಜ್ ಮಾಡಿದವನಿಗೆ ಗ್ರಹಚಾರ ಬಿಡಿಸಿದ 'ಸುಬ್ಬಲಕ್ಷ್ಮಿ ಸಂಸಾರ' ನಟಿ ಪಂಕಜಾ!
ನಾಲ್ಕು ತಿಂಗಳ ಮಗುವಿವನ್ನು ಟಾರ್ಗೆಟ್ ಮಾಡುತ್ತಿರುವ ಜನರಿಗೆ ತಿರುಗೇಟು ಕೊಟ್ಟ ಪಂಕಜಾ ಶಿವಣ್ಣ. ಫೇಕ್ ಅಕೌಂಟ್ ಕಥೆಗಳು ಇಷ್ಟೇ......
ಕನ್ನಡ ಕಿರುತೆರೆಯ ಖ್ಯಾತ ನಟ ಭವಾನಿ ಸಿಂಗ್ ಮತ್ತು ಪಂಕಜಾ ಶಿವಣ್ಣ ಕೆಲವು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಭವಾನಿ ಮತ್ತು ಪಂಕಜಾ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಸೆಟ್‌ನಲ್ಲಿ ಸ್ನೇಹ ಬೆಳೆದು ಪ್ರೀತಿಯಾಗಿ ತಿರುಗಿತ್ತು. ಪೋಷಕರ ಒಪ್ಪಿಗೆ ಮೇಎ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದರ್‌ಹುಡ್ ಎಂಜಾಯ್ ಮಾಡುತ್ತಿರುವ ಪಂಕಜಾ ಅವರಿಗೆ ಬೇಸರ ತಂದಿದ್ದು ಈ ಮೆಸೇಜ್.....
ಬಂದಿರುವ ಮೆಸೇಜ್:
'ನಿಮಗೆ ಹೆಣ್ಣು ಮಗು ಹುಟ್ಟಿರುವುದಕ್ಕೆ ನಿಜಕ್ಕೂ ಬೇಸರ ಆಗುತ್ತಿದೆ. ನಮಗೆ ನೀವು ಮತ್ತು ನಿಮ್ಮ ಮಗಳು ಬೇಡವೇ ಬೇಡ ದಯವಿಟ್ಟು ಭವಾನಿ ಅವರನ್ನು ಬಿಟ್ಟು ಬಿಡಿ. ನಾವೆಲ್ಲರೂ ಗಂಡು ಮಗುವಿನ ನಿರೀಕ್ಷೆಯಲ್ಲಿ ಇದ್ದೀವಿ ಆದರೆ ನೀವು ಹೆಣ್ಣು ಮಗುವಿಗೆ ಜನ್ಮ ನೀಡಿ ನಮ್ಮ ಕುಟುಂಬಕ್ಕೆ ಭಾರವಾಗಿದ್ದೀರಿ. ಹೀಗಾಗಿ ನಾವು ಬರುವುದಿಲ್ಲ' ಎಂದು mothiya8405 ಅನ್ನೋ ಇನ್‌ಸ್ಟಾಗ್ರಾಂ ಅಕೌಂಟ್‌ನಿಂದ ಪಂಕಜಾ ಶಿವಣ್ಣ ಅವರಿಗೆ ಮೆಸೇಜ್ ಬಂದಿದೆ.
ಕಂಡವರ ದುಡ್ಡಲ್ಲಿ ಶೋಕಿ ಮಾಡಿದ್ರೆ ಹೀಗೆ ಆಗೋದು; ಪವಿತ್ರಾ ಗೌಡ ಕಾಸಿನ ಸರ ನೋಡಿ ಕಾಲೆಳೆದ ನೆಟ್ಟಿಗರು!
ಪಂಕಜಾ ಶಿವಣ್ಣ ಪ್ರತಿಕ್ರಿಯೆ:
'ಈ ಫೋಟೋವನ್ನು ಹಂಚಿಕೊಂಡು ನಾನು ಪೋಸ್ಟ್ ಬರೆಯಲು ಕಾರಣವಿದೆ, ನಾವು ಶಿಕ್ಷಣ, ತಂತ್ರಜ್ಞಾನ, ನಾಗರಿಕತೆ ವಿಚಾರಗಳಲ್ಲಿ ಎಷ್ಟೇ ಬೆಳೆದರೂ ಕೂಡ ಗಂಡು ಹೆಣ್ಣಿನ ತಾರತಮ್ಯ ವಿಚಾರದಲ್ಲಿ ಇನ್ನೂ ಹಿಂದೆ ಉಳಿದುಬಿಟ್ಟಿದ್ದೀವಿ ಅನ್ನೋದನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೀನಿ. ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಶಾಪ ಎಂದು ಈ ವ್ಯಕ್ತಿ ಹೇಳುತ್ತಿದ್ದಾರೆ.
ನನಗೆ ಮೆಸೇಜ್ ಮಾಡಿರುವ ವ್ಯಕ್ತಿ ಮೋಥಿಯಾ, ನನ್ನ ಮಗಳ ಬಗ್ಗೆ ನೀವು ಮಾತನಾಡುತ್ತಿರುವ ಕಾರಣ ನಾನು ಸುಮ್ಮನೆ ಇರುವುದಿಲ್ಲ. ದಯವಿಟ್ಟು ತಿಳಿದುಕೊಳ್ಳು ಹೆಣ್ಣು ಮಕ್ಕಳು ಯಾವತ್ತಿಗೂ ಪೋಷಕರಿಗೆ ಬೆನ್ನೆಲುಬು. ಹೆಣ್ಣು ಮಗು ಆಗಬೇಕು ಎಂದು ದೇವರಲ್ಲಿ ಬೇಡಿಕೊಂಡೆವು...ನಮಗೆ ಹೆಣ್ಣು ಮಗುನೇ ಆಯ್ತು. ಮಗು ಅಂದ್ರೆ ಮಗು ಅಷ್ಟೇ...ಗಂಡು ಹೆಣ್ಣು ಅಲ್ಲ. ಮಕ್ಕಳು ದೂರ ಮಾಡುವುದು ನಿಮ್ಮಂತ ಕೆಟ್ಟ ಮನಸ್ಥಿತಿ ಇರುವ ಜನರು ಮಾತ್ರ.
ನಾಳೆನೇ ನಿನ್ನ ಪ್ರೆಗ್ನೆಂಟ್ ಮಾಡ್ತೀನಿ; ವರುಣ್ ಆರಾಧ್ಯ ಹೊಲಸು ಮೆಸೇಜ್ ಲೀಕ್!
ನಮ್ಮ ಸೊಸೈಟಿಯಲ್ಲಿ ಇರುವ ಅನೇಕರ ಮನಸ್ಥಿತಿ ಹೀಗೆ ಇರುವುದು ಇದು ನಿಜಕ್ಕೂ ಘೋರ ಸತ್ಯ. ಖಂಡಿತಾ ಇದನ್ನು ಇಲ್ಲಿಗೆ ಬಿಡುವುದಿಲ್ಲ ನಾನು ಕಾನೂನಿನ ಮೊರೆ ಹೋಗುತ್ತೀನಿ.ಜೀವನದಲ್ಲಿ ಎಂದೂ ನೀವು ನನ್ನ ಮಗಳ ಬಗ್ಗೆ ಮಾತನಾಡಬಾರದು.ನನ್ನ ಪತಿಯ ಬಗ್ಗೆ ನೀವು ನಿಜಕ್ಕೂ ಕಾಳಜಿ ವಹಿಸಿದ್ದರೆ ದಯವಿಟ್ಟು ನಿಮ್ಮ ನಿಜವಾದ ಐಡಿಯಲ್ಲಿ ಮೆಸೇಜ್ ಮಾಡಿ. ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಆಶೀರ್ವಾದ ನನ್ನ ಮಗಳ ಮೇಲಿದೆ ನಿಮ್ಮಂತ ಕೆಟ್ಟ ಮನಸ್ಥಿತಿ ಇರೋ ಜನ ನನ್ನ ಮಗಳನ್ನು ನೋಡೋದೆ ಇರುವುದು ಉತ್ತಮ. ಜನರೆ, ನಾವು ಈ ಮೆಸೇಜ್‌ನ ನಿರ್ಲಕ್ಷ್ಯ ಮಾಡಬಹುದಿತ್ತು ಆದರೆ ಇದನ್ನು ಇಲ್ಲಿಗೆ ನಿಲ್ಲಿಸುವ ಉದ್ದೇಶವೂ ಇತ್ತು. ನನಗೆ ನಿಮ್ಮ ಸಪೋರ್ಟ್ ಬೇಕಿದೆ. ಹೆಣ್ಣು ಮಗುವಿಗೆ ಜನ್ಮ ನೀಡುವುದು ಶಾಪವೇ?